Annexure 8. ಸರ್ಕಾರದ ಉಪ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
-
ಮಾನ್ಯ ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ, ವಿಕಾಸಸೌಧ, ಬೆಂಗಳೂರು.
-
ಎಲ್ಲಾ ಜಂಟಿ ನಿರ್ದೇಶಕರುಗಳು, ತಾಂತ್ರಿಕ ಶಿಕ್ಷಣ ಇಲಾಖೆ.
-
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ
ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
-
ಸರ್ಕಾರದ ಜಂಟಿ ಕಾರ್ಯದರ್ಶಿಯವರ ಆಪ್ತ ಸಹಾಯಕರು (ಕಾಲೇಜು ಮತ್ತು ತಾಂತ್ರಿಕ), ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
-
ಕಛೇರಿ ಪ್ರತಿ/ ಶಾಖಾರಕ್ಷಾ ಕಡತ
ಕರ್ನಾಟಕ ಸರ್ಕಾರ
ಸಂಖ್ಯೆ. ಇಡಿ 137 ಡಿಟಿಇ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟಡ, ಬೆಂಗಳೂರು, ದಿನಾಂಕ:18.08.2021
ಅಧಿಸೂಚನೆ
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣವನ್ನು ಓದಿಕೊಂಡು, 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಕರ್ನಾಟಕ ಸಿವಿಲ್ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2021ರ ಕರಡನ್ನು, ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆ ಸಂಖ್ಯೆ. 506 ದಿನಾಂಕ: 30.04.2021 ರ ಭಾಗ IV-ಎ ರಲ್ಲಿ, ಅಧಿಸೂಚನೆ ಸಂಖ್ಯೆ. ಇಡಿ 137 ಡಿಟಿಇ 2020, ದಿನಾಂಕ: 30.04.2021 ರಲ್ಲಿ ಪ್ರಕಟಿಸಲಾಗಿದ್ದು, ಅಧಿಕೃತ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ.
ಮತ್ತು ಸದರಿ ರಾಜ್ಯಪತ್ರವನ್ನು 30.04.2021 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.
ಮತ್ತು ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ, ಸರ್ಕಾರವು ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪರಿಗಣಿಸಿರುವುದರಿಂದ.
ಆದ್ದರಿಂದ, ಪ್ರಸ್ತುತ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ
ಪ್ರಕರಣವನ್ನು ಓದಿಕೊಂಡು, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
- ಶೀರ್ಷಿಕೆ ಮತ್ತು ಪ್ರಾರಂಭ.
(1) ಈ ನಿಯಮಗಳನ್ನು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ನಿಯಮಗಳು, 2021 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು, ಅಧಿಕೃತ ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 2ನೇ ನಿಯಮದ ತಿದ್ದುಪಡಿ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು, 2021 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) ರ 2ನೇ ನಿಯಮದಲ್ಲಿ, (1)ನೇ ಉಪ-ನಿಯಮದಲ್ಲಿನ (ಎ) ಖಂಡವನ್ನು ಬಿಟ್ಟುಬಿಡತಕ್ಕದ್ದು.
- 4ನೇ ನಿಯಮದ ತಿದ್ದುಪಡಿ.
ಸದರಿ ನಿಯಮಗಳ 4ನೇ ನಿಯಮದಲ್ಲಿನ (1)ನೇ ಉಪ-ನಿಯಮದ ತರುವಾಯ ಈ ಕೆಳಕಂಡ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ 2,3,4 ಮತ್ತು 5ರ ಪ್ರವರ್ಗಗಳಿಗೆ ಸೇರಿದ ಬೋಧಕ ಸಿಬ್ಬಂದಿಯ ಸಂದರ್ಭದಲ್ಲಿ, ವರ್ಗಾವಣೆಯ ಉದ್ದೇಶಕ್ಕಾಗಿ ಪ್ರಸ್ತುತ ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಪೂರ್ಣಗೊಳಿಸಬೇಕಾದ ಕನಿಷ್ಠ ಸೇವಾವಧಿಯನ್ನು ಸಂಬಂಧಪಟ್ಟ ಬೋಧಕ ಸಿಬ್ಬಂದಿಯ ಕೋರಿಕೆಯ ಮೇರೆಗೆ ಒಂದು ವರ್ಷದವರೆಗೆ ವಿಸ್ತರಿಸಬಹುದು”
- 5ನೇ ನಿಯಮದ ತಿದ್ದುಪಡಿ.
ಸದರಿ ನಿಯಮಗಳ 5ನೇ ನಿಯಮದಲ್ಲಿ,-
(i) (ಎ) ಖಂಡಕ್ಕೆ ಈ ಕೆಳಕಂಡದ್ದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(ಎ) 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂಥ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯ ಆದ್ಯತಾ ಪಟ್ಟಿಗಳನ್ನು ಮತ್ತು 4ನೇ ನಿಯಮದ (2) ನೇ ಉಪ-ನಿಯಮದ ಮೇರೆಗೆ ವರ್ಗಾವಣೆಗಾಗಿ ಕೋರಿರುವ ಬೋಧಕ ಸಿಬ್ಬಂದಿಯ ಒಂದು ಪ್ರತ್ಯೇಕವಾದ ಪಟ್ಟಿಯನ್ನು,
ಸಕ್ಷಮ ಪ್ರಾಧಿಕಾರವು, ಪ್ರಸ್ತುತ ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಸಲ್ಲಿಸಿದ ಸೇವಾವಧಿಯ ಆಧಾರದ ಮೇಲೆ, ಅನುಸೂಚಿಯಲ್ಲಿ ನೀಡಲಾಗಿರುವಂತೆ ವಲಯವಾರು ಮತ್ತು ಪ್ರವರ್ಗವಾರು ಅರ್ಜಿಗಳನ್ನು ಆಹ್ವಾನಿಸಿದ ತರುವಾಯ ಸಿದ್ಧಪಡಿಸತಕ್ಕದ್ದು:
ಪರಂತು, ಪ್ರಸ್ತುತ ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಇಬ್ಬರು ಅಥವಾ ಹೆಚ್ಚಿನ ಬೋಧಕ ಸಿಬ್ಬಂದಿಗಳು ಒಂದೇ ಅವಧಿಗೆ ಸೇವೆಯನ್ನು ಸಲ್ಲಿಸಿದ್ದರೆ, ಆಗ ಕಾರ್ಯನಿರ್ವಹಿಸಲಾದ ಶ್ರೇಣೀಕರಣ ಪಟ್ಟಿಯ ಪ್ರಕಾರ ಜೇಷ್ಠತೆಯನ್ನು, ಆದ್ಯತಾ ಪಟ್ಟಿಯಲ್ಲಿನ ಆಂತರಿಕ (inter-se) ಜೇಷ್ಠತೆಗಾಗಿ ಪರಿಗಣಿಸತಕ್ಕದ್ದು.”
(ii) (ಸಿ)ಖಂಡ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
- 6ನೇ ನಿಯಮದ ತಿದ್ದುಪಡಿ.
ಸದರಿ ನಿಯಮಗಳ 6ನೇ ನಿಯಮದಲ್ಲಿನ (4)ನೇ ಉಪ-ನಿಯಮದ ತರುವಾಯ, ಈ ಕೆಳಕಂಡದ್ದನ್ನು ಸೇರಿಸತಕ್ಕದ್ದು, ಎಂದರೆ:-
“(4ಎ) ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಮತ್ತು ಕೋರಿಕೆಯ ಮೇಲೆ ಕೌನ್ಸಲಿಂಗ್ ಮೂಲಕ ವರ್ಗಾವಣೆಯಾಗಬೇಕಾದ ಬೋಧಕ ಸಿಬ್ಬಂದಿಯ ಅಂತಿಮ ಆದ್ಯತಾಪಟ್ಟಿಗಳನ್ನು 5ನೇ ನಿಯಮದಲ್ಲಿ ನಿಯಮಿಸಲಾದ ಪ್ರಕ್ರಿಯೆಯ ಅನುಸಾರ ಪ್ರಕಟಿಸತಕ್ಕದ್ದು.
Annexure
(ಎಂ.ಜಿ ವೆಂಕಟೇಶಯ್ಯ) ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ(ತಾಂತ್ರಿಕ ಶಿಕ್ಷಣ)
ಗೆ,
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ, ಬೆಂಗಳೂರು-ಇವರಿಗೆ ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸಲು ಮತ್ತು ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ ಇವರಿಗೆ 200 ಪ್ರತಿಗಳನ್ನು ಮತ್ತು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ, ಅರಮನೆ ರಸ್ತೆ, ಬೆಂಗಳೂರು ಇವರಿಗೆ 100 ಪ್ರತಿಗಳನ್ನು ಒದಗಿಸಲು ಕೋರಿದೆ.
ಪ್ರತಿಗಳು,
-
ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ
-
ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ,
-
ಸರ್ಕಾರದ ಜಂಟಿ ಕಾರ್ಯದರ್ಶಿ, ಸಚಿವ ಸಂಪುಟ (ಸಂಖ್ಯೆ-ಸಿ-472/2020) ವಿಧಾನಸೌಧ, ಬೆಂಗಳೂರು.
-
ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-1), ವಿಧಾನಸೌಧ, ಬೆಂಗಳೂರು.
-
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ವಿಧಾನಸೌಧ, ಬೆಂಗಳೂರು.
-
ಸರ್ಕಾರದ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1 & 2), ವಿಧಾನಸೌಧ, ಬೆಂಗಳೂರು.
-
ಸರ್ಕಾರದ ಉಪಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
-
ಸರ್ಕಾರದ ಉಪ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
-
ಮಾನ್ಯ ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ, ವಿಕಾಸಸೌಧ, ಬೆಂಗಳೂರು.
-
ಎಲ್ಲಾ ಜಂಟಿ ನಿರ್ದೇಶಕರುಗಳು, ತಾಂತ್ರಿಕ ಶಿಕ್ಷಣ ಇಲಾಖೆ.
-
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
-
ಸರ್ಕಾರದ ಜಂಟಿ ಕಾರ್ಯದರ್ಶಿಯವರ ಆಪ್ತ ಸಹಾಯಕರು (ಕಾಲೇಜು ಮತ್ತು ತಾಂತ್ರಿಕ), ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
-
ಕಛೇರಿ ಪ್ರತಿ/ ಶಾಖಾರಕ್ಷಾ ಕಡತ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಎಂ.ಜಿ ವೆಂಕಟೇಶಯ್ಯ) ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ(ತಾಂತ್ರಿಕ ಶಿಕ್ಷಣ)
ಗೆ,
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ, ಬೆಂಗಳೂರು-ಇವರಿಗೆ ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸಲು ಮತ್ತು ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ ಇವರಿಗೆ 200 ಪ್ರತಿಗಳನ್ನು ಮತ್ತು ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ, ಅರಮನೆ ರಸ್ತೆ, ಬೆಂಗಳೂರು ಇವರಿಗೆ 100 ಪ್ರತಿಗಳನ್ನು ಒದಗಿಸಲು ಕೋರಿದೆ.
ಪ್ರತಿಗಳು,
- ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ
- ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ,
- ಸರ್ಕಾರದ ಜಂಟಿ ಕಾರ್ಯದರ್ಶಿ, ಸಚಿವ ಸಂಪುಟ (ಸಂಖ್ಯೆ-ಸಿ-472/2020) ವಿಧಾನಸೌಧ, ಬೆಂಗಳೂರು.
- ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-1), ವಿಧಾನಸೌಧ, ಬೆಂಗಳೂರು.
- ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ವಿಧಾನಸೌಧ, ಬೆಂಗಳೂರು.
- ಸರ್ಕಾರದ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1 & 2), ವಿಧಾನಸೌಧ, ಬೆಂಗಳೂರು.
- ಸರ್ಕಾರದ ಉಪಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ