ನಮೂನೆ-‘ಬಿ'
ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 5ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ಆದೇಶ.
ಈ ಕೆಳಗೆ ದಾಖಲು ಮಾಡಲಾಗಿರುವ ಆಧಾರಗಳಿಂದಾಗಿ, ಶ್ರೀ/ಶ್ರೀಮತಿ/ಕುಮಾರಿ........... ಎಂಬುವನು / ಎಂಬುವಳು ಈ ಕೆಳಗೆ ನಿರ್ದಿಷ್ಟಪಡಿಸಿರುವ ಸಾರ್ವಜನಿಕ ಆವರಣದ ಅನಧಿಕೃತ ಅಧಿಭೋಗದಲ್ಲಿರುವನೆಂದು / ಇರುವಳೆಂದು / ಈ ಕೆಳಗೆ ಸಹಿ ಮಾಡಿರುವ ನನಗೆ ಮನದಟ್ಟಾಗಿರುವುದರಿಂದ:
ಆಧಾರಗಳು
ಆದ್ದರಿಂದ ಈಗ, ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ 5ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ಆವರಣದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಅಧಿಭೋಗದಲ್ಲಿರಬಹುದಾದ ಸದರಿ ಶ್ರೀ/ಶ್ರೀಮತಿ/ಕುಮಾರಿ............................................................ ಇವರು ಮತ್ತು ಎಲ್ಲ ವ್ಯಕ್ತಿಗಳು ಈ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ ನಲವತ್ತೈದು ದಿನಗಳೊಳಗಾಗಿ ಸದರಿ ಆವರಣವನ್ನು ಖಾಲಿ ಮಾಡಬೇಕೆಂದು ನಾನು ಈ ಮೂಲಕ ಆದೇಶ ಮಾಡಿದ್ದೇನೆ. ಇಲ್ಲಿ ಮೇಲೆ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಈ ಆದೇಶವನ್ನು ಪಾಲಿಸಲು ನಿರಾಕರಿಸಿದ ಅಥವಾ ತಪ್ಪಿದ ಸಂದರ್ಭದಲ್ಲಿ ಸದರಿ ಶ್ರೀ/ಶ್ರೀಮತಿ/ಕುಮಾರಿ............................. ಮತ್ತು ಸಂಬಂಧಪಟ್ಟ ಇತರ ಎಲ್ಲ ವ್ಯಕ್ತಿಗಳು ಸದರಿ ಆವರಣದಿಂದ ಹೊರಹಾಕುವಿಕೆಗೆ ಅಗತ್ಯವಾದರೆ, ಅವಶ್ಯವಾಗಬಹುದಾದಂಥ ಬಲ ಪ್ರಯೋಗದ ಮೂಲಕ ಹೊರಹಾಕುವಿಕೆಗೆ ಗುರಿಯಾಗತಕ್ಕದ್ದು.