(1) ಈ ನಿಯ ಮಗಳನುಸಾರವಾಗಿ ಯುಕ್ತ ಸೂಚನೆಯ ನ್ನು ನೀಡಿದ ಉದ್ದೇಶಕ್ಕಾಗಿ ವಿಶೇಷವಾಗಿ ಆಯೋಜಿಸಲಾದ ಸಭೆಯಲಿ ಅಧ್ಯಕ್ಷ ರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯತಕ್ಕದ್ದು.
(2) ಅಧ್ಯಕ್ಷರ ಚುನಾವಣೆ ನಡೆಯುವ ಸಭೆಯ ಅಧ್ಯಕ್ಷ ತೆಯನ್ನು ಉಪಾಧ್ಯಕ್ಷ ರು ವಹಿಸತಕ್ಕದ್ದು.
ಪರಂತು, ಉಪಾಧ್ಯಕ್ಷರು ತಾವೇ ಚುನಾವಣೆಗೆ ನಿಂತಿದ್ದರೆ, ಅಥವಾ ಉಪಾಧ್ಯಕ್ಷರೇ ಇಲ್ಲದಿದ್ದರೆ, ಅಥವಾ ಅವರು ಗೈರುಹಾಜರಾಗಿದ್ದರೆ, ಅಲ್ಲಿ ಹಾಜರಿರುವ ಸದಸ್ಯರು ತಮ್ಮಲ್ಲಿಯೇ ಒಬ್ಬ ಅಭ್ಯರ್ಥಿಯಲ್ಲದ ವ್ಯಕ್ತಿಯನ್ನು ಸಭೆಯ ಅಧ್ಯಕ್ಷತೆ ವಹಿಸಲು ಆರಿಸಿಕೊಳ್ಳ ತಕ್ಕದ್ದು.
(3) ಉಪಾಧ್ಯಕ್ಷರ ಚುನಾವಣೆ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು ವಹಿಸತಕ್ಕದ್ದು ಅಥವಾ ಅವರು ಗೈರು ಹಾಜರಾಗಿದ್ದ ರೆ, ಹಾಜರಿರುವ ಸದಸ್ಯರು ತಮ್ಮ ಲ್ಲಿಯೇ ಒಬ್ಬ ಅಭ್ಯರ್ಥಿಯ ಲ್ಲದ ವ್ಯಕ್ತಿಯನ್ನು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳ ಲು ಆರಿಸಿಕೊಳ್ಳ ತಕ್ಕದ್ದು.
(4) ಅಧ್ಯಕ್ಷ ಮತ್ತು ಸಂದರ್ಭಾನುಸಾರವಾಗಿ ಉಪಾಧ್ಯಕ್ಷ ಸ್ಥಾನದ ಚು ನಾವಣೆಗೆ ನಿಲ್ಲುವ ಮತ್ತು ಅನುಮೋದಿಸತಕ್ಕದ್ದು. ಪ್ರತಿಯೊಬ್ಬ ಅಭ್ಯರ್ಥಿಯ ಹೆಸರನ್ನು ಯುಕ್ತವಾಗಿ ಪ್ರಸ್ತಾವಿಸತಕ್ಕದ್ದು
(5) ಯುಕ್ತವಾಗಿ ಪ್ರಸ್ತಾವಿಸಲಾದ ಮತ್ತು ಅನುಮೋದಿತರಾದ ಅಭ್ಯರ್ಥಿಗಳ ಹೆಸರುಗಳನ್ನು ಮತ್ತು ಯಾರಾದರೂ ಸಭೆಯ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಸದಸ್ಯರಿಗೆ ಓದಿ ಹೇಳತಕ್ಕದ್ದು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿಯುವರೇ ಎಂದು ಖಚಿತಪಡಿಸಿಕೊಳ್ಳ ತಕ್ಕದ್ದು. ತದನಂತರ ತೆ ವಹಿಸಿದ ವ್ಯಕ್ತಿ ಮತದಾನದಿಂದ ಹಿಂದೆ ಸರಿ ಯದ ಅಭ್ಯರ್ಥಿಗಳ ಹೆಸರುಗಳನ್ನು ಮಂಡಿಸಬೇಕು. ಅಧ್ಯಕ್ಷ ಹೆಸರುಗಳನ್ನು ಪ್ರಸ್ತಾವಿಸಿದ ಮತ್ತು ಅನುಮೋದಿಸಿದ ಕ್ರಮದಲ್ಲಿಯೇ ಒಂದಾದ ನಂತರ ಒಂದರಂತೆ ಮಂಡಿಸತಕ್ಕದ್ದು ಮತ್ತು ಮತದಾನವು ಅಗತ್ಯವಿದ್ದರೆ ವಿಭಜನೆಯಿಂದ ನಿರ್ಣಯಿಸತಕ್ಕದ್ದು.
ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಯಾವುದೇ ಹೆಸರನ್ನು ನಂತರದ ಹೆಸರನ್ನು ಮತಕ್ಕೆ ಹಾಕದೇ ಅನುಮೋದಿಸಿದರೆ, ಹಾಗೆ ಪ್ರಸ್ತಾವಿಸಿದ ಹಾಗೂ ಅನುಮೋದನೆಗೊಂಡ ಸದಸ್ಯನು ಅಧ್ಯಕ್ಷನಾಗಿ ಚುನಾಯಿತನಾಗಿದ್ದಾನೆ ಎಂದು ಘೋಷಿಸತಕ್ಕದ್ದು. 4. ಕರ್ನಾಟಕ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಮತ್ತು ಭಾ ರತೀಯ ತರಬೇತಿ ಹೊಂದಿದ ದಾದಿಯರ ಸಂಘದ ಸದಸ್ಯರ ಚುನಾವಣೆ ಮತ್ತು ರಾಜ್ಯ ಸರ್ಕಾರದಿಂದ ಸದಸ್ಯರ ನಾಮನಿರ್ದೇಶನ,- ಪ್ರಕರಣ 5ರ ಉಪ-ಪ್ರಕರಣ (1)ರಡಿಯಲ್ಲಿ ಸದಸ್ಯರ ಪದಾವಧಿಯು ಮುಕ್ತಾಯವಾಗುವ ದಿನಾಂಕದ ಕನಿಷ್ಠ ಮೂರು ತಿಂಗಳು ಮುಂಚಿತವಾಗಿಯೇ (ಇನ್ನು ಮುಂದೆ ಮುಕ್ತಾಯದ ದಿನಾಂಕ ಎಂದು ಕರೆಯಲಾಗುವುದು) ರಿಜಿಸ್ಟ್ರಾರರವರು ಲಿಖಿತ ಸೂಚನೆಯನ್ನು ನೀಡತಕ್ಕದ್ದು; (ಎ) ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಒಬ್ಬ ವ್ಯಕ್ತಿಯನ್ನು ಮುಕ್ತಾಯ ದ ದಿನಾಂಕದ ಒಂದು ತಿಂಗಳಿಗೆ ಕಡಿಮೆಯಿಲ್ಲದ ದಿನಾಂಕದಂದು ಪ್ರಕರಣ 3ರ ಉಪ-ಪ್ರಕರಣ (2)ರ ಉಪ-
ತಿಂಗಳಿಗೆ ಕಡಿಮೆಯಿಲ್ಲದ ದಿನಾಂಕದಂದು ಪ್ರಕರಣ 3ರ ಉಪ-ಪ್ರಕರಣ (2)ರ ಉಪ ಖಂಡ (v)ರಡಿಯಲ್ಲಿ ಚುನಾಯಿಸತಕ್ಕದ್ದು.
(ಬಿ) ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕರಾಜ್ಯ ಶಾಖೆಗೆ ಒಬ್ಬ ವ್ಯಕ್ತಿಯನ್ನು ಮುಕ್ತಾಯದ ದಿನಾಂಕಕ್ಕಿಂತ ಒಂದು ತಿಂಗಳಿಗೆ ಕಡಿಮೆಯಿಲ್ಲದ ದಿನಾಂಕದಂದು ಪ್ರಕರಣ 3ರ ಉಪ-ಪ್ರಕರಣ (2)ರ ಉಪ-ಖಂಡ (v)ರಡಿಯಲ್ಲಿ ಚುನಾಯಿಸತಕ್ಕದ್ದು.
(ಸಿ) ಭಾರತದ ತರಬೇತಿ ಹೊಂದಿದ ದಾದಿಯರ ಕರ್ನಾಟಕ ರಾಜ್ಯ ಶಾಖೆಗೆ ಒಬ್ಬ ವ್ಯಕ್ತಿಯನ್ನು ಪ್ರಕರಣ 3ರ ಉಪ-ಪ್ರಕರಣ (2)ರ ಉಪ-ಖಂಡ (v)ರಡಿಯ ಲ್ಲಿ ಚುನಾಯಿಸತಕ್ಕದ್ದು; ಮತ್ತು
(ಡಿ) ಮುಕ್ತಾಯದ ಒಂದು ತಿಂಗಳು ಕಡಿಮೆಯಿಲ್ಲದ ದಿನಾಂಕದಂದು ಪ್ರಕರಣ 3ರ ಉಪ-
ಪ್ರಕರಣ (2)ರಖಂಡ (ಸಿ)ರಡಿಯಲ್ಲಿ ಮೂವರು ವ್ಯಕ್ತಿಗಳನ್ನು ಮಾತ್ರ ನಿರ್ದೇಶಿಸುವಂತೆ ರಾಜ್ಯ ಸರ್ಕಾರವನ್ನುಕೋರಬೇಕು.