(1) ಯಾವುದೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಅಥವಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ, ಯಾವುದೇ ವಿಷಯದಲ್ಲಿ ಬೋಧಕ ಸಿಬ್ಬಂದಿಗೆ ಸಾಕಷ್ಟು ಕಾರ್ಯಭಾರ ಲಭ್ಯವಿಲ್ಲದಿದ್ದರೆ, ಸಕ್ಷಮ ಪ್ರಾಧಿಕಾರವು ಹೆಚ್ಚುವರಿಯೆಂದು ನಿರ್ಧರಿಸಬಹುದಾದಷ್ಟು ಸಂಖ್ಯೆಯ ಹುದ್ದೆಗಳನ್ನು ಹುದ್ದೆಯ ಸ್ಥಳಾಂತರಕ್ಕೆ, ಸಾಕಷ್ಟು ಕಾರ್ಯಭಾರವಿರುವಂಥ ಅದೇ ವಲಯದೊಳಗಿನ ಯಾವುದೇ ಇತರೆ ಕಾಲೇಜಿಗೆ ಸ್ಥಳಾಂತರಿಸಬಹುದು.
ಪರಂತು, ಅದೇ ವಲಯದಲ್ಲಿ, ಆ ವಿಷಯದಲ್ಲಿ ಸಾಕಷ್ಟು ಕಾರ್ಯಭಾರ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಅಥವಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು ಲಭ್ಯವಿಲ್ಲದಿದ್ದರೆ, ಆ ವಿಷಯದಲ್ಲಿನ ಅಷ್ಟೂ ಸಂಖ್ಯೆಯ ಹುದ್ದೆಗಳನ್ನು, ಸಕ್ಷಮ ಪ್ರಾಧಿಕಾರವು ಸಾಧ್ಯವಾದಷ್ಟು ಮಟ್ಟಿಗೆ, ನೆರೆಹೊರೆಯ ಅಥವಾ ಸಮೀಪದ ಯಾವುದೇ ಇತರೆ ವಲಯದಲ್ಲಿ ಸಾಕಷ್ಟು ಕಾರ್ಯಭಾರ ಹೊಂದಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಅಥವಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಸ್ಥಳಾಂತರಿಸತಕ್ಕದ್ದು.
ಮತ್ತು ಪರಂತು, ಸಿಬ್ಬಂದಿಯನ್ನು, ಹುದ್ದೆಯೊಂದಿಗೆ ಸ್ಥಳಾಂತರಿಸಿದ್ದರೆ, ಸ್ಥಳಾಂತರಿಸುವುದಕ್ಕಿಂತ ಮೊದಲು ಈ ಹಿಂದಿನ ನಿಯತ ಸ್ಥಳ ನಿಯುಕ್ತಿಯ ಕಾರ್ಯಸ್ಥಳ ಮತ್ತು ವಲಯವನ್ನು, 4ನೇ ನಿಯಮದ ಮೇರೆಗೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಯನ್ನು ನಿರ್ಧರಿಸಲು ಮತ್ತು 5ನೇ ನಿಯಮದ ಮೇರೆಗೆ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸುವುದಕ್ಕಾಗಿ ಪರಿಗಣಿಸತಕ್ಕದ್ದು.
(2) (1) ನೇ ಉಪ-ನಿಯಮದ ಪ್ರಕಾರ ಹುದ್ದೆಗಳ ಸ್ಥಳಾಂತರಿಸುವ ಪ್ರಕ್ರಿಯೆಯನ್ನು, 4, 5, 6 ಮತ್ತು 7ನೇ ನಿಯಮದ ಅನುಸಾರವಾಗಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವುದಕ್ಕಿಂತ ಮುಂಚೆ ಹಾಗೂ 8ನೇ ನಿಯಮದಲ್ಲಿ ನಿಯಮಿಸಿದ ವರ್ಗಾವಣೆ ಅವಧಿಯೊಳಗೆ ಪೂರ್ಣಗೊಳಿಸತಕ್ಕದ್ದು.