ಸಮಂಜಸ ಹಾಗೂ ಸಾಕಷ್ಟು ಕಾರಣಗಳಿಗಾಗಿ ಮತ್ತು ಇಲ್ಲಿ ಇನ್ನು ಮುಂದೆ ಉಪಬಂಧಿಸಿದಂತೆ, ಸರ್ಕಾರಿ ವಿಧಿಸಬಹುದು, ಎಂದರೆ:- ನೌಕರರ ಮೇಲೆ ಈ ಮುಂದಿನ ದಂಡನೆಗಳ ಪೈಕಿ 1 [ಒಂದು ಅಥವಾ ಹೆಚ್ಚು ದಂಡನೆಗಳನ್ನು
(i) ರಾಜ್ಯ ಸಿವಿಲ್ ಸೇವೆಗಳ ಸಮೂಹ- ‘ಡಿ'ಗೆ ಸೇರಿದ ಸರ್ಕಾರಿ ನೌಕರರ ಸಂದರ್ಭದಲ್ಲಿ ಜುಲ್ಮಾನೆ;
(ii) ವಾಗ್ದಂಡನೆ;
1 [(iii) ವೇತನ ಬಡ್ತಿಗಳನ್ನು ತಡೆಹಿಡಿಯುವುದು ;
(iiiಎ) ಬಡ್ತಿಯನ್ನು ತಡೆಹಿಡಿಯುವುದು;]1 1. ಅಧಿಸೂಚನೆ ಸಂಖ್ಯೆ ಜಿಎಡಿ 28 ಜಿಎಸ್ಆರ್ 69, ದಿನಾಂಕ 12-12-1973, ಕೆಜಿಡಿ 24-1-1974 (ಜಿಎಸ್ಆರ್ 14)ರ ಮೂಲಕ ಪ್ರತಿಯೋಜಿಸಲಾಗಿದೆ.
(iv) ನಿರ್ಲಕ್ಷ್ಯದಿಂದ ಅಥವಾ ಆದೇಶಗಳ ಉಲ್ಲಂಘನೆಯಿಂದ ರಾಜ್ಯ ಸರ್ಕಾರಕ್ಕೆ ಅಥವಾ ಕೇಂದ್ರ ಸರ್ಕಾರಕ್ಕೆ, ಯಾವುದೇ ಇತರ ರಾಜ್ಯ ಸರ್ಕಾರಕ್ಕೆ, ಯಾರೇ ವ್ಯಕ್ತಿಗೆ, ನಿಕಾಯಕ್ಕೆ, ಪ್ರಾಧಿಕಾರಿಗೆ ಯಾವ ಅಧಿಕಾರಿಯ ಸೇವೆಯನ್ನು ಎರವಲು ನೀಡಲಾಗಿದೆಯೋ ಅವುಗಳಿಗೆ ಉಂಟಾದ ಯಾವುದೇ ಹಣಕಾಸಿನ ನಷ್ಟವನ್ನು ಪೂರ್ಣವಾಗಿ ಅಥವಾ ಭಾಗಶ: ವೇತನದಿಂದ ವಸೂಲಿ ಮಾಡುವುದು;
1 [ಸೂಚನೆ: ‘‘ಹಣಕಾಸಿನ ನಷ್ಟ'' ಎಂದರೆ, ಸರ್ಕಾರಿ ನೌಕರನಿಂದ ಉಂಟಾದ ನಷ್ಟದ ಮೇಲೆ ಪ್ರತಿ ವರ್ಷಕ್ಕೆ ಶೇಕಡ ಎಂಟರಂತೆ ಅಂಥ ನಷ್ಟ ಉಂಟಾದ ದಿನಾಂಕದಿಂದ ಬಡ್ಡಿ ಮತ್ತು ಅದು ಆ ಬಡ್ಡಿಯನ್ನು ಒಳಗೊಳ್ಳತಕ್ಕದ್ದು.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 16 ಎಸ್ಡಿಇ 2004, ದಿನಾಂಕ 17.11.2005ರ ಮೂಲಕ ಸೇರಿಸಲಾಗಿದೆ. 1 * [ (ivಎ) ಒಂದು ಅವಧಿಗೆ ಕಾಲಿಕವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸುವುದು, ಅಂಥ ಅವಧಿಯಲ್ಲಿ ಇಳಿಸಿದ ಆ ವೇತನಕ್ಕೆ ಸಂಬಂಧಿಸಿದಂತೆ ಆ ಸರ್ಕಾರಿ ನೌಕರನು ವೇತನ ಬಡ್ತಿಗಳನ್ನು ಗಳಿಸುವನೇ ಇಲ್ಲವೇ ಅಥವಾ ಆ ವೇತನವು ಸ್ಥಿರವಾಗಿ ಉಳಿಯುವುದೇ ಎಂಬ ಬಗ್ಗೆ ನಿರ್ದಿಷ್ಟ ನಿರ್ದೇಶನದೊಂದಿಗೆ ಮತ್ತು ದಂಡನೆಯ ಅವಧಿಯು ಸಮಾಪ್ತವಾದ ಮೇಲೆ ಆ ಇಳಿಕೆಯು ಅವನ ವೇತನದ ಮುಂದಿನ ವೇತನ ಬಡ್ತಿಗಳನ್ನು ಮುಂದಕ್ಕೆ ಹಾಕುವ ಪರಿಣಾಮ ಹೊಂದಿರುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಹೆಚ್ಚಿನ ನಿರ್ದೇಶನದ ಸಹಿತ ಹಾಗೆ ಕೆಳಗಿನ ಹಂತಕ್ಕೆ ಇಳಿಸುವುದು . 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 39 ಎಸ್ಡಿಇ 81, ದಿನಾಂಕ 27.6.1984, ಜಿಎಸ್ಆರ್ 181 ರಲ್ಲಿ ತಿದ್ದುಪಡಿ ಮಾಡಲಾಗಿದೆ.
1 [(v) ಕೆಳಗಿನ ಕಾಲಿಕ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಇಳಿಸುವುದು, ಅದು, ಅನ್ಯಥಾ ನಿರ್ದೇಶಿಸಿದ್ದ ಹೊರತು, ಈ ಮುಂದಿನವುಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ನಿರ್ದೇಶನಗಳ ಸಹಿತ ಅಥವಾ ನಿರ್ದೇಶನಗಳಿಲ್ಲದೆಯೇ ಆ ಸರ್ಕಾರಿ ನೌಕರನನ್ನು ಯಾವ ಕಾಲಿಕವೇತನ ಶ್ರೇಣಿಯಿಂದ, ಹುದ್ದೆಯ ಶ್ರೇಣಿಯಿಂದ, ಹುದ್ದೆಯಿಂದ ಅಥವಾ ಸೇವೆಯಿಂದ ಇಳಿಸಲಾಯಿತೋ ಅದಕ್ಕೆ ಅವನು ಬಡ್ತಿ ಹೊಂದಲು ಪ್ರತಿಷೇಧ ಆಗತಕ್ಕದ್ದು:-
(ಎ) ಜ್ಯೇಷ್ಠತೆ ಮತ್ತು ಸರ್ಕಾರಿ ನೌಕರನನ್ನು ಯಾವ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಇಳಿಸಲಾಯಿತೋ ಅದರ ವೇತನ;
(ಬಿ) ಸರ್ಕಾರಿ ನೌಕರನನ್ನು ಯಾವ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಇಳಿಸಲಾಯಿತೋ ಅದಕ್ಕೆ ಸಂಬಂಧಿಸಿದಂತೆ ಪುನಃ ಸ್ಥಾಪನೆಯ ಷರತ್ತುಗಳು ಮತ್ತು ಆ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಅಂಥ ಪುನಃ ಸ್ಥಾಪನೆಯಾದ ಮೇಲೆ ಅವನ ಜ್ಯೇಷ್ಠತೆ ಮತ್ತು ವೇತನ;]1 1. ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12-12-1973ರ ಮೂಲಕ ಪ್ರತಿಯೋಜಿಸಲಾಗಿದೆ. (ಕೆಜಿಡಿ 24-1-1974, ಜಿಎಸ್ಆರ್ 14).
(vi) ಕಡ್ಡಾಯ ನಿವೃತ್ತಿ ;
(vii) ಮುಂದೆ ಉದ್ಯೋಗಕ್ಕೆ ಅನರ್ಹತೆಯಾಗದ ಹಾಗೆ ಸೇವೆಯಿಂದ ತೆಗೆದು ಹಾಕುವುದು ;
(viii) ಸಾಮಾನ್ಯವಾಗಿ ಮುಂದೆ ಉದ್ಯೋಗಕ್ಕೆ ಅನರ್ಹತೆಯಾಗತಕ್ಕ ರೀತಿಯಲ್ಲಿ ಸೇವೆಯಿಂದ ವಜಾ ಮಾಡುವುದು:
1 [ಪರಂತು, ಶಿಸ್ತು ಪ್ರಾಧಿಕಾರಿಯ ಆದೇಶದಲ್ಲಿ ನಮೂದಿಸಬೇಕಾದ ತದ್ವಿರುದ್ಧವಾದ ವಿಶೇಷ ಮತ್ತು ಸಾಕಷ್ಟು ಕಾರಣಗಳು ಇಲ್ಲದಿರುವಾಗ, (vi)ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತುಪಡಿಸಿ, ರುಜುವಾತಾದ ಭ್ರಷ್ಟಾಚಾರದ ಆರೋಪಕ್ಕಾಗಿ ಯಾವುದೇ ದಂಡನೆಯನ್ನು ವಿಧಿಸತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಜಿಎಡಿ 41 ಎಸ್ಎಸ್ಆರ್ 69, ದಿನಾಂಕ 27-2-1970, ಜಿಎಸ್ಆರ್ 87, ದಿನಾಂಕ 27-2-1970ರ ಮೂಲಕ ಸೇರಿಸಲಾಗಿದೆ. (26-3-1970 ರಿಂದ ಜಾರಿಗೆ ಬಂದಿದೆ). 1 [ವಿವರಣೆ 1.- ಈ ಪರಂತುಕದ ಉದ್ದೇಶಗಳಿಗಾಗಿ "ಭ್ರಷ್ಟಾಚಾರ" ಎಂಬ ಪದಾವಳಿಯು ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ, 1988 (ಕೇಂದ್ರ ಅಧಿನಿಯಮ 1988ರ 49)ರ 13ನೇ ಪ್ರಕರಣದಲ್ಲಿ ‘‘ಲೋಕ ನೌಕರನಿಂದ ಆಪರಾಧಿಕ ದುರ್ನಡತೆ'' ಎಂಬ ಪದಾವಳಿಗೆ ಕೊಟ್ಟಿರುವ ಅರ್ಥವನ್ನೇ ಹೊಂದಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 16 ಎಸ್ಡಿಇ 90, ದಿನಾಂಕ 23-10-1990ರ ಮೂಲಕ ತಿದ್ದುಪಡಿ ಮಾಡಲಾಗಿದೆ. 1 [ವಿವರಣೆ 2].- ಈ ಮುಂದಿನವುಗಳು ಈ ನಿಯಮದ ಅರ್ಥವ್ಯಾಪ್ತಿಯಲ್ಲಿ ದಂಡನೆಯಾಗತಕ್ಕದ್ದಲ್ಲ:- (i) ಸರ್ಕಾರಿ ನೌಕರನ ಸೇವೆಗೆ ಅಥವಾ ಹುದ್ದೆಗೆ ಸಂಬಂಧಪಡುವ ನಿಯಮಗಳಿಗೆ ಅಥವಾ ಆದೇಶಗಳಿಗೆ ಅಥವಾ ಅವನ ನೇಮಕದ ನಿಬಂಧನೆಗಳಿಗೆ ಅನುಸಾರವಾಗಿ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ತಪ್ಪಿದ್ದಕ್ಕಾಗಿ ಅವನ ವೇತನ ಬಡ್ತಿಗಳನ್ನು ತಡೆಹಿಡಿಯುವುದು;
- ಜಿಎಸ್ಆರ್ 14, ದಿನಾಂಕ 12-12-1973ರ ಮೂಲಕ 24-1-1974 ರಿಂದ ಜಾರಿಗೆ ಬರುವಂತೆ ಮರು ಸಂಖ್ಯೆ ನೀಡಲಾಗಿದೆ. (ii) ಸರ್ಕಾರಿ ನೌಕರನು ಕಾಲಿಕ ವೇತನ ಶ್ರೇಣಿಯಲ್ಲಿ ದಕ್ಷತಾ ರೇಖೆಯನ್ನು ದಾಟಲು ಅರ್ಹನಲ್ಲವೆಂಬ ಕಾರಣಕ್ಕಾಗಿ ಅವನನ್ನು ಆ ದಕ್ಷತಾ ರೇಖೆಯಲ್ಲೇ ತಡೆಯುವುದು;
(iii) ಒಬ್ಬ ಸರ್ಕಾರಿ ನೌಕರನು ಬಡ್ತಿಗೆ ಅರ್ಹನಾಗಿರುವಂಥ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಅವನ ಪ್ರಕರಣವನ್ನು ಪರಿಶೀಲಿಸಿದ ತರುವಾಯ, ಮೂಲ ಹುದ್ದೆಯಲ್ಲಾಗಲೀ ಅಥವಾ ಸ್ಥಾನಾಪನ್ನ ಹುದ್ದೆಯಲ್ಲಾಗಲೀ ಬಡ್ತಿ ನೀಡದಿರುವುದು;
(iv) ಮೇಲಿನ ಸೇವೆಯಲ್ಲಿ, ಹುದ್ದೆಯ ಶ್ರೇಣಿಯಲ್ಲಿ ಅಥವಾ ಹುದ್ದೆಯಲ್ಲಿ ಸ್ಥಾನಾಪನ್ನನಾಗಿರುವ ಸರ್ಕಾರಿ ನೌಕರನನ್ನು, ಅಧಿವಿಚಾರಣೆಯ ತರುವಾಯ ಅಂಥ ಮೇಲಿನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಸೂಕ್ತನಲ್ಲವೆಂಬ ಕಾರಣಕ್ಕಾಗಿ ಅಥವಾ ಅವನ ನಡತೆಗೆ ಸಂಬಂಧಿಸಿರದ ಆಡಳಿತ ಕಾರಣಗಳಿಗಾಗಿ (ಉದಾ: ಖಾಯಂ ಹುದ್ದೆಯವರು ರಜೆಯಿಂದ ಅಥವಾ ಪ್ರತಿನಿಯೋಜನೆಯಿಂದ ವಾಪಸ್ಸು ಬಂದಿರುವುದು, ಹೆಚ್ಚು ಸೂಕ್ತವಾದಂಥ ಅಧಿಕಾರಿಯು ದೊರೆಯುವುದು ಇವೇ ಮುಂತಾದಂಥ) ಅವನನ್ನು ಕೆಳಗಿನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಹಿಂದಿರುಗಿಸುವುದು;
(v) ಬೇರೊಂದು ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಪ್ರೊಬೇಷನ್ನಿನ ಮೇಲೆ ನೇಮಕವಾದ ಸರ್ಕಾರಿ ನೌಕರನನ್ನು ಅವನ ನೇಮಕದ ನಿಬಂಧನೆಗಳಿಗೆ ಅಥವಾ ಪ್ರೊಬೇಷನ್ನಿಗೆ ಸಂಬಂಧಿಸುವ ನಿಯಮಗಳಿಗೆ ಮತ್ತು ಆದೇಶಗಳಿಗೆ ಅನುಸಾರವಾಗಿ ಪ್ರೊಬೇಷನ್ನಿನ ಅವಧಿಯಲ್ಲಿ ಅಥವಾ ಆ ಅವಧಿಯ ಕೊನೆಯಲ್ಲಿ ಅವನ ಖಾಯಂ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಹಿಂದಿರುಗಿಸುವುದು;
(vi) ಸರ್ಕಾರಿ ನೌಕರನನ್ನು ಅವನ ನಿವೃತ್ತಿ ವಯಸ್ಸಿಗೆ ಅಥವಾ ನಿವೃತ್ತಿಗೆ ಸಂಬಂಧಿಸಿದ ಉಪಬಂಧಗಳಿಗನುಸಾರವಾಗಿ ಕಡ್ಡಾಯವಾಗಿ ನಿವೃತ್ತಿಗೊಳಿಸುವುದು;
(vii) (ಎ) ಒಪ್ಪಂದದ ಮೇರೆಗೆ ನಿಯೋಜಿಸಿಕೊಂಡ ವ್ಯಕ್ತಿಯನ್ನು ಅಂಥ ಒಪ್ಪಂದದ ನಿಬಂಧನೆಗಳಿಗನುಸಾರವಾಗಿ; ಅಥವಾ 1 [(ಬಿ) ಪ್ರೊಬೇಷನ್ನಿನ ಮೇಲೆ ನೇಮಕಗೊಂಡ ಸರ್ಕಾರಿ ನೌಕರನನ್ನು ಅವನ ಪ್ರೊಬೇಷನ್ ಅವಧಿಯಲ್ಲಿ ಅಥವಾ ಅದರ ಕೊನೆಯಲ್ಲಿ, ಅವನ ನೇಮಕದ ನಿಬಂಧನೆಗಳಿಗೆ ಅಥವಾ ಅಂಥ ಪ್ರೊಬೇಷನ್ಗೆ ಅನ್ವಯವಾಗುವ ನಿಯಮಗಳಿಗೆ ಮತ್ತು ಆದೇಶಗಳಿಗೆ ಅನುಸಾರವಾಗಿ; ಅಥವಾ
(ಸಿ) ಹಂಗಾಮಿ ಸರ್ಕಾರಿ ನೌಕರನನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಹಂಗಾಮಿ ಸೇವೆ) ನಿಯಮಗಳು, 1967ರ 5ನೇ ನಿಯಮದ 1ನೇ ಉಪನಿಯಮದ ಉಪಬಂಧಗಳಿಗನುಸಾರವಾಗಿ - ಸೇವೆಯಿಂದ ಕೊನೆಗೊಳಿಸುವುದು.
- ಅಧಿಸೂಚನೆ ಸಂಖ್ಯೆ ಜಿಎಎಸ್ 28, ಎಸ್ಎಸ್ಆರ್ 69, ದಿನಾಂಕ 12-12-1973 ಕೆಜಿಡಿ 24-1-1974ರ ಮೂಲಕ ಪ್ರತಿಯೋಜಿಸಲಾಗಿದೆ.