(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,–
(ಎ) “ವಾಸ್ತವಿಕ ಕಾರ್ಯನಿರ್ವಹಣೆ” ಎಂದರೆ, ಬೋಧಕ ಸಿಬ್ಬಂದಿಯು ದೈನಂದಿನ ಹಾಜರಾತಿಯನ್ನು ದಾಖಲಿಸುವ ಸ್ಥಳದಲ್ಲಿನ ಆತನ/ಆಕೆಯ ಕಾರ್ಯನಿರ್ವಹಣೆ;
(ಬಿ) “ನೇಮಕಾತಿ” ಎಂದರೆ, ನೇರ ನೇಮಕಾತಿ ಮೂಲಕ, ವಿಲೀನದ ಮೂಲಕ ಅಥವಾ ಮುಂಬಡ್ತಿ ಮೂಲಕ ಆಗುವ ನೇಮಕಾತಿ;
(ಸಿ) “ನೇಮಕಾತಿ ಪ್ರಾಧಿಕಾರ” ಎಂದರೆ, ಕರ್ನಾಟಕ ಶಿಕ್ಷಣ ಇಲಾಖೆ ಸೇವೆ (ತಾಂತ್ರಿಕ ಶಿಕ್ಷಣ ಇಲಾಖೆ) ಯಲ್ಲಿ ಯಾರೇ ಬೋಧಕ ಸಿಬ್ಬಂದಿಯನ್ನು ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರ;
(ಡಿ) “ಸಕ್ಷಮ ಪ್ರಾಧಿಕಾರ” ಎಂದರೆ, ಈ ನಿಯಮಗಳ ಮೇರೆಗೆ ವರ್ಗಾವಣೆ ಮಾಡಲು ಸಕ್ಷಮವಾಗಿರುವಂಥ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣದ ಆಯುಕ್ತರು;
(ಇ) “ಕೌನ್ಸಲಿಂಗ್” ಎಂದರೆ, ಈ ನಿಯಮಗಳ ಅನುಸಾರವಾಗಿ ನೇಮಕಾತಿಅಥವಾ ವರ್ಗಾವಣೆಗಾಗಿ ಪರಿಗಣಿಸಲ್ಪಟ್ಟ ವ್ಯಕ್ತಿಗೆ ಲಭ್ಯವಿರುವ ಸ್ಥಳ ಅಥವಾ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುವ ಗಣಕೀಕೃತ ಕೌನ್ಸಲಿಂಗ್ ಪ್ರಕ್ರಿಯೆ;
(ಎಫ್) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ;
(ಜಿ) “ಸರ್ಕಾರಿ ಕಾಲೇಜು” ಎಂದರೆ, ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂಥ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್ಗಳು ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು ಮತ್ತು ಎಲ್ಲ ಇತರೆ ಸರ್ಕಾರಿ ಕಾಲೇಜುಗಳನ್ನು ಒಳಗೊಂಡಂತೆ ರಾಜ್ಯ ಸರ್ಕಾರಕ್ಕೆ ಸೇರಿದ ಎಲ್ಲ ಕಾಲೇಜುಗಳು;
(ಹೆಚ್) “ಧಾರಣಾಧಿಕಾರ” ಎಂದರೆ, ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳು, 1958 ರಲ್ಲಿ ಪರಿಭಾಷಿಸಿರುವಂಥದ್ದೇ ಅರ್ಥವನ್ನು ಹೊಂದಿರುವ ಧಾರಣಾಧಿಕಾರ;
(ಐ) “ನಿರ್ದಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿ” ಎಂದರೆ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 (2016 ರ ಕೇಂದ್ರ ಅಧಿನಿಯಮ 49) ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳಲ್ಲಿ ಪರಿಭಾಷಿಸಿದಂಥ ನಿರ್ದಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿ;
(ಜೆ) “ಪ್ರಪತ್ರ” ಎಂದರೆ, ಸಕ್ಷಮ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ನಮೂನೆ;
(ಕೆ) “ನಿಯತ ಸ್ಥಳ ನಿಯುಕ್ತಿ” ಎಂದರೆ, ಬೋಧಕ ಸಿಬ್ಬಂದಿಯ ಧಾರಣಾಧಿಕಾರವಿರುವಲ್ಲಿ ಬೋಧಕ ಸಿಬ್ಬಂದಿಯನ್ನು ಸ್ಥಳ ನಿಯುಕ್ತಿ ಮಾಡುವುದು;
(ಎಲ್) “ಅನುಸೂಚಿ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ಅನುಸೂಚಿ;
(ಎಂ) “ಗಂಭೀರ ಸ್ವರೂಪದ ಕಾಯಿಲೆಗಳು” ಎಂದರೆ,
(i) ನೌಕರರ ಕಾಯಿಲೆಯ ಸಂದರ್ಭದಲ್ಲಿ ಸರ್ಕಾರವು ಅಧಿಸೂಚಿಸಿರುವಂಥ ರೋಗಗಳ ಪಟ್ಟಿಯಲ್ಲಿರುವ;
(ii) ನೌಕರರ ಪತಿ/ಪತ್ನಿ ಮತ್ತು ಮಕ್ಕಳ ಕಾಯಿಲೆಯ ಸಂದರ್ಭದಲ್ಲಿ, ಸರ್ಕಾರವು ಅಧಿಸೂಚಿಸಿರುವಂಥ ರೋಗಗಳ ಪಟ್ಟಿಯಲ್ಲಿರುವ;– ಕಾಯಿಲೆಗಳು ಎಂದರ್ಥ.
(ಎನ್) “ಪತಿ/ಪತ್ನಿ ಪ್ರಕರಣ” ಎಂದರೆ, ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ರಾಷ್ಟ್ರೀಕೃತ ಬ್ಯಾಂಕ್ಗಳು ಅಥವಾ ಸರ್ಕಾರಿ ಸ್ವಾಮ್ಯದಲ್ಲಿರುವ ಸಾರ್ವಜನಿಕ ವಲಯದ ಉದ್ಯಮಗಳು ಅಥವಾ ಸಂಸ್ಥೆ ಅಥವಾ ನಿಗಮ ಅಥವಾ ಮಂಡಳಿಯ ನೌಕರರಾಗಿರುವಂಥ ಅಥವಾ ಸರ್ಕಾರಿ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಅಥವಾ ರಾಜ್ಯ ವಿಶ್ವವಿದ್ಯಾನಿಲಯದ ಅನುದಾನಿತ ನೌಕರರಾಗಿರುವಂಥ ಬೋಧಕ ಸಿಬ್ಬಂದಿಯ ಪತಿ/ಪತ್ನಿಯ ಪ್ರಕರಣ;
(ಒ) “ಸಾಕಷ್ಟು ಕಾರ್ಯಭಾರ” ಎಂದರೆ, ಸಕ್ಷಮ ಪ್ರಾಧಿಕಾರವು ಸಾಕಷ್ಟು ಎಂದು ನಿರ್ದಿಷ್ಟಪಡಿಸಿದ ಕಾರ್ಯಭಾರ;
(ಪಿ) “ಬೋಧಕ ಸಿಬ್ಬಂದಿ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ಅನುಸೂಚಿಯಲ್ಲಿ ನಮೂದಿಸಲಾದಂಥ ನೌಕರರು;
(ಕ್ಯೂ) “ವರ್ಗಾವಣೆ” ಎಂದರೆ, ಆತ/ಆಕೆ ನಿಯತ ಸ್ಥಳ ನಿಯುಕ್ತಿಯನ್ನು ಹೊಂದಿರುವ ಒಂದು ಕಾರ್ಯಸ್ಥಾನ ಅಥವಾಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಅಥವಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಂದ ಕೌನ್ಸಲಿಂಗ್ ಮುಖಾಂತರ ಮತ್ತೊಂದು ಕಾರ್ಯಸ್ಥಾನಕ್ಕೆ ಅಥವಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ಗೆ ಅಥವಾ ಸರ್ಕಾರಿ ಪಾಲಿಟೆಕ್ನಿಕ್ಗೆ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಬೋಧಕ ಸಿಬ್ಬಂದಿಯ ಸ್ಥಳ ನಿಯುಕ್ತಿ ಮಾಡುವುದು;
(ಆರ್) “ಕಾರ್ಯಭಾರ” ಎಂದರೆ, ಹಿಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸಂಖ್ಯಾಬಲದ ಆಧಾರದ ಮೇಲೆ ಹಂಚಿಕೆ ಮಾಡಿದ ವಿಷಯವಾರು ಕಾರ್ಯಭಾರ.
(ಎಸ್) “ವಲಯ” ಎಂದರೆ, ಬೋಧಕ ಸಿಬ್ಬಂದಿಯ ನೇಮಕಾತಿ ಅಥವಾ ವರ್ಗಾವಣೆಯ ಉದ್ದೇಶಕ್ಕಾಗಿ ವಲಯವೆಂದು ವರ್ಗೀಕರಿಸಲಾದ ನಿರ್ದಿಷ್ಟ ಪ್ರದೇಶಗಳು ಮತ್ತು ಇದರಲ್ಲಿ
(i) “ವಲಯ-ಎ”ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ಬರುವ ಪ್ರದೇಶ;
(ii) “ವಲಯ-ಬಿ”ಎಂದರೆ, ವಲಯ-ಎ ಅಡಿಯಲ್ಲಿ ಬರುವ ಪ್ರದೇಶಗಳನ್ನು ಹೊರತುಪಡಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯೊಳಗಿನ ಎಲ್ಲ ಪ್ರದೇಶಗಳು ಮತ್ತು ಕರ್ನಾಟಕ ಪೌರ ನಿಗಮಗಳಅಧಿನಿಯಮ, 1976 (1977 ರ ಕರ್ನಾಟಕ ಅಧಿನಿಯಮ 14)ರ ಮೇರೆಗೆ ರಚಿತವಾದ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳು.
(iii) “ವಲಯ-ಸಿ” ಎಂದರೆ, ವಲಯ-ಎ ಮತ್ತು ವಲಯ-ಬಿ ಅಡಿಯಲ್ಲಿ ಬರುವ ಪ್ರದೇಶವನ್ನು ಹೊರುತಪಡಿಸಿ, ಎಲ್ಲ ಜಿಲ್ಲೆಗಳ ಜಿಲ್ಲಾ ಕೇಂದ್ರ ಸ್ಥಾನಗಳು ಮತ್ತು ಕರ್ನಾಟಕ ಪೌರ ನಿಗಮಗಳಅಧಿನಿಯಮ, 1976 (1977 ರ ಕರ್ನಾಟಕ ಅಧಿನಿಯಮ 14) ರ ಮೇರೆಗೆ ರಚಿತವಾದ ಎಲ್ಲ ನಗರಮುನ್ಸಿಪಲ್ ಕೌನ್ಸಿಲ್ಗಳು;
(iv) “ವಲಯ-ಡಿ” ಎಂದರೆ, ವಲಯ-ಎ, ವಲಯ-ಬಿ ಮತ್ತು ವಲಯ-ಸಿ ಅಡಿಯಲ್ಲಿ ಬರುವಂಥ ಪ್ರದೇಶಗಳನ್ನು ಹೊರುತಪಡಿಸಿ, ಎಲ್ಲ ಇತರೆ ಪ್ರದೇಶಗಳು ಒಳಗೊಳ್ಳುತ್ತವೆ.
(2) ಈ ನಿಯಮಗಳಲ್ಲಿ ಬಳಸಿದ ಆದರೆ ಪರಿಭಾಷಿಸಿಲ್ಲದ ಪದಗಳು ಮತ್ತು ಅಭಿವ್ಯಕ್ತಿಗಳು, ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅವುಗಳಿಗೆ ನೀಡಿರುವಂಥದ್ದೇ ಅರ್ಥವನ್ನು ಹೊಂದಿರತಕ್ಕದ್ದು.