8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಿರುವ ಆದೇಶದ ವಿರುದ್ಧದ ಅಪೀಲನ್ನು ಯಾವ ಪ್ರಾಧಿಕಾರಿಗೆ ಸಲ್ಲಿಸಬಹುದೋ ಆ ಪ್ರಾಧಿಕಾರಿಯು, ತಾನಾಗಿಯೇ ಅಥವಾ ಅನ್ಯಥಾ, ಯಾವ ಪ್ರಕರಣದಲ್ಲಿ ಶಿಸ್ತು ವ್ಯವಹರಣೆಯನ್ನು ನಡೆಸಲಾಯಿತೋ ಆ ಪ್ರಕರಣದ ದಾಖಲೆಗಳನ್ನು ತರಿಸಿಕೊಳ್ಳಬಹುದು, ಮತ್ತು ಅಂಥ ಪ್ರಕರಣದಲ್ಲಿ ಹೊರಡಿಸಿದ ಯಾವುದೇ ಆದೇಶವನ್ನು ಪುನರವಲೋಕಿಸಬಹುದು ಮತ್ತು ಆಯೋಗದೊಡನೆ ಸಮಾಲೋಚನೆಯು ಅವಶ್ಯಕವಿರುವಲ್ಲಿ, ಅಂಥ ಸಮಾಲೋಚನೆಯನ್ನು ನಡೆಸಿದ ತರುವಾಯ, ಸರ್ಕಾರಿ ನೌಕರನು ಅಂಥ ಆದೇಶದ ವಿರುದ್ಧ ಅಪೀಲನ್ನು ಸಲ್ಲಿಸಿದ್ದರೆ ಹೇಗೋ ಹಾಗೆ, ತಾನು ಸೂಕ್ತವೆಂದು ಭಾವಿಸಬಹುದಾದಂಥ ಆದೇಶಗಳನ್ನು ಹೊರಡಿಸಬಹುದು:
ಪರಂತು, ಪುನರವಲೋಕನ ಮಾಡಬೇಕಾದ ಆದೇಶದ ದಿನಾಂಕದಿಂದ ಆರು ತಿಂಗಳಿಗಿಂತ ಹೆಚ್ಚಿನ ಅವಧಿಯ ತರುವಾಯ ಈ ನಿಯಮದ ಮೇರೆಗೆ ಯಾವುದೇ ಕ್ರಮವನ್ನು ಪ್ರಾರಂಭಿಸತಕ್ಕದ್ದಲ್ಲ.