(1) ಪ್ರಾರಂಭಿಕ ನೇಮಕಾತಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಯನ್ನು, ಆಯ್ಕೆ ಪಟ್ಟಿಯಲ್ಲಿನ ಜೇಷ್ಠತೆಯ ಆಧಾರದ ಮೇಲೆ ವಲಯ-ಡಿ ನಲ್ಲಿ ಪ್ರದರ್ಶಿಸಲಾದ ಯಾವುದೇ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಮತಿಸತಕ್ಕದ್ದು. ಆದಾಗ್ಯೂ, ನಿರ್ದಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿಗಳ ಸಂದರ್ಭದಲ್ಲಿ, ಅವರಿಗೆ, ನಿರ್ದಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿಗಳ ನಡುವೆಯೇ ಆಂತರಿಕ ಜೇಷ್ಠತೆ (inter-se)ಯ ಆಧಾರದ ಮೇಲೆ ಕೌನ್ಸಲಿಂಗ್ನಲ್ಲಿ ಆದ್ಯತೆಯನ್ನು ನೀಡತಕ್ಕದ್ದು.
ಪರಂತು, ಮೇಲ್ಕಂಡ ಷರತ್ತು, ವಲಯ-ಡಿ ನಲ್ಲಿ ಮಂಜೂರು ಮಾಡಲಾದ ಹುದ್ದೆ ಇಲ್ಲದಿದ್ದರೆ ಆ ವೃಂದಕ್ಕೆ ಅನ್ವಯವಾಗತಕ್ಕದ್ದಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ, ಪ್ರಾರಂಭಿಕ ಸ್ಥಳ ನಿಯುಕ್ತಿಯನ್ನು ವಲಯ-ಸಿ ಗೆ ನೀಡತಕ್ಕದ್ದು. ವಲಯ-ಸಿ ಯಲ್ಲಿ ಮಂಜೂರು ಮಾಡಲಾದ ಹುದ್ದೆ ಇಲ್ಲದಿದ್ದರೆ, ನಂತರ, ಅಂತಹ ಸಂದರ್ಭಗಳಲ್ಲಿ, ಪ್ರಾರಂಭಿಕ ಸ್ಥಳನಿಯುಕ್ತಿಯನ್ನು ವಲಯ-ಬಿ ಗೆ ನೀಡತಕ್ಕದ್ದು. ವಲಯ-ಬಿ ಯಲ್ಲಿ ಮಂಜೂರು ಮಾಡಲಾದ ಹುದ್ದೆ ಇಲ್ಲದಿದ್ದರೆ, ನಂತರ, ಅಂತಹ ಸಂದರ್ಭಗಳಲ್ಲಿ, ಪ್ರಾರಂಭಿಕ ಸ್ಥಳನಿಯುಕ್ತಿಯನ್ನು ವಲಯ-ಎ ಗೆ ನೀಡತಕ್ಕದ್ದು.
(2) ವಲಯ-ಡಿ ರಲ್ಲಿ ಪ್ರಾರಂಭಿಕ ನೇಮಕಾತಿಗಾಗಿ ಯಾವುದೇ ಖಾಲಿ ಹುದ್ದೆ ಲಭ್ಯವಿಲ್ಲದಿದ್ದರೆ, ಅಗತ್ಯವಿರುವ ಖಾಲಿಹುದ್ದೆಗಳನ್ನು ಈ ಕೆಳಕಂಡ ಉಪಬಂಧಗಳಿಗೊಳಪಟ್ಟು ಮತ್ತು ಅಂಥ ಕ್ರಮದಲ್ಲಿ 4, 5, 6 ಮತ್ತು 7ನೇ ನಿಯಮಗಳ ಪ್ರಕಾರ, ಬೋಧಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಮೂಲಕ ಸೃಜಿಸಬಹುದು;
(ಎ) ವಲಯ-ಡಿ ನಲ್ಲಿ ಅಗತ್ಯವಿರುವಷ್ಟು ಸಂಖ್ಯೆಯ ಖಾಲಿಹುದ್ದೆಗಳನ್ನು ಸೃಜಿಸುವ ಸಲುವಾಗಿ, 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯನ್ನು ಪರಿಗಣಿಸಬಹುದು ಮತ್ತು ಅಂತಹ ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, ತರುವಾಯ ವಲಯ-ಡಿ ನಲ್ಲಿ 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಗೆ ವಲಯ-ಸಿ ನಲ್ಲಿ ಪ್ರದರ್ಶಿಸಲಾದ ಯಾವುದೇ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡತಕ್ಕದ್ದು.
(ಬಿ) ವಲಯ-ಡಿ ಯಿಂದ ವರ್ಗಾವಣೆಯಾದ ಬೋಧಕ ಸಿಬ್ಬಂದಿಗೆ ಸ್ಥಳಾವಕಾಶ ಕಲ್ಪಿಸುವುದಕ್ಕೆ ವಲಯ-ಸಿ ರಲ್ಲಿ ಯಾವುದೇ ಖಾಲಿಹುದ್ದೆಗಳು ಲಭ್ಯವಿಲ್ಲದಿದ್ದರೆ, ತರುವಾಯ 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯನ್ನು ಪರಿಗಣಿಸಬಹುದು. ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, ವಲಯ-ಸಿ ರಲ್ಲಿ 4ನೇ ನಿಯಮದ (1)ನೇ ಉಪನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವವರಿಗೆ ವಲಯ-ಬಿ ರಲ್ಲಿ ಪ್ರದರ್ಶಿಸಲಾದ ಯಾವುದೇ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡತಕ್ಕದ್ದು.
(ಸಿ) ವಲಯ-ಸಿ ಯಿಂದ ವರ್ಗಾವಣೆಯಾದ ಬೋಧಕ ಸಿಬ್ಬಂದಿಗೆ ಸ್ಥಳಾವಕಾಶ ಕಲ್ಪಿಸಲು ವಲಯ-ಬಿ ರಲ್ಲಿ ಖಾಲಿಹುದ್ದೆಗಳು ಲಭ್ಯವಿಲ್ಲದಿದ್ದರೆ, ತರುವಾಯ 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯನ್ನು ಪರಿಗಣಿಸಬಹುದು. ಅಂತಹ ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, ವಲಯ-ಬಿ ರಲ್ಲಿ 4ನೇ ನಿಯಮದ (1)ನೇ ಉಪನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವವರಿಗೆ ವಲಯ-ಎ ಯಲ್ಲಿ ಪ್ರದರ್ಶಿಸಲಾದ ಯಾವುದೇ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡತಕ್ಕದ್ದು.