(1) ಈ ಅಧ್ಯಾದೇಶದ ಅಡಿಯಲ್ಲಿ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ವ್ಯವಹರಣೆಗಳನ್ನು ಕೇವಲ ಈ ಮುಂದಿನ ಕಾರಣಗಳಿಗಾಗಿ ಪ್ರಶ್ನಿಸತಕ್ಕದ್ದಲ್ಲ, ಎಂದರೆ:-
(i) ಯಾವುದೇ ಪ್ರಾಧಿಕಾರದ ರಚನೆಯಲ್ಲಿ ಯಾವುದೇ ಖಾಲಿಸ್ಥಾನ ಅಥವಾ ದೋಷ ಇರುವುದು, ಅಥವಾ
(ii) ಪ್ರಕರಣದ ಗುಣಾಂಶಗಳಿಗೆ ಬಾಧೆ ಉಂಟುಮಾಡದ ಆ ಕಾರ್ಯ ಅಥವಾ ವ್ಯವಹರಣೆಗಳಲ್ಲಿರುವ ಯಾವುದೇ ದೋಷ ಅಥವಾ ಕ್ರಮಬಾಹಿರತೆ.