ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಯಾರೇ ಬೋಧಕ ಸಿಬ್ಬಂದಿಯನ್ನು –
(i) ದುರ್ವರ್ತನೆ ಅಥವಾ ಅನುಚಿತ ನಡವಳಿಕೆ ಅಥವಾ ಹಣಕಾಸಿನ ಅವ್ಯವಹಾರಗಳು ಅಥವಾ ಇತರ ಯಾವುದೇ ಅಶಿಸ್ತಿನಕೃತ್ಯಗಳು ಮೇಲ್ನೋಟಕ್ಕೆ ಕಂಡುಬಂದಿರುವ ಆಧಾರದ ಮೇಲೆ; ಅಥವಾ
(ii) ದೂರುಗಳು ಮತ್ತು ದುರ್ವರ್ತನೆ ಅಥವಾ ಅನುಚಿತ ನಡವಳಿಕೆ ಅಥವಾ ಹಣಕಾಸಿನ ಅವ್ಯವಹಾರಗಳು ಅಥವಾ ಇತರೆ ಯಾವುದೇ ಅಶಿಸ್ತಿನ ಕೃತ್ಯಗಳು ಮೇಲ್ನೋಟಕ್ಕೆ ಕಂಡುಬಂದಿರುವ ಆಧಾರದ ಮೇಲೆ, - ಸಕ್ಷಮ ಪ್ರಾಧಿಕಾರವು ವಲಯ-ಡಿ ರಲ್ಲಿನ ಯಾವುದೇ ಸ್ಥಳಕ್ಕೆ ವರ್ಗಾವಣೆ ಮಾಡಬಹುದು.