ಜಿ. ಆಸ್ಪತ್ರೆ, ದಾವಣಗೆರೆ 12. ಅಧೀಕ್ಷಕರು, ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ, ದಾವಣಗೆರೆ 13. ಅಧೀಕ್ಷಕರು, ಸರ್ಕಾರಿ ವೆನ್ಲಾಕ್ ಆಸ್ಪತ್ರೆ, ಮಂಗಳೂರು 14. ಅಧೀಕ್ಷಕರು, ಲೇಡಿ ಗೋಷನ್ ಆಸ್ಪತ್ರೆ, ಮಂಗಳೂರು 15. ಅಧೀಕ್ಷಕರು, ಮಾನಸಿಕ ಆಸ್ಪತ್ರೆ, ಧಾರವಾಡ] 1 [16. ಅಧೀಕ್ಷಕರು, ಎಸ್ಡಿಎಸ್ ಕ್ಷಯರೋಗ ಮತ್ತು ಎದೆರೋಗಗಳ ಆಸ್ಪತ್ರೆ, ಹೊಸೂರು ರಸ್ತೆ, ಬೆಂಗಳೂರು 17. ಪ್ರಾಂಶುಪಾಲರು, ಮೈಸೂರು ವೈದ್ಯಕೀಯ ಕಾಲೇಜು, ಮೈಸೂರು 18. ಪ್ರಾಂಶುಪಾಲರು, ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ, ಬೆಂಗಳೂರು 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 21 ಎಸ್ಡಿಇ 2003(1), ದಿನಾಂಕ 1.1.2004ರ ಮೂಲಕ ಸೇರಿಸಲಾಗಿದೆ. 1 [10ಎ. ಪ್ರಾಧಿಕಾರಿಯು ವ್ಯವಹರಣೆಗಳನ್ನು ಹೂಡುವುದು.- (1) ರಾಜ್ಯಪಾಲರು ಅಥವಾ ಅವರಿಂದ ಅಧಿಕಾರ ಪಡೆದ ಇತರ ಯಾರೇ ಪ್ರಾಧಿಕಾರಿಯು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ,-
(ಎ) ಯಾರೇ ಸರ್ಕಾರಿ ನೌಕರನ ವಿರುದ್ಧ ಶಿಸ್ತು ವ್ಯವಹರಣೆಗಳನ್ನು ಹೂಡಬಹುದು;
(ಬಿ) ಈ ನಿಯಮಗಳ ಮೇರೆಗೆ ಶಿಸ್ತು ಪ್ರಾಧಿಕಾರಿಯು ಯಾವ ಸರ್ಕಾರಿ ನೌಕರನ ವಿರುದ್ಧ 8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಸಕ್ಷಮನಾಗಿರುವನೋ ಆ ಸರ್ಕಾರಿ ನೌಕರನ ವಿರುದ್ಧ ಶಿಸ್ತು ವ್ಯವಹರಣೆಗಳನ್ನು ಹೂಡಲು ಆ ಶಿಸ್ತು ಪ್ರಾಧಿಕಾರಿಗೆ ನಿರ್ದೇಶಿಸಬಹುದು.
(2) 8ನೇ ನಿಯಮದ (i)ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಈ ನಿಯಮಗಳ ಮೇರೆಗೆ ವಿಧಿಸಲು ಸಕ್ಷಮನಾಗಿರುವ ಶಿಸ್ತು ಪ್ರಾಧಿಕಾರಿಯು, 8ನೇ ನಿಯಮದ (v)ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಈ ನಿಯಮಗಳ ಮೇರೆಗೆ ಸಕ್ಷಮನಾಗಿಲ್ಲದಿದ್ದರೂ ಆ ಶಿಸ್ತು ಪ್ರಾಧಿಕಾರಿಯು (v) ರಿಂದ (viii) ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿರುವ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಆ ಯಾರೇ ಸರ್ಕಾರಿ ನೌಕರನಿಗೆ ವಿಧಿಸಲು ಶಿಸ್ತು ವ್ಯವರಣೆಗಳನ್ನು ಹೂಡಬಹುದು .
- ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12.12.1973ರ ಮೂಲಕ ಸೇರಿಸಲಾಗಿದೆ, 10ಎ ನಿಯಮದ ಮೇರೆಗೆ ಸದರಿ ನಿಯಮದ ಉದ್ದೇಶಕ್ಕಾಗಿ ಸರ್ಕಾರದ ಕಾರ್ಯದರ್ಶಿಗಳಿಗೆ ಅಧಿಕಾರ ನೀಡಲಾಗಿದೆ. ಅಧಿಸೂಚನೆ ಸಂಖ್ಯೆ ಜಿಎಡಿ 38 ಎಸ್ಎಸ್ಆರ್ 74 (ii), ದಿನಾಂಕ 19.10.74ನ್ನು ನೋಡಿ.
[11. ಕಠಿಣ ದಂಡನೆಗಳನ್ನು ವಿಧಿಸಲು ಕಾರ್ಯವಿಧಾನ.- (1) 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸುವ ಆದೇಶವನ್ನು, ಸಾಧ್ಯವಾಗಬಹುದಾದಷ್ಟರ ಮಟ್ಟಿಗೆ, ಈ ನಿಯಮದಲ್ಲಿ ಮತ್ತು ನಿಯಮ II-ಎ ದಲ್ಲಿ ಉಪಬಂಧಿಸಿದ ರೀತಿಯಲ್ಲಿ ವಿಚಾರಣೆಯನ್ನು ಮಾಡಿದ ತರುವಾಯ ಹೊರತು ಮಾಡತಕ್ಕದ್ದಲ್ಲ.
ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12.12.73, ಕೆಜಿಡಿ 21.1.74ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಶಿಸ್ತು ಪ್ರಾಧಿಕಾರಿಯು ಸರ್ಕಾರಿ ನೌಕರನ ವಿರುದ್ಧ ದುರ್ನಡತೆಯ ಅಥವಾ ದುರ್ವರ್ತನೆಯ ಯಾವುದೇ ಆರೋಪಣೆಯ ಸತ್ಯಾಂಶವನ್ನು ವಿಚಾರಣೆ ಮಾಡಲು ಆಧಾರಗಳು ಇವೆ ಎಂದು ಅಭಿಪ್ರಾಯಪಟ್ಟಾಗಲೆಲ್ಲಾ, ತಾನೇ ಸ್ವತ: ವಿಚಾರಣೆ ಮಾಡಬಹುದು ಅಥವಾ ಅದರ ಸತ್ಯಾಂಶವನ್ನು ವಿಚಾರಣೆ ಮಾಡಲು ಈ ನಿಯಮದ ಮೇರೆಗೆ ಒಬ್ಬ ಪ್ರಾಧಿಕಾರಿಯನ್ನು ನೇಮಿಸಬಹುದು.
1 [* ಪರಂತುಕ - ಬಿಟ್ಟುಬಿಡಲಾಗಿದೆ * ಅಧಿಸೂಚನೆ ಸಂಖ್ಯೆ ಡಿಪಿಎಆರ್ 5 ಎಸ್ಸಿಇ 86, ದಿನಾಂಕ 7.5.86ರ ಮೂಲಕ ಸೇರಿಸಲಾಗಿತ್ತು.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 4 ಎಸ್ಡಿಇ 2000, ದಿನಾಂಕ 15.4.2002ರ ಮೂಲಕ (15.4.2002 ರಿಂದ ಪರಿಣಾಮಕಾರಿಯಾಗುವಂತೆ) ಬಿಟ್ಟುಬಿಡಲಾಗಿದೆ (ಕೆಜಿಡಿ 15.4.2002). ವಿವರಣೆ.- ಶಿಸ್ತು ಪ್ರಾಧಿಕಾರಿಯು ತಾನೇ ವಿಚಾರಣೆಯನ್ನು ನಡೆಸುವಲ್ಲಿ, (7) ರಿಂದ (20)ರ ವರೆಗಿನ ಉಪನಿಯಮಗಳಲ್ಲಿ ಮತ್ತು (22)ನೇ ಉಪನಿಯಮದಲ್ಲಿ ವಿಚಾರಣಾ ಪ್ರಾಧಿಕಾರಿಗೆ ಮಾಡಿದ ಯಾವುದೇ ಉಲ್ಲೇಖವನ್ನು ಶಿಸ್ತು ಪ್ರಾಧಿಕಾರಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.
(3) ಸರ್ಕಾರಿ ನೌಕರನ ವಿರುದ್ಧ ಈ ನಿಯಮದ ಮತ್ತು 11ಎ ನಿಯಮದ ಮೇರೆಗೆ ವಿಚಾರಣೆಯನ್ನು ನಡೆಸಲು ಪ್ರಸ್ತಾವಿಸಿರುವಲ್ಲಿ, ಶಿಸ್ತು ಪ್ರಾಧಿಕಾರಿಯು,-
(i) ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ಸಾರಾಂಶವನ್ನು ಆರೋಪಗಳ ಪಟ್ಟಿಯಲ್ಲಿ ನಿಶ್ಚಿತವಾಗಿ ಮತ್ತು ಸ್ಪಷ್ಟವಾಗಿ;
(ii) ಪ್ರತಿಯೊಂದು ಆರೋಪ ಪಟ್ಟಿಗೆ ಸಮರ್ಥನೆಯಾಗಿ, ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆಯನ್ನು - ಸಿದ್ಧಪಡಿಸತಕ್ಕದ್ದು ಅಥವಾ ಸಿದ್ಧಪಡಿಸುವಂತೆ ಮಾಡತಕ್ಕದ್ದು ಮತ್ತು ಅವು,-
(ಎ) ಸರ್ಕಾರಿ ನೌಕರನ ಯಾವುದೇ ಒಪ್ಪಿಗೆ ಅಥವಾ ತಪ್ಪೊಪ್ಪಿಗೆ ಒಳಗೊಂಡಂತೆ ಎಲ್ಲ ಸುಸಂಬದ್ಧ ಸಂಗತಿಗಳ ವಿವರಣೆಯನ್ನು;
(ಬಿ) ಯಾವ ದಸ್ತಾವೇಜುಗಳ ಮೂಲಕ ಮತ್ತು ಯಾವ ಸಾಕ್ಷಿದಾರರ ಮೂಲಕ ಆರೋಪ ವಿಷಯಗಳನ್ನು ಸಮರ್ಥಿಸಲು ಪ್ರಸ್ತಾಪಿಸಲಾಗಿದೆಯೋ ಆ ದಸ್ತಾವೇಜುಗಳ ಪಟ್ಟಿಯನ್ನು ಮತ್ತು ಆ ಸಾಕ್ಷಿದಾರರ ಪಟ್ಟಿಯನ್ನು - ಒಳಗೊಂಡಿರತಕ್ಕದ್ದು.
(4) ಶಿಸ್ತು ಪ್ರಾಧಿಕಾರಿಯು ಆರೋಪ ಪಟ್ಟಿಯ ಪ್ರತಿಯನ್ನು, ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಗಳ ವಿವರಣೆಯನ್ನು ಮತ್ತು ಯಾವ ದಸ್ತಾವೇಜುಗಳ ಮೂಲಕ ಮತ್ತು ಯಾವ ಸಾಕ್ಷಿದಾರರ ಮೂಲಕ ಆ ಆರೋಪ ವಿಷಯಗಳನ್ನು ಸಮರ್ಥಿಸಲು ಪ್ರಸ್ತಾವಿಸಲಾಗಿದೆಯೋ ಆ ದಸ್ತಾವೇಜುಗಳ ಮತ್ತು ಸಾಕ್ಷಿದಾರರ ಪಟ್ಟಿಯನ್ನು ಸರ್ಕಾರಿ ನೌಕರನಿಗೆ ಕೊಡತಕ್ಕದ್ದು ಅಥವಾ ಕೊಡಿಸತಕ್ಕದ್ದು ಮತ್ತು ನಿರ್ದಿಷ್ಟಪಡಿಸಬಹುದಾದಂಥ ಕಾಲದೊಳಗೆ ತನ್ನ ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಮತ್ತು ತಾನೇ ಖುದ್ದಾಗಿ ಅಹವಾಲು ಹೇಳಿಕೊಳ್ಳಲು ಅವನು ಇಚ್ಛಿಸುತ್ತಾನೆಯೇ ಎಂಬುದನ್ನು ತಿಳಿಸಲು ಸರ್ಕಾರಿ ನೌಕರನನ್ನು ಅಗತ್ಯಪಡಿಸತಕ್ಕದ್ದು.
(5) (ಎ) ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸ್ವೀಕರಿಸಿದ ಮೇಲೆ, ಶಿಸ್ತು ಪ್ರಾಧಿಕಾರಿಯು ಒಪ್ಪದಿರುವಂಥ ಆರೋಪ ವಿಷಯಗಳ ಬಗ್ಗೆ ತಾನೇ ಸ್ವತ: ವಿಚಾರಣೆ ಮಾಡಬಹುದು ಅಥವಾ (2)ನೇ ಉಪನಿಯಮದ ಮೇರೆಗೆ ಈ ಉದ್ದೇಶಕ್ಕಾಗಿ ವಿಚಾರಣಾ ಪ್ರಾಧಿಕಾರಿಯನ್ನು ನೇಮಿಸುವುದು ಅವಶ್ಯವೆಂದು ಪರಿಗಣಿಸಿದರೆ, ಹಾಗೆ ಮಾಡಬಹುದು ಮತ್ತು ಸರ್ಕಾರಿ ನೌಕರನು ತನ್ನ ಪ್ರತಿರಕ್ಷೆಯ ಲಿಖಿತ ಹೇಳಿಕೆಯಲ್ಲಿ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿರುವಲ್ಲಿ, ಶಿಸ್ತು ಪ್ರಾಧಿಕಾರಿಯು ತಾನು ಸೂಕ್ತವೆಂದು ಭಾವಿಸಬಹುದಾದಂಥ ಸಾಕ್ಷ್ಯವನ್ನು ಪಡೆದುಕೊಂಡ ತರುವಾಯ, ಪ್ರತಿಯೊಂದು ಆರೋಪದ ಮೇಲೆ ತನ್ನ ನಿರ್ಣಯಗಳನ್ನು ದಾಖಲಿಸತಕ್ಕದ್ದು ಮತ್ತು 11ಎ ನಿಯಮದಲ್ಲಿ ವಿಧಿಸಿರುವ ರೀತಿಯಲ್ಲಿ ಕ್ರಮ ಕೈಗೊಳ್ಳತಕ್ಕದ್ದು.
(ಬಿ) ಸರ್ಕಾರಿ ನೌಕರನು ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದಲ್ಲಿ, ಶಿಸ್ತು ಪ್ರಾಧಿಕಾರಿಯು ತಾನೇ ಸ್ವತ: ಆರೋಪ ವಿಷಯಗಳ ಬಗ್ಗೆ ವಿಚಾರಣೆ ಮಾಡಬಹುದು ಅಥವಾ ಈ ಉದ್ದೇಶಕ್ಕಾಗಿ ವಿಚಾರಣಾ ಪ್ರಾಧಿಕಾರಿಯನ್ನು (2)ನೇ ಉಪನಿಯಮದ ಮೇರೆಗೆ ನೇಮಿಸುವುದು ಅವಶ್ಯವೆಂದು ತಾನು ಪರಿಗಣಿಸಿದರೆ, ಹಾಗೆ ಮಾಡಬಹುದು.
(ಸಿ) ಶಿಸ್ತು ಪ್ರಾಧಿಕಾರಿಯು ತಾನೇ ಸ್ವತ: ಯಾವುದೇ ಆರೋಪ ವಿಷಯಗಳ ಬಗ್ಗೆ ವಿಚಾರಣೆ ಮಾಡುವಲ್ಲಿ ಅಥವಾ ಅಂಥ ಆರೋಪದ ಬಗ್ಗೆ ವಿಚಾರಣೆಯನ್ನು ಮಾಡುವುದಕ್ಕಾಗಿ ವಿಚಾರಣಾ ಪ್ರಾಧಿಕಾರಿಯನ್ನು ನೇಮಿಸುವಲ್ಲಿ, ಆರೋಪ ವಿಷಯಗಳನ್ನು ಸಮರ್ಥಿಸುವ ಸಲುವಾಗಿ ತನ್ನ ಪರವಾಗಿ ಪ್ರಕರಣವನ್ನು ಮಂಡಿಸುವುದಕ್ಕೆ ಸರ್ಕಾರಿ ನೌಕರನನ್ನು ಅಥವಾ ನ್ಯಾಯವಾದಿಯನ್ನು "ಮಂಡನಾಧಿಕಾರಿ"ಯನ್ನಾಗಿ ಆದೇಶದ ಮೂಲಕ ನೇಮಿಸಬಹುದು.
(6) ಶಿಸ್ತು ಪ್ರಾಧಿಕಾರಿಯು ವಿಚಾರಣಾ ಪ್ರಾಧಿಕಾರಿಯಾಗಿರುವಾಗ ವಿಚಾರಣಾ ಪ್ರಾಧಿಕಾರಿಗೆ,-
(i) ಆರೋಪ ಪಟ್ಟಿಯ ಮತ್ತು ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರ ಪಟ್ಟಿಯ ಪ್ರತಿಯನ್ನು;
(ii) ಸರ್ಕಾರಿ ನೌಕರನು ಸಲ್ಲಿಸಿದ ಪ್ರತಿರಕ್ಷೆಯ ಲಿಖಿತ ಹೇಳಿಕೆ ಯಾವುದಾದರೂ ಇದ್ದರೆ, ಅದರ ಪ್ರತಿಯನ್ನು;
(iii) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಸಾಕ್ಷಿದಾರರ ಹೇಳಿಕೆಗಳು ಯಾವುವಾದರೂ ಇದ್ದರೆ, ಅವುಗಳ ಪ್ರತಿಯನ್ನು;
(iv) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ದಸ್ತಾವೇಜುಗಳನ್ನು ಸರ್ಕಾರಿ ನೌಕರನಿಗೆ ತಲುಪಿಸಿರುವುದನ್ನು ರುಜುವಾತುಪಡಿಸುವ ಸಾಕ್ಷ್ಯವನ್ನು; ಮತ್ತು
(v) "ಮಂಡನಾಧಿಕಾರಿ" ಯನ್ನು ನೇಮಿಸಿದ ಆದೇಶದ ಪ್ರತಿಯನ್ನು - ಕಳುಹಿಸಿಕೊಡತಕ್ಕದ್ದು:
1 [ಪರಂತುಕವನ್ನು ಬಿಟ್ಟುಬಿಡಲಾಗಿದೆ].
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 4 ಎಸ್ಡಿಇ 2000, ದಿನಾಂಕ 15.4.2002ರ ಮೂಲಕ (15.4.2002 ರಿಂದ ಪೆರಿಣಾಮಕಾರಿಯಾಗುವಂತೆ) ಬಿಟ್ಟುಬಿಡಲಾಗಿದೆ. (ಕೆಜಿಡಿ 15.4.2002)
(7) ಸರ್ಕಾರಿ ನೌಕರನು, ಆರೋಪ ವಿಷಯಗಳನ್ನು ಹಾಗೂ ದುರ್ನಡತೆ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆಯನ್ನು ಅವನು ಸ್ವೀಕರಿಸಿದ ದಿನಾಂಕದಿಂದ ಹತ್ತು ಕೆಲಸದ ದಿನಗಳೊಳಗೆ, ವಿಚಾರಣಾ ಪ್ರಾಧಿಕಾರಿಯು ಈ ಸಂಬಂಧವಾಗಿ ಲಿಖಿತ ನೋಟೀಸಿನ ಮೂಲಕ ನಿರ್ದಿಷ್ಟಪಡಿಸಬಹುದಾದಂತೆ ಅಂಥ ದಿವಸದಂದು ಮತ್ತು ಅಂಥ ಕಾಲದಲ್ಲಿ ಅಥವಾ ವಿಚಾರಣಾ ಪ್ರಾಧಿಕಾರಿಯು ಅನುಮತಿಸಬಹುದಾದಂಥ ಹತ್ತು ದಿನಗಳಿಗೆ ಮೀರದ ಇನ್ನೂ ಹೆಚ್ಚಿನ ಅವಧಿಯೊಳಗೆ ವಿಚಾರಣಾ ಪ್ರಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗತಕ್ಕದ್ದು.
(8) ಸರ್ಕಾರಿ ನೌಕರನು ತನ್ನ ಪರವಾಗಿ ಪ್ರಕರಣವನ್ನು ಮಂಡಿಸಲು ಯಾರೇ ಇತರ ಸರ್ಕಾರಿ ನೌಕರನ 1 [ಅಥವಾ ನಿವೃತ್ತ ಸರ್ಕಾರಿ ನೌಕರನ ನೆರವನ್ನು ತೆಗೆದುಕೊಳ್ಳಬಹುದು, ಆದರೆ ಶಿಸ್ತು ಪ್ರಾಧಿಕಾರಿಯು ನೇಮಿಸಿದ ಮಂಡನಾಧಿಕಾರಿಯು ನ್ಯಾಯವಾದಿಯಾಗಿದ್ದರೆ ಅಥವಾ ಶಿಸ್ತು ಪ್ರಾಧಿಕಾರಿಯು ಪ್ರಕರಣದ ಸಂದರ್ಭಗಳನ್ನು ಗಮನಿಸಿ ನ್ಯಾಯವಾದಿಯನ್ನು ನೇಮಿಸಿಕೊಳ್ಳಲು ಅನುಮತಿಸಿದ ಹೊರತು, ಈ ಉದ್ದೇಶಕ್ಕಾಗಿ ನ್ಯಾಯವಾದಿಯನ್ನು ನೇಮಕ ಮಾಡಿಕೊಳ್ಳತಕ್ಕದ್ದಲ್ಲ:
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 41 ಎಸ್ಡಿಇ 84, ದಿನಾಂಕ 17.06.85ರ ಮೂಲಕ ಸೇರಿಸಲಾಗಿದೆ. (ಕೆಜಿಡಿ 11.7.85) 1 [ಪರಂತು, ನಿವೃತ್ತ ಸರ್ಕಾರಿ ನೌಕರನು ನ್ಯಾಯವಾದಿ ಕೂಡ ಆಗಿದ್ದಾಗ, ಸರ್ಕಾರಿ ನೌಕರನು, ಶಿಸ್ತು ಪ್ರಾಧಿಕಾರಿಯು ನೇಮಿಸಿದ ಮಂಡನಾಧಿಕಾರಿಯು ನ್ಯಾಯವಾದಿಯಾಗಿದ್ದರೆ ಅಥವಾ ಶಿಸ್ತು ಪ್ರಾಧಿಕಾರಿಯು ಪ್ರಕರಣದ ಸಂದರ್ಭಗಳನ್ನು ಗಮನಿಸಿ ನ್ಯಾಯವಾದಿಯಾಗಿರುವ ನಿವೃತ್ತ ಸರ್ಕಾರಿ ನೌಕರನನ್ನು ನೇಮಿಸಿಕೊಳ್ಳಲು ಅನುಮತಿಸಿದ ಹೊರತು, ನೇಮಿಸಿಕೊಳ್ಳತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 41 ಎಸ್ಡಿಇ 84, ದಿನಾಂಕ 17.6.85ರ ಮೂಲಕ ಸೇರಿಸಲಾಗಿದೆ. (ಕೆಜಿಡಿ 11.7.85)
(9) ಸರ್ಕಾರಿ ನೌಕರನು ತನ್ನ ಪ್ರತಿರಕ್ಷೆಯ ಲಿಖಿತ ಹೇಳಿಕೆಯಲ್ಲಿ ಯಾವುದೇ ಆರೋಪ ವಿಷಯಗಳನ್ನು ಒಪ್ಪದೆ ಅಥವಾ ಪ್ರತಿರಕ್ಷೆಯ ಯಾವುವೇ ಲಿಖಿತ ಹೇಳಿಕೆಯನ್ನು ಸಲ್ಲಿಸದೆ ವಿಚಾರಣಾ ಪ್ರಾಧಿಕಾರಿಯ ಮುಂದೆ ಹಾಜರಾದರೆ, ಅಂಥ ಪ್ರಾಧಿಕಾರಿಯು, ಅವನು ತಪ್ಪಿತಸ್ಥನೇ ಅಥವಾ ಯಾವುದಾದರೂ ಪ್ರತಿರಕ್ಷೆಯನ್ನು ಸಲ್ಲಿಸುವನೇ ಮತ್ತು ಯಾವುವೇ ಆರೋಪ ವಿಷಯದ ತಪ್ಪಿತಸ್ಥನೆಂದು ಒಪ್ಪಿಕೊಳ್ಳುತ್ತಾನೆಯೇ ಹೇಗೆ ಎಂಬುದನ್ನು ಅವನನ್ನು ಕೇಳತಕ್ಕದ್ದು, ವಿಚಾರಣಾ ಪ್ರಾಧಿಕಾರಿಯು ಅವನ ಆ ಹೇಳಿಕೆಯನ್ನು ದಾಖಲಿಸತಕ್ಕದ್ದು, ಆ ದಾಖಲೆಗೆ ರುಜು ಹಾಕತಕ್ಕದ್ದು ಮತ್ತು ಅದರ ಮೇಲೆ ಸರ್ಕಾರಿ ನೌಕರನ ರುಜುವನ್ನು ಪಡೆಯತಕ್ಕದ್ದು.
(10) ವಿಚಾರಣಾ ಪ್ರಾಧಿಕಾರಿಯು, ಯಾವ ಆರೋಪ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರನು ತಪ್ಪಿತಸ್ಥನೆಂದು ಒಪ್ಪಿಕೊಳ್ಳುವನೋ ಅವುಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥನೆಂಬ ನಿರ್ಣಯವನ್ನು ದಾಖಲಿಸತಕ್ಕದ್ದು.
(11) ವಿಚಾರಣಾ ಪ್ರಾಧಿಕಾರಿಯು, ಸರ್ಕಾರಿ ನೌಕರನು ನಿರ್ದಿಷ್ಟಪಡಿಸಿದ ಕಾಲದೊಳಗೆ ಹಾಜರಾಗಲು ತಪ್ಪಿದರೆ ಅಥವಾ ವಾದಿಸಲು ನಿರಾಕರಿಸಿದರೆ, ಇಲ್ಲವೇ ವಾದಿಸುವುದನ್ನು ಬಿಟ್ಟರೆ, ಅವನು ಆರೋಪ ವಿಷಯಗಳನ್ನು ರುಜುವಾತುಪಡಿಸಲು ಯಾವ ಸಾಕ್ಷ್ಯವನ್ನು ಒದಗಿಸಲು ಮಂಡನಾಧಿಕಾರಿಯು ಉದ್ದೇಶಿಸಿರುವನೋ ಅದನ್ನು ಒದಗಿಸಲು ಮಂಡನಾಧಿಕಾರಿಯನ್ನು ಅಗತ್ಯಪಡಿಸತಕ್ಕದ್ದು ಮತ್ತು ಆ ಸರ್ಕಾರಿ ನೌಕರನು ತನ್ನ ಪ್ರತಿರಕ್ಷೆಯನ್ನು ಸಿದ್ಧಪಡಿಸುವ ಉದ್ದೇಶಕ್ಕಾಗಿ,-
(i) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದ ದಸ್ತಾವೇಜುಗಳನ್ನು ಆದೇಶ ಹೊರಡಿಸಿದ ಐದು ದಿನಗಳೊಳಗೆ ಅಥವಾ ವಿಚಾರಣಾ ಪ್ರಾಧಿಕಾರಿಯು ಅನುಮತಿಸಬಹುದಾದಂತೆ ಐದು ದಿನಗಳಿಗೆ ಮೀರದಂಥ ಇನ್ನೂ ಹೆಚ್ಚಿನ ಕಾಲಾವಧಿಯೊಳಗೆ ಪರಿಶೀಲಿಸಬಹುದೆಂದು;
(ii) ತನ್ನ ಪರವಾಗಿ ವಿಚಾರಣೆ ಮಾಡಬೇಕಾದ ಸಾಕ್ಷಿದಾರರ ಪಟ್ಟಿಯನ್ನು ಒಪ್ಪಿಸಬಹುದೆಂದು;
(iii) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪಟ್ಟಿಯಲ್ಲಿ ನಮೂದಿಸಿದ ಸಾಕ್ಷಿದಾರರ ಹೇಳಿಕೆಗಳು ಯಾವುವಾದರೂ ಇದ್ದರೆ, ಅವುಗಳನ್ನು ಪರಿಶೀಲಿಸಲು ಮತ್ತು ಉದ್ಧೃತ ಭಾಗಗಳನ್ನು ತೆಗೆದುಕೊಳ್ಳಲು ಬಾಯಿಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ವಿನಂತಿಸಿಕೊಳ್ಳಬಹುದೆಂದು ಮತ್ತು ವಿಚಾರಣಾ ಪ್ರಾಧಿಕಾರಿಯು ಸಾಧ್ಯವಾದಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ ಶಿಸ್ತು ಪ್ರಾಧಿಕಾರಿಯ ಪರವಾಗಿ ಸಾಕ್ಷಿದಾರರ ವಿಚಾರಣೆಯ ಪ್ರಾರಂಭಕ್ಕೆ ಮುಂಚೆ ಮೂರು ದಿನಗಳಿಗಿಂತ ಹೆಚ್ಚು ತಡ ಮಾಡದಂತೆ ಅಂಥ ಪ್ರತಿಗಳನ್ನು ವಿಚಾರಣಾ ಪ್ರಾಧಿಕಾರಿಯು ಅವನಿಗೆ ಒದಗಿಸತಕ್ಕದ್ದೆಂದು;
(iv) ಸರ್ಕಾರದ ಸ್ವಾಧೀನದಲ್ಲಿರುವ ಆದರೆ (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪಟ್ಟಿಯಲ್ಲಿ ನಮೂದಿಸಿರದ ಯಾವುವೇ ದಸ್ತಾವೇಜುಗಳನ್ನು ಪತ್ತೆ ಹಚ್ಚುವುದಕ್ಕಾಗಿ ಅಥವಾ ಹಾಜರುಪಡಿಸುವುದಕ್ಕಾಗಿ ಆದೇಶ ಹೊರಡಿಸಿದ ಹತ್ತು ದಿನಗಳೊಳಗಾಗಿ ಅಥವಾ ವಿಚಾರಣಾ ಪ್ರಾಧಿಕಾರಿಯು ಅನುಮತಿಸಬಹುದಾದಂತೆ ಹತ್ತು ದಿನಗಳಿಗೆ ಮೀರದ ಇನ್ನೂ ಹೆಚ್ಚಿನ ಕಾಲಾವಧಿಯೊಳಗಾಗಿ ನೋಟೀಸನ್ನು ನೀಡಬಹುದೆಂದು - ಆದೇಶವನ್ನು ದಾಖಲಿಸಿದ ತರುವಾಯ, ಮೂವತ್ತು ದಿವಸಗಳಿಗೆ ಮೀರದ ಮುಂದಿನ ದಿನಾಂಕಕ್ಕೆ ಪ್ರಕರಣವನ್ನು ಮುಂದೂಡತಕ್ಕದ್ದು:
ಪರಂತು, ಸರ್ಕಾರವು ಪತ್ತೆ ಹಚ್ಚಬೇಕೆಂದು ಅಥವಾ ಹಾಜರುಪಡಿಸಬೇಕೆಂದು ಸರ್ಕಾರಿ ನೌಕರನು ಅಗತ್ಯಪಡಿಸಿದ ದಸ್ತಾವೇಜುಗಳ ಸುಸಂಬದ್ಧತೆಯನ್ನು ಅವನು ಸೂಚಿಸತಕ್ಕದ್ದು.
(12) ವಿಚಾರಣಾ ಪ್ರಾಧಿಕಾರಿಯು, ದಸ್ತಾವೇಜುಗಳನ್ನು ಪತ್ತೆ ಹಚ್ಚುವ ಅಥವಾ ಹಾಜರುಪಡಿಸುವ ಬಗೆಗಿನ ನೋಟೀಸನ್ನು ಸ್ವೀಕರಿಸಿದ ಮೇಲೆ, ಅದನ್ನು ಅಥವಾ ಅದರ ಪ್ರತಿಗಳನ್ನು, ಯಾವ ಪ್ರಾಧಿಕಾರಿಯ ಅಭಿರಕ್ಷೆಯಲ್ಲಿ ಅಥವಾ ಸ್ವಾಧೀನದಲ್ಲಿ ಆ ದಸ್ತಾವೇಜುಗಳನ್ನು ಇಡಲಾಗಿದೆಯೋ ಆ ಪ್ರಾಧಿಕಾರಿಗೆ ಅಂಥ ಕೋರಿಕೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದ ಹೊತ್ತಿಗೆ ದಸ್ತಾವೇಜನ್ನು ಹಾಜರುಪಡಿಸುವ ಬಗೆಗಿನ ಕೋರಿಕೆಯ ಜೊತೆ ಕಳುಹಿಸತಕ್ಕದ್ದು:
ಪರಂತು, ಯಾವ ದಸ್ತಾವೇಜುಗಳು ಪ್ರಕರಣಕ್ಕೆ ಸುಸಂಗತ ಅಲ್ಲವೆಂದು ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಡುವನೋ ಆ ದಸ್ತಾವೇಜುಗಳಿಗೆ ಕೋರಿಕೆ ಸಲ್ಲಿಸಲು ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕರಿಸಬಹುದು.
(13) (12)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಕೋರಿಕೆಯನ್ನು ಸ್ವೀಕರಿಸಿದ ಮೇಲೆ, ಕೋರಲಾದ ದಸ್ತಾವೇಜುಗಳನ್ನು ಅಭಿರಕ್ಷೆಯಲ್ಲಿ ಅಥವಾ ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಪ್ರತಿಯೊಬ್ಬ ಪ್ರಾಧಿಕಾರಿಯು ಅವುಗಳನ್ನು ವಿಚಾರಣಾ ಪ್ರಾಧಿಕಾರಿಯ ಮುಂದೆ ಹಾಜರುಪಡಿಸತಕ್ಕದ್ದು:
ಪರಂತು, ಕೋರಲಾದ ದಸ್ತಾವೇಜುಗಳನ್ನು ಅಭಿರಕ್ಷೆಯಲ್ಲಿಟ್ಟುಕೊಂಡಿರುವ ಅಥವಾ ಸ್ವಾಧೀನದಲ್ಲಿಟ್ಟುಕೊಂಡಿರುವ ಪ್ರಾಧಿಕಾರಿಗೆ, ಅಂಥ ಎಲ್ಲ ಅಥವಾ ಯಾವುದೇ ದಸ್ತಾವೇಜುಗಳನ್ನು ಹಾಜರುಪಡಿಸುವುದು ಸಾರ್ವಜನಿಕ ಹಿತದೃಷ್ಟಿಗೆ ಅಥವಾ ರಾಜ್ಯದ ಭದ್ರತೆಗೆ ವಿರುದ್ಧವಾಗುವುದೆಂದು ಮನದಟ್ಟಾದರೆ, ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ ಅವನು ಅದನ್ನು ತದನುಸಾರವಾಗಿ ವಿಚಾರಣಾ ಪ್ರಾಧಿಕಾರಿಗೆ ತಿಳಿಸತಕ್ಕದ್ದು ಮತ್ತು ವಿಚಾರಣಾ ಪ್ರಾಧಿಕಾರಿಯು, ಹಾಗೆ ತಿಳಿದ ತರುವಾಯ ಸರ್ಕಾರಿ ನೌಕರನಿಗೆ ಆ ವಿಷಯವನ್ನು ತಿಳಿಸತಕ್ಕದ್ದು ಮತ್ತು ಅಂಥ ದಸ್ತಾವೇಜುಗಳನ್ನು ಹಾಜರುಪಡಿಸುವ ಅಥವಾ ಪತ್ತೆಹಚ್ಚುವ ಬಗ್ಗೆ ತಾನು ಮಾಡಿದ ಕೋರಿಕೆಯನ್ನು ಹಿಂತೆಗೆದುಕೊಳ್ಳತಕ್ಕದ್ದು.
(14) ವಿಚಾರಣೆಗಾಗಿ ನಿಗದಿಪಡಿಸಿದ ದಿನಾಂಕದಂದು, ಯಾವ ಮೌಖಿಕ ಮತ್ತು ದಸ್ತಾವೇಜು ಸಾಕ್ಷ್ಯದಿಂದ ಆರೋಪ ವಿಷಯಗಳನ್ನು ರುಜುವಾತುಪಡಿಸಲು ಪ್ರಸ್ತಾವಿಸಲಾಗಿದೆಯೋ ಆ ಮೌಖಿಕ ಮತ್ತು ದಸ್ತಾವೇಜು ಸಾಕ್ಷ್ಯವನ್ನು ಶಿಸ್ತು ಪ್ರಾಧಿಕಾರಿಯು ಅಥವಾ ಅವನ ಪರವಾಗಿ ಹಾಜರುಪಡಿಸತಕ್ಕದ್ದು. ಮಂಡನಾಧಿಕಾರಿಯು ಅಥವಾ ಅವನ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ಮಾಡತಕ್ಕದ್ದು ಮತ್ತು ಸರ್ಕಾರಿ ನೌಕರನು ಅಥವಾ ಅವನ ಪರವಾಗಿ ಪಾಟಿ ಸವಾಲು ಮಾಡಬಹುದು. ಮಂಡನಾಧಿಕಾರಿಯು ಯಾವ ಅಂಶಗಳ ಮೇಲೆ ಪಾಟಿ ಸವಾಲು ಆಗಿದೆಯೋ ಆ ಯಾವುವೇ ಅಂಶಗಳ ಮೇಲೆ ಸಾಕ್ಷಿದಾರರನ್ನು ಪುನ: ವಿಚಾರಣೆ ಮಾಡಲು ಹಕ್ಕುಳ್ಳವನಾಗಿರತಕ್ಕದ್ದು. ಆದರೆ ವಿಚಾರಣಾ ಪ್ರಾಧಿಕಾರಿಯ ಅನುಮತಿಯಿಲ್ಲದೆ, ಯಾವುದೇ ಹೊಸ ವಿಷಯದ ಬಗ್ಗೆ ವಿಚಾರಣೆ ಮಾಡಕೂಡದು; ವಿಚಾರಣಾ ಪ್ರಾಧಿಕಾರಿಯು ತಾನು ಸೂಕ್ತವೆಂದು ಭಾವಿಸಬಹುದಾದಂಥ ಪ್ರಶ್ನೆಗಳನ್ನು ಸಹ ಸಾಕ್ಷಿದಾರರಿಗೆ ಹಾಕಬಹುದು.
(15) ಶಿಸ್ತು ಪ್ರಾಧಿಕಾರಿಯ ಪರವಾಗಿ ಪ್ರಕರಣವು ಮುಕ್ತಾಯಗೊಳ್ಳುವುದಕ್ಕೆ ಮುಂಚೆ ಅವಶ್ಯವೆಂದು ಕಂಡುಬಂದರೆ, ವಿಚಾರಣಾ ಪ್ರಾಧಿಕಾರಿಯು, ತನ್ನ ವಿವೇಚನಾನುಸಾರ ಸರ್ಕಾರಿ ನೌಕರನಿಗೆ ಕೊಟ್ಟ ಪಟ್ಟಿಯಲ್ಲಿ ಒಳಗೊಳ್ಳದಿರುವ ಸಾಕ್ಷ್ಯವನ್ನು ಒದಗಿಸಲು ಮಂಡನಾಧಿಕಾರಿಗೆ ಅನುಮತಿಸಬಹುದು ಅಥವಾ ತಾನೇ ಸ್ವತ: ಹೊಸ ಸಾಕ್ಷ್ಯವನ್ನು ತರಿಸಿಕೊಳ್ಳಬಹುದು ಅಥವಾ ಯಾರೇ ಸಾಕ್ಷಿದಾರರನ್ನು ಪುನ: ಕರೆಸಿಕೊಳ್ಳಬಹುದು ಮತ್ತು ಪುನ: ವಿಚಾರಣೆ ಮಾಡಬಹುದು ಮತ್ತು ಅಂಥ ಸಂದರ್ಭದಲ್ಲಿ ಹಾಜರುಪಡಿಸಲು ಪ್ರಸ್ತಾವಿಸಿದ ಇನ್ನೂ ಹೆಚ್ಚಿನ ಸಾಕ್ಷ್ಯದ ಪಟ್ಟಿಯ ಪ್ರತಿಯನ್ನು, ಸರ್ಕಾರಿ ನೌಕರನು ಕೇಳಿದರೆ, ಅದನ್ನು ಪಡೆಯಲು ಮತ್ತು ವಿಚಾರಣೆಯನ್ನು ಮುಂದಕ್ಕೆ ಹಾಕಿದ ದಿನವನ್ನು ಹಾಗೂ ಯಾವ ದಿನಕ್ಕೆ ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತೋ ಆ ದಿನವನ್ನು ಬಿಟ್ಟು, ಅಂಥ ಹೊಸ ಸಾಕ್ಷ್ಯವನ್ನು ಹಾಜರುಪಡಿಸುವುದಕ್ಕೆ ಮುಂಚೆ ವಿಚಾರಣೆಯನ್ನು ಮೂರು ದಿನ ಮುಂದಕ್ಕೆ ಹಾಕಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು. ವಿಚಾರಣಾ ಪ್ರಾಧಿಕಾರಿಯು ಅಂಥ ದಸ್ತಾವೇಜುಗಳನ್ನು ದಾಖಲೆ ಮೇಲೆ ತರುವುದಕ್ಕೆ ಮುಂಚೆ ಪರೀಕ್ಷಿಸುವುದಕ್ಕಾಗಿ ಸರ್ಕಾರಿ ನೌಕರನಿಗೆ ಒಂದು ಅವಕಾಶವನ್ನು ಕೊಡತಕ್ಕದ್ದು. ಹೊಸ ಸಾಕ್ಷ್ಯವನ್ನು ಹಾಜರುಪಡಿಸುವುದು ನ್ಯಾಯದ ಹಿತದೃಷ್ಟಿಯಿಂದ ಅವಶ್ಯವೆಂದು ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಡುವಲ್ಲಿ, ಅಂಥ ಹೊಸ ಸಾಕ್ಷ್ಯವನ್ನು ಒದಗಿಸಲು ಸಹ ಸರ್ಕಾರಿ ನೌಕರನಿಗೆ ಅನುಮತಿಸಬಹುದು.
ಸೂಚನೆ.- ಸಾಕ್ಷ್ಯದಲ್ಲಿರುವ ಯಾವುದೇ ಕೊರತೆಯನ್ನು ತುಂಬಲು ಹೊಸ ಸಾಕ್ಷ್ಯವನ್ನು ಅನುಮತಿಸತಕ್ಕದ್ದಲ್ಲ ಅಥವಾ ತರಿಸಿಕೊಳ್ಳತಕ್ಕದ್ದಲ್ಲ ಅಥವಾ ಯಾರೇ ಸಾಕ್ಷಿದಾರರನ್ನು ಪುನ: ಕರೆಸಿಕೊಳ್ಳತಕ್ಕದ್ದಲ್ಲ. ಮೂಲತ: ಹಾಜರುಪಡಿಸಿದಂಥ ಸಾಕ್ಷ್ಯದಲ್ಲಿ ಅಂತರ್ನಿಹಿತ ಲೋಪ ಇರುವಲ್ಲಿ ಅಥವಾ ದೋಷವಿರುವಲ್ಲಿ ಮಾತ್ರ ಅಂಥ ಸಾಕ್ಷ್ಯವನ್ನು ತರಿಸಿಕೊಳ್ಳಬಹುದು.
(16) ಶಿಸ್ತು ಪ್ರಾಧಿಕಾರಿಯ ಪರವಾಗಿ ವಾದವನ್ನು ಮುಕ್ತಾಯಗೊಳಿಸಿದಾಗ, ಸರ್ಕಾರಿ ನೌಕರನನ್ನು, ಅವನು ಇಚ್ಛಿಸಿದರೆ ಮೌಖಿಕವಾಗಿ ಅಥವಾ ಬರವಣಿಗೆಯಲ್ಲಿ ಅವನ ಪ್ರತಿರಕ್ಷೆಯನ್ನು ಹೇಳಲು ಅಗತ್ಯಪಡಿಸತಕ್ಕದ್ದು. ಪ್ರತಿರಕ್ಷೆಯನ್ನು ಮೌಖಿಕವಾಗಿ ಹೇಳಿದರೆ, ಅದನ್ನು ದಾಖಲಿಸತಕ್ಕದ್ದು ಮತ್ತು ಸರ್ಕಾರಿ ನೌಕರನನ್ನು ಆ ದಾಖಲೆಗೆ ರುಜು ಮಾಡಲು ಅಗತ್ಯಪಡಿಸತಕ್ಕದ್ದು. ಇವೆರಡೂ ಸಂದರ್ಭಗಳಲ್ಲೂ ಪ್ರತಿರಕ್ಷೆಯ ಹೇಳಿಕೆಯ ಪ್ರತಿಯನ್ನು, ಮಂಡನಾಧಿಕಾರಿ ಯಾರಾದರೂ ನೇಮಕಗೊಂಡಿದ್ದರೆ, ಅವರಿಗೆ ಕೊಡತಕ್ಕದ್ದು.
(17) ಸರ್ಕಾರಿ ನೌಕರನ ಪರವಾಗಿರುವ ಸಾಕ್ಷ್ಯವನ್ನು ಆ ತರುವಾಯ ಹಾಜರುಪಡಿಸತಕ್ಕದ್ದ್ದು. ಸರ್ಕಾರಿ ನೌಕರನು ಇಚ್ಛಿಸಿದರೆ ತನ್ನ ಪರವಾಗಿ ತಾನೇ ವಿಚಾರಣೆಗೊಳಪಡಬಹುದು. ಸರ್ಕಾರಿ ನೌಕರನು ಹಾಜರುಪಡಿಸಿದ ಸಾಕ್ಷಿದಾರರನ್ನು ತರುವಾಯ ವಿಚಾರಣೆ ಮಾಡತಕ್ಕದ್ದು ಮತ್ತು ಶಿಸ್ತು ಪ್ರಾಧಿಕಾರಿಯ ಪರವಾಗಿರುವ ಸಾಕ್ಷಿದಾರರಿಗೆ ಅನ್ವಯವಾಗಬಹುದಾದ ಉಪಬಂಧಗಳಿಗೆ ಅನುಸಾರವಾಗಿ ವಿಚಾರಣಾ ಪ್ರಾಧಿಕಾರಿಯಿಂದ ಪಾಟೀ ಸವಾಲಿಗೆ, ಪುನಃ ವಿಚಾರಣೆಗೆ ಮತ್ತು ವಿಚಾರಣೆಗೆ ಆ ಸಾಕ್ಷಿದಾರರು ಗುರಿಯಾಗತಕ್ಕದ್ದು.
(18) ವಿಚಾರಣಾ ಪ್ರಾಧಿಕಾರಿಯು, ಸರ್ಕಾರಿ ನೌಕರನು ತನ್ನ ವಾದವನ್ನು ಮುಕ್ತಾಯಗೊಳಿಸಿದ ತರುವಾಯ ಮತ್ತು ಆ ಸರ್ಕಾರಿ ನೌಕರನು ತಾನೇ ಸ್ವತಃ ವಿಚಾರಣೆಗೆ ಒಳಪಟ್ಟಿರದಿದ್ದರೆ ಸಾಕ್ಷ್ಯದಲ್ಲಿ ಸರ್ಕಾರಿ ನೌಕರನ ವಿರುದ್ಧ ಕಂಡುಬರುವ ಯಾವುವೇ ಸಂದರ್ಭಗಳನ್ನು ವಿವರಿಸಲು ಅವನಿಗೆ ಅವಕಾಶ ಒದಗಿಸುವ ಉದ್ದೇಶಕ್ಕಾಗಿ ಸಾಕ್ಷ್ಯದಲ್ಲಿ ಅವನ ವಿರುದ್ಧವಾಗಿ ಕಂಡುಬಂದಿರುವ ಆ ಸಂದರ್ಭಗಳ ಬಗ್ಗೆ ಅವನನ್ನು ಸಾಮಾನ್ಯವಾಗಿ ಪ್ರಶ್ನಿಸಬಹುದು.
(19) ವಿಚಾರಣಾ ಪ್ರಾಧಿಕಾರಿಯು, ಸಾಕ್ಷ್ಯವನ್ನು ಹಾಜರುಪಡಿಸುವುದು ಪೂರ್ಣವಾದ ತರುವಾಯ, ಮಂಡನಾಧಿಕಾರಿ ಯಾರಾದರೂ ನೇಮಕಗೊಂಡಿದ್ದರೆ, ಅವರನ್ನು ಮತ್ತು ಸರ್ಕಾರಿ ನೌಕರನನ್ನು ವಿಚಾರಣೆ ಮಾಡಬಹುದು ಅಥವಾ ತಮ್ಮ ತಮ್ಮ ವಾದಗಳ ಲಿಖಿತ ಸಾರಾಂಶಗಳನ್ನು ದಾಖಲ್ಮಾಡಲು ಅವರು ಇಚ್ಛಿಸಿದರೆ, ಅವರಿಗೆ ಹಾಗೆ ಮಾಡಲು ಅನುಮತಿಸಬಹುದು.
(20) ಆರೋಪಗಳ ಪಟ್ಟಿಯನ್ನು ಯಾವ ಸರ್ಕಾರಿ ನೌಕರನಿಗೆ ಕೊಡಲಾಗಿದೆಯೋ ಆ ಸರ್ಕಾರಿ ನೌಕರನು, ಆ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆ ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದರೆ ಅಥವಾ ವಿಚಾರಣಾ ಪ್ರಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗದಿದ್ದರೆ ಅಥವಾ ವಿಚಾರಣೆಯ ಯಾವುದೇ ಹಂತದಲ್ಲಿ ಈ ನಿಯಮದ ಉಪಬಂಧಗಳನ್ನು ಪಾಲಿಸಲು ತಪ್ಪಿದರೆ ಅಥವಾ ನಿರಾಕರಿಸಿದರೆ, ವಿಚಾರಣಾ ಪ್ರಾಧಿಕಾರಿಯು ಏಕಪಕ್ಷೀಯವಾಗಿ ವಿಚಾರಣೆಯನ್ನು ನಡೆಸಬಹುದು.
(21) (ಎ) 8ನೇ ನಿಯಮದ (i)ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಸಕ್ಷಮನಾಗಿರುವ, ಆದರೆ 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಸಕ್ಷಮನಾಗಿಲ್ಲದಿರುವ, ಶಿಸ್ತು ಪ್ರಾಧಿಕಾರಿಯು ಯಾವುದೇ ಆರೋಪ ವಿಷಯಗಳನ್ನು ತಾನೇ ಸ್ವತಃ ವಿಚಾರಣೆ ಮಾಡಿರುವಲ್ಲಿ ಅಥವಾ ವಿಚಾರಣೆ ಮಾಡಿಸಿರುವಲ್ಲಿ ಮತ್ತು ಆ ಪ್ರಾಧಿಕಾರಿಯು ತನ್ನದೇ ನಿರ್ಣಯಗಳನ್ನು ಗಮನದಲ್ಲಿಟ್ಟುಕೊಂಡು ಅಥವಾ ಆ ಪ್ರಾಧಿಕಾರಿಯು ನೇಮಕಮಾಡಿದ ಯಾರೇ ವಿಚಾರಣಾ ಪ್ರಾಧಿಕಾರಿಯ ಯಾವುವೇ ನಿರ್ಣಯಗಳ ಮೇಲಣ ತನ್ನ ತೀರ್ಮಾನವನ್ನು ಗಮನದಲ್ಲಿಟ್ಟುಕೊಂಡು, 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಅಭಿಪ್ರಾಯಪಟ್ಟರೆ, ಆ ಪ್ರಾಧಿಕಾರಿಯು (v) ರಿಂದ (viii)ರ ವರೆಗಿನ ದಂಡನೆಗಳನ್ನು ವಿಧಿಸಲು ಸಕ್ಷಮನಾಗಿರುವಂಥ ಶಿಸ್ತು ಪ್ರಾಧಿಕಾರಿಗೆ ವಿಚಾರಣೆಯ ದಾಖಲೆಗಳನ್ನು ಕಳುಹಿಸತಕ್ಕದ್ದು.
(ಬಿ) ಯಾವ ಶಿಸ್ತುಪ್ರಾಧಿಕಾರಿಗೆ ದಾಖಲೆಗಳನ್ನು ಹಾಗೆ ಕಳುಹಿಸಲಾಗಿದೆಯೋ ಆ ಶಿಸ್ತು ಪ್ರಾಧಿಕಾರಿಯು ದಾಖಲೆಯಲ್ಲಿನ ಸಾಕ್ಷ್ಯದ ಆಧಾರದ ಮೇಲೆ ಕ್ರಮವನ್ನು ಜರುಗಿಸಬಹುದೆಂದು ಅಥವಾ ಯಾರೇ ಸಾಕ್ಷಿದಾರರನ್ನು ಇನ್ನಷ್ಟು ಪರೀಕ್ಷಿಸುವುದು ನ್ಯಾಯದ ಹಿತದೃಷ್ಟಿಯಿಂದ ಅವಶ್ಯವೆಂದು ಆ ಪ್ರಾಧಿಕಾರಿಯು ಅಭಿಪ್ರಾಯಪಡುವಲ್ಲಿ, ಸಾಕ್ಷಿದಾರನನ್ನು ಪುನಃ ಕರೆಸಿಕೊಳ್ಳಬಹುದು ಮತ್ತು ಸಾಕ್ಷಿದಾರನನ್ನು ವಿಚಾರಣೆ ಮಾಡಬಹುದು, ಪಾಟೀಸವಾಲು ಮಾಡಬಹುದು ಹಾಗೂ ಪುನಃ ವಿಚಾರಣೆ ಮಾಡಬಹುದು ಮತ್ತು ಈ ನಿಯಮಗಳಿಗೆ ಅನುಸಾರವಾಗಿ ತಾನು ಸೂಕ್ತವೆಂದು ಭಾವಿಸಬಹುದಾದಂಥ ದಂಡನೆಯನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬಹುದು.
(22) ಯಾರೇ ವಿಚಾರಣಾ ಪ್ರಾಧಿಕಾರಿಯು, ವಿಚಾರಣೆಯಲ್ಲಿ ಪೂರ್ಣ ಸಾಕ್ಷ್ಯವನ್ನು ಅಥವಾ ಅದರ ಯಾವುದೇ ಭಾಗವನ್ನು ಆಲಿಸಿದ ಮತ್ತು ದಾಖಲಿಸಿದ ತರುವಾಯ, ವಿಚಾರಣೆಯ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವುದು ನಿಂತುಹೋಗಿರುವಾಗಲೆಲ್ಲಾ ಮತ್ತು ಅವನ ಸ್ಥಾನದಲ್ಲಿ ಅಂಥ ಆಧಿಕಾರವ್ಯಾಪ್ತಿಯನ್ನು ಹೊಂದಿರುವಂಥ ಮತ್ತು ಚಲಾಯಿಸುವಂಥ ಬೇರೊಬ್ಬ ವಿಚಾರಣಾ ಪ್ರಾಧಿಕಾರಿಯು ಬಂದಾಗ, ಹಾಗೆ ಬಂದ ಆ ವಿಚಾರಣಾ ಪ್ರಾಧಿಕಾರಿಯು, ಹಿಂದಿನ ವಿಚಾರಣಾಧಿಕಾರಿಯು ಹಾಗೆ ದಾಖಲಿಸಿದ ಅಥವಾ ಹಿಂದಿನ ವಿಚಾರಣಾಧಿಕಾರಿಯು ಭಾಗಶಃ ದಾಖಲಿಸಿದ ಮತ್ತು ತಾನು ಸ್ವತಃ ಭಾಗಶಃ ದಾಖಲಿಸಿದ ಸಾಕ್ಷ್ಯದ ಮೇಲೆ ಕ್ರಮ ಜರುಗಿಸಬಹುದು:
ಪರಂತು, ಯಾರ ಸಾಕ್ಷ್ಯವನ್ನು ಈಗಾಗಲೇ ದಾಖಲಿಸಲಾಗಿದೆಯೋ ಆ ಯಾರೇ ಸಾಕ್ಷಿದಾರರನ್ನು ಮತ್ತಷ್ಟು ವಿಚಾರಣೆ ಮಾಡುವುದು ನ್ಯಾಯದ ಹಿತದೃಷ್ಟಿಯಿಂದ ಅವಶ್ಯವೆಂದು ನಂತರ ಬಂದ ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಟ್ಟಲ್ಲಿ, ಅವರು ಇಲ್ಲಿ ಈ ಹಿಂದೆ ಉಪಬಂಧಿಸಲಾದಂತೆ ಅಂಥ ಯಾರೇ ಸಾಕ್ಷಿದಾರರನ್ನು ಪುನ: ಕರೆಸಿಕೊಳ್ಳಬಹುದು, ವಿಚಾರಣೆ ಮಾಡಬಹುದು, ಪಾಟೀ ಸವಾಲು ಮಾಡಬಹುದು ಮತ್ತು ಪುನಃ ವಿಚಾರಣೆ ಮಾಡಬಹುದು.
1 [(22ಎ) ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಶಿಸ್ತು ವ್ಯವಹರಣೆಯನ್ನು ಎದುರಿಸುತ್ತಿರುವ ಸರ್ಕಾರಿ ನೌಕರನನ್ನು, ಅಂಥ ಶಿಸ್ತು ವ್ಯವಹರಣೆಯನ್ನು ಪ್ರಾರಂಭಿಸಿದ ಶಿಸ್ತು ಪ್ರಾಧಿಕಾರಿಯ ಅಧಿಕಾರ ವ್ಯಾಪ್ತಿಯ ಹೊರಗೆ ವರ್ಗಾವಣೆ ಮಾಡಿದ್ದರೆ, ಪ್ರತಿನಿಯೋಜಿಸಿದ್ದರೆ ಅಥವಾ ಅನ್ಯಥಾ ಸ್ಥಳನಿಯುಕ್ತಿ ಮಾಡಿದ್ದರೆ, ಅದೇ ಪ್ರಾಧಿಕಾರಿಯು ಈ ನಿಯಮಗಳಿಗನುಸಾರವಾಗಿ, ಅಂಥ ಸರ್ಕಾರಿ ನೌಕರನ ಮೇಲಿನ ಆರೋಪಗಳ ವಿಷಯಗಳ ಬಗ್ಗೆ ವಿಚಾರಣೆಯನ್ನು ಮುಂದುವರಿಸತಕ್ಕದ್ದು ಮತ್ತು ಮುಕ್ತಾಯಗೊಳಿಸತಕ್ಕದ್ದು ಅಥವಾ ಮುಂದುವರಿಯುವಂತೆ ಮಾಡತಕ್ಕದ್ದು ಮತ್ತು ಮುಕ್ತಾಯಗೊಳಿಸುವಂತೆ ಮಾಡತಕ್ಕದ್ದು ಮತ್ತು ಸರ್ಕಾರಿ ನೌಕರನು ಯಾರ ಅಧಿಕಾರ ವ್ಯಾಪ್ತಿಯೊಳಗೆ ಪ್ರಸ್ತುತ ಕೆಲಸ ಮಾಡುತ್ತಿರುವನೋ ಆ ಶಿಸ್ತು ಪ್ರಾಧಿಕಾರಿಗೆ ವ್ಯವಹರಣೆಗಳ ಸಂಪೂರ್ಣ ದಾಖಲೆಯನ್ನು ಕಳಿಸತಕ್ಕದ್ದು ಮತ್ತು ಆ ತರುವಾಯ ಆ ಶಿಸ್ತು ಪ್ರಾಧಿಕಾರಿಯು ದಾಖಲೆಯಲ್ಲಿನ ಸಾಕ್ಷ್ಯದ ಆಧಾರದ ಮೇಲೆ ಅಥವಾ ನ್ಯಾಯದ ಹಿತದೃಷ್ಟಿಯಿಂದ ಸಾಕ್ಷಿದಾರರ ಪೈಕಿ ಯಾರೇ ಸಾಕ್ಷಿದಾರರನ್ನು ಮತ್ತಷ್ಟು ವಿಚಾರಣೆ ಮಾಡುವುದು ಅವಶ್ಯವೆಂದು ಅಭಿಪ್ರಾಯಪಟ್ಟರೆ, ಸಾಕ್ಷಿದಾರನನ್ನು ಪುನಃ ಕರೆಸಬಹುದು, ವಿಚಾರಣೆ ಮಾಡಬಹುದು, ಪಾಟೀ ಸವಾಲು ಮಾಡಬಹುದು ಅಥವಾ ಮರು ವಿಚಾರಣೆ ಮಾಡಬಹುದು ಮತ್ತು ಈ ನಿಯಮಗಳಿಗನುಸಾರವಾಗಿ, ತಾನು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಹೊರಡಿಸಬಹುದು. 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 19 ಎಸ್ಡಿಇ 95, ದಿನಾಂಕ 7.3.2002ರ ಮೂಲಕ 11.4.2002 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
(23) (i) ವಿಚಾರಣೆಯು ಮುಕ್ತಾಯಗೊಂಡ ತರುವಾಯ, ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದರಲ್ಲಿ,-
(ಎ) ಆರೋಪ ವಿಷಯಗಳ ಪಟ್ಟಿ ಮತ್ತು ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆ;
(ಬಿ) ಪ್ರತಿಯೊಂದು ಆರೋಪ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರನ ಪ್ರತಿರಕ್ಷೆ;
(ಸಿ) ಪ್ರತಿಯೊಂದು ಆರೋಪ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷ್ಯದ ನಿರ್ಧಾರಣೆ;
(ಡಿ) ಪ್ರತಿಯೊಂದು ಆರೋಪ ವಿಷಯದ ಮೇಲೆ ನಿರ್ಣಯ ಮತ್ತು ಆ ಬಗೆಗಿನ ಸಮರ್ಥನೆಗಳು - ಒಳಗೊಂಡಿರತಕ್ಕದ್ದು.
ವಿವರಣೆ.- ವಿಚಾರಣೆಯ ವ್ಯವಹರಣೆಯು, ಯಾವುದೇ ಆರೋಪ ವಿಷಯವು ಮೂಲ ಆರೋಪ ವಿಷಯಗಳಿಗಿಂತ ಭಿನ್ನವಾದುದೆಂಬುದನ್ನು ರುಜುವಾತುಪಡಿಸುತ್ತದೆಂದು ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಟ್ಟರೆ, ಅಂಥ ಆರೋಪ ವಿಷಯಗಳ ಮೇಲೆಯೂ ತನ್ನ ನಿರ್ಣಯಗಳನ್ನು ಅವರು ದಾಖಲಿಸಬಹುದು:
ಪರಂತು, ಅಂಥ ಆರೋಪ ವಿಷಯದ ಮೇಲಣ ನಿರ್ಣಯಗಳನ್ನು ಯಾವ ಸಂಗತಿಗಳ ಮೇಲೆ ಅಂಥ ಆರೋಪದ ವಿಷಯವು ಆಧಾರಿತವಾಗಿದೆಯೋ ಆ ಸಂಗತಿಗಳನ್ನು ಸರ್ಕಾರಿ ನೌಕರನು, ಒಪ್ಪಿಕೊಂಡಿದ್ದ ಹೊರತು ಅಥವಾ ಅಂಥ ಆರೋಪ ವಿಷಯದ ಬಗ್ಗೆ ತನ್ನ ಪ್ರತಿವಾದವನ್ನು ಮಂಡಿಸಲು ಅವನಿಗೆ ಸೂಕ್ತ ಅವಕಾಶವನ್ನು ಕೊಟ್ಟಿದ್ದ ಹೊರತು ದಾಖಲಿಸತಕ್ಕದ್ದಲ್ಲ.
(ii) ವಿಚಾರಣಾ ಪ್ರಾಧಿಕಾರಿಯು, ತಾನೇ ಶಿಸ್ತು ಪ್ರಾಧಿಕಾರಿಯಾಗಿರದಿದ್ದರೆ, ಶಿಸ್ತು ಪ್ರಾಧಿಕಾರಿಗೆ ವಿಚಾರಣೆಯ ದಾಖಲೆಗಳನ್ನು ಕಳುಹಿಸಿಕೊಡತಕ್ಕದ್ದು, ಅವುಗಳಲ್ಲಿ,-
(ಎ) (i)ನೇ ಖಂಡದ ಮೇರೆಗೆ ತಾನು ಸಿದ್ಧಪಡಿಸಿದ ವರದಿ ;
(ಬಿ) ಸರ್ಕಾರಿ ನೌಕರನು ಸಲ್ಲಿಸಿದ ಪ್ರತಿರಕ್ಷೆಯ ಲಿಖಿತ ಹೇಳಿಕೆ ಯಾವುದಾದರೂ ಇದ್ದರೆ, ಅದು;
(ಸಿ) ವಿಚಾರಣಾ ಕಾಲದಲ್ಲಿ ಹಾಜರುಪಡಿಸಿದ ಮೌಖಿಕ ಮತ್ತು ದಸ್ತಾವೇಜು ಸಾಕ್ಷ್ಯ;
(ಡಿ) ವಿಚಾರಣಾ ಕಾಲದಲ್ಲಿ ಮಂಡನಾಧಿಕಾರಿಯು ಅಥವಾ ಸರ್ಕಾರಿ ನೌಕರನು ಅಥವಾ ಅವರಿಬ್ಬರೂ ದಾಖಲ್ಮಾಡಿದ ಲಿಖಿತ ಸಾರಾಂಶ ಯಾವುವಾದರೂ ಇದ್ದರೆ ಅವು; ಮತ್ತು
(ಇ) ವಿಚಾರಣೆಗೆ ಸಂಬಂಧಿಸಿದಂತೆ ಶಿಸ್ತು ಪ್ರಾಧಿಕಾರಿಯು ಮತ್ತು ವಿಚಾರಣಾ ಪ್ರಾಧಿಕಾರಿಯು ಮಾಡಿದ ಆದೇಶಗಳು ಯಾವುವಾದರೂ ಇದ್ದರೆ, ಅವು - ಒಳಗೊಂಡಿರತಕ್ಕದ್ದು.
11ಎ. ವಿಚಾರಣಾ ವರದಿಯ ಮೇಲೆ ಕ್ರಮ.- (1) ಶಿಸ್ತು ಪ್ರಾಧಿಕಾರಿಯು, ತಾನೇ ವಿಚಾರಣಾ ಪ್ರಾಧಿಕಾರಿಯಾಗಿಲ್ಲದಿದ್ದರೆ, ತಾನು ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ, ಇನ್ನೂ ಹೆಚ್ಚಿನ ವಿಚಾರಣೆಗಾಗಿ ಮತ್ತು ವರದಿಗಾಗಿ ವಿಚಾರಣಾ ಪ್ರಾಧಿಕಾರಿಗೆ ಪ್ರಕರಣವನ್ನು ವಾಪಸು ಕಳಿಸಬಹುದು ಮತ್ತು ವಿಚಾರಣಾ ಪ್ರಾಧಿಕಾರಿಯು ಆ ತರುವಾಯ ಸಾಧ್ಯವಾದಷ್ಟು ಮಟ್ಟಿಗೆ 11ನೇ ನಿಯಮದ ಉಪಬಂಧಗಳಿಗನುಸಾರವಾಗಿ ಇನ್ನೂ ಹೆಚ್ಚಿನ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳತಕ್ಕದ್ದು.
(2) ಶಿಸ್ತು ಪ್ರಾಧಿಕಾರಿಯು, ಆರೋಪದ ಯಾವುದೇ ವಿಷಯದ ಮೇಲೆ ವಿಚಾರಣಾ ಪ್ರಾಧಿಕಾರಿಯ ನಿರ್ಣಯಗಳನ್ನು ಒಪ್ಪದಿದ್ದರೆ, ಹಾಗೆ ಒಪ್ಪದಿರುವುದಕ್ಕೆ ತನ್ನ ಕಾರಣಗಳನ್ನು ದಾಖಲಿಸತಕ್ಕದ್ದು ಮತ್ತು ದಾಖಲೆಯಲ್ಲಿರುವ ಸಾಕ್ಷ್ಯವು ಆ ಉದ್ದೇಶಕ್ಕಾಗಿ ಸಾಕಷ್ಟಿದ್ದರೆ ಅಂಥ ಆರೋಪದ ಮೇಲೆ ತನ್ನ ನಿರ್ಣಯಗಳನ್ನು ದಾಖಲಿಸತಕ್ಕದ್ದು.
(3) ಶಿಸ್ತು ಪ್ರಾಧಿಕಾರಿಯು ಎಲ್ಲ ಅಥವಾ ಯಾವುದೇ ಆರೋಪ ವಿಷಯಗಳ ಮೇಲಿನ ತನ್ನ ನಿರ್ಣಯಗಳನ್ನು ಗಮನದಲ್ಲಿರಿಸಿಕೊಂಡು 1 [8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಒಂದು ಅಥವಾ ಹೆಚ್ಚು ದಂಡನೆಗಳನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಅಭಿಪ್ರಾಯಪಟ್ಟರೆ, ಅವರು 12ನೇ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಅಂಥ ದಂಡನೆಯನ್ನು ವಿಧಿಸುವ ಆದೇಶವನ್ನು ಮಾಡಬಹುದು:
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 70 ಎಸ್ಎಸ್ಆರ್ 76, ದಿನಾಂಕ 15.1.1977ರ ಮೂಲಕ ಉಪನಿಯಮ (3)ನ್ನು ತಿದ್ದುಪಡಿ ಮಾಡಲಾಗಿದೆ.
ಪರಂತು, ಆಯೋಗದೊಡನೆ ಸಮಾಲೋಚಿಸುವುದು ಅವಶ್ಯವಿರುವಂಥ ಪ್ರತಿಯೊಂದು ಪ್ರಕರಣದಲ್ಲಿ, ಶಿಸ್ತು ಪ್ರಾಧಿಕಾರಿಯು ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಪ್ರಸ್ತಾವಿಸಿದ ದಂಡನೆಗಳ ಮೇಲೆ ಆಯೋಗದ ಸಲಹೆಗಾಗಿ ವಿಚಾರಣಾ ದಾಖಲೆಯನ್ನು ಆಯೋಗಕ್ಕೆ ಕಳಿಸಿಕೊಡತಕ್ಕದ್ದು ಮತ್ತು ಸರ್ಕಾರಿ ನೌಕರನ ಮೇಲೆ ಯಾವುದೇ ದಂಡನೆಯನ್ನು ವಿಧಿಸುವ ಯಾವುದೇ ಆದೇಶವನ್ನು ಮಾಡುವುದಕ್ಕೆ ಮುಂಚೆ ಅಂಥ ಸಲಹೆಯನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
(4) 1 [X X X] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 70, ಎಸ್ಎಸ್ಆರ್ 76, ದಿನಾಂಕ 15.1.77ರ ಮೂಲಕ ಉಪ ನಿಯಮ (4) ನ್ನು ಬಿಟ್ಟುಬಿಡಲಾಗಿದೆ, (ಕೆಜಿಡಿ 20.1.77, ಜಿಎಸ್ಎಸ್ಆರ್ 29)