ನಮೂನೆ ಜಿಎಸ್ಟಿ ಡಿಆರ್ಸಿ-10 ಗೆ 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ ಈ ಕೆಳಕಂಡ ನಮೂನೆಯನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:-
“ನಮೂನೆ ಜಿಎಸ್ಟಿ ಡಿಆರ್ಸಿ-10” [ನಿಯಮ 144(2) ಮತ್ತು 144(ಎ)ಯನ್ನು ನೋಡಿ] ಅಧಿನಿಯಮದ ಪ್ರಕರಣ 79(1) (ಬಿ) ಅಥವಾ ಪ್ರಕರಣ 129(6) ರ ಅಡಿಯಲ್ಲಿ ಹರಾಜಿಗಾಗಿ ಸೂಚನಾ ಪತ್ರ ತಗಾದೆ ಆದೇಶ ಸಂಖ್ಯೆ.: ದಿನಾಂಕ:
ಅವಧಿ:
ಪ್ರಕರಣ 79ರ ಉಪಬಂಧಗಳಿಗೆ ಅನುಸಾರವಾಗಿ,--------------- ರೂಗಳ ಮೊತ್ತ ಮತ್ತು ಅದರ ಮೇಲಿನ ಬಡ್ಡಿಯ ವಸೂಲಾತಿಗಾಗಿ ವಸೂಲಿ ಪ್ರಕ್ರಿಯೆಯಲ್ಲಿ ಭರಿಸಿದ ಅನ್ವಯವಾಗತಕ್ಕ ವೆಚ್ಚಗಳ ವಸೂಲಾತಿಗಾಗಿ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಜಫ್ತಿ ಮಾಡಲಾದ ಅಥವಾ ನಿರ್ಬಂಧಿಸಿದ ಸರಕುಗಳ ಮಾರಾಟಕ್ಕಾಗಿ ಒಂದು ಆದೇಶವನ್ನು ನನ್ನಿಂದ ಮಾಡಲಾಗಿರುತ್ತದೆ;
ಪ್ರಕರಣ 129ರ ಅಡಿಯಲ್ಲಿ ತಡೆಹಿಡಿದಿಟ್ಟ ಅಥವಾ ವಶಪಡಿಸಿಕೊಂಡ ಸರಕುಗಳ ಮತ್ತು ಸಾಗಾಣಿಕೆ ವಾಹನವು, ಪ್ರಕರಣ 129ರ ಉಪಪ್ರಕರಣ (6)ರ ಉಪಬಂಧಗಳಿಗೆ ಅನುಸಾರವಾಗಿ ಮಾರಾಟ ಅಥವಾ ವಿಲೇವಾರಿಗೆ ಭಾದ್ಯತೆಯಾದಲ್ಲಿ, ಪ್ರಕರಣ 129ರ ಉಪಪ್ರಕರಣ (3)ರಡಿಯಲ್ಲಿ ಪಾವತಿಸಬೇಕಾದ ರೂ.----------- ದಂಡದ ವಸೂಲಾತಿಗೆ ಮತ್ತು ಅಂತಹ ಸರಕು ಮತ್ತು ವಾಹನದ ಸುಭದ್ರತೆ, ನಿರ್ವಹಣೆ ಮತ್ತು ಇತರೆ ಆಡಳಿತಾತ್ಮಕ ವೆಚ್ಚಗಳಿಗೆ ಹೊಣೆಗಾರಿಕೆಯಾಗತಕ್ಕದ್ದು.
ಮಾರಾಟವು ಬಹಿರಂಗ ಹರಾಜಿನ ಮೂಲಕ ನಡೆಯಲಿದ್ದು, ಮಾರಾಟಕ್ಕಾಗಿ ಸರಕುಗಳನ್ನು ಮತ್ತು/ ಅಥವಾ ಸಾಗಾಣಿಕೆ ವಾಹನವನ್ನು ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂತೆ ಲಾಟ್ಗಳಲ್ಲಿ ಇಡತಕ್ಕದ್ದಾಗಿರುತ್ತದೆ. ಮಾರಾಟವು ಸುಸ್ತಿದಾರನ ಹಕ್ಕು, ಸ್ವಾಮ್ಯ ಹಾಗೂ ಹಿತಾಸಕ್ತಿಯ ಮಾರಾಟವಾಗಿರುತ್ತದೆ. ಮತ್ತು ಸದರಿ ಸ್ವತ್ತುಗಳಿಗೆ ಸಂಬಂಧಿಸಿದ ಬಾಧ್ಯತೆಗಳು ಮತ್ತು ಕ್ಲೇಮುಗಳು, ಅವುಗಳನ್ನು ಈವರೆವಿಗೆ ನಿರ್ಧರಿಸಲ್ಪಟ್ಟಿರುವಷ್ಟರ ಮಟ್ಟಿಗೆ, ಅನುಸೂಚಿಯಲ್ಲಿ ಪ್ರತಿಯೊಂದು ಲಾಟ್ ಎದುರಿಗೆ ನಿರ್ದಿಷ್ಟಪಡಿಸಿದಂತಿರುತ್ತದೆ.
ಹರಾಜು ಪ್ರಕ್ರಿಯೆಯು ದಿನಾಂಕ………………ರಂದು ……………………ಪೂರ್ವಾಹ್ನ/ಅಪರಾಹ್ನ ನಡೆಸಲಾಗುವುದು.
ಪ್ರತಿಯೊಂದು ಲಾಟ್ನ ಬೆಲೆಯನ್ನು ಮಾರಾಟದ ಸಮಯದಲ್ಲಿ ಅಥವಾ ಯುಕ್ತ ಅಧಿಕಾರಿ/ ನಿರ್ದಿಷ್ಟಪಡಿಸಿದ ಅಧಿಕಾರಿಯ ನಿರ್ದೇಶನದಂತೆ ಸಂದಾಯ ಮಾಡತಕ್ಕದ್ದು. ತಪ್ಪಿದ್ದಲ್ಲಿ, ಸರಕುಗಳನ್ನು ಮತ್ತು/ ಅಥವಾ ಸಾಗಾಣಿಕೆ ವಾಹನವನ್ನು ಮತ್ತೊಮ್ಮೆ ಹರಾಜಿಗೆ ಇಡಲಾಗುವುದು ಮತ್ತು ಮರು-ಮಾರಾಟ ಮಾಡಲಾಗುವುದು.