(1) ರಾಜ್ಯದಲ್ಲಿನ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ, ವಿಶೇಷವಾಗಿ, ಬೋಧನೆ, ಸಂಶೋಧನೆ, ವಿಸ್ತರಣಾ ಶಿಕ್ಷಣ ಮತ್ತು ಸಾಮಾನ್ಯ ಆಸಕ್ತಿಗಳ ಇತರ ವಿಷಯಗಳ ಸಂಬಂಧದಲ್ಲಿ ಪರಿಣಾಮಕಾರಿ ಸಮನ್ವಯದ ಉದ್ದೇಶಕ್ಕಾಗಿ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಗಾಗಿ ಒಂದು ರಾಜ್ಯ ಸಮನ್ವಯ ಸಮಿತಿಯು ಇರತಕ್ಕದ್ದು.
(2) ರಾಜ್ಯ ಸಮನ್ವಯ ಸಮಿತಿಯು ಈ ಮುಂದಿನ ಸದಸ್ಯರುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-
(ಎ) ಕೃಷಿ ಪ್ರಭಾರದಲ್ಲಿರುವ ಸಚಿವರು, ಕರ್ನಾಟಕ ಸರ್ಕಾರ ಇವರು ಅಧ್ಯಕ್ಷರಾಗಿರತಕ್ಕದ್ದು;
(ಬಿ) ರಾಜ್ಯದಲ್ಲಿನ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಯವರು;
(ಸಿ) ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಶಿಕ್ಷಣ, ಸಂಶೋಧನೆ ಮತ್ತು ವಿಸ್ತಾರಣೆ ನಿರ್ದೇಶಕರುಗಳು;
(ಡಿ) ರಾಜ್ಯದಲ್ಲಿಯ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಕುಲಸಚಿವರು;
(ಇ) ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ - ಇವರು ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು.
(3) ಸಮನ್ವಯ ಸಮಿತಿಯ ಪ್ರಕಾರ್ಯಗಳು ಈ ಮುಂದಿನಂತೆ ಇರತಕ್ಕದ್ದು, ಎಂದರೆ:-
(ಎ) ರಾಜ್ಯದಲ್ಲಿಯ ಕೃಷಿ ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಭಂಗವಾಗದಂತೆ ನೋಡಿಕೊಳ್ಳುವುದು;
(ಬಿ) ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿನಿಯಮಗಳನ್ನು ಸಮನ್ವಯಗೊಳಿಸುವುದು;
(ಸಿ) ರಾಜ್ಯದಲ್ಲಿಯ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರಗಳಲ್ಲಿ ಸಹಕಾರದ ಪ್ರದೇಶಗಳನ್ನು ಗುರುತಿಸುವ ಮೂಲಕ ಪರಸ್ಪರ ಪೂರಕ ಮತ್ತು ಕೂಡುಬಲದಿಂದ ಕೆಲಸ ಮಾಡುವಂತೆ ನೋಡಿಕೊಳ್ಳುವುದು;
(ಡಿ) ರಾಜ್ಯದಲ್ಲಿಯ ಮತ್ತು ಸಂಬಂಧಿಸಿದ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಡನೆ ಕೃಷಿ ಅಭಿವೃದ್ಧಿಗಾಗಿ ಹೊಸ ಕಾರ್ಯಕ್ರಮಗಳು ಮತ್ತು ಕ್ರಿಯಾ ಯೋಜನೆಗಳನ್ನು ಸಲಹೆ ಮಾಡುವುದು;
(ಇ) ಅಂತರ ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ - ರಾಜ್ಯ ಇವುಗಳ ನಡುವಿನ ವಿವಾದಗಳನ್ನು ಪರಿಹರಿಸುವುದು.
(4) ಸಮಿತಿಯು ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಸಭೆ ಸೇರತಕ್ಕದ್ದು.