(1) 5ನೇ ನಿಯಮದಲ್ಲಿ ನಮೂದಿಸಿರುವ ಯಾವುವೇ ಸೇವೆಗಳ ಪ್ರತಿಯೊಬ್ಬ ಸದಸ್ಯನು, ಅಧೀನ ಪ್ರಾಧಿಕಾರಿಯು ಹೊರಡಿಸಿದ ಯಾವ ಆದೇಶವು,-
(ಎ) ಯಾವುದೇ ಆದೇಶದಿಂದ, ನಿಯಮಗಳಿಂದ ಅಥವಾ ಯಾವುದೇ ಕರಾರಿನಿಂದ ವಿನಿಯಮಿಸಿದ ಅವನ ವೇತನವನ್ನು, ಭತ್ಯೆಗಳನ್ನು, ನಿವೃತ್ತಿ ವೇತನವನ್ನು ಅಥವಾ ಇತರ ಸೇವಾ ಷರತ್ತುಗಳನ್ನು ಅವನಿಗೆ ಅನಾನುಕೂಲವಾಗುವಂತೆ ನಿರಾಕರಿಸಿರುವುದೋ ಅಥವಾ ಬದಲಾಯಿಸಿರುವುದೋ;
ಆ ಯಾವುದೇ ಆದೇಶದ ವಿರುದ್ಧ ಸರ್ಕಾರಕ್ಕೆ ಅಪೀಲನ್ನು ಸಲ್ಲಿಸಲು ಹಕ್ಕುಳ್ಳವನಾಗಿರತಕ್ಕದ್ದು; ಅಥವಾ
(2) ಯಾವ ಆದೇಶವು,-
(ಎ) ಸರ್ಕಾರಿ ನೌಕರನು ದಕ್ಷತಾ ರೇಖೆಯನ್ನು ದಾಟಲು ಸಮರ್ಥನಲ್ಲವೆಂಬ ಕಾರಣಕ್ಕಾಗಿ, ಅವನನ್ನು ಕಾಲಿಕ ವೇತನ ಶ್ರೇಣಿಯಲ್ಲಿ ದಕ್ಷತಾ ರೇಖೆಯಲ್ಲಿ ತಡೆದಿರುವ;
(ಬಿ) ಮೇಲಿನ ಸೇವೆಯಲ್ಲಿ, ಹುದ್ದೆಯ ಶ್ರೇಣಿಯಲ್ಲಿ ಅಥವಾ ಹುದ್ದೆಯಲ್ಲಿ ಸ್ಥಾನಾಪನ್ನನಾಗಿರುವ ಸರ್ಕಾರಿ ನೌಕರನನ್ನು ದಂಡನೆಯಂತೆ ಅಲ್ಲದೆ ಅನ್ಯಥಾ ಕೆಳಗಿನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಹಿಂದಿರುಗಿಸಿರುವ; ಮತ್ತು 1 [(ಸಿ) ನಿಯಮಗಳ ಮೇರೆಗೆ ಅವನಿಗೆ ಅನುಮತಿಸಲಾಗುವ ನಿವೃತ್ತಿ ವೇತನವನ್ನು ಕಡಿಮೆ ಮಾಡಿರುವ ಅಥವಾ ತಡೆಹಿಡಿದಿರುವ ಅಥವಾ ಗರಿಷ್ಠ ನಿವೃತ್ತಿ ವೇತನವನ್ನು ನಿರಾಕರಿಸಿರುವ;
(ಸಿಎ) ಅವನ ಅಮಾನತಿನ ಅವಧಿಗೆ ಅಥವಾ ಯಾವ ಅವಧಿಯಲ್ಲಿ ಅವನು ಅಮಾನತಿನಲ್ಲಿ ಇರುವುದಾಗಿ ಭಾವಿಸಲಾಗಿದೆಯೋ ಆ ಅವಧಿಗೆ ಅಥವಾ ಅದರ ಯಾವುದೇ ಭಾಗಕ್ಕೆ ಅವನಿಗೆ ಸಂದಾಯ ಮಾಡಬೇಕಾದ ಜೀವನಾಧಾರ ಮತ್ತು ಇತರ ಭತ್ಯೆಗಳನ್ನು ನಿರ್ಧರಿಸಿರುವ;
(ಸಿಬಿ) ಅವನ ವೇತನ ಮತ್ತು ಭತ್ಯೆಗಳನ್ನು,-
(i) ಅಮಾನತ್ತಿನ ಅವಧಿಗೆ ಸಂಬಂಧಿಸಿದಂತೆ; ಅಥವಾ
(ii) ಅವನನ್ನು ಸೇವೆಯಿಂದ ವಜಾ ಮಾಡಿದ, ತೆಗೆದು ಹಾಕಿದ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸಿದ ದಿನಾಂಕದಿಂದ ಅಥವಾ ಅವನನ್ನು ಕೆಳಗಿನ ಸೇವೆಗೆ, ಕೆಳಗಿನ ಹುದ್ದೆಯ ಶ್ರೇಣಿಗೆ, ಕೆಳಗಿನ ಹುದ್ದೆಗೆ, ಕೆಳಗಿನ ಕಾಲಿಕ ವೇತನ ಶ್ರೇಣಿಗೆ ಅಥವಾ ಕಾಲಿಕವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸಿದ ದಿನಾಂಕದಿಂದ ಅವನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಅವನನ್ನು ಪುನಃ ನೇಮಕ ಮಾಡಿದ ಅಥವಾ ಪೂರ್ವಸ್ಥಿತಿಗೆ ತಂದ ದಿನಾಂಕಕ್ಕೆ ಸಂಬಂಧಿಸಿದಂತೆ - ನಿರ್ಧರಿಸಿರುವ; ಅಥವಾ
(ಸಿಸಿ) ಅವನ ಅಮಾನತಿನ ದಿನಾಂಕದಿಂದ ಅಥವಾ ಅವನನ್ನು ಸೇವೆಯಿಂದ ವಜಾ ಮಾಡಿದ, ತೆಗೆದುಹಾಕಿದ, ಕಡ್ಡಾಯವಾಗಿ ನಿವೃತ್ತಿಗೊಳಿಸಿದ ಅಥವಾ ಕೆಳಗಿನ ಸೇವೆಗೆ, ಕೆಳಗಿನ ಹುದ್ದೆಯ ಶ್ರೇಣಿಗೆ, ಕೆಳಗಿನ ಹುದ್ದೆಗೆ, ಕೆಳಗಿನ ಕಾಲಿಕ ವೇತನ ಶ್ರೇಣಿಗೆ ಅಥವಾ ಕೆಳಗಿನ ವೇತನಕ್ಕೆ ಅಥವಾ ಕಾಲಿಕ ವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸಿದ ದಿನಾಂಕದಿಂದ ಅವನನ್ನು ಅವನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಪುನಃ ನೇಮಿಸಿದ ಅಥವಾ ಪೂರ್ವಸ್ಥಿತಿಗೆ ತಂದ ದಿನಾಂಕದವರೆಗಿನ ಅವಧಿಯನ್ನು ಯಾವುದೇ ಉದ್ದೇಶಕ್ಕಾಗಿ ಕರ್ತವ್ಯದ ಮೇಲಿದ್ದ ಅವಧಿಯೆಂದು ಭಾವಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿರುವ - ಆ ಯಾವುದೇ ಆದೇಶದ ವಿರುದ್ಧ,-
(i) ಯಾವ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಮಾತ್ರವೇ ಸೇವೆಯಿಂದ ವಜಾ ಮಾಡುವ ದಂಡನೆಯನ್ನು ವಿಧಿಸಬಹುದೋ, ಆ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ಮಾಡಿದ ಆದೇಶದ ಸಂದರ್ಭದಲ್ಲಿ, ರಾಜ್ಯಪಾಲರಿಗೆ, ಮತ್ತು
(ii) ಯಾರೇ ಇತರ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ಸೇವೆಯಿಂದ ವಜಾ ಮಾಡಿದ ಆದೇಶದ ಸಂದರ್ಭದಲ್ಲಿ, ಆ ನೌಕರನನ್ನು ಸೇವೆಯಿಂದ ವಜಾ ಮಾಡಿದ ದಂಡನೆಯನ್ನು ವಿಧಿಸಿರುವ ಆದೇಶದ ವಿರುದ್ಧ ಯಾವ ಪ್ರಾಧಿಕಾರಿಗೆ ಅಪೀಲು ಮಾಡಿಕೊಳ್ಳಲು ಅವಕಾಶವಿರುವುದೋ ಆ ಪ್ರಾಧಿಕಾರಿಗೆ - ಅಪೀಲು ಮಾಡಿಕೊಳ್ಳಲು ಅವಕಾಶವಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12.12.73ರ ಮೂಲಕ ಪ್ರತಿಯೋಜಿಸಲಾಗಿದೆ. (ಕೆಜಿಡಿ 24.1.74). ವಿವರಣೆ.- ಈ ನಿಯಮದಲ್ಲಿ,- (i) ‘ಸರ್ಕಾರಿ ನೌಕರ' ಪದಾವಳಿಯು ಸರ್ಕಾರಿ ಸೇವೆಯಲ್ಲಿ ಇರುವುದು ನಿಂತುಹೋದ ವ್ಯಕ್ತಿಯನ್ನು ಒಳಗೊಳ್ಳುತ್ತದೆ;
(ii) ‘ನಿವೃತ್ತಿ ವೇತನ' ಪದಾವಳಿಯು ಹೆಚ್ಚುವರಿ ನಿವೃತ್ತಿ ವೇತನ, ಉಪದಾನ ಮತ್ತು ಯಾವುದೇ ಇತರ ನಿವೃತ್ತಿ ಪ್ರಯೋಜನವನ್ನು ಒಳಗೊಳ್ಳುತ್ತದೆ.
(3) ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಆಯ್ಕೆ ಹುದ್ದೆಗೆ ಆಯ್ಕೆ ಮಾಡದಿರುವುದಕ್ಕಾಗಿ ಯಾವುದೇ ಅಪೀಲಿಗೆ ಅವಕಾಶವಿರತಕ್ಕದ್ದಲ್ಲ.