ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ನಿಯಮಗಳು, 2017ರ (ಇನ್ನು ಮುಂದೆ “ಸದರಿ ನಿಯಮಗಳು” ಎಂದು ಉಲ್ಲೇಖಿಸಲಾಗಿದೆ), ನಿಯಮ 36 ರಲ್ಲಿ, ಉಪನಿಯಮ (4)ಗೆ, ಈ ಕೆಳಗಿನ ಉಪನಿಯಮವನ್ನು 1ನೇ ಜನವರಿ 2022ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು, ಅಂದರೆ:-
“(4) ಪ್ರಕರಣ 37ರ ಉಪನಿಯಮ (1)ರ ಅಡಿಯಲ್ಲಿ ಬೆಲೆಪಟ್ಟಿ ಅಥವಾ ಖರ್ಚುಚೀಟಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸುವ ಅಗತ್ಯತೆ ಇದ್ದು, ನೋಂದಾಯಿತ ವ್ಯಕ್ತಿಯು ಯಾವುದೇ ಹೂಡುವಳಿ ತೆರಿಗೆ ಜಮೆಯನ್ನು ಈ ಕೆಳಗಿನ ಹೊರತು ಪಡೆಯಲಾಗುವುದಿಲ್ಲ.-
ಎ) ನಮೂನೆ ಜಿಎಸ್ಟಿರ್-1 ಅಥವಾ ಬೆಲೆಪಟ್ಟಿ ಸಲ್ಲಿಸುವಿಕೆಯ ಸೌಲಭ್ಯವನ್ನು ಉಪಯೋಗಿಸಿಕೊಂಡು, ಹೊರಮುಖ ಪೂರೈಕೆಗಳನ್ನು ಸಲ್ಲಿಸುವ ವಿವರಗಳಲ್ಲಿ ಪೂರೈಕೆದಾರನು ಅಂತಹ ಬೆಲೆಪಟ್ಟಿ ಅಥವಾ ಖರ್ಚುಚೀಟಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಿದ್ದಲ್ಲಿ; ಮತ್ತು
(ಬಿ) ನಿಯಮ 60ರ ಉಪನಿಯಮ (7) ರ ಅಡಿಯಲ್ಲಿ ನಮೂನೆ ಜಿಎಸ್ಟಿರ್-2ಬಿ ಯಲ್ಲಿ, ನೋಂದಾಯಿತ ವ್ಯಕ್ತಿಗೆ ಅಂತಹ ಬೆಲೆಪಟ್ಟಿ ಅಥವಾ ಖರ್ಚುಚೀಟಿಯ ವಿವರಗಳನ್ನು ತಿಳಿಸಿದಲ್ಲಿ.”