(1) ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯನ್ನು, (3)ನೇ ಉಪ-ನಿಯಮದಲ್ಲಿ ವಿಧಿಸಲಾದ ನಿರ್ಬಂಧಗಳಿಗೊಳಪಟ್ಟು ಕೌನ್ಸಲಿಂಗ್ ಪ್ರಕ್ರಿಯೆಯ ಮುಖಾಂತರ ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ವರ್ಗಾವಣೆ ಮಾಡತಕ್ಕದ್ದು. ವರ್ಗಾವಣೆ ಉದ್ದೇಶಕ್ಕಾಗಿ ಪ್ರಸ್ತುತನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಪೂರ್ಣಗೊಳಿಸಬೇಕಾದ ಕನಿಷ್ಠ ಸೇವಾವಧಿಯು ನಾಲ್ಕು ವರ್ಷಗಳಾಗಿರತಕ್ಕದ್ದು.
(2). (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ 2, 3, 4 ಮತ್ತು 5ನೇ ಪ್ರವರ್ಗಗಳಿಗೆ ಸೇರಿದ ಬೋಧಕ ಸಿಬ್ಬಂದಿಯು, (3)ನೇ ಉಪ-ನಿಯಮದಲ್ಲಿ ವಿಧಿಸಲಾದ ನಿರ್ಬಂಧನೆಗಳಿಗೊಳಪಟ್ಟು, (1)ನೇ ಉಪ-ನಿಯಮದಲ್ಲಿ ಗೊತ್ತುಪಡಿಸಲಾದ ಪ್ರಸ್ತುತ ನಿಯತವಾಗಿ ಸ್ಥಳ ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿದ ತರುವಾಯ, ಕೌನ್ಸಲಿಂಗ್ ಮುಖಾಂತರ ವರ್ಗಾವಣೆಗೆ ಕೋರಬಹುದು. ಈ ಉದ್ದೇಶಕ್ಕಾಗಿ, ಬೋಧಕ ಸಿಬ್ಬಂದಿಯು, (3) ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ 2, 3, 4 ಮತ್ತು 5ನೇ ಪ್ರವರ್ಗಗಳಲ್ಲಿ ಯಾವುದೇ ಒಂದು ಪ್ರವರ್ಗದಿಂದ ಮಾತ್ರ ಅರ್ಜಿಯನ್ನು ಸಲ್ಲಿಸತಕ್ಕದ್ದು, ಆದರೆ ಒಂದಕ್ಕಿಂತ ಹೆಚ್ಚಿನ ಪ್ರವರ್ಗದಿಂದಲ್ಲ.
(3). ವರ್ಗಾವಣೆಯ ಮೇಲೆ ನಿರ್ಬಂಧ.– ಕೌನ್ಸಲಿಂಗ್ ಮುಖಾಂತರ ಮಾಡುವ ವರ್ಗಾವಣೆಗಳ ಒಟ್ಟು ಸಂಖ್ಯೆಯು, ಮಂಜೂರಾದ ಬೋಧಕ ಸಿಬ್ಬಂದಿಯ ಸಂಖ್ಯಾಬಲದ ಶೇಕಡಾ ಹದಿನೈದರಷ್ಟನ್ನು ಮೀರತಕ್ಕದ್ದಲ್ಲ. ವರ್ಗಾವಣೆಗಳ ಒಟ್ಟು ಸಂಖ್ಯೆಯ ಶೇಕಡಾ ಹದಿನೈದರ ಪೈಕಿ, ಶೇಕಡಾ ಒಂಬತ್ತರಷ್ಟನ್ನು, ಕೌನ್ಸಿಲಿಂಗ್ ಮುಖಾಂತರ ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಗಾಗಿ ಮೀಸಲಿರಿಸತಕ್ಕದ್ದು ಮತ್ತು ಉಳಿದಿರುವ ಶೇಕಡಾ ಆರರಷ್ಟನ್ನು, (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ಕನಿಷ್ಠ ಸೇವಾವಧಿಯು ಪೂರ್ಣಗೊಂಡ ಮೇಲೆ, ಈ ಕೆಳಕಂಡ ಕೋಷ್ಠಕದಲ್ಲಿ ನಿರ್ದಿಷ್ಟಪಡಿಸಲಾದಂತೆ ಕೋರಿಕೆಯ ಮೇಲಿನ ವರ್ಗಾವಣೆಗಳಿಗಾಗಿ ಮೀಸಲಿರಿಸತಕ್ಕದ್ದು:
ಕೋಷ್ಠಕ
| ಕ್ರಮ. ಸಂಖ್ಯೆ | ಪ್ರವರ್ಗ | ವರ್ಗಾವಣೆಗಳ ಶೇಕಡವಾರು |
| 1. | ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಗಳ ಪ್ರಕರಣಗಳು | 9% |
| 2. | ಪತಿ/ಪತ್ನಿ ಪ್ರಕರಣಗಳು | 3% |
| 3. | 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ಒಂಟಿಪಾಲಕ ಅಥವಾ ಮರುವಿವಾಹವಾಗದಿರುವ ವಿಚ್ಛೇದಿತ ಮಹಿಳೆಯರು ಅಥವಾ ಭಾರತೀಯ ಸಶಸ್ತ್ರ ಪಡೆಗಳು ಅಥವಾ ಅರೆಸೇನಾ ಪಡೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಾಗ ಉಂಟಾದ ನಿರ್ದಿಷ್ಟ ಮಾನದಂಡದ ಅಂಗವಿಕಲತೆಯಿಂದ ಬಳಲುತ್ತಿರುವ ಸಂಪೂರ್ಣ (ಕುಥುಭಿಚಿಟಟಥ) ಅವಲಂಬಿತ ಪತಿ/ಪತ್ನಿ ಮತ್ತು ಮಕ್ಕಳನ್ನು ಹೊಂದಿರುವ ಬೋಧಕ ಸಿಬ್ಬಂದಿಯ ಪ್ರಕರಣಗಳು. | 1% |
| 4. | ನಿರ್ದಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿಯ ಪ್ರಕರಣಗಳು | 1% |
| 5. | ಗಂಭೀರ ಸ್ವರೂಪದ ಕಾಯಿಲೆಗಳ ಪ್ರಕರಣಗಳು | 1% |
| ಒಟ್ಟು | 15% |
ಮತ್ತೂ ಪರಂತು, ಸಂಬಂಧಪಟ್ಟ ಬೋಧಕ ಸಿಬ್ಬಂದಿಯು, ಕಾಯಿಲೆಯ ಸ್ವರೂಪವನ್ನು ನಿರ್ದಿಷ್ಟ ಪಡಿಸಿ, ಆತನು ಕೆಲಸ ಮಾಡುವ ಸ್ಥಳದಲ್ಲಿ ಅಗತ್ಯ ಚಿಕಿತ್ಸೆಯು ಲಭ್ಯವಿರುವುದಿಲ್ಲ ಎಂಬ ಸಂಗತಿಯನ್ನು ತಿಳಿಸಿ ಮತ್ತು ಅಗತ್ಯ ಚಿಕಿತ್ಸೆಯು ಲಭ್ಯವಿರುವ ಸ್ಥಳವನ್ನು ನಿರ್ದಿಷ್ಟಪಡಿಸಿ, ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಯನ್ನು ಆತ ಕೊಡಿಸಲು ಅಂಥ ಒಂದು ಸ್ಥಳಕ್ಕೆ ಆತನನ್ನು ವರ್ಗಾವಣೆ ಮಾಡುವುದು ಅವಶ್ಯಕವಾಗಿದೆ ಎಂದು ಪ್ರಮಾಣೀಕರಿಸಿ ಜಿಲ್ಲಾ ವೈದ್ಯಕೀಯ ಮಂಡಳಿಯು ಪ್ರಮಾಣಪತ್ರ ನೀಡಿದ ಹೊರತು, ಈ ಖಂಡದ ಮೇರೆಗೆ ಯಾವುದೇ ವರ್ಗಾವಣೆಯನ್ನು ಪರಿಗಣಿಸತಕ್ಕದ್ದಲ್ಲ.
(ಬಿ). (1) ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯು, ವರ್ಗಾವಣೆಯಿಂದ ಈ ಕೆಳಕಂಡ ವಿನಾಯಿತಿಗಳಿಗೆ ಒಳಪಟ್ಟಿರತಕ್ಕದ್ದು ಹಾಗೂ ಒಟ್ಟು ಸೇವಾವಧಿಯಲ್ಲಿ ಒಮ್ಮೆ ಮಾತ್ರ ಈ ಪ್ರಯೋಜನವನ್ನು ಈ ಕೆಳಕಂಡ ಸಂದರ್ಭಗಳಲ್ಲಿ ಪಡೆಯತಕ್ಕದ್ದು, ಎಂದರೆ:–
(i) ಬೋಧಕ ಸಿಬ್ಬಂದಿ ಅಪೇಕ್ಷಿಸಿದಲ್ಲಿ, ವಯೋನಿವೃತ್ತಿಗೆ ಎರಡು ವರ್ಷಗಳಿಗಿಂತ ಕಡಿಮೆ ಸೇವಾವಧಿಯಿರುವ ಬೋಧಕ ಸಿಬ್ಬಂದಿಯನ್ನು ವರ್ಗಾವಣೆ ಮಾಡತಕ್ಕದ್ದಲ್ಲ.
(ii) ನಿರ್ದಿಷ್ಟ ಅವಧಿಗೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ), ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮ (ಟಿಇಕ್ಯೂಯುಐಪಿ) ಮತ್ತು ಇತರೆ ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಯಾವುದೇ ಶಾಸನಬದ್ಧ ಏಜೆನ್ಸಿಯಿಂದ ಮಂಜೂರಾದ ಪ್ರಮುಖ ಯೋಜನೆಯನ್ನು ಕೈಗೊಂಡಿರುವ ಬೋಧಕ ಸಿಬ್ಬಂದಿಯನ್ನು, (1) ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿದ ದಿನಾಂಕದಿಂದ, ಎರಡು ವರ್ಷಗಳ ಅವಧಿಯವರೆಗೆ ಅಥವಾ ಯೋಜನೆಯು ಪೂರ್ಣಗೊಳ್ಳುವವರೆಗೆ ವರ್ಗಾವಣೆ ಮಾಡತಕ್ಕದ್ದಲ್ಲ. ಸದರಿ ವಿನಾಯಿತಿಯನ್ನು ಕ್ಲೇಮು ಮಾಡಿಕೊಳ್ಳುವುದಕ್ಕಾಗಿ, ಸಂಬಂಧಪಟ್ಟ ಬೋಧಕ ಸಿಬ್ಬಂದಿಯು, ಸಕ್ಷಮ ಪ್ರಾಧಿಕಾರವು ನಿಯಮಿಸಿ ನಿರ್ದಿಷ್ಟಪಡಿಸಿದ ಪ್ರಪತ್ರದಲ್ಲಿ ಕೈಗೊಂಡ ಪ್ರಮುಖ ಯೋಜನೆಯ ವಿವರಗಳನ್ನು ಒದಗಿಸತಕ್ಕದ್ದು.
(iii) ಸಂಶೋಧನಾ ಕೇಂದ್ರಗಳಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಸಂಶೋಧನಾ ಮಾರ್ಗದರ್ಶಕರಾಗಿದ್ದು, ತಮ್ಮ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಅಥವಾ ಎಂ.ಫಿಲ್ ಸಂಶೋಧನಾ ಕಾರ್ಯವನ್ನು ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹೊಂದಿರುವ ಬೋಧಕ ಸಿಬ್ಬಂದಿಯನ್ನು, (1)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಿದಂತೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿದ ದಿನಾಂಕದಿಂದ ಎರಡು ವರ್ಷಗಳವರೆಗೆ ಅಥವಾ ಪಿಹೆಚ್.ಡಿ ಅಥವಾ ಎಂ.ಫಿಲ್ ಅನ್ನು ಪೂರ್ಣಗೊಳಿಸುವವರೆಗೆ, ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವರ್ಗಾವಣೆ ಮಾಡತಕ್ಕದ್ದಲ್ಲ.
(iv) ಸರ್ಕಾರಿ ಇಂಜಿನಿಯರಿಂಗ್ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಎನ್ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಯನ್ನು, (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿದ ದಿನಾಂಕದಿಂದ ಎರಡು ವರ್ಷಗಳವರೆಗೆ ವರ್ಗಾವಣೆ ಮಾಡತಕ್ಕದ್ದಲ್ಲ.
(v) ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಕೇಂದ್ರ ಪದಾಧಿಕಾರಿಯಾಗಿರುವ ಮತ್ತು (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯನ್ನು ಸಂಬಂಧಿಸಿದ ಪದಾಧಿಕಾರಿಯ ಅವಧಿ ಮುಗಿಯುವವರೆಗೆ ವರ್ಗಾವಣೆ ಮಾಡತಕ್ಕದ್ದಲ್ಲ.
(5). ಕೌನ್ಸಲಿಂಗ್ ನಡೆಸುವ ಮೂಲಕ ವರ್ಗಾವಣೆಯನ್ನು, ಈ ಕೆಳಕಂಡ ಕ್ರಮದಲ್ಲಿ ಮಾಡತಕ್ಕದ್ದು:
(ಎ) ಜೇಷ್ಠತೆಯ ಇಳಿಕೆ ಕ್ರಮದಲ್ಲಿ, 5ನೇ ನಿಯಮದ ಮೇರೆಗೆ ಸಿದ್ಧಪಡಿಸಲಾದ ಆದ್ಯತಾ ಪಟ್ಟಿಯ ಅನುಸಾರ, ವಲಯ-ಬಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಯನ್ನು ಪ್ರಸ್ತುತ ಸ್ಥಳ, ನಿಯುಕ್ತಿಗೊಳಿಸಿದ ಸ್ಥಳವನ್ನು ಹೊರತುಪಡಿಸಿ, ಯಾವುದೇ ವಲಯದಲ್ಲಿ ಪ್ರದರ್ಶಿಸಲಾದ ಯಾವುದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿಸತಕ್ಕದ್ದು.
(ಬಿ) ಜೇಷ್ಠತೆಯ ಇಳಿಕೆ ಕ್ರಮದಲ್ಲಿ, 5ನೇ ನಿಯಮದ ಮೇರೆಗೆ ಸಿದ್ಧಪಡಿಸಲಾದ ಆದ್ಯತಾ ಪಟ್ಟಿಯ ಅನುಸಾರ, ವಲಯ-ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಯನ್ನು, ಪ್ರಸ್ತುತ ಸ್ಥಳನಿಯುಕ್ತಿಗೊಳಿಸಿದ ಸ್ಥಳವನ್ನು ಹೊರತುಪಡಿಸಿ, ಯಾವುದೇ ವಲಯದಲ್ಲಿ ಪ್ರದರ್ಶಿಸಲಾದ ಯಾವುದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿಸತಕ್ಕದ್ದು.
(ಸಿ) ಜೇಷ್ಠತೆಯ ಇಳಿಕೆ ಕ್ರಮದಲ್ಲಿ, 5ನೇ ನಿಯಮದ ಮೇರೆಗೆ ಸಿದ್ಧಪಡಿಸಲಾದ ಆದ್ಯತಾ ಪಟ್ಟಿಯ ಅನುಸಾರ, ವಲಯ-ಡಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಯನ್ನು, ಪ್ರಸ್ತುತ ಸ್ಥಳ ನಿಯುಕ್ತಿಗೊಳಿಸಿದ ಸ್ಥಳವನ್ನು ಹೊರುತುಪಡಿಸಿ, ಯಾವುದೇ ವಲಯದಲ್ಲಿ ಪ್ರದರ್ಶಿಸಲಾದ ಯಾವುದೇ ಕಾಲೇಜನ್ನು ಆಯ್ಕೆಮಾಡಿಕೊಳ್ಳಲು ಅನುಮತಿಸತಕ್ಕದ್ದು.
(ಡಿ) ಜೇಷ್ಠತೆಯ ಇಳಿಕೆ ಕ್ರಮದಲ್ಲಿ, 5ನೇ ನಿಯಮದ ಮೇರೆಗೆ ಸಿದ್ಧಪಡಿಸಲಾದ ಆದ್ಯತಾ ಪಟ್ಟಿಯ ಅನುಸಾರ, ವಲಯ-ಎ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಯನ್ನು ಪ್ರಸ್ತುತ ಸ್ಥಳ ನಿಯುಕ್ತಿಗೊಳಿಸಿದ ಸ್ಥಳವನ್ನು ಹೊರತುಪಡಿಸಿ, ಯಾವುದೇ ವಲಯದಲ್ಲಿ ಪ್ರದರ್ಶಿಸಲಾದ ಯಾವುದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿಸತಕ್ಕದ್ದು.