ಈ ಅಧಿನಿಯಮದ ಉದ್ದೇಶಕ್ಕಾಗಿ ಈ ಕೆಳಕಂಡವರು ಸಕ್ಷಮ ಅಧಿಕಾರಿಗಳಾಗಿರತಕ್ಕದ್ದು, ಎಂದರೆ:-
- ರಾಜ್ಯ ಸರ್ಕಾರಕ್ಕೆ ಸೇರಿದ ಸಾರ್ವಜನಿಕ ಆವರಣಗಳಿಗೆ ಸಂಬಂಧಪಟ್ಟಂತೆ-ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್.
- ಪುರಸಭೆಗಳಿಗೆ ಸೇರಿದ ಸಾರ್ವಜನಿಕ ಆವರಣಗಳಿಗೆ ಸಂಬಂಧಪಟ್ಟಂತೆ-ಪುರಸಭೆಯ ಚೀಫ್ ಆಫೀಸರ್.
- ನಗರ ಸಭೆಗಳಿಗೆ ಸೇರಿದ ಸಾರ್ವಜನಿಕ ಆವರಣಗಳಿಗೆ ಸಂಬಂಧಪಟ್ಟಂತೆ-ಮುನ್ಸಿಪಲ್ ಕಮೀಷನರ್.
- ನಗರಪಾಲಿಕೆಗೆ ಸೇರಿದ ಸಾರ್ವಜನಿಕ ಆವರಣಗಳಿಗೆ ಸಂಬಂಧಪಟ್ಟಂತೆ-ಕಮೀಷನರ್.
- ರಾಜ್ಯ ಸರ್ಕಾರದ ನಿರ್ವಹಣೆಯ ಅಧೀನದಲ್ಲಿರುವ ಮುಜುರಾಯಿ ಅಥವಾ ಧಾರ್ಮಿಕ ಅಥವಾ ಧರ್ಮಾರ್ಥ ಸಂಸ್ಥೆಗಳಿಗೆ ಸೇರಿದ ಸಾರ್ವಜನಿಕ ಆವರಣಗಳಿಗೆ ಸಂಬಂಧಪಟ್ಟಂತೆ-ಅಂಥ ಸಂಸ್ಥೆಗಳ ಪ್ರಭಾರದಲ್ಲಿರುವ ತಹಸೀಲ್ದಾರ. ನಮೂನೆ ‘ಎ' ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974 ರ 4ನೇ ಪ್ರಕರಣದ (1) ನೇ ಉಪಪ್ರಕರಣದ ಮೇರೆಗಿನ ನೋಟೀಸಿನ ನಮೂನೆ. ಶ್ರೀ/ಶ್ರೀಮತಿ/ಕುಮಾರಿ...............
......................................... ಇವರಿಗೆ, ಇಲ್ಲಿ ಕೆಳಗೆ ನಿರ್ದಿಷ್ಟಪಡಿಸಿರುವ ಆದಾರಗಳಿಂದ, ನೀವು ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸಾರ್ವಜನಿಕ ಆವರಣಗಳ ಅನಧಿಕೃತ ಅಧಿಭೋಗದಲ್ಲಿದ್ದೀರೆಂದು ಮತ್ತು ಸದರಿ ಆವರಣದಿಂದ ನಿಮ್ಮನ್ನು ಹೊರಹಾಕಬೇಕೆಂದು ಈ ಕೆಳಗೆ ಸಹಿ ಮಾಡಿರುವ ನಾನು ಅಭಿಪ್ರಾಯ ಪಟ್ಟಿರುವುದರಿಂದ:
ಕಾರಣಗಳು ಆದುದರಿಂದ, ಈಗ, ಅಧಿನಿಯಮದ 4ನೇ ಪ್ರಕರಣದ (1)ನೇ ಉಪಪ್ರಕರಣದ ಅನುಸರಣೆವಾಗಿ, ಹೊರಹಾಕುವ ಆದೇಶವನ್ನು ಏಕೆ ಮಾಡಬಾರದು ಎಂಬ ಬಗ್ಗೆ ............* ರಂದು ಅಥವಾ ಅದಕ್ಕೂ ಮುಂಚೆ ಕಾರಣ ತೋರಿಸುವಂತೆ ನಾನು ಈ ಮೂಲಕ ತಮ್ಮನ್ನು ಕೋರುತ್ತೇನೆ.