ನಮೂನೆ-‘ಎಫ್'
ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 7ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗಿನ ಆದೇಶದ ನಮೂನೆ. ಶ್ರೀ/ಶ್ರೀಮತಿ/ಕುಮಾರಿ......................
................................. ಇವರಿಗೆ,
ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿದ ಸಾರ್ವಜನಿಕ ಆವರಣದ ಅನಧಿಕೃತ ಅಧಿಭೋಗದಲ್ಲಿ ತಾವು ಇರುವಿರೆಂದು/ ಇದ್ದಿರೆಂದು ಈ ಕೆಳಗೆ ಸಹಿ ಮಾಡಿರುವ ನನಗೆ ಮನದಟ್ಟಾಗಿರುವುದರಿಂದ;
ಮತ್ತು ಸದರಿ ಆವರಣದ ಅನಧಿಕೃತ ಬಳಕೆಗಾಗಿ ಮತ್ತು ಉಪಯೋಗಕ್ಕಾಗಿ.............. ರೂಪಾಯಿಯ ಹಾನಿ ಪರಿಹಾರವನ್ನು ಸಂದಾಯ ಮಾಡುವಂತೆ ತಮ್ಮನ್ನು ಅಗತ್ಯಪಡಿಸುವ ಆದೇಶವನ್ನು ಏಕೆ ಮಾಡಬಾರದು ಎಂಬ ಬಗ್ಗೆ............................................ ರಂದು ಅಥವಾ ಅದಕ್ಕೂ ಮುಂಚೆ ಕಾರಣ ತೋರಿಸುವಂತೆ......................ದಿನಾಂಕದ ಲಿಖಿತ ನೋಟೀಸಿನ ಮೂಲಕ ತಮ್ಮನ್ನು ಕೋರಿರುವುದರಿಂದ;
ಮತ್ತು ತಮ್ಮ ಅಪೇಕ್ಷಣೆಗಳು ಮತ್ತು / ಅಥವಾ ತಾವು ಹಾಜರುಪಡಿಸಿದ ಸಾಕ್ಷಿಗಳನ್ನು ನಾನು ಪರಿಶೀಲಿಸಿರುವುದರಿಂದ;
ಮತ್ತು ಸದರಿ ದಿನಾಂಕದೊಳಗಾಗಿ ತಾವು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸದಿರುವುದರಿಂದ ಅಥವಾ ಯಾವುದೇ ಸಾಕ್ಷ್ಯವನ್ನು ಹಾಜರುಪಡಿಸದಿರುವುದರಿಂದ;
ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 7ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ಆವರಣಗಳನ್ನು ತಾವು ಅನಧಿಕೃತವಾಗಿ ಅಧಿಭೋಗದಲ್ಲಿರಿಸಿಕೊಂಡಿದ್ದ ಕಾರಣದಿಂದಾಗಿ.................. ರೂಪಾಯಿಗಳನ್ನು ಸಂದಾಯ ಮಾಡಬೇಕೆಂದು ನಾನು ನಿರ್ಧಾರ ಮಾಡಿದ್ದು ಅದನ್ನು..................................................... ತಿಂಗಳೊಳಗೆ........................................... ಸಮ ಕಂತುಗಳಲ್ಲಿ ಸಂದಾಯ ಮಾಡಬೇಕೆಂದು ನಾನು ಈಗ ಈ ಮೂಲಕ ಆದೇಶಿಸುತ್ತೇನೆ.
ಸದರಿ ಅವಧಿಯೊಳಗಾಗಿ ಅಥವಾ ಮೇಲೆ ಹೇಳಿದ ರೀತಿಯಲ್ಲಿ ಹಾನಿ ಪರಿಹಾರವನ್ನು ಅಥವಾ ಅದರ ಯಾವುದೇ ಕಂತನ್ನು ಸಂದಾಯ ಮಾಡಲು ತಾವು ನಿರಾಕರಿಸಿದ ಅಥವಾ ತಪ್ಪಿದ ಸಂದರ್ಭದಲ್ಲಿ ಆ ಮೊಬಲಗನ್ನು ಭೂಕಂದಾಯದ ಬಾಕಿಯಂತೆ ವಸೂಲಿ ಮಾಡಲಾಗುವುದು.