ನಮೂನೆ-‘ಇ'
ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 7ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗಿನ ನೋಟೀಸು.
ಶ್ರೀ/ಶ್ರೀಮತಿ/ಕುಮಾರಿ......................
................................. ಇವರಿಗೆ,
ತಾವು, ಈ ಕೆಳಗಿನ 1ನೇ ಅನುಸೂಚಿಯಲ್ಲಿ ಉಲ್ಲೇಖಿಸಿರುವ ಸಾರ್ವಜನಿಕ ಆವರಣದಲ್ಲಿ ಅನಧಿಕೃತವಾಗಿ ಅಧಿಭೋಗದಲ್ಲಿರುವರೆಂದು / ಇದ್ದಿರೆಂದು ಈ ಕೆಳಗೆ ಸಹಿ ಮಾಡಿರುವ ನನಗೆ ಮನದಟ್ಟಾಗಿರುವುದರಿಂದ,
ಮತ್ತು ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 7ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ಆವರಣಗಳ ಅನಧಿಕೃತ ಬಳಕೆಯ ಮತ್ತು ಅಧಿಭೋಗದ ಕಾರಣದಿಂದಾಗಿ, ಸದರಿ ಅವಧಿಗಾಗಿ (ಗಳಿಗಾಗಿ) ಮತ್ತು ಈ ಕೆಳಗಿನ IIನೇ ಅನುಸೂಚಿಯಲ್ಲಿ ತೋರಿಸಿದ ದರದಲ್ಲಿ (ಗಳಲ್ಲಿ) ................. ರೂಪಾಯಿಯ ಹಾನಿ ಆಗಿದೆಯೆಂದು ನಾನು ಪರಿಗಣಿಸಿರುವುದರಿಂದ;
ಸದರಿ ಅಧಿನಿಯಮದ 7ನೇ ಪ್ರಕರಣದ (2)ನೇ ಉಪ-ಪ್ರಕರಣದ ಉಪಬಂಧಗಳ ಮೇರೆಗೆ, ಸದರಿ ಹಾನಿ ಪರಿಹಾರಗಳನ್ನು ಸಂದಾಯ ಮಾಡುವಂತೆ ತಮ್ಮನ್ನು ಅಗತ್ಯಪಡಿಸುವ ಆದೇಶವನ್ನು ಏಕೆ ಮಾಡಬಾರದು ಎಂಬ ಬಗ್ಗೆ ದಿನಾಂಕ.................... ರಂದು ಅಥವಾ ಅದಕ್ಕೂ ಮುಂಚೆ ಕಾರಣ ತೋರಿಸುವಂತೆ ನಾನು ಈ ಮೂಲಕ ತಮ್ಮನ್ನು ಕೋರುತ್ತೇನೆ.