ಯಾವುದೇ ಸಾರ್ವಜನಿಕ ಆವರಣದ ಅನಧಿಕೃತ ಬಳಕೆಗಾಗಿ ಅಥವಾ ಅಧಿಭೋಗಕ್ಕಾಗಿ ಹಾನಿ ಪರಿಹಾರವನ್ನು ನಿರ್ಧಾರಣೆ ಮಾಡುವಾಗ, ಸಕ್ಷಮ ಅಧಿಕಾರಿಯು ಈ ಕೆಳಕಂಡ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು, ಎಂದರೆ:-
(ಎ) ಸಾರ್ವಜನಿಕ ಆವರಣವು ಯಾವ ಉದ್ದೇಶಕ್ಕಾಗಿ ಮತ್ತು ಎಷ್ಟು ಅವಧಿಯವರೆಗೆ ಅನಧಿಕೃತ ಅಧಿಭೋಗದಲ್ಲಿದ್ದಿತೋ ಆ ಉದ್ದೇಶ ಮತ್ತು ಅವಧಿ;
(ಬಿ) ಅಂಥ ಆವರಣದಲ್ಲಿ ಲಭ್ಯವಿರುವ ಸ್ಥಳಾವಕಾಶದ ಸ್ವರೂಪ, ಗಾತ್ರ ಮತ್ತು ಗುಣಮಟ್ಟ;
(ಸಿ) ಆವರಣವನ್ನು ಅನಧಿಕೃತ ಅಧಿಭೋಗದ ಅವಧಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬನಿಗೆ ಬಾಡಿಗೆಗೆ ನೀಡಿದಿದ್ದರೆ ವಸೂಲಿಯಾಗಬಹುದಾಗಿದ್ದ ಬಾಡಿಗೆ;
(ಡಿ) ಲೋಕೋಪಯೋಗಿ ಇಲಾಖೆಯು ನಿಶ್ಚಿತಪಡಿಸಿದಂತೆ ಅನಧಿಕೃತ ಅಧಿಭೋಗದ ಅವಧಿಯಲ್ಲಿ ಆವರಣಕ್ಕೆ ಆಗಿರುವ ವಾಸ್ತವಿಕ ಹಾನಿ;
(ಇ) ಹಾನಿ ಪರಿಹಾರವನ್ನು ನಿರ್ಧಾರಣೆ ಮಾಡುವ ಉದ್ದೇಶಕ್ಕಾಗಿ ಸಂಬಂಧಪಟ್ಟ ಯಾವುದೇ ಇತರ ವಿಷಯ.