ಈ ಮುಂದಿನವು ವಿಶ್ವವಿದ್ಯಾಲಯದ ಪ್ರಾಧಿಕಾರಗಳಾಗಿರತಕ್ಕದ್ದು ಎಂದರೆ :-
(1) ವ್ಯವಸ್ಥಾಪನಾ ಮಂಡಳಿ
(2) ವಿದ್ಯಾವಿಷಯಕ ಪರಿಷತ್ತು
(3) ಸಂಶೋಧನಾ ಪರಿಷತ್ತು
(4) ವಿಸ್ತಾರಣಾ ಶಿಕ್ಷಣ ಪರಿಷತ್ತು
(5) ಸ್ನಾತಕೋತ್ತರ ವ್ಯಾಸಂಗಗಳು ಮತ್ತು ಅವುಗಳ ವ್ಯಾಸಂಗ ಮಂಡಳಿಗಳೂ ಸೇರಿದಂತೆ ಫ್ಯಾಕಲ್ಟಿ.
(6) ಶಾಸನಗಳ ಮೂಲಕ ವಿಶ್ವವಿದ್ಯಾಲಯದ ಪ್ರಾಧಿಕಾರಗಳು ಎಂಬುದಾಗಿ ಘೋಷಿಸಿರಬಹುದಾದಂಥ ವಿಶ್ವವಿದ್ಯಾಲಯದ ಇತರ ನಿಕಾಯಗಳು