ಸದರಿ ನಿಯಮಗಳ ನಿಯಮ 159ರಲ್ಲಿ,-
(ಎ) ಉಪ ನಿಯಮ (2)ರಲ್ಲಿ-
(i) “ಜಫ್ತಿ ಆದೇಶದ ಪ್ರತಿ” ಈ ಪದಗಳ ನಂತರ, “ಯನ್ನು ನಮೂನೆ ಜಿಎಸ್ಟಿ ಡಿಆರ್ಸಿ-22ರಲ್ಲಿ” ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಸೇರಿಸತಕ್ಕದ್ದು;
(ii) “ಆಯುಕ್ತರು ಆ ಬಗ್ಗೆ” ಈ ಪದಗಳ ನಂತರ “ಅಂತಹ ಆದೇಶದ ಒಂದು ಪ್ರತಿಯನ್ನು ಸಹ ಯಾವ ವ್ಯಕ್ತಿಯ ಆಸ್ತಿಯನ್ನು ಪ್ರಕರಣ 83ರ ಪ್ರಕಾರ ಜಫ್ತಿಮಾಡಲಾಗುತ್ತದೆಯೋ, ಆ ವ್ಯಕ್ತಿಗೆ ಕಳುಹಿಸತಕ್ಕದ್ದು” ಎಂಬ ಪದಗಳು ಮತ್ತು ಸಂಖ್ಯೆಗಳನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಸೇರಿಸತಕ್ಕದ್ದು;
(ಬಿ) ಉಪನಿಯಮ (3)ರಲ್ಲಿ
(i) “ಮತ್ತು ತೆರಿಗೆದಾಯಕ ವ್ಯಕ್ತಿಯು ಒಂದು ವೇಳೆ” ಎಂಬ ಪದಗಳಿಗೆ “ಮತ್ತು ಯಾರ ಆಸ್ತಿಯನ್ನು ಮಟ್ಟುಗೋಲು ಹಾಕಲ್ಪಟ್ಟಿದೆಯೋ ಆ ವ್ಯಕ್ತಿಯು ಒಂದು ವೇಳೆ” ಎಂಬ ಪದಗಳನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಪ್ರತಿಯೋಜಿಸತಕ್ಕದ್ದು;
(ii) “ತೆರಿಗೆದಾಯಕ ವ್ಯಕ್ತಿಯಿಂದ” ಎಂಬ ಪದಗಳಿಗೆ “ಅಂತಹ ವ್ಯಕ್ತಿಯಿಂದ” ಎಂಬ ಪದಗಳನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಪ್ರತಿಯೋಜಿಸತಕ್ಕದ್ದು;
(ಸಿ) ಉಪನಿಯಮ (4) ರಲ್ಲಿ ಎರಡು ಕಡೆ ಕಂಡು ಬರುವ “ತೆರಿಗೆದಾಯಕ ವ್ಯಕ್ತಿ” ಎಂಬ ಪದಗಳಿಗೆ “ಅಂತಹ ವ್ಯಕ್ತಿ” ಎಂಬ ಪದಗಳನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಪ್ರತಿಯೋಜಿಸತಕ್ಕದ್ದು; ಮತ್ತು
(ಡಿ) ಉಪನಿಯಮ (5) ರಲ್ಲಿ “ಉಪನಿಯಮ (1)ರಡಿಯಲ್ಲಿ ಜಫ್ತಿ ಮಾಡಲಾದ ಏಳು ದಿನಗಳೊಳಗೆ ಒಂದು ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು” ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳಿಗೆ “ನಮೂನೆ ಜಿಎಸ್ಟಿ ಡಿಆರ್ಸಿ-22ಎ ರಲ್ಲಿ ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು” ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಪ್ರತಿಯೋಜಿಸತಕ್ಕದ್ದು.