ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಉಳಿದು, ಯಾರೇ ನ್ಯಾಯವಾದಿಗೆ ಅಥವಾ ಏಜೆಂಟನಿಗೆ ಈ ನಿಯಮಗಳ ಮೇರೆಗಿನ ಯಾವುದೇ ವ್ಯವಹರಣೆಗಳಲ್ಲಿ ಹಾಜರಾಗಲು ಅನುಮತಿಸತಕ್ಕದ್ದಲ್ಲ.
1 [28ಎ. ಆದೇಶ, ನೋಟೀಸುಗಳು, ಮುಂತಾದವುಗಳ ಜಾರಿ.- (1) ಈ ನಿಯಮಗಳ ಮೇರೆಗೆ ಮಾಡಿದ ಅಥವಾ ಹೊರಡಿಸಿದ ಪ್ರತಿಯೊಂದು ಆದೇಶವನ್ನು, ನೋಟೀಸನ್ನು ಮತ್ತು ಇತರ ಪ್ರೊಸೆಸನ್ನು ಸಂಬಂಧಪಟ್ಟ ಸರ್ಕಾರಿ ನೌಕರನಿಗೆ ಖುದ್ದಾಗಿ ಜಾರಿ ಮಾಡತಕ್ಕದ್ದು ಅಥವಾ ಅವನಿಗೆ ನೋಂದಾಯಿತ ಅಂಚೆ ಮೂಲಕ ಕಳಿಸಿಕೊಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12.12.73 ಕೆಜಿಡಿ 24.1.74ರ ಮೂಲಕ ಸೇರಿಸಲಾಗಿದೆ. (2) ಸರ್ಕಾರಿ ನೌಕರನು ಅಂಥ ಆದೇಶವನ್ನು, ನೋಟೀಸನ್ನು ಅಥವಾ ಇತರ ಪ್ರೋಸೆಸನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ ಅಥವಾ ಅವುಗಳ ಜಾರಿಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಣಿಸಿಕೊಳ್ಳದಿರುವ ಸಂದರ್ಭದಲ್ಲಿ, ಅದರ ಪ್ರತಿಯನ್ನು ಶಿಸ್ತು ಪ್ರಾಧಿಕಾರಿಯ ಅಥವಾ ವಿಚಾರಣಾ ಪ್ರಾಧಿಕಾರಿಯ ಕಚೇರಿಯ ಸೂಚನಾ ಫಲಕದ ಮೇಲೆ ಮತ್ತು ಅವನು ಈ ಹಿಂದೆ ವಾಸವಾಗಿದ್ದನೆಂದು ತಿಳಿದುಬಂದ ಮನೆ ಯಾವುದಾದರೂ ಇದ್ದರೆ, ಅದರ ಯಾವುದೇ ಎದ್ದುಕಾಣುವ ಸ್ಧಳದಲ್ಲಿ ಅಂಟಿಸುವ ಮೂಲಕ, ಅಥವಾ ರಾಜ್ಯದಲ್ಲಿ ಅಧಿಕ ಪ್ರಸಾರವುಳ್ಳ ಎರಡು ದೈನಂದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಜಾರಿ ಮಾಡಬಹುದು.
28ಬಿ. ಕಾಲಮಿತಿಯನ್ನು ಸಡಿಲಿಸಲು ಮತ್ತು ವಿಳಂಬವನ್ನು ಮನ್ನಾ ಮಾಡಲು ಅಧಿಕಾರ.- ಈ ನಿಯಮಗಳಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಿರುವುದನ್ನುಳಿದು, ಈ ನಿಯಮಗಳ ಮೇರೆಗೆ ಯಾವುದೇ ಆದೇಶವನ್ನು ಮಾಡಲು ಸಕ್ಷಮನಾಗಿರುವ ಪ್ರಾಧಿಕಾರಿಯು, ಯುಕ್ತ ಮತ್ತು ಸಾಕಷ್ಟು ಕಾರಣಗಳಿಗಾಗಿ ಅಥವಾ ಸಾಕಷ್ಟು ಕಾರಣವನ್ನು ತೋರಿಸಿದರೆ, ಈ ನಿಯಮಗಳ ಮೇರೆಗೆ ಮಾಡುವಂತೆ ಅಗತ್ಯಪಡಿಸಿದ ಯಾವುದೇ ಕಾರ್ಯದ ಬಗ್ಗೆ ನಿರ್ದಿಷ್ಟಪಡಿಸಲಾದ ಅವಧಿಯನ್ನು ವಿಸ್ತರಿಸಬಹುದು ಅಥವಾ ಯಾವುದೇ ವಿಳಂಬವನ್ನು ಮನ್ನಾ ಮಾಡಬಹುದು.
28ಸಿ. ಆಯೋಗದ ಸಲಹೆಯ ಪ್ರತಿಯನ್ನು ಒದಗಿಸುವುದು.- ಈ ನಿಯಮಗಳಲ್ಲಿ ಉಪಬಂಧಿಸಲಾದಂತೆ ಆಯೋಗದೊಡನೆ ಸಮಾಲೋಚನೆ ಮಾಡಿದಾಗಲೆಲ್ಲ, ಆಯೋಗದ ಸಲಹೆಯ ಪ್ರತಿಯನ್ನು, ಮತ್ತು ಅಂಥ ಸಲಹೆಯನ್ನು ಒಪ್ಪದಿರುವ ಸಂದರ್ಭದಲ್ಲಿ, ಹಾಗೆ ಒಪ್ಪದಿರುವುದಕ್ಕೆ ಕಾರಣಗಳ ಸಂಕ್ಷಿಪ್ತ ವಿವರಣೆಯನ್ನು, ಆ ಪ್ರಕರಣದಲ್ಲಿ ಹೊರಡಿಸಿದ ಆದೇಶದ ಪ್ರತಿಯ ಸಹಿತ ಆ ಆದೇಶವನ್ನು ಮಾಡಿದ ಪ್ರಾಧಿಕಾರಿಯು ಸಂಬಂಧಪಟ್ಟ ಸರ್ಕಾರಿ ನೌಕರನಿಗೆ ಒದಗಿಸತಕ್ಕದ್ದು:
1 [ಪರಂತು, ಶಿಸ್ತು ಪ್ರಾಧಿಕಾರಿಯು ಸರ್ಕಾರಿ ನೌಕರನನ್ನು ದೋಷಮುಕ್ತನನ್ನಾಗಿ ಮಾಡಿದ್ದರೆ ಅಥವಾ ಅಂತಹ ದಸ್ತಾವೇಜುಗಳನ್ನು ಸರ್ಕಾರಿ 1 ನೌಕರನಿಗೆ ಈಗಾಗಲೇ ಒದಗಿಸಿದ್ದರೆ, ಸದರಿ ದಸ್ತಾವೇಜುಗಳ ಪ್ರತಿಗಳನ್ನು ಒದಗಿಸುವುದು ಅವಶ್ಯಕವಾಗಿರತಕ್ಕದ್ದಲ್ಲ.] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 34 ಎಸ್ಎಸ್ಆರ್ 76, ದಿನಾಂಕ 7.7.76ರ ಮೂಲಕ ಸೇರಿಸಲಾಗಿದೆ. (ಕೆಜಿಡಿ 22.7.76). 28ಡಿ. ಕರ್ನಾಟಕ ನ್ಯಾಯಾಂಗ ಸೇವೆ, ಮುಂತಾದವುಗಳ ಸದಸ್ಯರಿಗೆ ಸಂಬಂಧಿಸಿದ ಉಪಬಂಧ.- ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಈ ನಿಯಮಗಳಲ್ಲಿ ರಾಜ್ಯಪಾಲರಿಗೆ ಅಥವಾ ಸರ್ಕಾರಕ್ಕೆ ಮಾಡಿದ ಉಲ್ಲೇಖಗಳನ್ನು, ಭಾರತ ಸಂವಿಧಾನದ 235ನೇ ಅನುಚ್ಛೇದದ ಮೇರೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯಗಳ ಮತ್ತು ಅವುಗಳಿಗೆ ಅಧೀನವಾಗಿರುವ ನ್ಯಾಯಾಲಯಗಳ ಮೇಲೆ ಹೊಂದಿರುವ ನಿಯಂತ್ರಣಕ್ಕೆ ಅವು ಸಂಬಂಧಪಡುವಷ್ಟರ ಮಟ್ಟಿಗೆ, ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು:
ಪರಂತು, ಈ ನಿಯಮದಲ್ಲಿರುವುದು ಯಾವುದೂ, ನ್ಯಾಯಾಂಗ ಸೇವೆಯ ಸದಸ್ಯರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಭಾರತ ಸಂವಿಧಾನದ ಮೇರೆಗೆ ಹೊಂದಿರುವ ಅಧಿಕಾರಗಳಿಗೆ ಅಥವಾ ಒಬ್ಬ ವ್ಯಕ್ತಿಯು ತನ್ನ ಸೇವಾ ಷರತ್ತುಗಳ ವಿನಿಯಮನಕ್ಕೆ ಸಂಬಂಧಿಸಿದ ಕಾನೂನಿನ ಮೇರೆಗೆ ಹೊಂದಿರಬಹುದಾದಂಥ ಅಪೀಲಿನ ಹಕ್ಕಿಗೆ ಬಾಧಕವನ್ನುಂಟುಮಾಡತಕ್ಕದ್ದಲ್ಲ.]