(1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(i) ‘‘ಅಧಿನಿಯಮ'' ಎಂದರೆ ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974;
(ii) ‘‘ನಮೂನೆ'' ಎಂದರೆ ಈ ನಿಯಮಗಳಿಗೆ ಲಗತ್ತಿಸಿರುವ ನಮೂನೆ;
(iii) ‘‘ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ.
(2) ಈ ನಿಯಮಗಳಲ್ಲಿ ಬಳಸಿರುವ, ಆದರೆ ಪರಿಭಾಷಿಸಿಲ್ಲದ ಪದಗಳು ಮತ್ತು ಪದಾವಳಿಗಳು, ಅವುಗಳಿಗೆ ಅಧಿನಿಯಮದಲ್ಲಿ ಯಾವುದಾದರೂ ಅರ್ಥವನ್ನು ಕೊಟ್ಟಿದ್ದರೆ, ಅವೇ ಅರ್ಥಗಳನ್ನು ಹೊಂದಿರತಕ್ಕದ್ದು.