(1) ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಬೇರೆ ಬೇರೆ ಅಧ್ಯಯನ ಮಂಡಳಿಯಿರತಕ್ಕದ್ದು. ಅಧ್ಯಯನ ಮಂಡಳಿಯ ಅಧಿಕಾರಗಳು ಮತ್ತು ಪ್ರಕಾರ್ಯಗಳು ಶಾಸನಗಳ ಮೂಲಕ ನಿಯಮಿಸಲಾದಂತೆ ಇರತಕ್ಕದ್ದು.
(2) ಪದವಿ ಕಾರ್ಯಕ್ರಮಗಳಿಗೆ ಅಧ್ಯಯನ ಮಂಡಳಿಯ ರಚನೆಯು ಈ ಮುಂದಿನಂತೆ ಇರತಕ್ಕದ್ದು, ಎಂದರೆ:-
(i) ಶಿಕ್ಷಣ ಇಲಾಖೆ ನಿರ್ದೇಶಕರು - ಅಧ್ಯಕ್ಷರು.
(ii) ಎಲ್ಲಾ ಘಟಕ ಕಾಲೇಜುಗಳ ಡೀನ್ಗಳು.
(iii) ಕುಲಪತಿಯವರು ನಾಮನಿರ್ದೇಶಿಸಿದ ಪ್ರೊಫೆಸರ್ ದರ್ಜೆಗಿಂತ ಕಡಿಮೆ ದರ್ಜೆಯವರಲ್ಲದ ಸಂಯೋಜಿತ ಕಾಲೇಜಿನ ಒಬ್ಬರು ಪ್ರತಿನಿಧಿ.
(iv) ಸಂಶೋಧನಾ ನಿರ್ದೇಶಕರು ಮತ್ತು ವಿಸ್ತರಣಾ ಶಿಕ್ಷಣ ನಿರ್ದೇಶಕರು.
(v) ಕುಲಸಚಿವರು.
(vi) ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್.
(vii) ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು.
(viii) ಸುತ್ತು ಸರದಿಯ ಆಧಾರದ ಮೇಲೆ ಎರಡು ವರ್ಷಗಳ ಅವಧಿಗೆ, ಅಧ್ಯಕ್ಷರು ನಾಮನಿರ್ದೇಶನದ ಇಲಾಖಾ ಮುಖ್ಯಸ್ಥರಲ್ಲದ ವಿಶ್ವವಿದ್ಯಾಲಯದ ಪ್ರತಿಯೊಂದು ಇಲಾಖೆಯ ಒಬ್ಬ ಪ್ರೊಫೆಸರ್.
(ix) ಸುತ್ತು ಸರದಿಯ ಆಧಾರದ ಮೇಲೆ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರು ನಾಮನಿರ್ದೇಶನ ಮಾಡಿದ ಸಹವರ್ತಿ ಪ್ರೊಫೆಸರರ ಕೇಡರ್ನಲ್ಲಿನ ಐವರು ಅಧ್ಯಾಪಕರು.
(x) ಸುತ್ತು ಸರದಿಯ ಆಧಾರದ ಮೇಲೆ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರು ನಾಮನಿರ್ದೇಶನ ಮಾಡಿದ ಸಹಾಯಕ ಪ್ರೊಫೆಸರರ ಕೇಡರ್ನಲ್ಲಿನ ಐವರು ಅಧ್ಯಾಪಕರು.
(xi) ಎರಡು ವರ್ಷಗಳ ಅವಧಿಗೆ ಅಧ್ಯಕ್ಷರು ನಾಮನಿರ್ದೇಶನ ಮಾಡಿರುವ ವಿಶ್ವವಿದ್ಯಾಲಯಕ್ಕೆ ಹೊರಗಿನವರಾದ ಇಬ್ಬರು ಪ್ರಖ್ಯಾತ ಪ್ರೊಫೆಸರುಗಳು.
(xii) ವಿಶ್ವವಿದ್ಯಾಲಯ ಕುಲಪತಿಯವರು ನಾಮನಿರ್ದೇಶನ ಮಾಡಿದ ಕಾಲೇಜಿನ ಒಬ್ಬರು ಡೀನ್ ಸದಸ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸತಕ್ಕದ್ದು.
(3) ಪದವಿ ಕಾರ್ಯಕ್ರಮಗಳಿಗೆ ಅಧ್ಯಯನ ಮಂಡಳಿಗಳ ಪ್ರಕಾರ್ಯಗಳು ಈ ಮುಂದಿನಂತೆ ಇರತಕ್ಕದ್ದು. ಎಂದರೆ:-
(i) ಪದವಿ ಬೋಧನಾ ಕಾರ್ಯಕ್ರಮದ ಅಡಿಯಲ್ಲಿ ಪುನರಾವಲೋಕನ ಮಾಡುವುದು ಮತ್ತು ಅದರ ಸುಧಾರಣೆಗಳಿಗೆ ಸಲಹೆ ನೀಡುವುದು;
(ii) ಅಧ್ಯಯನಗಳ ಮಂಡಳಿಯು ರಚಿಸಿದಂಥ ಕೋರ್ಸುಗಳು, ಪಠ್ಯವಿಷಯಗಳು, ಸಮಿತಿ ಅಥವಾ ಅದೇ ತರಹದ ಸಮಿತಿಯ ಶಿಫಾರಸ್ಸುಗಳನ್ನು ಪರಿಗಣಿಸುವುದು ಮತ್ತು ಅವನ್ನು ಪರ್ಯಾಲೋಚನೆ ಮತ್ತು ಅಂಗೀಕಾರಕ್ಕಾಗಿ ವಿದ್ಯಾವಿಷಯಕ ಪರಿಷತ್ತಿನ ಮುಂದೆ ಮಂಡಿಸುವುದು;
(iii) ವಿದ್ಯಾವಿಷಯಕ ಪರಿಷತ್ತು ಅಥವಾ ಕುಲಪತಿಯವರು ಗೊತ್ತುಪಡಿಸಬಹುದಾಂಥ ಇತರ ಕರ್ತವ್ಯಗಳನ್ನು ನಿರ್ವಹಿಸುವುದು;
(4) ಸ್ನಾತಕೋತ್ತರ ಕಾರ್ಯಕ್ರಮಗಳಿಗಾಗಿ ಅಧ್ಯಯನಗಳ ಮಂಡಳಿಯ ರಚನೆಯು ಈ ಮುಂದಿನಂತೆ ಇರತಕ್ಕದ್ದು, ಎಂದರೆ:-
(i) ಶಿಕ್ಷಣ ಇಲಾಖೆಯ ನಿರ್ದೇಶಕರು - ಅಧ್ಯಕ್ಷರು.
(ii) ಸಂಯೋಜಿತ ಕಾಲೇಜುಗಳ ಡೀನ್ಗಳು.
(iii) ಸಂಶೋಧನಾ ನಿರ್ದೇಶಕರು ಮತ್ತು ವಿಸ್ತರಣಾ ಶಿಕ್ಷಣದ ನಿರ್ದೇಶಕರು.
(iv) ಕುಲಸಚಿವರು.
(v) ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್.
(vi) ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು.
(vii) ಸುತ್ತು ಸರದಿಯ ಆಧಾರದ ಮೇಲೆ ಎರಡು ವರ್ಷಗಳ ಅವಧಿಗಾಗಿ ಅಧ್ಯಕ್ಷರು ನಾಮನಿರ್ದೇಶಿಸಿದ ಸಹವರ್ತಿ ಪ್ರೊಫೆಸರ್ ದರ್ಜೆಯ ಹತ್ತು ಜನ ಸ್ನಾತಕೋತ್ತರ ಅಧ್ಯಾಪಕರು.
(viii) ಸುತ್ತು ಸರದಿಯ ಆಧಾರದ ಮೇಲೆ ಎರಡು ವರ್ಷಗಳ ಅವಧಿಗಾಗಿ ಅಧ್ಯಕ್ಷರು ನಾಮನಿರ್ದೇಶಿಸಿದ ಸಹಾಯಕ ಪ್ರೊಫೆಸರ್ ದರ್ಜೆಯ ಹತ್ತು ಜನ ಸ್ನಾತಕೋತ್ತರ ಅಧ್ಯಾಪಕರು.
(ix) ಎರಡು ವರ್ಷಗಳ ಅವಧಿಗಾಗಿ ಅಧ್ಯಕ್ಷರು ನಾಮನಿರ್ದೇಶಿಸಿದ ವಿಶ್ವವಿದ್ಯಾಲಯಕ್ಕೆ ಹೊರಗಿನವರಾದ ಇಬ್ಬರು ಖ್ಯಾತ ಪ್ರೊಫೆಸರ್ಗಳು.
(x) ಸ್ನಾತಕೋತ್ತರ ವ್ಯಾಸಂಗದ ಡೀನ್ ಅವರು ಅದಸ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸತಕ್ಕದ್ದು.
(5) ಸ್ನಾತಕೋತ್ತರ ವ್ಯಾಸಂಗ ಕ್ರಮದ ಮಂಡಳಿಯು ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಎಂದರೆ:-
(i) ಸ್ನಾತಕೋತ್ತರ ಮತ್ತು ಡಿಪ್ಲೊಮಾ ಬೋಧನ ಕಾರ್ಯಕ್ರಮಗಳ ಪುನರಾವಲೋಕನ ಮಾಡುವುದು ಮತ್ತು ಅವುಗಳ ಸುಧಾರಣೆಗೆ ಸಲಹೆಗಳನ್ನು ನೀಡುವುದು;
(ii) ಅಧ್ಯಯನ ಮಂಡಳಿಯು ರಚಿಸಿದ ವ್ಯಾಸಂಗ ಕ್ರಮಗಳು, ಪಠ್ಯಕ್ರಮಗಳ, ಸಮಿತಿಗಳು ಅಥವಾ ಅಂತಹುದೇ ಸಮಿತಿಗಳ ಶಿಫಾರಸ್ಸುಗಳನ್ನು ಪರಿಗಣಿಸುವುದು ಮತ್ತು ವಿದ್ಯಾವಿಷಯಕ ಪರಿಷತ್ತಿನ ಮುಂದೆ ಅವುಗಳನ್ನು ಪರ್ಯಾಲೋಚನೆ ಮತ್ತು ಅನುಮೋದನೆಗಾಗಿ ಮಂಡಿಸುವುದು;
(iii) ವಿದ್ಯಾವಿಷಯಕ ಪರಿಷತ್ತು ಅಥವಾ ಕುಲಪತಿಯವರು ವಹಿಸಬಹುದಾದಂತಹ ಇತರ ಪ್ರಕಾರ್ಯಗಳನ್ನು ನೆರವೇರಿಸುವುದು.