ಸದರಿ ನಿಯಮಗಳ ನಿಯಮ 95ರಲ್ಲಿ, ಉಪನಿಯಮ (3) ರ, ಖಂಡ (ಸಿ) ನಂತರ, ಈ ಕೆಳಗಿನ ಪರಂತುಕವನ್ನು 1ನೇ ಏಪ್ರಿಲ್ 2021 ರಿಂದ ಅನ್ವಯವಾಗುವಂತೆ ಸೇರಿಸತಕ್ಕದ್ದು, ಅಂದರೆ:-
“ಪರಂತು, ತೆರಿಗೆ ಬೆಲೆಪಟ್ಟಿಯಲ್ಲಿ ಅರ್ಜಿದಾರರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನಮೂದಿಸದಿದ್ದರೆ, ಅರ್ಜಿದಾರರು ಅಧಿಕೃತ ಪ್ರತಿನಿಧಿಯಿಂದ ಸರಿಯಾಗಿ ದೃಢೀಕರಿಸಿದ ಬೆಲೆಪಟ್ಟಿಯ ಪ್ರತಿಯೊಂದಿಗೆ ನಮೂನೆ ಜಿಎಸ್ಟಿ-ಆರ್ಎಫ್ಡಿ-10 ರಲ್ಲಿ ಮರುಪಾವತಿ ಅರ್ಜಿಯನ್ನು ಸಲ್ಲಿಸಿದರೆ ಮಾತ್ರ, ಅಂತಹ ಬೆಲೆಪಟ್ಟಿಯ ಮೇಲೆ ಪಾವತಿಸಿದ ತೆರಿಗೆಯ ಮರುಪಾವತಿಯು ಲಭ್ಯವಿರುತ್ತದೆ.”;