(1) ಯಾವ ವ್ಯಕ್ತಿಗೆ ಈ ಅಧಿನಿಯಮದ ಮೇರೆಗೆ ನೋಟೀಸನ್ನು ಅಥವಾ ಆದೇಶವನ್ನು ಜಾರಿ ಮಾಡಲಾಗಿದೆಯೋ ಆ ಯಾರೇ ವ್ಯಕ್ತಿಯು, ತನ್ನ ಪ್ರತಿನಿಧಿಯ ಮೂಲಕ ಅಹವಾಲು ಹೇಳಿಕೊಳ್ಳಲು ಇಚ್ಚಿಸಿದರೆ, ಅವನು ಅಂಥ ಪ್ರತಿನಿಧಿಗೆ ಬರಹದಲ್ಲಿ ಅಧಿಕಾರ ನೀಡತಕ್ಕದ್ದು.
(2) ಸಕ್ಷಮ ಅಧಿಕಾರಿಯು, ಸಾಕ್ಷ್ಯದ ಸಾರಾಂಶವನ್ನು ದಾಖಲು ಮಾಡತಕ್ಕದ್ದು ಮತ್ತು ಅವನ ಮುಂದೆ ದಾಖಲ್ಮಾಡಿದ ಯಾವುವೇ ಸುಸಂಗತ ದಸ್ತಾವೇಜುಗಳು, ವ್ಯವಹರಣೆಗಳ ದಾಖಲೆಗಳ ಒಂದು ಭಾಗವಾಗತಕ್ಕದ್ದು.