ನಮೂನೆ ‘ಡಿ'
ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 7ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಆದೇಶ.
ಶ್ರೀ/ಶ್ರೀಮತಿ/ಕುಮಾರಿ......................
.................................. ಇವರಿಗೆ,
ತಾವು ಈ ಕೆಳಗಿನ ಅನುಸೂಚಿಯಲ್ಲಿ ವಿವರಿಸಿದ ಸಾರ್ವಜನಿಕ ಆವರಣದ ಅಧಿಭೋಗದಲ್ಲಿರುವುದರಿಂದ/ಇದ್ದುದರಿಂದ:
ಮತ್ತು ಈ ಕೆಳಗಿನ ಅನುಸೂಚಿಯಲ್ಲಿ ವಿವರಿಸಿದ ಸಾರ್ವಜನಿಕ ಆವರಣಕ್ಕೆ ಸಂಬಂಧಿಸಿದಂತೆ...................................... ರೂಪಾಯಿಗಳ ಮೊತ್ತವು ಬಾಕಿ ಅಥವಾ ಬಾಡಿಗೆ ಬರಬೇಕಾಗಿರುವುದರಿಂದ;
ಮತ್ತು ಸದರಿ ಆವರಣಕ್ಕೆ ಸಂಬಂಧಿಸದಂತೆ .................. ಇಸವಿಯ ............... ತಿಂಗಳ ......... ದಿನದಿಂದ........... ಇಸವಿಯ.......... ತಿಂಗಳ................ ದಿನದವರೆಗೆ ............... ರೂಪಾಯಿ ಬಾಕಿ ಅಥವಾ ಬಾಡಿಗೆ ಬರಬೇಕಾಗಿದ್ದು ತಾವು ಅದನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕಾಗಿರುವುದರಿಂದ;
ಈಗ ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 7ನೇ ಪ್ರಕರಣದ(1)ನೇ ಉಪ-ಪ್ರಕರಣದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ಮೊತ್ತವನ್ನು ಈ ನೋಟೀಸನ್ನು ಜಾರಿಮಾಡಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ............... ರೂಪಾಯಿಗಳ ಸಮಾನ ಕಂತುಗಳಲ್ಲಿ............ ತಿಂಗಳೊಳಗೆ ಸಂದಾಯ ಮಾಡುವಂತೆ ನಾನು ಈ ಮೂಲಕ ನಿಮ್ಮನ್ನು ಅಗತ್ಯಪಡಿಸುತ್ತೇನೆ. ಒಂದು ವೇಳೆ ಸದರಿ ಮೊತ್ತವನ್ನು ಸದರಿ ಅವಧಿಯೊಳಗಾಗಿ ಅಥವಾ ಸದರಿ ರೀತಿಯಲ್ಲಿ ಸಂದಾಯ ಮಾಡದಿದ್ದರೆ ಅದನ್ನು ಭೂಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುವುದು.