ಸದರಿ ನಿಯಮಗಳ ನಿಯಮ 142 ರಲ್ಲಿ,-
(ಎ) ಉಪ-ನಿಯಮ (3)ರಲ್ಲಿ “ಸರಕು ಮತ್ತು ಸಾಗಾಣಿಕೆ ವಾಹನದ ತಡೆಹಿಡಿಯವಿಕೆ ಅಥವಾ ವಶಪಡಿಸಿಕೊಳ್ಳುವಿಕೆಯ ಹದಿನಾಲ್ಕು ದಿನಗಳು”, ಎಂಬ ಪದಗಳು ಮತ್ತು ಅಕ್ಷರಗಳಿಗೆ, “ಪ್ರಕರಣ 129ರ ಉಪಪ್ರಕರಣ (3)ರ ಅಡಿಯಲ್ಲಿ ಹೊರಡಿಸಲಾದ ಸೂಚನಾ ಪತ್ರದ ಏಳು ದಿನಗಳು ಆದರೆ ಸದರಿ ಉಪಪ್ರಕರಣ (3)ರ ಅಡಿಯಲ್ಲಿ ಆದೇಶವನ್ನು ನೀಡುವ ಮೊದಲು”, ಎಂಬ ಪದಗಳು, ಆವರಣಗಳು ಮತ್ತು ಸಂಖ್ಯೆಗಳನ್ನು, 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಪ್ರತಿಯೋಜಿಸತಕ್ಕದ್ದು;
(ಬಿ) ಉಪನಿಯಮ (5) ರಲ್ಲಿ, “ತೆರಿಗೆಯನ್ನು ವಿಧಿಸಬಹುದಾದ ವ್ಯಕ್ತಿಯು ಸಂದಾಯ ಮಾಡಬೇಕಾದ ತೆರಿಗೆ, ಬಡ್ಡಿ ಮತ್ತು ದಂಡ” ಎಂಬ ಪದಗಳಿಗೆ “ಸಂಬಂಧಪಟ್ಟ ವ್ಯಕ್ತಿಯು, ಸಂದರ್ಭಾನುಸಾರ, ಪಾವತಿಸಬೇಕಾದ ತೆರಿಗೆ, ಬಡ್ಡಿ ಮತ್ತು ದಂಡ”, ಎಂಬ ಪದಗಳನ್ನು, 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಪ್ರತಿಯೋಜಿಸತಕ್ಕದ್ದು;