ಸದರಿ ನಿಯಮಗಳ ನಿಯಮ 80ರಲ್ಲಿ,-
(ಎ) ಉಪ ನಿಯಮ (1) ನಂತರ, ಈ ಕೆಳಗಿನ ಉಪ-ನಿಯಮವನ್ನು ಸೇರಿಸತಕ್ಕದ್ದು, ಅಂದರೆ:-
“(1ಎ) ಉಪನಿಯಮ (1) ರಲ್ಲಿ ಏನೇ ಒಳಗೊಂಡಿದ್ದರೂ ಸಹ, 2020-2021ರ ಆರ್ಥಿಕ ವರ್ಷಕ್ಕೆ ಸಂಬಂಧಪಟ್ಟಂತೆ ವಾರ್ಷಿಕ ರಿಟರ್ನ್ ಅನ್ನು ಇಪ್ಪತ್ತೆಂಟನೇ ಫೆಬ್ರವರಿ, 2022ರಂದು ಅಥವಾ ಅದಕ್ಕೆ ಮೊದಲು ಒದಗಿಸತಕ್ಕದ್ದು.”;
(ಬಿ) ಉಪ ನಿಯಮ (3) ನಂತರ, ಕೆಳಗಿನ ಉಪ-ನಿಯಮವನ್ನು ಸೇರಿಸತಕ್ಕದ್ದು, ಅವುಗಳೆಂದರೆ:
“(3ಎ) ಉಪನಿಯಮ (3) ರಲ್ಲಿ ಏನೇ ಒಳಗೊಂಡಿದ್ದರೂ ಸಹ, 2020-2021ರ ಆರ್ಥಿಕ ವರ್ಷಕ್ಕೆ ಹೇಳಲಾದ ಸ್ವಯಂ ಪ್ರಮಾಣೀಕೃತ ಸರಿಹೊಂದಾಣಿಕೆಯ ವಿವರಪತ್ರವನ್ನು ವಾರ್ಷಿಕ ರಿಟರ್ನ್ನೊಂದಿಗೆ ಇಪ್ಪತ್ತೆಂಟನೇ ಫೆಬ್ರವರಿ, 2022ರಂದು ಅಥವಾ ಮೊದಲು ಒದಗಿಸತಕ್ಕದ್ದು.”;