(ಎ) 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯ ಆದ್ಯತಾ ಪಟ್ಟಿಗಳನ್ನು ಮತ್ತು 4ನೇ ನಿಯಮದ (2)ನೇ ಉಪ-ನಿಯಮದ ಮೇರೆಗೆ ವರ್ಗಾವಣೆಗಾಗಿ ಕೋರಿರುವ ಬೋಧಕ ಸಿಬ್ಬಂದಿಯ ಮತ್ತು ಪ್ರಸ್ತುತ ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿದ ಸ್ಥಳದಲ್ಲಿ 4ನೇ ನಿಯಮದ (4)ನೇ ಉಪ-ನಿಯಮದ(ಎ) ಖಂಡದ ಅಡಿಯಲ್ಲಿ ಕನಿಷ್ಠ ಸೇವೆಯ ವಿನಾಯಿತಿ (ಕಡಿತ)ಯ ಪ್ರಯೋಜನವನ್ನು ಪಡೆದುಕೊಳ್ಳಲು ಅಪೇಕ್ಷಿಸುವಂಥ ಬೋಧಕ ಸಿಬ್ಬಂದಿಯ ಒಂದು ಪ್ರತ್ಯೇಕ ಪಟ್ಟಿಯನ್ನು ಪ್ರಸ್ತುತ ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿದ ವಲಯದಲ್ಲಿನ ಸಂಪೂರ್ಣ ಸೇವೆಯಲ್ಲಿ ವಾಸ್ತವಿಕವಾಗಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ವರ್ಷಗಳ ಆಧಾರದ ಮೇಲೆ, ಅನುಸೂಚಿಯಲ್ಲಿ ನೀಡಲಾದಂತೆ ವಲಯವಾರು ಮತ್ತು ಪ್ರವರ್ಗವಾರು, ಸಕ್ಷಮ ಪ್ರಾಧಿಕಾರದಿಂದ ಅರ್ಜಿಯನ್ನು ಆಹ್ವಾನಿಸಿದ ತರುವಾಯ ಸಿದ್ಧಪಡಿಸತಕ್ಕದ್ದು.
(ಬಿ) ಪ್ರತಿಯೊಂದು ವಲಯದೊಳಗೆ, ಆದ್ಯತಾ ಪಟ್ಟಿಗಳನ್ನು 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನೀಡಿದ ಪ್ರತಿಯೊಂದು ಪ್ರವರ್ಗಕ್ಕೆ ಅನುಗುಣವಾಗಿ ಪ್ರತ್ಯೇಕವಾಗಿ ಸಿದ್ಧಪಡಿಸತಕ್ಕದ್ದು ಮತ್ತು ಪ್ರತಿಯೊಂದು ವಲಯದಿಂದ ವರ್ಗಾವಣೆಯನ್ನು ಈ ಕೆಳಕಂಡ ಆದ್ಯತಾ ಕ್ರಮದಲ್ಲಿ ಮಾಡತಕ್ಕದ್ದು.
(i) ನಿರ್ದಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿಯ
(ii) ಗಂಭೀರ ಸ್ವರೂಪದ ಕಾಯಿಲೆಗಳ ಪ್ರಕರಣಗಳು;
(iii) 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ಒಂಟಿಪಾಲಕ ಅಥವಾ ಮರು-ವಿವಾಹವಾಗದಿರುವ ವಿಚ್ಛೇದಿತ ಮಹಿಳೆಯರು ಅಥವಾ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಥವಾ ಅರೆಸೇನಾ ಪಡೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಾಗ ಉಂಟಾದ ನಿರ್ದಿಷ್ಟ ಮಾನದಂಡದ ಅಂಗವಿಕಲತೆಯಿಂದ ಬಳಲುತ್ತಿರುವ ಸಂಪೂರ್ಣ (Physically) ಅವಲಂಬಿತ ಪತಿ/ಪತ್ನಿ ಮತ್ತು ಮಕ್ಕಳನ್ನು ಹೊಂದಿರುವ ಬೋಧಕ ಸಿಬ್ಬಂದಿಯ ಪ್ರಕರಣಗಳು.
(iv) ಪತಿ/ಪತ್ನಿ ಪ್ರಕರಣಗಳು;
(v) ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ
(ಸಿ) ಸೇವೆ ಸಲ್ಲಿಸಿದ ವರ್ಷಗಳ ಸಂಖ್ಯೆಯು ಸಮಾನವಾಗಿದ್ದಲ್ಲಿ, ಈ ಹಿಂದೆ ಕಾರ್ಯನಿರ್ವಹಣೆಯಲ್ಲಿದ್ದ ಶ್ರೇಣಿಕರಣ ಪಟ್ಟಿಯ ಆಧಾರದ ಮೇಲೆ ಜೇಷ್ಠತೆಯನ್ನು ಪರಿಗಣಿಸತಕ್ಕದ್ದು ಮತ್ತು ಅದರಲ್ಲಿ ಹಿರಿಯನಾದವನಿಗೆ ಕೌನ್ಸಲಿಂಗ್ನಲ್ಲಿ ಮೊದಲ ಆದ್ಯತೆಯನ್ನು ನೀಡತಕ್ಕದ್ದು.
(ಡಿ) ಸಕ್ಷಮ ಪ್ರಾಧಿಕಾರವು, ಮೇಲೆ ಪಟ್ಟಿಮಾಡಲಾದ ಪ್ರಕ್ರಿಯೆಯ ಅನುಸಾರ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟಿನಲ್ಲಿ ಅಧಿಸೂಚನೆ ಪ್ರಕಟಣೆಯ ಹದಿನೈದು ದಿನಗಳ ಅವಧಿಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಧಿಸೂಚಿಸತಕ್ಕದ್ದು. ಬೋಧಕ ಸಿಬ್ಬಂದಿಯಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ಮೇಲೆ, ಅವುಗಳನ್ನು ಸಿಂಧುತ್ವದ ಆಧಾರದ ಮೇಲೆ ಪರಿಗಣಿಸಬಹುದು ಅಥವಾ ತಿರಸ್ಕರಿಸಬಹುದು ಮತ್ತು ತರುವಾಯ ಅಂತಿಮ ಆದ್ಯತಾ ಪಟ್ಟಿಯನ್ನು ಪ್ರಕಟಿಸತಕ್ಕದ್ದು.