ನಮೂನೆ ‘ಸಿ'
ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 6ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸಿನ ನಮೂನೆ. ಶ್ರೀ/ಶ್ರೀಮತಿ/ಕುಮಾರಿ.....................
.................................. ಅವರಿಗೆ
ತಾವು ಅನಧಿಕೃತವಾಗಿ ಅಧಿಭೋಗಿಸುತ್ತಿದ್ದ, ಈ ಕೆಳಗಿನ ಅನುಸೂಚಿಯಲ್ಲಿ ವಿವರಿಸಿದ ಸಾರ್ವಜನಿಕ ಆವರಣದಿಂದ ತಮ್ಮನ್ನು................................ ರಂದು ಹೊರಹಾಕಿರುವುದರಿಂದ:
ಸದರಿ ಅಧಿನಿಯಮದ 6ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ನಾನು ಈ ಮೂಲಕ ತಮಗೆ, ಸದರಿ ಆವರಣದಲ್ಲಿ ಉಳಿದಿರುವ ಯಾವುದೇ ಸ್ವತ್ತು, ಈ ನೋಟಿಸು ತಮಗೆ ಜಾರಿಯಾದ ಹದಿನಾಲ್ಕು ದಿನಗಳ ತರುವಾಯ, ತೆಗೆದುಹಾಕುವುದಕ್ಕೆ ಅಥವಾ ಸಾರ್ವಜನಿಕ ಹರಾಜಿನ ಮೂಲಕ ಅದನ್ನು ವಿಲೆ ಮಾಡಲು ಬದ್ಧವಾಗಿರುತ್ತದೆ ಎಂದು ನಾನು ಈ ಮೂಲಕ ತಿಳಿಯಪಡಿಸುತ್ತೇನೆ. ಒಂದು ವೇಳೆ ತಾವು ತಮ್ಮ ಸ್ವತ್ತನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಮತ್ತು ಸದರಿ ಆವರಣದಿಂದ ಅದನ್ನು ತೆಗೆದುಹಾಕಲು ಇಚ್ಫಿಸಿದರೆ, ಈ ಕೆಳಗೆ ಸಹಿಮಾಡಿರುವ ಅಧಿಕಾರಿಯಿಂದ ಲಿಖಿತ ಅನುಮತಿ ಪಡೆದ ಮೇಲೆ, ತಮಗೆ ಹಾಗೆ ಮಾಡಲು ಅನುಮತಿ ನೀಡಲಾಗುವುದು. ಆದರೆ ಯಾವುದೇ ಬಾಡಿಗೆ/ಹಾನಿಗೆ ಸಂಬಂಧಪಟ್ಟಂತೆ ಪರಿಹಾರದ ಬಾಕಿ ನಿಮ್ಮಿಂದ ಇದ್ದರೆ ಅದನ್ನು ತಾವು ಸದರಿ ಹದಿನಾಲ್ಕು ದಿನಗಳ ಅವಧಿಯೊಳಗಾಗಿ ಸಂದಾಯ ಮಾಡಿರಬೇಕು.