ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದಾಗಲಿ ಅಥವಾ ಕೋರಿಕೆಯ ಮೇಲೆಯಾಗಲಿ ಮಾಡಿರುವ ಎಲ್ಲಾ ವರ್ಗಾವಣೆಗಳನ್ನು ಆ ಕ್ಯಾಲೆಂಡರ್ ವರ್ಷದಲ್ಲಿ ಮೇ ಮತ್ತು ಜುಲೈ ತಿಂಗಳ ನಡುವೆ ಅಥವಾ ಸರ್ಕಾರವು ಅಧಿಸೂಚಿಸಲಾದಂತೆ ಮಾಡಬಹುದು.
ಪರಂತು, ಮೇಲ್ಕಂಡ ವರ್ಗಾವಣೆಯ ಅವಧಿಯು 9,10 ಮತ್ತು 12ನೇ ನಿಯಮಗಳ ಅಡಿಯಲ್ಲಿ ಬರುವ ಪ್ರಕರಣಗಳಿಗೆ ಅನ್ವಯವಾಗತಕ್ಕದ್ದಲ್ಲ.