ಅನುಸೂಚಿ – Iv
ಹೆಲ್ಪರ್, ಲಿಫ್ಟ್ ಅಟೆಂಡರ್, ಪಂಪ್ ಹೌಸ್ ಆಪರೇಟರ್, ವೈರ್ಲೆಸ್ ಮೆಕಾನಿಕ್
-
ಅಧಿಸೂಚನೆ ಸಂ. ಡಿಪಿಎಆರ್ 19 ಎಸ್ಡಿಇ 91, ದಿನಾಂಕ 16.06.1993ರ ಮೂಲಕ 8.7.1993 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.
-
ಅಧಿಸೂಚನೆ ಸಂ. ಡಿಪಿಎಆರ್ 10 ಎಸ್ಡಿಇ 2000, ದಿನಾಂಕ 31.01.2001ರ ಮೂಲಕ ಬಿಟ್ಟುಬಿಡಲಾಗಿದೆ. (ಕೆಜಿಡಿ 5.2.2001)
-
ಅಧಿಸೂಚನೆ ಸಂ. ಡಿಪಿಎಆರ್ 24 ಎಸ್ಡಿಇ 90, ದಿನಾಂಕ 23.09.1993ರ ಮೂಲಕ ಸೇರಿಸಲಾಗಿದೆ. (ಕೆಜಿಡಿ 14.10.1993)
-
ಅಧಿಸೂಚನೆ ಸಂ. ಡಿಪಿಎಆರ್ 4 ಎಸ್ಡಿಇ 2004, ದಿನಾಂಕ 20.05.2004ರ ಮೂಲಕ ಸೇರಿಸಲಾಗಿದೆ.
ಪ್ರಮುಖ ತಿದ್ದುಪಡಿಗಳು
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 1. | ಜಿಎಡಿ 28 ಓಎಸ್ಆರ್ 59 | 7.2.1962 |
| 2. | ಜಿಎಡಿ 41 ಎಸ್ಎಸ್ಆರ್ 69 (ಜಿಎಸ್ಆರ್ 87 ದಿನಾಂಕ 26.3.70) | 27.2.1970 |
| 3. | ಜಿಎಡಿ 12 ಎಸ್ಎಸ್ಆರ್ 73 (ಜಿಎಸ್ಆರ್ 186 ದಿನಾಂಕ 2.8.73) | 11.7.1973 |
| 4. | ಜಿಎಡಿ 28 ಎಸ್ಎಸ್ಆರ್ 69 (ಜಿಎಸ್ಆರ್ 14) | 12.12.1973 |
| 5. | ಜಿಎಡಿ 50 ಎಸ್ಎಸ್ಆರ್ 74 (ಜಿಎಸ್ಆರ್ 265 ದಿನಾಂಕ 18.9.1975) | 2.9.1975 |
| 6. | ಜಿಎಡಿ 12 ಎಸ್ಎಸ್ಆರ್ 75 (ಜಿಎಸ್ಆರ್ 152 ದಿನಾಂಕ 12.6.75) | 27.7.1975 |
| 7. | ಸಿಆಸುಇ 34 ಎಸ್ಎಸ್ಆರ್ 75 (ಜಿಎಸ್ಆರ್ 198 ದಿನಾಂಕ 22.7.76) | 7.7.1976 |
| 8. | ಸಿಆಸುಇ 70 ಎಸ್ಎಸ್ಆರ್ 76 (ಜಿಎಸ್ಆರ್ 29 ದಿನಾಂಕ 20.1.77) | 15.1.1977 |
| 9. | ಸಿಆಸುಇ 70 ಎಸ್ಎಸ್ಆರ್ 79 (ಜಿಎಸ್ಆರ್ 149 ದಿನಾಂಕ 25.6.81) | 15.6.1981 |
| 10. | ಸಿಆಸುಇ 25 ಎಸ್ಡಿಇ 82 | 23.8.1983 |
| 11. | ಸಿಆಸುಇ 11 ಎಸ್ಡಿಇ 83 | 23.2.1984 |
| 12. | ಸಿಆಸುಇ 39 ಎಸ್ಡಿಇ 81 | 27.6.1984 |
| 13. | ಸಿಆಸುಇ 41 ಎಸ್ಡಿಇ 84 | 17.6.1985 |
| 14. | ಸಿಆಸುಇ 2 ಎಸ್ಡಿಇ 85 | 30.7.1985 |
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 15. | ಸಿಆಸುಇ 5 ಎಸ್ಡಿಇ 86 | 7.5.1986 |
| 16. | ಸಿಆಸುಇ 4 ಸೇಇವಿ 87 | 5.5.1987 |
| 17. | ಸಿಆಸುಇ 14 ಸೇಇವಿ 87 | 5.12.1987 |
| 18. | ಸಿಆಸುಇ 29 ಸೇಇವಿ 87 | 22.1.1988 |
| 19. | ಸಿಆಸುಇ 33 ಸೇಇವಿ 88 | 10.2.1989 |
| 20. | ಡಿಪಿಎಆರ್ 16 ಎಸ್ಡಿಇ 90 | 23.10.1990 |
| 21. | ಡಿಪಿಎಆರ್ 5 ಎಸ್ಡಿಇ 92 | 13.5.1993 |
| 22. | ಡಿಪಿಎಆರ್ 11 ಎಸ್ಡಿಇ 93 | 03.1.1994 |
| 23. | ಡಿಪಿಎಆರ್ 5 ಎಸ್ಡಿಇ 94 | 13.7.1994 |
| 24. | ಡಿಪಿಎಆರ್ 8 ಎಸ್ಡಿಇ 93 | 22.12.1995 |
| 25. | ಡಿಪಿಎಆರ್ 15 ಎಸ್ಡಿಇ 95 | 22.3.1995 |
| 26. | ಡಿಪಿಎಆರ್ 9 ಎಸ್ಡಿಇ 92 | 21.1.1997 |
| 27. | ಡಿಪಿಎಆರ್ 15 ಎಸ್ಡಿಇ 96 | 20.6.1997 |
| 28. | ಡಿಪಿಎಆರ್ 2 ಎಸ್ಡಿಇ 99 | 17.6.1999 |
| 29. | ಡಿಪಿಎಆರ್ 13 ಎಸ್ಡಿಇ 97 | 1.9.1998 |
| 30. | ಡಿಪಿಎಆರ್ 4 ಎಸ್ಡಿಇ 98 | 30.11.1999 |
| 31. | ಡಿಪಿಎಆರ್ 7 ಎಸ್ಡಿಇ 99 | 14.3.2000 |
| 32. | ಡಿಪಿಎಆರ್ 3 ಎಸ್ಡಿಇ 2000 | 30.5.2000 |
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 33. | ಡಿಪಿಎಆರ್ 37 ಎಸ್ಡಿಇ 2001 | 26.12.2001 |
| 34. | ಡಿಪಿಎಆರ್ 26 ಎಸ್ಡಿಇ 2001 | 7.12.2001 |
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 35. | ಡಿಪಿಎಆರ್ 19 ಎಸ್ಡಿಇ 95 | 7.3.2002 |
| 36. | ಡಿಪಿಎಆರ್ 4 ಎಸ್ಡಿಇ 2000 | 15.4.2002 |
| 37. | ಡಿಪಿಎಆರ್ 11 ಎಸ್ಡಿಇ 2002 (I) | 19.6.2002 |
| 38. | ಡಿಪಿಎಆರ್ 11 ಎಸ್ಡಿಇ 2002 (II) | 9.8.2002 |
| 39. | ಡಿಪಿಎಆರ್ 13 ಎಸ್ಡಿಇ 2002 | 29.7.2002 |
| 40. | ಡಿಪಿಎಆರ್ 29 ಎಸ್ಡಿಇ 2002 | 4.2.2003 |
| 41. | ಡಿಪಿಎಆರ್ 1 ಎಸ್ಡಿಇ 2003 | 16.8.2003 |
| 42. | ಡಿಪಿಎಆರ್ 9 ಎಸ್ಡಿಇ 2003 | 13.11.2003 |
| 43. | ಡಿಪಿಎಆರ್ 21 ಎಸ್ಡಿಇ 2003 (I) | 1.1.2004 |
| 44. | ಡಿಪಿಎಆರ್ 21 ಎಸ್ಡಿಇ 2003 (II) | 20.2.2004 |
| 45. | ಡಿಪಿಎಆರ್ 4 ಎಸ್ಡಿಇ 2004 | 20.05.2004 |
| 46. | ಡಿಪಿಎಆರ್ 6 ಎಸ್ಡಿಇ 2004 | 16.07.2004 |
| 47. | ಡಿಪಿಎಆರ್ 4 ಎಸ್ಡಿಇ 2005 | 4.4.2005 |
| 48. | ಡಿಪಿಎಆರ್ 12 ಎಸ್ಡಿಇ 2004 | 3.6.2005 |
| 49. | ಡಿಪಿಎಆರ್ 7 ಎಸ್ಡಿಇ 2005 | 1.8.2005 |
| 50. | ಡಿಪಿಎಆರ್ 3 ಎಸ್ಡಿಇ 2004 | 11.11.2005 |
| 51. | ಡಿಪಿಎಆರ್ 16 ಎಸ್ಡಿಇ 2004 | 17.11.2005 |
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 52. | ಡಿಪಿಎಆರ್ 6 ಎಸ್ಡಿಇ 2005 | 25.11.2005 |
| 53. | ಡಿಪಿಎಆರ್ 3 ಎಸ್ಡಿಇ 2004 | 31.12.2005 |
| 54. | ಡಿಪಿಎಆರ್ 12 ಎಸ್ಡಿಇ 2005 | 24.4.2006 |
| 55. | ಡಿಪಿಎಆರ್ 1 ಎಸ್ಡಿಇ 2006 | 28.7.2006 |
| 56. | ಡಿಪಿಎಆರ್ 5 ಎಸ್ಡಿಇ 2006 | 16.11.2006 |
| 57. | ಡಿಪಿಎಆರ್ 10 ಎಸ್ಡಿಇ 2006 | 25.01.2007 |
| 58. | ಡಿಪಿಎಆರ್ 13 ಎಸ್ಡಿಇ 2006 | 3.4.2007 |
| 59. | ಡಿಪಿಎಆರ್ 12 ಎಸ್ಡಿಇ 2006 | 4.5.2007 |
| 60. | ಡಿಪಿಎಆರ್ 17 ಎಸ್ಡಿಇ 2007 | 26.12.2007 |
| 61. | ಡಿಪಿಎಆರ್ 15 ಎಸ್ಡಿಇ 2007 | 28.01.2008 |
| 62. | ಡಿಪಿಎಆರ್ 12 ಎಸ್ಡಿಇ 2007 | 29.1.2008 |
| 63. | ಡಿಪಿಎಆರ್ 13 ಎಸ್ಡಿಇ 2007 | 12.5.2008 |
| 64. | ಡಿಪಿಎಆರ್ 21 ಎಸ್ಡಿಇ 2007 | 21.5.2008 |
| 65. | ಡಿಪಿಎಆರ್ 4 ಎಸ್ಡಿಇ 2008 | 18.7.2008 |
| 66. | ಡಿಪಿಎಆರ್ 18 ಎಸ್ಡಿಇ 2008 | 4.8.2008 |
| 67. | ಡಿಪಿಎಆರ್ 25 ಎಸ್ಡಿಇ 2007 | 26.8.2008 |
| 68. | ಡಿಪಿಎಆರ್ 9 ಎಸ್ಡಿಇ 2009 | 21.3.2009 |
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 69. | ಡಿಪಿಎಆರ್ 20 ಎಸ್ಡಿಇ 2009 | 30.7.2009 |
| ಅಧಿಸೂಚನೆ ಸಂಖ್ಯೆ | ದಿನಾಂಕ | |
| 70. | ಡಿಪಿಎಆರ್ 43 ಎಸ್ಡಿಇ 2008 | 27.8.2009 |
| 71. | ಡಿಪಿಎಆರ್ 7 ಎಸ್ಡಿಇ 2008 | 10.9.2009 |
| 72. | ಡಿಪಿಎಆರ್ 23 ಎಸ್ಡಿಇ 2009 | 2.12.2009 |
ಸಾಮಾನ್ಯ ಆಡಳಿತ ಸಚಿವಾಲಯ
ಅಧಿಸೂಚನೆ ಸಂಖ್ಯೆ ಜಿಎಡಿ 28, ಓಎಸ್ಆರ್ 59, ಬೆಂಗಳೂರು ದಿನಾಂಕ 7ನೇ ಫೆಬ್ರವರಿ, 1962
ಭಾರತದ ಸಂವಿಧಾನದ 309ನೇ ಅನುಚ್ಛೇದದ ಪರಂತುಕದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ರಾಜ್ಯಪಾಲರು, ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ಕ್ಕೆ ಈ ಮುಂದಿನಂತೆ ಮತ್ತಷ್ಟು ತಿದ್ದುಪಡಿಗಳನ್ನು ಮಾಡುತ್ತಾರೆ, ಎಂದರೆ:-
ಸದರಿ ನಿಯಮಗಳಲ್ಲಿ,-
(1) 9ನೇ ನಿಯಮದ (ಡಿ) ಖಂಡಕ್ಕೆ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಪರಂತು, ರಾಜ್ಯ ಸಿವಿಲ್ ಸೇವೆಯ IVನೇ ದರ್ಜೆಯ ನೌಕರನಿಗೆ, ಕಚೇರಿಯ ಲಿಪಿಕ ಸಿಬ್ಬಂದಿ ವರ್ಗದ ಪ್ರಭಾರ ಹೊಂದಿರುವ ಗೆಜೆಟೆಡ್ ಅಧಿಕಾರಿಗಳು ಮತ್ತು ಅಂಥ ಸಿಬ್ಬಂದಿ ವರ್ಗದ ಪ್ರಭಾರ ಹೊಂದಿರುವ ಇತರ ನಾನ್ಗೆಜೆಟೆಡ್ ಅಧಿಕಾರಿಗಳೂ ಸಹ, 8ನೇ ನಿಯಮದ (i)ನೇ ಖಂಡದಲ್ಲಿ ನಿರ್ದಿಷ್ಟಪಡಿಸಿರುವ ಜುಲ್ಮಾನೆ ದಂಡನೆಯನ್ನು ವಿಧಿಸಬಹುದು".
(2) 18ನೇ ನಿಯಮದ (3)ನೇ ಉಪನಿಯಮಕ್ಕೆ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತೂ ಪರಂತು, 9ನೇ ನಿಯಮದ (2)ನೇ ಉಪನಿಯಮದ (ಡಿ) ಖಂಡದ ಪರಂತುಕದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಹೊರಡಿಸಿದ ಆದೇಶದ ವಿರುದ್ಧ ರಾಜ್ಯ ಸಿವಿಲ್ ಸೇವೆಯ IVನೇ ದರ್ಜೆಯ ಸರ್ಕಾರಿ ನೌಕರನು, ದಂಡನೆಯನ್ನು ವಿಧಿಸಿದ ಪ್ರಾಧಿಕಾರಿಯ ನಿಕಟ ವರಿಷ್ಠ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು".
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಪಿ. ವೆಂಕಟರಾಮನ್
ಸರ್ಕಾರದ ಉಪಕಾರ್ಯದರ್ಶಿ,
ಸಾಮಾನ್ಯ ಆಡಳಿತ ಇಲಾಖೆ
(ಸಂಘಟನೆ ಮತ್ತು ವಿಧಾನಗಳು).
ಕೇಂದ್ರ ಅಧಿನಿಯಮಗಳ ಮತ್ತು ರಾಜ್ಯ ಅಧಿನಿಯಮಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನ ಬದ್ಧ ನಿಯಮಗಳು ಮತ್ತು ಸಂವಿಧಾನದ ಮೇರೆಗೆ ರಾಜ್ಯಪಾಲರು ರಚಿಸಿದ ನಿಯಮಗಳು
ಸಾಮಾನ್ಯ ಆಡಳಿತ ಸಚಿವಾಲಯ
ಅಧಿಸೂಚನೆ
ಬೆಂಗಳೂರು, ದಿನಾಂಕ 27ನೇ ಫೆಬ್ರವರಿ 1970
ಜಿ.ಎಸ್.ಆರ್. 87:- ಭಾರತದ ಸಂವಿಧಾನದ 309ನೇ ಅನುಚ್ಛೇದದ ಪರಂತುಕದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ರಾಜ್ಯಪಾಲರು, ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ಕ್ಕೆ ಮತ್ತಷ್ಟು ತಿದ್ದುಪಡಿಗಳನ್ನು ಮಾಡಲು ಈ ಮುಂದಿನಂತೆ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) (ಎರಡನೇ ತಿದ್ದುಪಡಿ) ನಿಯಮಗಳು, 1970 ಎಂದು ಕರೆಯತಕ್ಕದ್ದು.
(2) ಅವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- 8ನೇ ನಿಯಮದ ತಿದ್ದುಪಡಿ.- ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 8ನೇ ನಿಯಮದ (viii)ನೇ ಖಂಡದ ನಂತರ ಈ ಮುಂದಿನ ಪರಂತುಕವನ್ನು ಮತ್ತು ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:-
"ಪರಂತು, ಶಿಸ್ತು ಪ್ರಾಧಿಕಾರಿಯ ಆದೇಶದಲ್ಲಿ ನಮೂದಿಸಬೇಕಾದ ತದ್ವಿರುದ್ಧವಾದ ವಿಶೇಷ ಮತ್ತು ಸಾಕಷ್ಟು ಕಾರಣಗಳು ಇಲ್ಲದಿರುವಾಗ, (vi) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತುಪಡಿಸಿ, ರುಜುವಾತಾದ ಭ್ರಷ್ಟಾಚಾರದ ಆರೋಪಕ್ಕಾಗಿ ಯಾವುದೇ ದಂಡನೆಯನ್ನು ವಿಧಿಸತಕ್ಕದ್ದಲ್ಲ.
ವಿವರಣೆ.- ಈ ಪರಂತುಕದ ಉದ್ದೇಶಗಳಿಗಾಗಿ "ಭ್ರಷ್ಟಾಚಾರ" ಪದಾವಳಿಯು ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ, 1947ರ (ಕೇಂದ್ರ ಅಧಿನಿಯಮ 1947ರ 2) 5ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ "ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಆಪರಾಧಿಕ ದುರ್ನಡತೆ" ಪದಾವಳಿಗೆ
ಕೊಟ್ಟಿರುವ ಅರ್ಥವನ್ನು ಅಥವಾ ಭಾರತ ದಂಡ ಸಂಹಿತೆಯಲ್ಲಿ ಅನುಕ್ರಮವಾಗಿ 161ನೇ ಮತ್ತು 165ನೇ ಪ್ರಕರಣಗಳಲ್ಲಿ "ಅಧಿಕೃತ ಕಾರ್ಯದ ಸಂಬಂಧದಲ್ಲಿ ನ್ಯಾಯಬದ್ಧ ಪರಿಶ್ರಮಧನದ ಹೊರತು ಇತರ ಪ್ರತಿಫಲವನ್ನು ತೆಗೆದುಕೊಳ್ಳುವುದು" ಮತ್ತು "ಪ್ರತಿಫಲ ಕೊಡದೆ ಬೆಲೆಯುಳ್ಳ ವಸ್ತುವನ್ನು ಪಡೆಯುವುದು" ಎಂಬ ಪದಾವಳಿಗಳಿಗೆ ಕೊಟ್ಟಿರುವ ಅರ್ಥವನ್ನೇ ಹೊಂದಿರತಕ್ಕದ್ದು.''
(ಜಿಎಡಿ 41 ಎಸ್ ಎಸ್ ಆರ್ 69)
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎನ್.ಪಿ. ಜೋಶಿ, ಅಧೀನ ಕಾರ್ಯದರ್ಶಿ, ಸಾಮಾನ್ಯ ಆಡಳಿತ ಇಲಾಖೆ.
ಕೇಂದ್ರ ಅಧಿನಿಯಮಗಳ ಮತ್ತು ರಾಜ್ಯ ಅಧಿನಿಯಮಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನ ಬದ್ಧ ನಿಯಮಗಳು ಮತ್ತು ಸಂವಿಧಾನದ ಮೇರೆಗೆ ರಾಜ್ಯಪಾಲರು ರಚಿಸಿದ ನಿಯಮಗಳು
ಸಾಮಾನ್ಯ ಆಡಳಿತ ಸಚಿವಾಲಯ ಅಧಿಸೂಚನೆ, ಬೆಂಗಳೂರು ದಿನಾಂಕ 11ನೇ ಜುಲೈ 1973
ಜಿ.ಎಸ್.ಆರ್. 186.- ಮೈಸೂರು ರಾಜ್ಯಪಾಲರು, ಭಾರತದ ಸಂವಿಧಾನದ 309ನೇ ಅನುಚ್ಛೇದದ ಪರಂತುಕದಿಂದ ಪ್ರದತ್ತವಾದ ಅಧಿಕಾರಗಳನ್ನು ಮತ್ತು ಈ ಸಂಬಂಧವಾಗಿ ಅವರಿಗೆ ಅಧಿಕಾರ ಕೊಡುವ ಎಲ್ಲ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ಕ್ಕೆ ಮತ್ತಷ್ಟು ತಿದ್ದುಪಡಿಗಳನ್ನು ಮಾಡಲು ಈ ಮುಂದಿನ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) (ಎರಡನೇ ತಿದ್ದುಪಡಿ) ನಿಯಮಗಳು, 1973 ಎಂದು ಕರೆಯತಕ್ಕದ್ದು.
(2) ಅವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- 9ನೇ ನಿಯಮದ ತಿದ್ದುಪಡಿ.- ಮೈಸೂರು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) 9ನೇ ನಿಯಮದ (2)ನೇ ಉಪನಿಯಮದ (ಡಿ) ಖಂಡದ ನಂತರ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
‘‘(ಇ) ಯಾವುದೇ ಇಲಾಖೆಗೆ ಸೇರಿದ (ಮೈಸೂರು ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ) ರಾಜ್ಯ ಸಿವಿಲ್ ಸೇವೆಗಳ ದರ್ಜೆ IIIರ ಮತ್ತು IVರ ಯಾರೇ ನೌಕರನಿಗೆ, ಅಂಥ ನೌಕರನು ಯಾವ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವನೋ ಆ ಜಿಲ್ಲೆಯ ಜಿಲ್ಲಾಧಿಕಾರಿಯವರು 8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಬಹುದು ಮತ್ತು ಈ ಖಂಡದ ಮೇರೆಗೆ ಜಿಲ್ಲಾಧಿಕಾರಿಯವರು ಮಾಡಿದ ಆದೇಶದ ವಿರುದ್ಧ ಆ ನೌಕರನು ತಾನು ಯಾವ ಇಲಾಖೆಗೆ ಸೇರಿರುವನೋ ಆ ಇಲಾಖೆಯ ಮುಖ್ಯಸ್ಥರಿಗೆ ಅಪೀಲು ಮಾಡಿಕೊಳ್ಳಲು ಅವಕಾಶವಿರತಕ್ಕದ್ದು.''
- IIನೇ ಅನುಸೂಚಿಯ ತಿದ್ದುಪಡಿ.- ಮೇಲೆ ಹೇಳಿರುವ ನಿಯಮದ IIನೇ ಅನುಸೂಚಿಯಲ್ಲಿ,-
(1) ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ನಮೂದುಗಳಲ್ಲಿ, "ಪ್ರೌಢ ಶಾಲೆಗಳು ಮತ್ತು ತರಬೇತಿ ಕಾಲೇಜುಗಳು ಮುಂತಾದವುಗಳಲ್ಲಿ ಬೋಧಕ ಸಿಬ್ಬಂದಿ.........." ನಮೂದುಗಳ ಮತ್ತು ಶೀರ್ಷಿಕೆಯ ನಂತರ, ಈ ಮುಂದಿನ ಹುದ್ದೆಗಳ ವರ್ಗವನ್ನು ಮತ್ತು ನಮೂದುಗಳನ್ನು ಸೇರಿಸತಕ್ಕದ್ದು, ಎಂದರೆ:-
| ``ಸಾಮಾಜಿಕ ಶಿಕ್ಷಣ ಸಂಘಟಕರು | ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು | ಕ್ಷೇತ್ರಾಭಿವೃದ್ಧಿ ಅಧಿಕಾರಿ | (ii) | ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ |
| ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು | (iii) ಮತ್ತು (iv) | ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, | ||
| ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು | (vi) ರಿಂದ (viii) | ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ'' |
(2) ಕೃಷಿ ಇಲಾಖೆಗೆ ಸಂಬಂಧಿಸಿದ ನಮೂದುಗಳಲ್ಲಿ "ಹತ್ತಿ ಅಧೀಕ್ಷಕರ ಕಚೇರಿ, ಸುಧಾರಿತ ಹತ್ತಿ ಬೀಜಗಳ ಅಭಿವೃದ್ಧಿ ಮತ್ತು ವಿತರಣೆ ಯೋಜನೆ, ರಾಯಚೂರು ಜಿಲ್ಲೆ'' ಶೀರ್ಷಿಕೆಯ ಕೆಳಗೆ ಬರುವ ನಮೂದುಗಳ ತರುವಾಯ, ಈ ಕೆಳಗಿನ ಶೀರ್ಷಿಕೆಯನ್ನು, ಹುದ್ದೆಗಳ ವರ್ಗವನ್ನು ಮತ್ತು ನಮೂದುಗಳನ್ನು ಸೇರಿಸತಕ್ಕದ್ದು, ಎಂದರೆ:-
"ವಿಭಾಗಗಳ ಪ್ರಭಾರದಲ್ಲಿರುವ ಕೃಷಿ ಜಂಟಿ ನಿರ್ದೇಶಕರ ಕಚೇರಿ".
| ``ಗ್ರಾಮಸೇವಕ | ವಿಭಾಗದ ಪ್ರಭಾರದಲ್ಲಿರುವ ಕೃಷಿ ಜಂಟಿ ನಿರ್ದೇಶಕರು | (1) ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು (ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಗ್ರಾಮ ಸೇವಕರಿಗೆ ಸಂಬಂಧಪಟ್ಟಂತೆ) | (ii) ರಿಂದ (iv) | ಕೃಷಿ ಉಪ ನಿರ್ದೇಶಕರು |
| (2) ಕೃಷಿ ಸಹಾಯಕ ನಿರ್ದೇಶಕರು (ಕ್ಷೇತ್ರಗಳನ್ನು ಹೊರತುಪಡಿಸಿ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಸೇವಕರಿಗೆ ಸಂಬಂಧಪಟ್ಟಂತೆ) | (ii) ರಿಂದ (iv) | ಕೃಷಿ ಉಪ ನಿರ್ದೇಶಕರು | ||
| ವಿಭಾಗದ ಪ್ರಭಾರದಲ್ಲಿರುವ ಕೃಷಿ ಜಂಟಿ ನಿರ್ದೇಶಕರು | (v) ರಿಂದ (viii) | ಕೃಷಿ ನಿರ್ದೇಶಕರು'' |
(3) ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ನಮೂದುಗಳಲ್ಲಿ,-
(i) "ಸಮಾಜ ಶಿಕ್ಷಣ ಸಂಘಟಕ (ಪುರುಷ ಮತ್ತು ಮಹಿಳೆ)" ಹುದ್ದೆಗಳ ವರ್ಗವನ್ನು ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು;
(ii) ಗ್ರಾಮ ಸೇವಕರು ಮತ್ತು ಗ್ರಾಮ ಸೇವಿಕೆಯರ ಹುದ್ದೆಗಳ ವರ್ಗಕ್ಕೆ ಸಂಬಂಧಿಸಿದ ನಮೂದುಗಳಲ್ಲಿ 1ನೇ ಅಂಕಣದಲ್ಲಿ ಇರುವ "ಗ್ರಾಮ ಸೇವಕರು ಮತ್ತು" ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.
[ಜಿಎಡಿ 12 ಎಸ್ಎಸ್ಆರ್ 73]
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎಂ. ವಾಸುದೇವನ್,
ಸರ್ಕಾರದ ಅಧೀನ ಕಾರ್ಯದರ್ಶಿ
ಸಾಮಾನ್ಯ ಆಡಳಿತ ಇಲಾಖೆ,
(ಸೇವಾ ನಿಯಮಗಳು).
ಕೇಂದ್ರ ಅಧಿನಿಯಮಗಳ ಮತ್ತು ರಾಜ್ಯ ಅಧಿನಿಯಮಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನ ಬದ್ಧ ನಿಯಮಗಳು ಮತ್ತು ಸಂವಿಧಾನದ ಮೇರೆಗೆ ರಾಜ್ಯಪಾಲರು ರಚಿಸಿದ ನಿಯಮಗಳು ಸಾಮಾನ್ಯ ಆಡಳಿತ ಸಚಿವಾಲಯ
ಕರ್ನಾಟಕ ಸರ್ಕಾರ
ಅಧಿಸೂಚನೆ
ಬೆಂಗಳೂರು, ದಿನಾಂಕ 12ನೇ ಡಿಸೆಂಬರ್, 1973
ಜಿ.ಎಸ್.ಆರ್. 14.- ಭಾರತ ಸಂವಿಧಾನದ 309ನೇ ಅನುಚ್ಛೇದದ ಪರಂತುಕದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳನ್ನು ಈ ಮೂಲಕ ರಚಿಸುತ್ತಾರೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) (ಮೂರನೇ ತಿದ್ದುಪಡಿ) ನಿಯಮಗಳು, 1973 ಎಂದು ಕರೆಯತಕ್ಕದ್ದು.
(2) ಅವು ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು.
-
2ನೇ ನಿಯಮದ ತಿದ್ದುಪಡಿ.- ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಮೂಲ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) 2ನೇ ನಿಯಮದಲ್ಲಿ (ಇ) ಖಂಡದಲ್ಲಿ ಇರುವ "ಮಂತ್ರಿ ಮಂಡಲದ ಸಲಹೆಯ ಮೇಲೆ ಕಾರ್ಯನಿರ್ವಹಿಸುತ್ತಿರುವ" ಪದಗಳನ್ನು ಬಿಟ್ಟುಬಿಡತಕ್ಕದ್ದು.
-
8ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 8ನೇ ನಿಯಮದಲ್ಲಿ,-
(1) ‘‘ಈ ಮುಂದಿನ ದಂಡನೆಗಳಲ್ಲಿ'' ಪದಗಳ ಬದಲಾಗಿ ‘‘ಈ ಮುಂದಿನ ದಂಡನೆಗಳಲ್ಲಿ ಒಂದು ಅಥವಾ ಹೆಚ್ಚು ದಂಡನೆಗಳನ್ನು'' ಎಂಬ ಪದಗಳನ್ನು ಸೇರಿಸತಕ್ಕದ್ದು.
(2) (iii)ನೇ ಖಂಡದ ಬದಲಾಗಿ, ಈ ಮುಂದಿನ ಖಂಡಗಳನ್ನು ಸೇರಿಸತಕ್ಕದ್ದು, ಎಂದರೆ:-
(iii) "ವೇತನ ಬಡ್ತಿಗಳನ್ನು ತಡೆಹಿಡಿಯುವುದು;
(iiiಎ) ಬಡ್ತಿಯನ್ನು ತಡೆಹಿಡಿಯುವುದು;''
(3) (iv)ನೇ ಖಂಡದ ತರುವಾಯ, ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-
"(ivಎ) ನಿರ್ದಿಷ್ಟ ಅವಧಿಗೆ ಕಾಲಿಕ ವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸಿದ ಅವಧಿಯಲ್ಲಿ, ಇಳಿಸಿದ ಆ ವೇತನಕ್ಕೆ ಸಂಬಂಧಿಸಿದಂತೆ, ಸರ್ಕಾರಿ ನೌಕರನು ವೇತನ ಬಡ್ತಿಗಳನ್ನು ಗಳಿಸುವನೇ, ಇಲ್ಲವೇ ಮತ್ತು ಅಂಥ ಅವಧಿಯು ಸಮಾಪ್ತವಾದ ಮೇಲೆ ಆ ಇಳಿಕೆಯು ಅವನ ವೇತನದ ಮುಂದಿನ ವೇತನ ಬಡ್ತಿಗಳನ್ನು ಮುಂದಕ್ಕೆ ಹಾಕುವ ಪರಿಣಾಮ ಹೊಂದಿರುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಹೆಚ್ಚಿನ ನಿರ್ದೇಶನಗಳ ಸಹಿತ ಕೆಳಗಿನ ಹಂತಕ್ಕೆ ಇಳಿಸುವುದು’’.
(4) (v)ನೇ ಖಂಡಕ್ಕೆ ಬದಲಾಗಿ ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಎಂದರೆ.-
"(v) ಕೆಳಗಿನ ಕಾಲಿಕ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಇಳಿಸುವುದು, ಅದು ಅನ್ಯಥಾ ನಿರ್ದೇಶಿಸಿದ ಹೊರತು, ಈ ಮುಂದಿನವುಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ನಿರ್ದೇಶನಗಳ ಸಹಿತ ಅಥವಾ ನಿರ್ದೇಶನಗಳಿಲ್ಲದೆಯೇ ಆ ಸರ್ಕಾರೀ ನೌಕರನನ್ನು ಯಾವ ಕಾಲಿಕ ವೇತನ ಶ್ರೇಣಿಯಿಂದ, ಹುದ್ದೆಯ ಶ್ರೇಣಿಯಿಂದ, ಹುದ್ದೆಯಿಂದ ಅಥವಾ ಸೇವೆಯಿಂದ ಇಳಿಸಲಾಯಿತೋ ಅದಕ್ಕೆ ಅವನು ಬಡ್ತಿ ಹೊಂದಲು ಪ್ರತಿಷೇಧ ಆಗತಕ್ಕದ್ದು,-
(ಎ) ಜ್ಯೇಷ್ಠತೆ ಮತ್ತು ಸರ್ಕಾರಿ ನೌಕರನನ್ನು ಯಾವ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಇಳಿಸಲಾಯಿತೋ ಅದರ ವೇತನ.
(ಬಿ) ಸರ್ಕಾರಿ ನೌಕರನನ್ನು ಯಾವ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಇಳಿಸಲಾಯಿತೋ ಅದಕ್ಕೆ ಸಂಬಂಧಿಸಿದಂತೆ ಪುನಃ ಸ್ಥಾಪನೆಯ ಷರತ್ತುಗಳು ಮತ್ತು ಆ ವೇತನ ಶ್ರೇಣಿಗೆ, ಹುದ್ದೆಯ ಶ್ರೇಣಿಗೆ, ಹುದ್ದೆಗೆ ಅಥವಾ ಸೇವೆಗೆ ಅಂಥ ಪುನಃ ಸ್ಥಾಪನೆಯಾದ ಮೇಲೆ ಅವನ ಜೇಷ್ಠತೆ ಮತ್ತು ವೇತನ".
(5) (viii)ನೇ ಖಂಡದ ಪರಂತುಕದ ನಿಕಟ ತರುವಾಯ ಬರುವ ವಿವರಣೆಗೆ ವಿವರಣೆ-1 ಎಂದು ಅಂಕಿಯನ್ನು ಮತ್ತು ಹಾಗೆ ಅಂಕಿ ನೀಡಲಾದ ವಿವರಣೆ-1ರ ನಿಕಟ ತರುವಾಯ ಬರುವ ವಿವರಣೆಗೆ ವಿವರಣೆ-2 ಎಂದು ಅಂಕಿ ನೀಡತಕ್ಕದ್ದು ಮತ್ತು ಹಾಗೆ ಅಂಕಿ ನೀಡಲಾದ ವಿವರಣೆ 2ರ (vii)ನೇ ಖಂಡದಲ್ಲಿ (ಬಿ) ಬಾಬಿಗೆ ಬದಲಾಗಿ ಈ ಮುಂದಿನ ಬಾಬುಗಳನ್ನು ಸೇರಿಸತಕ್ಕದ್ದು, ಎಂದರೆ:-
"(ಬಿ) ಪ್ರೋಬೇಷನ್ನ ಮೇಲೆ ನೇಮಕಗೊಂಡ ಸರ್ಕಾರಿ ನೌಕರನನ್ನು ಅವನ ಪ್ರೋಬೇಷನ್ ಅವಧಿಯಲ್ಲಿ ಅಥವಾ ಅದರ ಕೊನೆಯಲ್ಲಿ, ಅವನ ನೇಮಕದ ನಿಬಂಧನೆಗಳಿಗೆ ಅಥವಾ ಅಂಥ ಪ್ರೋಬೇಷನ್ಗೆ ಅನ್ವಯವಾಗುವ ನಿಯಮಗಳಿಗೆ ಮತ್ತು ಆದೇಶಗಳಿಗೆ ಅನುಸಾರವಾಗಿ; ಅಥವಾ
(ಸಿ) ಹಂಗಾಮಿ ಸರ್ಕಾರಿ ನೌಕರನನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಹಂಗಾಮಿ ಸೇವೆ) ನಿಯಮಗಳು, 1967ರ 5ನೇ ನಿಯಮದ (1)ನೇ ಉಪನಿಯಮದ ಉಪಬಂಧಗಳಿಗೆ ಅನುಸಾರವಾಗಿ'';
- 9ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 9ನೇ ನಿಯಮದ (2)ನೇ ಉಪನಿಯಮದಲ್ಲಿ,-
(1) (ಎ) ಖಂಡವನ್ನು ಬಿಟ್ಟುಬಿಡತಕ್ಕದ್ದು.
(2) (ಎಎ) ಖಂಡದಲ್ಲಿರುವ ‘‘(iii) ಮತ್ತು (iv)'' ಎಂಬ ಆವರಣಗಳಿಗೆ, ಅಂಕಿಗಳಿಗೆ ಮತ್ತು ಪದಕ್ಕೆ ಬದಲಾಗಿ ‘‘(iii), (iiiಎ), (iv) ಮತ್ತು (ivಎ)'' ಎಂಬ ಆವರಣಗಳನ್ನು, ಅಂಕಿಗಳನ್ನು, ಅಕ್ಷರಗಳನ್ನು ಮತ್ತು ಪದವನ್ನು ಸೇರಿಸತಕ್ಕದ್ದು.
(3) (ಬಿಬಿ) ಖಂಡದಲ್ಲಿನ ‘‘(ii) ಮತ್ತು (iii)'' ಎಂಬ ಆವರಣಗಳಿಗೆ, ಅಂಕಿಗಳಿಗೆ ಮತ್ತು ಪದಕ್ಕೆ ಬದಲಾಗಿ ‘‘(ii), (iii) ಮತ್ತು (iiiಎ)'' ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.
- 10ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 10ನೇ ನಿಯಮದಲ್ಲಿ,-
(1) (2)ನೇ ಉಪನಿಯಮಕ್ಕೆ ಬದಲಾಗಿ ಈ ಮುಂದಿನ ಈ ಉಪನಿಯಮವನ್ನು ಸೇರಿಸತಕ್ಕದ್ದು, ಎಂದರೆ,-
"(2) ಸರ್ಕಾರಿ ನೌಕರನನ್ನು,-
(ಎ) ಅವನನ್ನು ಕ್ರಿಮಿನಲ್ ಆರೋಪದ ಮೇಲಾಗಲೀ ಅಥವಾ ಅನ್ಯಥಾ ಆಗಲಿ, ನಲವತ್ತೆಂಟು ಗಂಟೆಗಳಿಗೆ ಮೀರಿದ ಅವಧಿಗೆ ಅಭಿರಕ್ಷೆಯಲ್ಲಿ ತಡೆಹಿಡಿದಿರಿಸಿದ್ದರೆ, ಆವನನ್ನು ತಡೆಹಿಡಿದಿರಿಸಿದ ದಿನಾಂಕದಿಂದ;
(ಬಿ) ಒಂದು ಅಪರಾಧಕ್ಕಾಗಿ ಅಪರಾಧ ನಿರ್ಣಯವಾಗಿರುವ ಸಂದರ್ಭದಲ್ಲಿ, ಅವನಿಗೆ ನಲವತ್ತೆಂಟು ಗಂಟೆಗಳಿಗೆ ಮೀರಿದ ಅವಧಿಯ ಕಾರಾವಾಸ ಶಿಕ್ಷೆಯನ್ನು ವಿಧಿಸಿದ್ದರೆ ಮತ್ತು ಅಂಥ ಅಪರಾಧ ನಿರ್ಣಯದ ಪರಿಣಾಮವಾಗಿ ಅವನನ್ನು ಆ ಕೂಡಲೇ ವಜಾ ಮಾಡಿರದಿದ್ದರೆ ಅಥವಾ ತೆಗೆದುಹಾಕಿರದಿದ್ದರೆ ಅಥವಾ ಕಡ್ಡಾಯ ನಿವೃತ್ತಿಗೊಳಿಸಿರದಿದ್ದರೆ, ಅವನ ಆ ಅಪರಾಧ ನಿರ್ಣಯದ ದಿನಾಂಕದಿಂದ
- ನೇಮಕ ಪ್ರಾಧಿಕಾರಿಯ ಆದೇಶದ ಮೂಲಕ ಅಮಾನತ್ತಿನಲ್ಲಿಡಲಾಗಿದೆಯೆಂದು ಭಾವಿಸತಕ್ಕದ್ದು.
ವಿವರಣೆ.- ಈ ಉಪನಿಯಮದ (ಬಿ) ಖಂಡದಲ್ಲಿ ಉಲ್ಲೇಖಿಸಿದ ನಲವತ್ತೆಂಟು ಗಂಟೆಗಳ ಅವಧಿಯನ್ನು, ಅಪರಾಧವು ನಿರ್ಣಯವಾದ ತರುವಾಯ, ಕಾರಾವಾಸದ ಪ್ರಾರಂಭದಿಂದ ಲೆಕ್ಕಹಾಕತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ, ಕಾರಾವಾಸದ ಮಧ್ಯೆ ಮಧ್ಯೆ ಬರುವ ಅವಧಿಗಳು ಯಾವುವಾದರೂ ಇದ್ದರೆ, ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು".
(2) (5)ನೇ ಉಪನಿಯಮಕ್ಕೆ ಬದಲಾಗಿ ಈ ಮುಂದಿನ ಉಪನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
"(5) (ಎ) ಈ ನಿಯಮದ ಮೇರೆಗೆ ಮಾಡಿದ ಅಥವಾ ಮಾಡಲಾಗಿದೆಯೆಂದು ಭಾವಿಸಿದ ಅಮಾನತು ಆದೇಶವು, ಅದನ್ನು ಮಾರ್ಪಾಟುಗೊಳಿಸಲು ಅಥವಾ ರದ್ದುಗೊಳಿಸಲು ಸಕ್ಷಮನಾದ ಪ್ರಾಧಿಕಾರಿಯು ಹಾಗೆ ಮಾಡುವವರೆಗೆ ಜಾರಿಯಲ್ಲಿರುವುದು ಮುಂದುವರೆಯತಕ್ಕದ್ದು.
(ಬಿ) ಸರ್ಕಾರಿ ನೌಕರನನ್ನು (ಯಾವುದೇ ಶಿಸ್ತು ವ್ಯವಹರಣೆಗೆ ಸಂಬಂಧಿಸಿದಂತೆ ಅಥವಾ ಅನ್ಯಥಾ) ಅಮಾನತ್ತುಗೊಳಿಸಿರುವಲ್ಲಿ ಅಥವಾ ಅಮನತುಗೊಳಿಸಿರುವುದಾಗಿ ಭಾವಿಸಿರುವಲ್ಲಿ ಮತ್ತು ಆ ಅಮಾನತು ಮುಂದುವರಿದ ಅವಧಿಯಲ್ಲಿ ಅವನ ವಿರುದ್ಧ ಯಾವುದೇ ಇತರ ಶಿಸ್ತು ವ್ಯವಹರಣೆಯನ್ನು ಪ್ರಾರಂಭಿಸಿರುವಲ್ಲಿ, ಅವನನ್ನು ಅಮಾನತಿನಲ್ಲಿಡಲು ಸಕ್ಷಮನಾದ ಪ್ರಾಧಿಕಾರಿಯು, ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ, ಅಂಥ ಎಲ್ಲ ಅಥವಾ ಯಾವುವೇ ವ್ಯವಹರಣೆಗಳನ್ನು ಮುಕ್ತಾಯಗೊಳಿಸುವವರೆಗೆ, ಆ ಸರ್ಕಾರಿ ನೌಕರನು ಅಮಾನತ್ತಿನಲ್ಲಿರುವುದು ಮುಂದುವರಿಯತಕ್ಕದ್ದೆಂದು ನಿರ್ದೇಶಿಸಬಹುದು.
(ಸಿ) ಈ ನಿಯಮದ ಮೇರೆಗೆ ಮಾಡಿದ ಅಥವಾ ಮಾಡಲಾಗಿದೆಯೆಂದು ಭಾವಿಸಲಾದ ಅಮಾನತ್ತಿನ ಆದೇಶವನ್ನು, ಆ ಆದೇಶವನ್ನು ಮಾಡಿದ ಅಥವಾ ಮಾಡಿದ್ದಾನೆಂದು ಭಾವಿಸಲಾದ ಪ್ರಾಧಿಕಾರಿಯು ಅಥವಾ ಆ ಪ್ರಾಧಿಕಾರಿಯು ಯಾರಿಗೆ ಅಧೀನನಾಗಿರುವನೋ ಅಂಥ ಯಾರೇ ಪ್ರಾಧಿಕಾರಿಯು ಯಾವುದೇ ಕಾಲದಲ್ಲಿ ಮಾರ್ಪಾಟುಗೊಳಿಸಬಹುದು ಅಥವಾ ರದ್ದುಮಾಡಬಹುದು".
- 10ಎ ಹೊಸ ನಿಯಮದ ಸೇರ್ಪಡೆ.- ಮೂಲ ನಿಯಮಗಳಲ್ಲಿ 10ನೇ ನಿಯಮದ ತರುವಾಯ ಈ ಮುಂದಿನ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
"10ಎ. ಪ್ರಾಧಿಕಾರಿಯು ವ್ಯವಹರಣೆಗಳನ್ನು ಹೂಡುವುದು.- (1) ರಾಜ್ಯಪಾಲರು ಅಥವಾ ಅವರಿಂದ ಅಧಿಕಾರ ಪಡೆದ ಇತರ ಯಾರೇ ಪ್ರಾಧಿಕಾರಿಯು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ,-
(ಎ) ಯಾರೇ ಸರ್ಕಾರಿ ನೌಕರನ ವಿರುದ್ಧ ಶಿಸ್ತು ವ್ಯವಹರಣೆಗಳನ್ನು ಹೂಡಬಹುದು;
(ಬಿ) ಈ ನಿಯಮಗಳ ಮೇರೆಗೆ ಶಿಸ್ತು ಪ್ರಾಧಿಕಾರಿಯು ಯಾವ ಸರ್ಕಾರಿ ನೌಕರನ ವಿರುದ್ಧ 8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಸಕ್ಷಮನಾಗಿರುವನೋ ಆ ಸರ್ಕಾರಿ ನೌಕರನ ವಿರುದ್ಧ ಶಿಸ್ತು ವ್ಯವಹರಣೆಗಳನ್ನು ಹೂಡಲು ಆ ಶಿಸ್ತು ಪ್ರಾಧಿಕಾರಿಗೆ ನಿರ್ದೇಶಿಸಬಹುದು.
(2) 8ನೇ ನಿಯಮದ (i)ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಈ ನಿಯಮಗಳ ಮೇರೆಗೆ ವಿಧಿಸಲು ಸಕ್ಷಮನಾಗಿರುವ ಶಿಸ್ತು ಪ್ರಾಧಿಕಾರಿಯು, 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಈ ನಿಯಮಗಳ ಮೇರೆಗೆ ಸಕ್ಷಮನಾಗಿಲ್ಲದಿದ್ದರೂ ಆ ಶಿಸ್ತು ಪ್ರಾಧಿಕಾರಿಯು (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಶಿಸ್ತು ವ್ಯವಹರಣೆಗಳನ್ನು ಹೂಡಬಹುದು".
- 11ನೇ ಮತ್ತು 12ನೇ ನಿಯಮಗಳಿಗೆ ಬದಲಾಗಿ ಹೊಸ ನಿಯಮಗಳನ್ನು ಸೇರಿಸುವುದು.- ಮೂಲ ನಿಯಮಗಳಲ್ಲಿ, 11ನೇ ಮತ್ತು 12ನೇ ನಿಯಮಗಳಿಗೆ ಬದಲಾಗಿ ಈ ಮುಂದಿನ ನಿಯಮಗಳನ್ನು ಸೇರಿಸತಕ್ಕದ್ದು, ಎಂದರೆ:-
"11. ಕಠಿಣ ದಂಡನೆಗಳನ್ನು ವಿಧಿಸಲು ಕಾರ್ಯವಿಧಾನ.- (1) 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸುವ ಆದೇಶವನ್ನು, ಸಾಧ್ಯವಾಗಬಹುದಾದಷ್ಟರ ಮಟ್ಟಿಗೆ, ಈ ನಿಯಮದಲ್ಲಿ ಮತ್ತು 11ಎ ನಿಯಮದಲ್ಲಿ ಉಪಬಂಧಿಸಿದ ರೀತಿಯಲ್ಲಿ ವಿಚಾರಣೆಯನ್ನು ಮಾಡಿದ ತರುವಾಯದ ಹೊರತು, ಮಾಡತಕ್ಕದ್ದಲ್ಲ.
(2) ಶಿಸ್ತು ಪ್ರಾಧಿಕಾರಿಯು, ಸರ್ಕಾರಿ ನೌಕರನ ವಿರುದ್ಧ ದುರ್ನಡತೆಯ ಅಥವಾ ದುರ್ವರ್ತನೆಯ ಯಾವುದೇ ಆರೋಪಣೆಯ ಸತ್ಯಾಂಶವನ್ನು ವಿಚಾರಣೆ ಮಾಡಲು ಆಧಾರಗಳು ಇವೆ ಎಂದು ಅಭಿಪ್ರಾಯಪಟ್ಟಾಗಲೆಲ್ಲಾ, ತಾನೇ ಸ್ವತ: ವಿಚಾರಣೆ ಮಾಡಬಹುದು ಅಥವಾ ಅದರ ಸತ್ಯಾಂಶವನ್ನು ವಿಚಾರಣೆ ಮಾಡಲು ಈ ನಿಯಮದ ಮೇರೆಗೆ ಒಬ್ಬ ಪ್ರಾಧಿಕಾರಿಯನ್ನು ನೇಮಿಸಬಹುದು.
ವಿವರಣೆ.- ಶಿಸ್ತು ಪ್ರಾಧಿಕಾರಿಯು, ತಾನೇ ವಿಚಾರಣೆಯನ್ನು ನಡೆಸುವಲ್ಲಿ, (7) ರಿಂದ (20)ರ ವರೆಗಿನ ಉಪನಿಯಮಗಳಲ್ಲಿ ಮತ್ತು (22)ನೇ ಉಪನಿಯಮದಲ್ಲಿ ವಿಚಾರಣಾ ಪ್ರಾಧಿಕಾರಿಗೆ ಮಾಡಿದ ಯಾವುದೇ ಉಲ್ಲೇಖವನ್ನು ಶಿಸ್ತುಪ್ರಾಧಿಕಾರಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.
(3) ಸರ್ಕಾರಿ ನೌಕರನ ವಿರುದ್ಧ ಈ ನಿಯಮದ ಮತ್ತು 11ಎ ನಿಯಮದ ಮೇರೆಗೆ ವಿಚಾರಣೆಯನ್ನು ನಡೆಸಲು ಪ್ರಸ್ತಾವಿಸಿರುವಲ್ಲಿ, ಶಿಸ್ತು ಪ್ರಾಧಿಕಾರಿಯು,-
(i) ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ಸಾರಾಂಶವನ್ನು ಆರೋಪ ಪಟ್ಟಿಯಲ್ಲಿ ನಿಶ್ಚಿತವಾಗಿ ಮತ್ತು ಸ್ಪಷ್ಟವಾಗಿ;
(ii) ಪ್ರತಿಯೊಂದು ಆರೋಪ ಪಟ್ಟಿಗೆ ಸಮರ್ಥನೆಯಾಗಿ, ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆಯನ್ನು - ಸಿದ್ಧಪಡಿಸತಕ್ಕದ್ದು ಅಥವಾ ಸಿದ್ಧಪಡಿಸುವಂತೆ ಮಾಡತಕ್ಕದ್ದು ಮತ್ತು ಅವು,-
(ಎ) ಸರ್ಕಾರಿ ನೌಕರನ ಯಾವುದೇ ಒಪ್ಪಿಗೆ ಅಥವಾ ತಪ್ಪೊಪ್ಪಿಗೆ ಒಳಗೊಂಡಂತೆ ಎಲ್ಲ ಸುಸಂಬದ್ಧ ಸಂಗತಿಗಳ ವಿವರಣೆಯನ್ನು;
(ಬಿ) ಯಾವ ದಸ್ತಾವೇಜುಗಳ ಮೂಲಕ ಮತ್ತು ಯಾವ ಸಾಕ್ಷಿದಾರರ ಮೂಲಕ ಆರೋಪ ವಿಷಯಗಳನ್ನು ಸಮರ್ಥಿಸಲು ಪ್ರಸ್ತಾಪಿಸಲಾಗಿದೆಯೋ ಆ ದಸ್ತಾವೇಜುಗಳ ಪಟ್ಟಿಯನ್ನು ಮತ್ತು ಆ ಸಾಕ್ಷಿದಾರರ ಪಟ್ಟಿಯನ್ನು
- ಒಳಗೊಂಡಿರತಕ್ಕದ್ದು.
(4) ಶಿಸ್ತು ಪ್ರಾಧಿಕಾರಿಯು, ಆರೋಪ ಪಟ್ಟಿಯ ಪ್ರತಿಯನ್ನು, ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಗಳ ವಿವರಣೆಯನ್ನು ಮತ್ತು ಯಾವ ದಸ್ತಾವೇಜುಗಳ ಮೂಲಕ ಮತ್ತು ಯಾವ ಸಾಕ್ಷಿದಾರರ ಮೂಲಕ ಆ ಆರೋಪ ವಿಷಯಗಳನ್ನು ಸಮರ್ಥಿಸಲು ಪ್ರಸ್ತಾವಿಸಲಾಗಿದೆಯೋ ಆ ದಸ್ತಾವೇಜುಗಳ ಮತ್ತು ಸಾಕ್ಷಿದಾರರ ಪಟ್ಟಿಯನ್ನು ಸರ್ಕಾರಿ ನೌಕರನಿಗೆ ಕೊಡತಕ್ಕದ್ದು ಅಥವಾ ಕೊಡಿಸತಕ್ಕದ್ದು ಮತ್ತು ನಿರ್ದಿಷ್ಟಪಡಿಸಬಹುದಾದಂಥ ಕಾಲದೊಳಗೆ ತನ್ನ ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಮತ್ತು ತಾನೇ ಖುದ್ದಾಗಿ ಅಹವಾಲು ಹೇಳಿಕೊಳ್ಳಲು ಅವನು ಇಚ್ಛಿಸುತ್ತಾನೆಯೇ ಎಂಬುದನ್ನು ತಿಳಿಸಲು ಸರ್ಕಾರಿ ನೌಕರನನ್ನು ಅಗತ್ಯಪಡಿಸತಕ್ಕದ್ದು.
(5) (ಎ) ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸ್ವೀಕರಿಸಿದ ಮೇಲೆ, ಶಿಸ್ತು ಪ್ರಾಧಿಕಾರಿಯು ಒಪ್ಪದಿರುವಂಥ ಆರೋಪ ವಿಷಯಗಳ ಬಗ್ಗೆ ತಾನೇ ಸ್ವತಃ ವಿಚಾರಣೆ ಮಾಡಬಹುದು ಅಥವಾ (2)ನೇ ಉಪನಿಯಮದ ಮೇರೆಗೆ ಈ ಉದ್ದೇಶಕ್ಕಾಗಿ ವಿಚಾರಣಾ ಪ್ರಾಧಿಕಾರಿಯನ್ನು ನೇಮಿಸುವುದು ಅವಶ್ಯವೆಂದು ಪರಿಗಣಿಸಿದರೆ, ಹಾಗೆ ಮಾಡಬಹುದು ಮತ್ತು ಸರ್ಕಾರಿ ನೌಕರನು ತನ್ನ ಪ್ರತಿರಕ್ಷೆಯ ಲಿಖಿತ ಹೇಳಿಕೆಯಲ್ಲಿ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿರುವಲ್ಲಿ, ಶಿಸ್ತು ಪ್ರಾಧಿಕಾರಿಯು ತಾನು ಸೂಕ್ತವೆಂದು ಭಾವಿಸಬಹುದಾದಂಥ ಸಾಕ್ಷ್ಯವನ್ನು ಪಡೆದುಕೊಂಡ ತರುವಾಯ, ಪ್ರತಿಯೊಂದು ಆರೋಪದ ಮೇಲೆ ತನ್ನ ನಿರ್ಣಯಗಳನ್ನು ದಾಖಲಿಸತಕ್ಕದ್ದು ಮತ್ತು 11ಎ ನಿಯಮದಲ್ಲಿ ವಿಧಿಸಿರುವ ರೀತಿಯಲ್ಲಿ ಕ್ರಮಕೈಗೊಳ್ಳತಕ್ಕದ್ದು
(ಬಿ) ಸರ್ಕಾರಿ ನೌಕರನು ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದಲ್ಲಿ, ಶಿಸ್ತು ಪ್ರಾಧಿಕಾರಿಯು ತಾನೇ ಸ್ವತ: ಆರೋಪ ವಿಷಯಗಳ ಬಗ್ಗೆ ವಿಚಾರಣೆ ಮಾಡಬಹುದು ಅಥವಾ ಈ ಉದ್ದೇಶಕ್ಕಾಗಿ ವಿಚಾರಣಾ ಪ್ರಾಧಿಕಾರಿಯನ್ನು (2)ನೇ ಉಪನಿಯಮದ ಮೇರೆಗೆ ನೇಮಿಸುವುದು ಅವಶ್ಯವೆಂದು ತಾನು ಪರಿಗಣಿಸಿದರೆ, ಹಾಗೆ ಮಾಡಬಹುದು.
(ಸಿ) ಶಿಸ್ತು ಪ್ರಾಧಿಕಾರಿಯು ತಾನೇ ಸ್ವತಃ ಯಾವುದೇ ಆರೋಪ ವಿಷಯಗಳ ಬಗ್ಗೆ ವಿಚಾರಣೆ ಮಾಡುವಲ್ಲಿ ಅಥವಾ ಅಂಥ ಆರೋಪದ ಬಗ್ಗೆ ವಿಚಾರಣೆಯನ್ನು ಮಾಡುವುದಕ್ಕಾಗಿ ವಿಚಾರಣಾ ಪ್ರಾಧಿಕಾರಿಯನ್ನು ನೇಮಿಸುವಲ್ಲಿ, ಆರೋಪ ವಿಷಯಗಳನ್ನು ಸಮರ್ಥಿಸುವ ಸಲುವಾಗಿ ತನ್ನ ಪರವಾಗಿ ಪ್ರಕರಣವನ್ನು ಮಂಡಿಸುವುದಕ್ಕೆ ಸರ್ಕಾರಿ ನೌಕರನನ್ನು ಅಥವಾ ನ್ಯಾಯವಾದಿಯನ್ನು ಮಂಡನಾಧಿಕಾರಿಯನ್ನಾಗಿ ಆದೇಶದ ಮೂಲಕ ನೇಮಿಸಬಹುದು.
(6) ಶಿಸ್ತು ಪ್ರಾಧಿಕಾರಿಯು, ವಿಚಾರಣಾ ಪ್ರಾಧಿಕಾರಿಯಾಗಿಲ್ಲದಿರುವಾಗ, ವಿಚಾರಣಾ ಪ್ರಾಧಿಕಾರಿಗೆ,-
(i) ಆರೋಪ ಪಟ್ಟಿಯ ಮತ್ತು ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಪಟ್ಟಿಯ ಪ್ರತಿಯನ್ನು;
(ii) ಆ ಸರ್ಕಾರಿ ನೌಕರನು ಸಲ್ಲಿಸಿದ ಪ್ರತಿರಕ್ಷೆಯ ಲಿಖಿತ ಹೇಳಿಕೆ ಯಾವುದಾದರೂ ಇದ್ದರೆ, ಅದರ ಪ್ರತಿಯನ್ನು;
(iii) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಸಾಕ್ಷಿದಾರರ ಹೇಳಿಕೆಗಳು ಯಾವುವಾದರೂ ಇದ್ದರೆ, ಅವುಗಳ ಪ್ರತಿಯನ್ನು;
(iv) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ದಸ್ತಾವೇಜುಗಳನ್ನು ಸರ್ಕಾರಿ ನೌಕರನಿಗೆ ತಲುಪಿಸಿರುವುದನ್ನು ರುಜುವಾತುಪಡಿಸುವ ಸಾಕ್ಷ್ಯವನ್ನು ; ಮತ್ತು
(v) "ಮಂಡನಾಧಿಕಾರಿ" ಯನ್ನು ನೇಮಿಸಿದ ಆದೇಶದ ಪ್ರತಿಯನ್ನು ;
- ಕಳಿಸಿಕೊಡತಕ್ಕದ್ದು.
(7) ಸರ್ಕಾರಿ ನೌಕರನು, ಆರೋಪ ವಿಷಯಗಳನ್ನು ಹಾಗೂ ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆಯನ್ನು ಅವನು ಸ್ವೀಕರಿಸಿದ ದಿನದಿಂದ ಹತ್ತು ಕೆಲಸದ ದಿನಗಳೊಳಗೆ ವಿಚಾರಣಾ ಪ್ರಾಧಿಕಾರಿಯು ಈ ಸಂಬಂಧವಾಗಿ ಲಿಖಿತ ನೋಟೀಸಿನ ಮೂಲಕ ನಿರ್ದಿಷ್ಟಪಡಿಸಬಹುದಾದಂತೆ ಅಂಥ ದಿನದಂದು ಮತ್ತು ಅಂಥ ಕಾಲದಲ್ಲಿ ಅಥವಾ ವಿಚಾರಣಾ ಪ್ರಾಧಿಕಾರಿಯು ಅನುಮತಿಸಬಹುದಾದಂಥ ಹತ್ತು ದಿನಗಳಿಗೆ ಮೀರದ ಇನ್ನೂ ಹೆಚ್ಚಿನ ಅವಧಿಯೊಳಗೆ ವಿಚಾರಣಾ ಪ್ರಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗತಕ್ಕದ್ದು.
(8) ಸರ್ಕಾರಿ ನೌಕರನು ತನ್ನ ಪರವಾಗಿ ಪ್ರಕರಣವನ್ನು ಮಂಡಿಸಲು ಯಾರೇ ಇತರ ಸರ್ಕಾರಿ ನೌಕರನ ನೆರವನ್ನು ತೆಗೆದುಕೊಳ್ಳಬಹುದು. ಆದರೆ ಶಿಸ್ತು ಪ್ರಾಧಿಕಾರಿಯು ನೇಮಿಸಿದ ಮಂಡನಾ ಅಧಿಕಾರಿಯು ನ್ಯಾಯವಾದಿಯಾಗಿದ್ದರೆ ಅಥವಾ ಶಿಸ್ತು ಪ್ರಾಧಿಕಾರಿಯು ಪ್ರಕರಣದ ಸಂದರ್ಭಗಳನ್ನು ಗಮನಿಸಿ ನ್ಯಾಯವಾದಿಯನ್ನು ನೇಮಿಸಿಕೊಳ್ಳಲು ಅನುಮತಿಸಿದ ಹೊರತು, ಈ ಉದ್ದೇಶಕ್ಕಾಗಿ ನ್ಯಾಯವಾದಿಯನ್ನು ನೇಮಕ ಮಾಡಿಕೊಳ್ಳತಕ್ಕದ್ದಲ್ಲ.
(9) ಸರ್ಕಾರಿ ನೌಕರನು ತನ್ನ ಪ್ರತಿರಕ್ಷೆಯ ಲಿಖಿತ ಹೇಳಿಕೆಯಲ್ಲಿ ಯಾವುದೇ ಆರೋಪ ವಿಷಯಗಳನ್ನು ಒಪ್ಪದೆ ಅಥವಾ ಪ್ರತಿರಕ್ಷೆಯ ಯಾವುವೇ ಲಿಖಿತ ಹೇಳಿಕೆಯನ್ನು ಸಲ್ಲಿಸದೆ ವಿಚಾರಣಾ ಪ್ರಾಧಿಕಾರಿಯ ಮುಂದೆ ಹಾಜರಾದರೆ, ಅಂಥ ಪ್ರಾಧಿಕಾರಿಯು, ಅವನು ತಪ್ಪಿತಸ್ಥನೇ ಅಥವಾ ಯಾವುದಾದರೂ ಪ್ರತಿರಕ್ಷೆಯನ್ನು ಸಲ್ಲಿಸುವನೇ ಮತ್ತು ಯಾವುವೇ ಆರೋಪ ವಿಷಯದ ತಪ್ಪಿತಸ್ಥನೆಂದು ಒಪ್ಪಿಕೊಳ್ಳುತ್ತಾನೆಯೇ ಹೇಗೆ ಎಂಬ ಬಗ್ಗೆ ಅವನನ್ನು ಕೇಳತಕ್ಕದ್ದು, ವಿಚಾರಣಾ ಪ್ರಾಧಿಕಾರಿಯು ಅವನ ಆ ಹೇಳಿಕೆಯನ್ನು ದಾಖಲಿಸತಕ್ಕದ್ದು, ಆ ದಾಖಲೆಗೆ ರುಜು ಹಾಕತಕ್ಕದ್ದು ಮತ್ತು ಅದರ ಮೇಲೆ ಸರ್ಕಾರಿ ನೌಕರನ ರುಜುವನ್ನು ಪಡೆಯತಕ್ಕದ್ದು.
(10) ವಿಚಾರಣಾ ಪ್ರಾಧಿಕಾರಿಯು, ಯಾವ ಆರೋಪ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರನು ತಪ್ಪಿತಸ್ಥನೆಂದು ಒಪ್ಪಿಕೊಳ್ಳುವನೋ ಅವುಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥನೆಂಬ ನಿರ್ಣಯವನ್ನು ದಾಖಲಿಸತಕ್ಕದ್ದು.
(11) ವಿಚಾರಣಾ ಪ್ರಾಧಿಕಾರಿಯು, ಸರ್ಕಾರಿ ನೌಕರನು ನಿರ್ದಿಷ್ಟಪಡಿಸಿದ ಕಾಲದೊಳಗೆ ಹಾಜರಾಗಲು ತಪ್ಪಿದರೆ ಅಥವಾ ವಾದಿಸಲು ನಿರಾಕರಿಸಿದರೆ, ಇಲ್ಲವೇ ವಾದಿಸುವುದನ್ನು ಬಿಟ್ಟರೆ, ಅವನು ಆರೋಪ ವಿಷಯಗಳನ್ನು ರುಜುವಾತುಪಡಿಸಲು ಯಾವ ಸಾಕ್ಷ್ಯವನ್ನು ಒದಗಿಸಲು ಮಂಡನಾಧಿಕಾರಿಯು ಉದ್ದೇಶಿಸಿರುವನೋ ಅದನ್ನು ಒದಗಿಸಲು ಮಂಡನಾಧಿಕಾರಿಯನ್ನು ಅಗತ್ಯಪಡಿಸತಕ್ಕದ್ದು ಮತ್ತು ಆ ಸರ್ಕಾರಿ ನೌಕರನು ತನ್ನ ಪ್ರತಿರಕ್ಷೆಯನ್ನು ಸಿದ್ಧಪಡಿಸುವ ಉದ್ದೇಶಕ್ಕಾಗಿ,-
(i) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದ ದಸ್ತಾವೇಜುಗಳನ್ನು ಆದೇಶ ಹೊರಡಿಸಿದ ಐದು ದಿನಗಳೊಳಗೆ ಅಥವಾ ವಿಚಾರಣಾ ಪ್ರಾಧಿಕಾರಿಯು ಅನುಮತಿಸಬಹುದಾದಂತೆ ಐದು ದಿನಗಳಿಗೆ ಮೀರದಂಥ ಇನ್ನೂ ಹೆಚ್ಚಿನ ಕಾಲಾವಧಿಯೊಳಗೆ ಪರಿಶೀಲಿಸಬಹುದೆಂದು;
(ii) ತನ್ನ ಪರವಾಗಿ ವಿಚಾರಣೆ ಮಾಡಬೇಕಾದ ಸಾಕ್ಷಿದಾರರ ಪಟ್ಟಿಯನ್ನು ಒಪ್ಪಿಸಬಹುದೆಂದು;
(iii) (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪಟ್ಟಿಯಲ್ಲಿ ನಮೂದಿಸಿದ ಸಾಕ್ಷಿದಾರರ ಹೇಳಿಕೆಗಳು ಯಾವುವಾದರೂ ಇದ್ದರೆ, ಅವುಗಳ ಪ್ರತಿಗಳನ್ನು ಒದಗಿಸುವಂತೆ ಮೌಖಿಕವಾಗಿ ಅಥವಾ ಬರವಣಿಗೆಯಲ್ಲಿ ವಿನಂತಿಸಿಕೊಳ್ಳಬಹುದೆಂದು ಮತ್ತು ವಿಚಾರಣಾ ಪ್ರಾಧಿಕಾರಿಯು ಸಾಧ್ಯವಾದಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ ಶಿಸ್ತು ಪ್ರಾಧಿಕಾರಿಯ ಪರವಾಗಿ ಸಾಕ್ಷಿದಾರರ ವಿಚಾರಣೆಯ ಪ್ರಾರಂಭಕ್ಕೆ ಮುಂಚೆ ಮೂರು ದಿನಗಳಿಗಿಂತ ಹೆಚ್ಚು ತಡಮಾಡದಂತೆ ಅಂಥ ಪ್ರತಿಗಳನ್ನು ವಿಚಾರಣಾ ಪ್ರಾಧಿಕಾರಿಯು ಅವನಿಗೆ ಒದಗಿಸತಕ್ಕದ್ದೆಂದು;
(iv) ಸರ್ಕಾರದ ಸ್ವಾಧೀನದಲ್ಲಿರುವ ಆದರೆ (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಪಟ್ಟಿಯಲ್ಲಿ ನಮೂದಿಸಿರದ ಯಾವುವೇ ದಸ್ತಾವೇಜುಗಳನ್ನು ಪತ್ತೆ ಹಚ್ಚುವುದಕ್ಕಾಗಿ ಅಥವಾ ಹಾಜರುಪಡಿಸುವುದಕ್ಕಾಗಿ ಆದೇಶ ಹೊರಡಿಸಿದ ಹತ್ತು ದಿನಗಳೊಳಗಾಗಿ ಅಥವಾ ವಿಚಾರಣಾ ಪ್ರಾಧಿಕಾರಿಯು ಅನುಮತಿಸಬಹುದಾದಂತೆ ಹತ್ತು ದಿನಗಳಿಗೆ ಮೀರದ ಇನ್ನೂ ಹೆಚ್ಚಿನ ಕಾಲಾವಧಿಯೊಳಗಾಗಿ ನೋಟೀಸನ್ನು ನೀಡಬಹುದೆಂದು
- ಆದೇಶವನ್ನು ದಾಖಲಿಸಿದ ತರುವಾಯ, ಮೂವತ್ತು ದಿವಸಗಳಿಗೆ ಮೀರದ ಮುಂದಿನ ದಿನಾಂಕಕ್ಕೆ ಪ್ರಕರಣವನ್ನು ಮುಂದೂಡತಕ್ಕದ್ದು:
ಪರಂತು, ಸರ್ಕಾರವು ಪತ್ತೆ ಹಚ್ಚಬೇಕೆಂದು ಅಥವಾ ಹಾಜರುಪಡಿಸಬೇಕೆಂದು ಸರ್ಕಾರಿ ನೌಕರನು ಅಗತ್ಯಪಡಿಸಿದ ದಸ್ತಾವೇಜುಗಳ ಸುಸಂಬದ್ಧತೆಯನ್ನು ಅವನು ಸೂಚಿಸತಕ್ಕದ್ದು.
(12) ವಿಚಾರಣಾ ಪ್ರಾಧಿಕಾರಿಯು, ದಸ್ತಾವೇಜುಗಳನ್ನು ಪತ್ತೆ ಹಚ್ಚುವ ಅಥವಾ ಹಾಜರುಪಡಿಸುವ ಬಗೆಗಿನ ನೋಟೀಸನ್ನು ಸ್ವೀಕರಿಸಿದ ಮೇಲೆ, ಅದನ್ನು ಅಥವಾ ಅದರ ಪ್ರತಿಗಳನ್ನು, ಯಾವ ಪ್ರಾಧಿಕಾರಿಯ ಅಭಿರಕ್ಷೆಯಲ್ಲಿ ಅಥವಾ ಸ್ವಾಧೀನದಲ್ಲಿ ಆ ದಸ್ತಾವೇಜುಗಳನ್ನು ಇಡಲಾಗಿದೆಯೋ ಆ ಪ್ರಾಧಿಕಾರಿಗೆ ಅಂಥ ಕೋರಿಕೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದ ಹೊತ್ತಿಗೆ ದಸ್ತಾವೇಜನ್ನು ಹಾಜರುಪಡಿಸುವ ಬಗೆಗಿನ ಕೋರಿಕೆಯ ಜೊತೆ ಕಳುಹಿಸತಕ್ಕದ್ದು:
ಪರಂತು, ಯಾವ ದಸ್ತಾವೇಜುಗಳು ಪ್ರಕರಣಕ್ಕೆ ಸುಸಂಗತ ಅಲ್ಲವೆಂದು ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಡುವನೋ ಆ ದಸ್ತಾವೇಜುಗಳಿಗೆ ಕೋರಿಕೆ ಸಲ್ಲಿಸಲು, ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕರಿಸಬಹುದು.
(13) (12)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ಕೋರಿಕೆಯನ್ನು ಸ್ವೀಕರಿಸಿದ ಮೇಲೆ, ಕೋರಲಾದ ದಸ್ತಾವೇಜುಗಳನ್ನು ಅಭಿರಕ್ಷೆಯಲ್ಲಿ ಅಥವಾ ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಪ್ರತಿಯೊಬ್ಬ ಪ್ರಾಧಿಕಾರಿಯು ಅವುಗಳನ್ನು ವಿಚಾರಣಾ ಪ್ರಾಧಿಕಾರಿಯ ಮುಂದೆ ಹಾಜರುಪಡಿಸತಕ್ಕದ್ದು:
ಪರಂತು, ಕೋರಲಾದ ದಸ್ತಾವೇಜುಗಳನ್ನು ಅಭಿರಕ್ಷೆಯಲ್ಲಿಟ್ಟುಕೊಂಡಿರುವ ಅಥವಾ ಸ್ವಾಧೀನದಲ್ಲಿಟ್ಟುಕೊಂಡಿರುವ ಪ್ರಾಧಿಕಾರಿಗೆ, ಅಂಥ ಎಲ್ಲ ಅಥವಾ ಯಾವುದೇ ದಸ್ತಾವೇಜುಗಳನ್ನು ಹಾಜರುಪಡಿಸುವುದು ಸಾರ್ವಜನಿಕ ಹಿತದೃಷ್ಟಿಗೆ ಅಥವಾ ರಾಜ್ಯದ ಭದ್ರತೆಗೆ ವಿರುದ್ಧವಾಗುವುದೆಂದು ಮನದಟ್ಟಾದರೆ, ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ ಅವನು ಅದನ್ನು ತದನುಸಾರವಾಗಿ ವಿಚಾರಣಾ ಪ್ರಾಧಿಕಾರಿಗೆ ತಿಳಿಸತಕ್ಕದ್ದು ಮತ್ತು ವಿಚಾರಣಾ ಪ್ರಾಧಿಕಾರಿಯು, ಹಾಗೆ ತಿಳಿದ ತರುವಾಯ ಸರ್ಕಾರಿ ನೌಕರನಿಗೆ ಆ ವಿಷಯವನ್ನು ತಿಳಿಸತಕ್ಕದ್ದು ಮತ್ತು ಅಂಥ ದಸ್ತಾವೇಜುಗಳನ್ನು ಹಾಜರುಪಡಿಸುವ ಅಥವಾ ಪತ್ತೆಹಚ್ಚುವ ಬಗ್ಗೆ ತಾನು ಮಾಡಿದ ಕೋರಿಕೆಯನ್ನು ಹಿಂತೆಗೆದುಕೊಳ್ಳತಕ್ಕದ್ದು.
(14) ವಿಚಾರಣೆಗಾಗಿ ನಿಗದಿಪಡಿಸಿದ ದಿನಾಂಕದಂದು, ಯಾವ ಮೌಖಿಕ ಮತ್ತು ದಸ್ತಾವೇಜು ಸಾಕ್ಷ್ಯದಿಂದ ಆರೋಪ ವಿಷಯಗಳನ್ನು ರುಜುವಾತುಪಡಿಸಲು ಪ್ರಸ್ತಾವಿಸಲಾಗಿದೆಯೋ ಆ ಮೌಖಿಕ ಮತ್ತು ದಸ್ತಾವೇಜು ಸಾಕ್ಷ್ಯವನ್ನು ಶಿಸ್ತು ಪ್ರಾಧಿಕಾರಿಯು ಅಥವಾ ಅವನ ಪರವಾಗಿ ಹಾಜರುಪಡಿಸತಕ್ಕದ್ದು. ಮಂಡನಾಧಿಕಾರಿಯು ಅಥವಾ ಅವನ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ಮಾಡತಕ್ಕದ್ದು ಮತ್ತು ಸರ್ಕಾರಿ ನೌಕರನು ಅಥವಾ ಅವನ ಪರವಾಗಿ ಪಾಟಿ ಸವಾಲು ಮಾಡಬಹುದು. ಮಂಡನಾಧಿಕಾರಿಯು ಯಾವ ಅಂಶಗಳ ಮೇಲೆ ಪಾಟಿ ಸವಾಲು ಆಗಿದೆಯೋ ಆ ಯಾವುವೇ ಅಂಶಗಳ ಮೇಲೆ ಸಾಕ್ಷಿದಾರರನ್ನು ಪುನ: ವಿಚಾರಣೆ ಮಾಡಲು ಹಕ್ಕುಳ್ಳವನಾಗಿರತಕ್ಕದ್ದು. ಆದರೆ ವಿಚಾರಣಾ ಪ್ರಾಧಿಕಾರಿಯ ಅನುಮತಿಯಿಲ್ಲದೆ, ಯಾವುದೇ ಹೊಸ ವಿಷಯದ ಬಗ್ಗೆ ವಿಚಾರಣೆ ಮಾಡತಕ್ಕದ್ದಲ್ಲ; ವಿಚಾರಣಾ ಪ್ರಾಧಿಕಾರಿಯು ತಾನು ಸೂಕ್ತವೆಂದು ಭಾವಿಸಬಹುದಾದಂಥ ಪ್ರಶ್ನೆಗಳನ್ನು ಸಹ ಸಾಕ್ಷಿದಾರರಿಗೆ ಹಾಕಬಹುದು.
(15) ಶಿಸ್ತು ಪ್ರಾಧಿಕಾರಿಯ ಪರವಾಗಿ ಪ್ರಕರಣವು ಮುಕ್ತಾಯಗೊಳ್ಳುವುದಕ್ಕೆ ಮುಂಚೆ, ಅವಶ್ಯವೆಂದು ಕಂಡುಬಂದರೆ, ವಿಚಾರಣಾ ಪ್ರಾಧಿಕಾರಿಯು, ತನ್ನ ವಿವೇಚನಾನುಸಾರ, ಸರ್ಕಾರಿ ನೌಕರನಿಗೆ ಕೊಟ್ಟ ಪಟ್ಟಿಯಲ್ಲಿ ಒಳಗೊಳ್ಳದಿರುವ ಸಾಕ್ಷ್ಯವನ್ನು ಒದಗಿಸಲು ಮಂಡನಾಧಿಕಾರಿಗೆ ಅನುಮತಿಸಬಹುದು ಅಥವಾ ತಾನೇ ಸ್ವತ: ಹೊಸ ಸಾಕ್ಷ್ಯವನ್ನು ತರಿಸಿಕೊಳ್ಳಬಹುದು ಅಥವಾ ಯಾರೇ ಸಾಕ್ಷಿದಾರರನ್ನು ಪುನ: ಕರೆಸಿಕೊಳ್ಳಬಹುದು
ಮತ್ತು ಪುನ: ವಿಚಾರಣೆ ಮಾಡಬಹುದು ಮತ್ತು ಅಂಥ ಸಂದರ್ಭದಲ್ಲಿ ಹಾಜರುಪಡಿಸಲು ಪ್ರಸ್ತಾವಿಸಿದ ಇನ್ನೂ ಹೆಚ್ಚಿನ ಸಾಕ್ಷ್ಯದ ಪಟ್ಟಿಯ ಪ್ರತಿಯನ್ನು, ಸರ್ಕಾರಿ ನೌಕರನು ಕೇಳಿದರೆ, ಅದನ್ನು ಪಡೆಯಲು ಮತ್ತು ವಿಚಾರಣೆಯನ್ನು ಮುಂದಕ್ಕೆ ಹಾಕಿದ ದಿನವನ್ನು ಹಾಗೂ ಯಾವ ದಿನಕ್ಕೆ ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತೋ ಆ ದಿನವನ್ನು ಬಿಟ್ಟು, ಅಂಥ ಹೊಸ ಸಾಕ್ಷ್ಯವನ್ನು ಹಾಜರುಪಡಿಸುವುದಕ್ಕೆ ಮುಂಚೆ ವಿಚಾರಣೆಯನ್ನು ಮೂರು ದಿನ ಮುಂದಕ್ಕೆ ಹಾಕಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು. ವಿಚಾರಣಾ ಪ್ರಾಧಿಕಾರಿಯು ಅಂಥ ದಸ್ತಾವೇಜುಗಳನ್ನು ದಾಖಲೆ ಮೇಲೆ ತರುವುದಕ್ಕೆ ಮುಂಚೆ ಪರೀಕ್ಷಿಸುವುದಕ್ಕಾಗಿ ಸರ್ಕಾರಿ ನೌಕರನಿಗೆ ಒಂದು ಅವಕಾಶವನ್ನು ಕೊಡತಕ್ಕದ್ದು. ಹೊಸ ಸಾಕ್ಷ್ಯವನ್ನು ಹಾಜರುಪಡಿಸುವುದು ನ್ಯಾಯದ ಹಿತದೃಷ್ಟಿಯಿಂದ ಅವಶ್ಯವೆಂದು ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಡುವಲ್ಲಿ, ಅಂಥ ಹೊಸ ಸಾಕ್ಷ್ಯವನ್ನು ಒದಗಿಸಲು ಸಹ ಸರ್ಕಾರಿ ನೌಕರನಿಗೆ ಅನುಮತಿಸಬಹುದು.
ಸೂಚನೆ.- ಸಾಕ್ಷ್ಯದಲ್ಲಿರುವ ಯಾವುದೇ ಕೊರತೆಯನ್ನು ತುಂಬಲು ಹೊಸ ಸಾಕ್ಷ್ಯವನ್ನು ಅನುಮತಿಸತಕ್ಕದ್ದಲ್ಲ ಅಥವಾ ತರಿಸಿಕೊಳ್ಳತಕ್ಕದ್ದಲ್ಲ ಅಥವಾ ಯಾರೇ ಸಾಕ್ಷಿದಾರರನ್ನು ಪುನ: ಕರೆಸಿಕೊಳ್ಳತಕ್ಕದ್ದಲ್ಲ. ಮೂಲತ: ಹಾಜರುಪಡಿಸಿದಂಥ ಸಾಕ್ಷ್ಯದಲ್ಲಿ ಅಂತರ್ನಿಹಿತ ಲೋಪ ಇರುವಲ್ಲಿ ಅಥವಾ ದೋಷವಿರುವಲ್ಲಿ ಮಾತ್ರ ಅಂಥ ಸಾಕ್ಷ್ಯವನ್ನು ತರಿಸಿಕೊಳ್ಳಬಹುದು.
(16) ಶಿಸ್ತು ಪ್ರಾಧಿಕಾರಿಯ ಪರವಾಗಿ ವಾದವನ್ನು ಮುಕ್ತಾಯಗೊಳಿಸಿದಾಗ, ಸರ್ಕಾರಿ ನೌಕರನನ್ನು, ಅವನು ಇಚ್ಛಿಸಿದರೆ ಮೌಖಿಕವಾಗಿ ಅಥವಾ ಬರವಣಿಗೆಯಲ್ಲಿ ಅವನ ಪ್ರತಿರಕ್ಷೆಯನ್ನು ಹೇಳಲು ಅಗತ್ಯಪಡಿಸತಕ್ಕದ್ದು. ಪ್ರತಿರಕ್ಷೆಯನ್ನು ಮೌಖಿಕವಾಗಿ ಹೇಳಿದರೆ, ಅದನ್ನು ದಾಖಲಿಸತಕ್ಕದ್ದು ಮತ್ತು ಸರ್ಕಾರಿ ನೌಕರನನ್ನು ಆ ದಾಖಲೆಗೆ ರುಜು ಮಾಡಲು ಅಗತ್ಯಪಡಿಸತಕ್ಕದ್ದು. ಇವೆರಡೂ ಸಂದರ್ಭಗಳಲ್ಲೂ ಪ್ರತಿರಕ್ಷೆಯ ಹೇಳಿಕೆಯ ಪ್ರತಿಯನ್ನು, ಮಂಡನಾಧಿಕಾರಿ ಯಾರಾದರೂ ನೇಮಕಗೊಂಡಿದ್ದರೆ, ಅವರಿಗೆ ಕೊಡತಕ್ಕದ್ದು.
(17) ಸರ್ಕಾರಿ ನೌಕರನ ಪರವಾಗಿರುವ ಸಾಕ್ಷ್ಯವನ್ನು ಆ ತರುವಾಯ ಹಾಜರುಪಡಿಸತಕ್ಕದ್ದ್ದು. ಸರ್ಕಾರಿ ನೌಕರನು ಇಚ್ಛಿಸಿದರೆ ತನ್ನ ಪರವಾಗಿ ತಾನೇ ವಿಚಾರಣೆಗೊಳಪಡಬಹುದು. ಸರ್ಕಾರಿ ನೌಕರನು ಹಾಜರುಪಡಿಸಿದ ಸಾಕ್ಷಿದಾರರನ್ನು ತರುವಾಯ ವಿಚಾರಣೆ ಮಾಡತಕ್ಕದ್ದು ಮತ್ತು ಶಿಸ್ತು ಪ್ರಾಧಿಕಾರಿಯ ಪರವಾಗಿರುವ ಸಾಕ್ಷಿದಾರರಿಗೆ ಅನ್ವಯವಾಗಬಹುದಾದ ಉಪಬಂಧಗಳಿಗೆ ಅನುಸಾರವಾಗಿ ವಿಚಾರಣಾ ಪ್ರಾಧಿಕಾರಿಯಿಂದ ಪಾಟೀ ಸವಾಲಿಗೆ, ಪುನ: ವಿಚಾರಣೆಗೆ ಮತ್ತು ವಿಚಾರಣೆಗೆ ಆ ಸಾಕ್ಷಿದಾರರು ಗುರಿಯಾಗತಕ್ಕದ್ದು.
(18) ವಿಚಾರಣಾ ಪ್ರಾಧಿಕಾರಿಯು, ಸರ್ಕಾರಿ ನೌಕರನು ತನ್ನ ವಾದವನ್ನು ಮುಕ್ತಾಯಗೊಳಿಸಿದ ತರುವಾಯ ಮತ್ತು ಆ ಸರ್ಕಾರಿ ನೌಕರನು ತಾನೇ ಸ್ವತ: ವಿಚಾರಣೆಗೆ ಒಳಪಟ್ಟಿರದಿದ್ದರೆ ಸಾಕ್ಷ್ಯದಲ್ಲಿ ಸರ್ಕಾರಿ ನೌಕರನ ವಿರುದ್ಧ ಕಂಡುಬರುವ ಯಾವುವೇ ಸಂದರ್ಭಗಳನ್ನು ವಿವರಿಸಲು ಅವನಿಗೆ ಅವಕಾಶ ಒದಗಿಸುವ ಉದ್ದೇಶಕ್ಕಾಗಿ ಸಾಕ್ಷ್ಯದಲ್ಲಿ ಅವನ ವಿರುದ್ಧವಾಗಿ ಕಂಡುಬಂದಿರುವ ಆ ಸಂದರ್ಭಗಳ ಬಗ್ಗೆ ಅವನನ್ನು ಸಾಮಾನ್ಯವಾಗಿ ಪ್ರಶ್ನಿಸಬಹುದು.
(19) ವಿಚಾರಣಾ ಪ್ರಾಧಿಕಾರಿಯು, ಸಾಕ್ಷ್ಯವನ್ನು ಹಾಜರುಪಡಿಸುವುದು ಪೂರ್ಣವಾದ ತರುವಾಯ, ಮಂಡನಾಧಿಕಾರಿ ಯಾರಾದರೂ ನೇಮಕಗೊಂಡಿದ್ದರೆ, ಅವರನ್ನು ಮತ್ತು ಸರ್ಕಾರಿ ನೌಕರನನ್ನು ವಿಚಾರಣೆ ಮಾಡಬಹುದು ಅಥವಾ ತಮ್ಮ ತಮ್ಮ ವಾದಗಳ ಲಿಖಿತ ಸಾರಾಂಶಗಳನ್ನು ದಾಖಲ್ಮಾಡಲು ಅವರು ಇಚ್ಛಿಸಿದರೆ, ಅವರಿಗೆ ಹಾಗೆ ಮಾಡಲು ಅನುಮತಿಸಬಹುದು.
(20) ಆರೋಪಗಳ ಪಟ್ಟಿಯನ್ನು ಯಾವ ಸರ್ಕಾರಿ ನೌಕರನಿಗೆ ಕೊಡಲಾಗಿದೆಯೋ ಆ ಸರ್ಕಾರಿ ನೌಕರನು, ಆ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆ ಪ್ರತಿರಕ್ಷೆಯ ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದರೆ ಅಥವಾ ವಿಚಾರಣಾ ಪ್ರಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗದಿದ್ದರೆ ಅಥವಾ ವಿಚಾರಣೆಯ ಯಾವುದೇ ಹಂತದಲ್ಲಿ ಈ ನಿಯಮದ ಉಪಬಂಧಗಳನ್ನು ಪಾಲಿಸಲು ತಪ್ಪಿದರೆ ಅಥವಾ ನಿರಾಕರಿಸಿದರೆ, ವಿಚಾರಣಾ ಪ್ರಾಧಿಕಾರಿಯು ಏಕಪಕ್ಷೀಯವಾಗಿ ವಿಚಾರಣೆಯನ್ನು ನಡೆಸಬಹುದು.
(21) (ಎ) 8ನೇ ನಿಯಮದ (i)ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಸಕ್ಷಮನಾಗಿರುವ, ಆದರೆ 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಲು ಸಕ್ಷಮನಾಗಿಲ್ಲದಿರುವ, ಶಿಶ್ತು ಪ್ರಾಧಿಕಾರಿಯು ಯಾವುದೇ ಆರೋಪ ವಿಷಯಗಳನ್ನು ತಾನೇ ಸ್ವತ: ವಿಚಾರಣೆ ಮಾಡಿರುವಲ್ಲಿ ಅಥವಾ ವಿಚಾರಣೆ ಮಾಡಿಸಿರುವಲ್ಲಿ ಮತ್ತು ಆ ಪ್ರಾಧಿಕಾರಿಯು ತನ್ನದೇ ನಿರ್ಣಯಗಳನ್ನು ಗಮನದಲ್ಲಿಟ್ಟುಕೊಂಡು ಅಥವಾ ಆ ಪ್ರಾಧಿಕಾರಿಯು ನೇಮಕಮಾಡಿದ ಯಾರೇ ವಿಚಾರಣಾ ಪ್ರಾಧಿಕಾರಿಯ ಯಾವುವೇ ನಿರ್ಣಯಗಳ ಮೇಲಣ ತನ್ನ ತೀರ್ಮಾನವನ್ನು ಗಮನದಲ್ಲಿಟ್ಟುಕೊಂಡು, 8ನೇ ನಿಯಮದ (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಅಭಿಪ್ರಾಯಪಟ್ಟರೆ, ಆ ಪ್ರಾಧಿಕಾರಿಯು (v) ರಿಂದ (viii)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳನ್ನು ವಿಧಿಸಲು ಸಕ್ಷಮನಾಗಿರುವಂಥ ಶಿಸ್ತು ಪ್ರಾಧಿಕಾರಿಗೆ ವಿಚಾರಣೆಯ ದಾಖಲೆಗಳನ್ನು ಕಳುಹಿಸತಕ್ಕದ್ದು.
(ಬಿ) ಯಾವ ಶಿಸ್ತುಪ್ರಾಧಿಕಾರಿಗೆ ದಾಖಲೆಗಳನ್ನು ಹಾಗೆ ಕಳುಹಿಸಲಾಗಿದೆಯೋ ಆ ಶಿಸ್ತು ಪ್ರಾಧಿಕಾರಿಯು ದಾಖಲೆಯಲ್ಲಿನ ಸಾಕ್ಷ್ಯದ ಆಧಾರದ ಮೇಲೆ ಕ್ರಮವನ್ನು ಜರುಗಿಸಬಹುದೆಂದು ಅಥವಾ ಯಾರೇ ಸಾಕ್ಷಿದಾರರನ್ನು ಇನ್ನಷ್ಟು ವಿಚಾರಣೆ ಮಾಡುವುದು ನ್ಯಾಯದ ಹಿತದೃಷ್ಟಿಯಿಂದ ಅವಶ್ಯವೆಂದು ಆ ಪ್ರಾಧಿಕಾರಿಯು ಅಭಿಪ್ರಾಯಪಡುವಲ್ಲಿ, ಸಾಕ್ಷಿದಾರನನ್ನು ಪುನ: ಕರೆಸಿಕೊಳ್ಳಬಹುದು ಮತ್ತು ಸಾಕ್ಷಿದಾರನನ್ನು ವಿಚಾರಣೆ ಮಾಡಬಹುದು, ಪಾಟೀಸವಾಲು ಮಾಡಬಹುದು ಹಾಗೂ ಪುನ: ವಿಚಾರಣೆ ಮಾಡಬಹುದು ಮತ್ತು ಈ ನಿಯಮಗಳಿಗೆ ಅನುಸಾರವಾಗಿ ತಾನು ಸೂಕ್ತವೆಂದು ಭಾವಿಸಬಹುದಾದಂಥ ದಂಡನೆಯನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬಹುದು.
(22) ಯಾರೇ ವಿಚಾರಣಾ ಪ್ರಾಧಿಕಾರಿಯು, ವಿಚಾರಣೆಯಲ್ಲಿ ಪೂರ್ಣ ಸಾಕ್ಷ್ಯವನ್ನು ಅಥವಾ ಅದರ ಯಾವುದೇ ಭಾಗವನ್ನು ಆಲಿಸಿದ ಮತ್ತು ದಾಖಲಿಸಿದ ತರುವಾಯ, ವಿಚಾರಣೆಯ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವುದು ನಿಂತುಹೋಗಿರುವಾಗಲೆಲ್ಲಾ ಮತ್ತು ಅವನ ಸ್ಥಾನದಲ್ಲಿ ಅಂಥ ಆಧಿಕಾರವ್ಯಾಪ್ತಿಯನ್ನು ಹೊಂದಿರುವಂಥ ಮತ್ತು ಚಲಾಯಿಸುವಂಥ ಬೇರೊಬ್ಬ ವಿಚಾರಣಾ ಪ್ರಾಧಿಕಾರಿಯು ಬಂದಾಗ, ಹಾಗೆ ಬಂದ ಆ ವಿಚಾರಣಾ ಪ್ರಾಧಿಕಾರಿಯು, ಹಿಂದಿನ ವಿಚಾರಣಾಧಿಕಾರಿಯು ಹಾಗೆ ದಾಖಲಿಸಿದ ಅಥವಾ ಹಿಂದಿನ ವಿಚಾರಣಾಧಿಕಾರಿಯು ಭಾಗಶ: ದಾಖಲಿಸಿದ ಮತ್ತು ತಾನು ಸ್ವತ: ಭಾಗಶ: ದಾಖಲಿಸಿದ ಸಾಕ್ಷ್ಯದ ಮೇಲೆ ಕ್ರಮ ಜರುಗಿಸಬಹುದು:
ಪರಂತು, ಯಾರ ಸಾಕ್ಷ್ಯವನ್ನು ಈಗಾಗಲೇ ದಾಖಲಿಸಲಾಗಿದೆಯೋ ಆ ಯಾರೇ ಸಾಕ್ಷಿದಾರರನ್ನು ಮತ್ತಷ್ಟು ವಿಚಾರಣೆ ಮಾಡುವುದು ನ್ಯಾಯದ ಹಿತದೃಷ್ಟಿಯಿಂದ ಅವಶ್ಯವೆಂದು ನಂತರ ಬಂದ ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಟ್ಟಲ್ಲಿ, ಅವರು ಇಲ್ಲಿ ಈ ಹಿಂದೆ ಉಪಬಂಧಿಸಲಾದಂತೆ ಅಂಥ ಯಾರೇ ಸಾಕ್ಷಿದಾರರನ್ನು ಪುನ: ಕರೆಸಿಕೊಳ್ಳಬಹುದು, ವಿಚಾರಣೆ ಮಾಡಬಹುದು, ಪಾಟೀ ಸವಾಲು ಮಾಡಬಹುದು ಮತ್ತು ಪುನಃ ವಿಚಾರಣೆ ಮಾಡಬಹುದು.
(23) (i) ವಿಚಾರಣೆಯು ಮುಕ್ತಾಯಗೊಂಡ ತರುವಾಯ, ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದರಲ್ಲಿ,-
(ಎ) ಆರೋಪ ವಿಷಯಗಳ ಪಟ್ಟಿ ಮತ್ತು ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆ;
(ಬಿ) ಪ್ರತಿಯೊಂದು ಆರೋಪ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರನ ಪ್ರತಿರಕ್ಷೆ;
(ಸಿ) ಪ್ರತಿಯೊಂದು ಆರೋಪ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷ್ಯದ ನಿರ್ಧಾರಣೆ;
(ಡಿ) ಪ್ರತಿಯೊಂದು ಆರೋಪ ವಿಷಯದ ಮೇಲೆ ನಿರ್ಣಯ ಮತ್ತು ಆ ಬಗೆಗಿನ ಸಮರ್ಥನೆಗಳು - ಒಳಗೊಂಡಿರತಕ್ಕದ್ದು.
ವಿವರಣೆ.- ವಿಚಾರಣೆಯ ವ್ಯವಹರಣೆಯು, ಯಾವುದೇ ಆರೋಪ ವಿಷಯವು ಮೂಲ ಆರೋಪ ವಿಷಯಗಳಿಗಿಂತ ಭಿನ್ನವಾದುದೆಂಬುದನ್ನು ರುಜುವಾತುಪಡಿಸುತ್ತದೆಂದು ವಿಚಾರಣಾ ಪ್ರಾಧಿಕಾರಿಯು ಅಭಿಪ್ರಾಯಪಟ್ಟರೆ, ಅಂಥ ಆರೋಪ ವಿಷಯಗಳ ಮೇಲೆಯೂ ತನ್ನ ನಿರ್ಣಯಗಳನ್ನು ಅವರು ದಾಖಲಿಸಬಹುದು:
ಪರಂತು, ಅಂಥ ಆರೋಪ ವಿಷಯದ ಮೇಲಣ ನಿರ್ಣಯಗಳನ್ನು ಯಾವ ಸಂಗತಿಗಳ ಮೇಲೆ ಅಂಥ ಆರೋಪದ ವಿಷಯವು ಆಧಾರಿತವಾಗಿದೆಯೋ ಆ ಸಂಗತಿಗಳನ್ನು ಸರ್ಕಾರಿ ನೌಕರನು, ಒಪ್ಪಿಕೊಂಡಿದ್ದ ಹೊರತು ಅಥವಾ ಅಂಥ ಆರೋಪ ವಿಷಯದ ಬಗ್ಗೆ ತನ್ನ ಪ್ರತಿವಾದವನ್ನು ಮಂಡಿಸಲು ಅವನಿಗೆ ಸೂಕ್ತ ಅವಕಾಶವನ್ನು ಕೊಟ್ಟಿದ್ದ ಹೊರತು ದಾಖಲಿಸತಕ್ಕದ್ದಲ್ಲ.
(ii) ವಿಚಾರಣಾ ಪ್ರಾಧಿಕಾರಿಯು, ತಾನೇ ಶಿಸ್ತು ಪ್ರಾಧಿಕಾರಿಯಾಗಿರದಿದ್ದರೆ, ಶಿಸ್ತು ಪ್ರಾಧಿಕಾರಿಗೆ ವಿಚಾರಣೆಯ ದಾಖಲೆಗಳನ್ನು ಕಳುಹಿಸಿಕೊಡತಕ್ಕದ್ದು, ಅವುಗಳಲ್ಲಿ,-
(ಎ) (i)ನೇ ಖಂಡದ ಮೇರೆಗೆ ತಾನು ಸಿದ್ಧಪಡಿಸಿದ ವರದಿ ;
(ಬಿ) ಸರ್ಕಾರಿ ನೌಕರನು ಸಲ್ಲಿಸಿದ ಪ್ರತಿರಕ್ಷೆಯ ಲಿಖಿತ ಹೇಳಿಕೆ ಯಾವುದಾದರೂ ಇದ್ದರೆ, ಅದು;
(ಸಿ) ವಿಚಾರಣಾ ಕಾಲದಲ್ಲಿ ಹಾಜರುಪಡಿಸಿದ ಮೌಖಿಕ ಮತ್ತು ದಸ್ತಾವೇಜು ಸಾಕ್ಷ್ಯ;
(ಡಿ) ವಿಚಾರಣಾ ಕಾಲದಲ್ಲಿ ಮಂಡನಾಧಿಕಾರಿಯು ಅಥವಾ ಸರ್ಕಾರಿ ನೌಕರನು ಅಥವಾ ಅವರಿಬ್ಬರೂ ದಾಖಲ್ಮಾಡಿದ ಲಿಖಿತ ಸಾರಾಂಶ ಯಾವುವಾದರೂ ಇದ್ದರೆ ಅವು; ಮತ್ತು
(ಇ) ವಿಚಾರಣೆಗೆ ಸಂಬಂಧಿಸಿದಂತೆ ಶಿಸ್ತು ಪ್ರಾಧಿಕಾರಿಯು ಮತ್ತು ವಿಚಾರಣಾ ಪ್ರಾಧಿಕಾರಿಯು ಮಾಡಿದ ಆದೇಶಗಳು ಯಾವುವಾದರೂ ಇದ್ದರೆ, ಅವು - ಒಳಗೊಂಡಿರತಕ್ಕದ್ದು.
11ಎ. ವಿಚಾರಣಾ ವರದಿಯ ಮೇಲೆ ಕ್ರಮ.- (1) ಶಿಸ್ತು ಪ್ರಾಧಿಕಾರಿಯು, ತಾನೇ ವಿಚಾರಣಾ ಪ್ರಾಧಿಕಾರಿಯಾಗಿಲ್ಲದಿದ್ದರೆ, ತಾನು ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ, ಇನ್ನೂ ಹೆಚ್ಚಿನ ವಿಚಾರಣೆಗಾಗಿ ಮತ್ತು ವರದಿಗಾಗಿ ವಿಚಾರಣಾ ಪ್ರಾಧಿಕಾರಿಗೆ ಪ್ರಕರಣವನ್ನು ವಾಪಸು ಕಳಿಸಬಹುದು ಮತ್ತು ವಿಚಾರಣಾ ಪ್ರಾಧಿಕಾರಿಯು ಆ ತರುವಾಯ ಸಾಧ್ಯವಾದಷ್ಟು ಮಟ್ಟಿಗೆ 11ನೇ ನಿಯಮದ ಉಪಬಂಧಗಳಿಗನುಸಾರವಾಗಿ ಇನ್ನೂ ಹೆಚ್ಚಿನ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳತಕ್ಕದ್ದು.
(2) ಶಿಸ್ತು ಪ್ರಾಧಿಕಾರಿಯು, ಆರೋಪದ ಯಾವುದೇ ವಿಷಯದ ಮೇಲೆ ವಿಚಾರಣಾ ಪ್ರಾಧಿಕಾರಿಯ ನಿರ್ಣಯಗಳನ್ನು ಒಪ್ಪದಿದ್ದರೆ, ಹಾಗೆ ಒಪ್ಪದಿರುವುದಕ್ಕೆ ತನ್ನ ಕಾರಣಗಳನ್ನು ದಾಖಲಿಸತಕ್ಕದ್ದು ಮತ್ತು ದಾಖಲೆಯಲ್ಲಿರುವ ಸಾಕ್ಷ್ಯವು ಆ ಉದ್ದೇಶಕ್ಕಾಗಿ ಸಾಕಷ್ಟಿದ್ದರೆ ಅಂಥ ಆರೋಪದ ಮೇಲೆ ತನ್ನ ನಿರ್ಣಯಗಳನ್ನು ದಾಖಲಿಸತಕ್ಕದ್ದು.
(3) ಶಿಸ್ತು ಪ್ರಾಧಿಕಾರಿಯು, ಎಲ್ಲ ಅಥವಾ ಯಾವುದೇ ಆರೋಪ ವಿಷಯಗಳ ಮೇಲಣ ತನ್ನ ನಿರ್ಣಯಗಳನ್ನು ಗಮನದಲ್ಲಿರಿಸಿಕೊಂಡು 8ನೇ ನಿಯಮದ (i) ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಅಭಿಪ್ರಾಯಪಟ್ಟರೆ, ಅವರು 12ನೇ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಅಂಥ ದಂಡನೆಯನ್ನು ವಿಧಿಸುವ ಆದೇಶವನ್ನು ಮಾಡಬಹುದು:
ಪರಂತು, ಆಯೋಗದೊಡನೆ ಸಮಾಲೋಚಿಸುವುದು ಅವಶ್ಯವಿರುವಂಥ ಪ್ರತಿಯೊಂದು ಪ್ರಕರಣದಲ್ಲಿ, ಶಿಸ್ತು ಪ್ರಾಧಿಕಾರಿಯು, ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಪ್ರಸ್ತಾವಿಸಿದ ದಂಡನೆಗಳ ಮೇಲೆ ಆಯೋಗದ ಸಲಹೆಗಾಗಿ ವಿಚಾರಣಾ ದಾಖಲೆಯನ್ನು ಆಯೋಗಕ್ಕೆ ಕಳುಹಿಸಿಕೊಡತಕ್ಕದ್ದು ಮತ್ತು ಸರ್ಕಾರಿ ನೌಕರನ ಮೇಲೆ ಯಾವುದೇ ದಂಡನೆಯನ್ನು ವಿಧಿಸುವ ಯಾವುದೇ ಆದೇಶವನ್ನು ಮಾಡುವುದಕ್ಕೆ ಮುಂಚೆ ಅಂಥ ಸಲಹೆಯನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
(4) (i) ಶಿಸ್ತು ಪ್ರಾಧಿಕಾರಿಯು, ಆರೋಪದ ಎಲ್ಲ ಅಥವಾ ಯಾವುವೇ ವಿಷಯಗಳ ಮೇಲೆ ತನ್ನ ನಿರ್ಣಯಗಳನ್ನು ಗಮನದಲ್ಲಿಟ್ಟುಕೊಂಡು 8ನೇ ನಿಯಮದ (v) ರಿಂದ (viii) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಸರ್ಕಾರಿ ನೌಕರನ ಮೇಲೆ ವಿಧಿಸಬೇಕೆಂದು ಅಭಿಪ್ರಾಯಪಟ್ಟರೆ, ಅವರು,-
(ಎ) ತಾನು ನಡೆಸಿದ ವಿಚಾರಣಾ ವರದಿಯ ಮತ್ತು ಪ್ರತಿಯೊಂದು ಆರೋಪ ವಿಷಯಗಳ ಮೇಲಿನ ತನ್ನ ನಿರ್ಣಯಗಳ ಪ್ರತಿಯನ್ನು, ಅಥವಾ, ವಿಚಾರಣೆಯನ್ನು ತಾನು ನೇಮಕ ಮಾಡಿದ ವಿಚಾರಣಾ ಪ್ರಾಧಿಕಾರಿಯು ನಡೆಸಿರುವಲ್ಲಿ, ಅಂಥ ಪ್ರಾಧಿಕಾರಿಯ ವರದಿಯ ಪ್ರತಿಯನ್ನು ಮತ್ತು ಆ ವಿಚಾರಣಾ ಪ್ರಾಧಿಕಾರಿಯ ನಿರ್ಣಯಗಳನ್ನು ತಾನು ಒಪ್ಪದಿರುವುದಕ್ಕೆ ಕಾರಣಗಳು ಯಾವುದಾದರೂ ಇದ್ದರೆ, ಆ ಸಂಕ್ಷಿಪ್ತ ಕಾರಣಗಳೊಂದಿಗೆ ಪ್ರತಿಯೊಂದು ಆರೋಪ ವಿಷಯಗಳ ಮೇಲೆ ತನ್ನ ನಿರ್ಣಯಗಳ ವಿವರಣೆಯನ್ನು ಮತ್ತು 14ಎ ನಿಯಮದ ಮೇರೆಗೆ ವಿಚಾರಣೆಯನ್ನು ಜಾಗೃತ ಆಯೋಗವು ನಡೆಸಿರುವಲ್ಲಿ, ಜಾಗೃತ ಆಯೋಗದ ಆಯುಕ್ತರ ಶಿಫಾರಸ್ಸುಗಳೊಂದಿಗೆ ವಿಚಾರಣಾ ಅಧಿಕಾರಿಯ ನಿರ್ಣಯಗಳ ಪ್ರತಿಯನ್ನು ಸರ್ಕಾರಿ ನೌಕರನಿಗೆ ಒದಗಿಸತಕ್ಕದ್ದು, ಮತ್ತು
(ಬಿ) ಸರ್ಕಾರಿ ನೌಕರನಿಗೆ, ಅವನ ಮೇಲೆ ವಿಧಿಸಲು ಉದ್ದೇಶಿಸಿದ ದಂಡನೆಯನ್ನು ನಿರೂಪಿಸುವ ಮತ್ತು 11ನೇ ನಿಯಮದ ಮೇರೆಗೆ ನಡೆಸಿದ ವಿಚಾರಣೆಯ ಸಮಯದಲ್ಲಿ ಒದಗಿಸಿದ ಸಾಕ್ಷ್ಯದ ಆಧಾರದ ಮೇಲೆ ವಿಧಿಸಲು ಉದ್ದೇಶಿಸಿರುವ ದಂಡನೆಯ ಬಗ್ಗೆ ಅವನು ಸಲ್ಲಿಸಲು ಇಚ್ಛಿಸುವಂಥ ಮನವಿಯನ್ನು ನೋಟೀಸು ಸ್ವೀಕರಿಸಿದ ಹದಿನೈದು ದಿನಗಳೊಳಗಾಗಿ ಅಥವಾ ಹದಿನೈದು ದಿನಗಳನ್ನು ಮೀರದಂತೆ ಅನುಮತಿಸಬಹುದಾದಂಥ ಇನ್ನೂ ಹೆಚ್ಚಿನ ಕಾಲದೊಳಗಾಗಿ ಸಲ್ಲಿಸುವಂತೆ ಅವನನ್ನು ಕೇಳುವ ನೋಟೀಸನ್ನು ನೀಡತಕ್ಕದ್ದು.
(ii)(ಎ) ಆಯೋಗದೊಂದಿಗೆ ಸಮಾಲೋಚಿಸುವ ಅವಶ್ಯಕತೆಯಿರುವ ಪ್ರತಿಯೊಂದು ಪ್ರಕರಣದಲ್ಲಿ, (i)ನೇ ಖಂಡದ ಮೇರೆಗೆ ನೀಡಿದ ನೋಟೀಸಿನ ಮತ್ತು ಅಂಥ ನೋಟೀಸಿಗೆ ಅನುಸಾರವಾಗಿ ಯಾವುದಾದರೂ ಮನವಿ ಸಲ್ಲಿಸಿದ್ದರೆ, ಅಂಥ ಮನವಿಯ ಪ್ರತಿಯೊಂದಿಗೆ ವಿಚಾರಣೆಯ ದಾಖಲೆಯನ್ನು ಶಿಸ್ತು ಪ್ರಾಧಿಕಾರಿಯು ಸರ್ಕಾರಿ ನೌಕರನ ಮೇಲೆ ವಿಧಿಸಲು ಉದ್ದೇಶಿಸಿರುವ ದಂಡನೆಗಳ ಮೇಲೆ ಸಲಹೆಗಾಗಿ ಆಯೋಗಕ್ಕೆ ಕಳುಹಿಸತಕ್ಕದ್ದು.
(ಬಿ) ಶಿಸ್ತು ಪ್ರಾಧಿಕಾರಿಯು, ಸರ್ಕಾರಿ ನೌಕರನು ಯಾವುದಾದರೂ ಮನವಿಯನ್ನು ಸಲ್ಲಿಸಿದ್ದರೆ ಅದನ್ನು ಮತ್ತು ಆಯೋಗವು ನೀಡಿದ ಸಲಹೆಯನ್ನು ಪರಿಶೀಲಿಸಿದ ನಂತರ, ಸರ್ಕಾರಿ ನೌಕರನ ಮೇಲೆ ಯಾವುದಾದರೂ ದಂಡನೆಯನ್ನು ವಿಧಿಸಬೇಕಿದ್ದರೆ ಯಾವುದನ್ನು ವಿಧಿಸಬೇಕೆಂಬುದನ್ನು ನಿರ್ಧರಿಸತಕ್ಕದ್ದು ಮತ್ತು ತಾನು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡತಕ್ಕದ್ದು.
(iii) ಆಯೋಗದೊಂದಿಗೆ ಸಮಾಲೋಚಿಸುವ ಅವಶ್ಯಕತೆ ಇಲ್ಲದಿರುವಲ್ಲಿ, ಶಿಸ್ತು ಪ್ರಾಧಿಕಾರಿಯು (i)ನೇ ಖಂಡದ ಮೇರೆಗೆ ಸರ್ಕಾರಿ ನೌಕರನಿಗೆ ನೀಡಿದ ನೋಟೀಸಿಗೆ ಅನುಸಾರವಾಗಿ ಅವನು ಮನವಿ ಏನಾದರೂ ಸಲ್ಲಿಸಿದ್ದರೆ, ಅದನ್ನು ಪರಿಶೀಲಿಸತಕ್ಕದ್ದು ಮತ್ತು ಸರ್ಕಾರಿ ನೌಕರನ ಮೇಲೆ ಯಾವುದಾದರೂ ದಂಡನೆಯನ್ನು ವಿಧಿಸಬೇಕಿದ್ದರೆ ಯಾವುದನ್ನು ವಿಧಿಸಬೇಕೆಂಬುದನ್ನು ನಿರ್ಧರಿಸತಕ್ಕದ್ದು ಮತ್ತು ತಾನು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡತಕ್ಕದ್ದು.
- ಲಘು ದಂಡನೆಗಳನ್ನು ವಿಧಿಸಲು ಕಾರ್ಯವಿಧಾನ.- (1) 11ಎ ನಿಯಮದ (3)ನೇ ಉಪನಿಯಮದ ಉಪಬಂಧಗಳಿಗೊಳಪಟ್ಟು, 8ನೇ ನಿಯಮದ (i) ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿರುವ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಸರ್ಕಾರಿ ನೌಕರನಿಗೆ ವಿಧಿಸುವ ಯಾವುದೇ ಆದೇಶವನ್ನು,-
(ಎ) ಸರ್ಕಾರಿ ನೌಕರನಿಗೆ ಅವನ ವಿರುದ್ಧ ಕ್ರಮಕೈಗೊಳ್ಳುವ ಪ್ರಸ್ತಾವವನ್ನು ಮತ್ತು ಯಾವ ದುರ್ನಡತೆಯ ಅಥವಾ ದುರ್ವರ್ತನೆಯ ಮೇಲೆ ಕ್ರಮಕೈಗೊಳ್ಳಲು ಪ್ರಸ್ತಾವಿಸಲಾಗಿದೆಯೋ ಆ ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಗಳನ್ನು ಲಿಖಿತದಲ್ಲಿ ತಿಳಿಸಿದ ತರುವಾಯ ಹೊರತು ಮತ್ತು ಆ ಪ್ರಸ್ತಾವದ ವಿರುದ್ಧ ಅವನು ಇಚ್ಛಿಸಬಹುದಾದಂಥ ಮನವಿಯನ್ನು ಮಾಡಿಕೊಳ್ಳಲು ಅವನಿಗೆ ಸಮಂಜಸವಾದ ಅವಕಾಶವನ್ನು ಕೊಟ್ಟ ತರುವಾಯ ಹೊರತು;
(ಬಿ) ಯಾವ ಪ್ರಕರಣದಲ್ಲಿ ಶಿಸ್ತು ಪ್ರಾಧಿಕಾರಿಯು ವಿಚಾರಣೆ ನಡೆಸುವುದು ಅವಶ್ಯವೆಂದು ಅಭಿಪ್ರಾಯಪಡುವನೋ ಅಂಥ ಪ್ರತಿಯೊಂದು ಪ್ರಕರಣದಲ್ಲಿ, 11ನೇ ನಿಯಮದ (3) ರಿಂದ (23)ರ ವರೆಗಿನ ಉಪನಿಯಮಗಳಲ್ಲಿ ಗೊತ್ತುಪಡಿಸಿದ ರೀತಿಯಲ್ಲಿ ವಿಚಾರಣೆಯನ್ನು ನಡೆಸಿದ ತರುವಾಯ ಹೊರತು;
(ಸಿ) (ಎ) ಖಂಡದ ಮೇರೆಗೆ ಸರ್ಕಾರಿ ನೌಕರನು ಸಲ್ಲಿಸಿದ ಮನವಿ ಯಾವುದಾದರೂ ಇದ್ದರೆ, ಅದನ್ನು, ಮತ್ತು (ಬಿ) ಖಂಡದ ಮೇರೆಗೆ ನಡೆಸಿದ ವಿಚಾರಣೆಯ ದಾಖಲೆಯು ಯಾವುದಾದರೂ ಇದ್ದರೆ, ಅದನ್ನು ಪರಿಗಣಿಸಿದ ತರುವಾಯ ಹೊರತು;
(ಡಿ) ದುರ್ನಡತೆಯ ಅಥವಾ ದುರ್ವರ್ತನೆಯ ಪ್ರತಿಯೊಂದು ಆರೋಪಣೆಯ ಮೇಲೆ ನಿರ್ಣಯವನ್ನು ದಾಖಲಿಸಿದ ತರುವಾಯ ಹೊರತು; ಮತ್ತು
(ಇ) ಆಯೋಗದೊಡನೆ ಸಮಾಲೋಚನೆ ನಡೆಸುವುದು ಅವಶ್ಯವಿರುವಲ್ಲಿ, ಅದರೊಂದಿಗೆ ಅಂಥ ಸಮಾಲೋಚನೆ ನಡೆಸಿದ ತರುವಾಯ ಹೊರತು
- ಮಾಡತಕ್ಕದ್ದಲ್ಲ.
(2) ಅಂಥ ಪ್ರಕರಣಗಳಲ್ಲಿ ವ್ಯವಹರಣೆಗಳ ದಾಖಲೆಯು,-
(i) ಸರ್ಕಾರಿ ನೌಕರನ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಸ್ತಾವದ ಬಗ್ಗೆ ಸರ್ಕಾರಿ ನೌಕರನಿಗೆ ತಿಳಿವಳಿಕೆಯ ಪ್ರತಿಯನ್ನು;
(ii) ಅವನಿಗೆ ಕೊಟ್ಟ ದುರ್ನಡತೆಯ ಅಥವಾ ದುರ್ವರ್ತನೆಯ ಆರೋಪಣೆಗಳ ವಿವರಣೆಯ ಪ್ರತಿಯನ್ನು;
(iii) ಅವನ ಮನವಿ ಯಾವುದಾದರೂ ಇದ್ದರೆ, ಅದನ್ನು;
(iv) ವಿಚಾರಣೆಯ ಕಾಲದಲ್ಲಿ ಹಾಜರುಪಡಿಸಿದ ಸಾಕ್ಷ್ಯವನ್ನು;
(v) ಆಯೋಗದ ಸಲಹೆ ಯಾವುದಾದರೂ ಇದ್ದರೆ, ಅದನ್ನು;
(vi) ದುರ್ನಡತೆಯ ಅಥವಾ ದುರ್ವರ್ತನೆಯ ಪ್ರತಿಯೊಂದು ಆರೋಪಣೆಯ ಮೇಲಣ ನಿರ್ಣಯಗಳನ್ನು; ಮತ್ತು
(vii) ಪ್ರಕರಣದ ಮೇಲಣ ಆದೇಶಗಳನ್ನು, ಆ ಸಂಬಂಧವಾದ ಕಾರಣಗಳ ಸಹಿತ
- ಒಳಗೊಂಡಿರತಕ್ಕದ್ದು.
12ಎ. ಆದೇಶಗಳನ್ನು ತಿಳಿಸುವುದು.- ಶಿಸ್ತು ಪ್ರಾಧಿಕಾರಿಯು ಮಾಡಿದ ಆದೇಶಗಳನ್ನು ಸರ್ಕಾರಿ ನೌಕರನಿಗೆ ತಿಳಿಸತಕ್ಕದ್ದು ಹಾಗೂ ಅವನಿಗೆ, ಶಿಸ್ತು ಪ್ರಾಧಿಕಾರಿಯು ವಿಚಾರಣೆಯನ್ನೇನಾದರೂ ನಡೆಸಿದ್ದರೆ, ಅದರ ವರದಿಯ ಪ್ರತಿಯನ್ನು ಮತ್ತು ಪ್ರತಿಯೊಂದು ಆರೋಪ ವಿಷಯದ ಮೇಲಣ ಅವರ ನಿರ್ಣಯಗಳ ಪ್ರತಿಯನ್ನು, ಅಥವಾ ಶಿಸ್ತು ಪ್ರಾಧಿಕಾರಿಯು ವಿಚಾರಣಾ ಪ್ರಾಧಿಕಾರಿಯಾಗಿಲ್ಲದಿದ್ದರೆ, ವಿಚಾರಣಾ ಪ್ರಾಧಿಕಾರಿಯ ವರದಿಯ ಪ್ರತಿಯನ್ನು ಮತ್ತು ವಿಚಾರಣಾ ಪ್ರಾಧಿಕಾರಿಯ ನಿರ್ಣಯಗಳನ್ನು ಶಿಸ್ತು ಪ್ರಾಧಿಕಾರಿಯು ಒಪ್ಪದಿರುವುದಕ್ಕೆ ಕಾರಣಗಳು ಯಾವುವಾದರೂ ಇದ್ದರೆ, ಆ ಸಂಕ್ಷಿಪ್ತ ಕಾರಣಗಳೊಂದಿಗೆ ಶಿಸ್ತು ಪ್ರಾಧಿಕಾರಿಯ ನಿರ್ಣಯಗಳ ವಿವರಣೆಯ ಪ್ರತಿಯನ್ನು (ಅವನಿಗೆ ಅವುಗಳನ್ನು ಈಗಾಗಲೇ ಒದಗಿಸಿರದಿದ್ದರೆ) ಮತ್ತು 14ಎ ನಿಯಮದ ಮೇರೆಗೆ ಜಾಗೃತ ಆಯೋಗವು ವಿಚಾರಣೆಯನ್ನು ನಡೆಸಿದ್ದರೆ, ಜಾಗೃತ ಆಯುಕ್ತರ ಶಿಫಾರಸುಗಳೊಂದಿಗೆ ವಿಚಾರಣಾ ಅಧಿಕಾರಿಯ ನಿರ್ಣಯಗಳ ಪ್ರತಿಯನ್ನು ಮತ್ತು ಆಯೋಗವು ಮಾಡಿದ ಸಲಹೆ ಯಾವುದಾದರೂ ಇದ್ದರೆ, ಅದರ ಪ್ರತಿಯನ್ನು ಸಹ ಮತ್ತು, ಶಿಸ್ತು ಪ್ರಾಧಿಕಾರಿಯು ಆಯೋಗದ ಸಲಹೆಯನ್ನು ಒಪ್ಪಿಕೊಳ್ಳದಿದ್ದರೆ, ಹಾಗೆ ಒಪ್ಪಿಕೊಳ್ಳದಿರುವುದಕ್ಕೆ ಇರುವ ಕಾರಣಗಳ ಸಂಕ್ಷಿಪ್ತ ವಿವರಣೆಯನ್ನು ಒದಗಿಸತಕ್ಕದ್ದು.
- 13ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 13ನೇ ನಿಯಮದಲ್ಲಿ,-
(1) (1)ನೇ ಉಪನಿಯಮದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಪರಂತು, ಅಂಥ ಸರ್ಕಾರಿ ನೌಕರರ ಮೇಲೆ ವಜಾ ದಂಡನೆಯನ್ನು ವಿಧಿಸಲು ಸಕ್ಷಮರಾದ ಪ್ರಾಧಿಕಾರಿಗಳು ಬೇರೆ ಬೇರೆಯವರಾಗಿದ್ದರೆ, ಒಂದೇ ವ್ಯವಹರಣೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಕ್ಕಾಗಿ ಆದೇಶವನ್ನು ಅಂಥ ಪ್ರಾಧಿಕಾರಿಗಳ ಪೈಕಿ ಉನ್ನತ ಪ್ರಾಧಿಕಾರಿಯು ಇತರರ ಸಮ್ಮತಿ ಪಡೆದು ಮಾಡಬಹುದು".
(2) (2)ನೇ ಉಪನಿಯಮದ (iii)ನೇ ಖಂಡದಲ್ಲಿ "11ನೇ ನಿಯಮದಲ್ಲಿ" ಎಂಬ ಪದದ, ಅಂಕಿಗಳ ಬದಲಾಗಿ "11ನೇ ಮತ್ತು 11ಎ ನಿಯಮಗಳಲ್ಲಿ" ಎಂಬ ಪದಗಳನ್ನು, ಅಕ್ಷರಗಳನ್ನು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು.
-
14ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 14ನೇ ನಿಯಮದಲ್ಲಿ "11, 12 ಮತ್ತು 13ನೇ ನಿಯಮಗಳಲ್ಲಿ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ ‘11 ರಿಂದ 13ರ ವರೆಗಿನ ನಿಯಮಗಳಲ್ಲಿ' ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.
-
14ಎ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 14ಎ ನಿಯಮದಲ್ಲಿ, (1)ನೇ ಉಪನಿಯಮದಲ್ಲಿ,-
(ಎ) "9, 10, 11 ಮತ್ತು 13ನೇ ನಿಯಮಗಳಲ್ಲಿ" ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ "9 ರಿಂದ 11ಎ ವರೆಗಿನ ನಿಯಮಗಳಲ್ಲಿ ಮತ್ತು 13ನೇ ನಿಯಮದಲ್ಲಿ" ಎಂಬ ಪದಗಳು, ಅಕ್ಷರ ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.
(ಬಿ) (ಸಿ) ಖಂಡದಲ್ಲಿ ‘‘(2), (3), (4), (5), (6) ಮತ್ತು (7)ನೇ ಉಪ ನಿಯಮಗಳ'' ಎಂಬ ಪದಗಳು, ಆವರಣಗಳು ಮತ್ತು ಅಂಕಿಗಳ ಬದಲಾಗಿ "(2)ನೇ ಉಪನಿಯಮದಿಂದ (20)ರ ವರೆಗಿನ ಉಪ ನಿಯಮಗಳ ಮತ್ತು (23)ನೇ ಉಪನಿಯಮದ'' ಎಂಬ ಪದಗಳನ್ನು, ಆವರಣಗಳನ್ನು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.
(ಸಿ) (ಇ) ಖಂಡದಲ್ಲಿ "11ನೇ ನಿಯಮದ (9) ರಿಂದ (12)ರ ವರೆಗಿನ ಉಪನಿಯಮಗಳ'' ಎಂಬ ಪದಗಳು, ಆವರಣಗಳು ಮತ್ತು ಅಂಕಿಗಳ ಬದಲಾಗಿ ‘‘11ನೇ ನಿಯಮದ (21)ನೇ ಉಪನಿಯಮದ ಮತ್ತು (23)ನೇ ಉಪನಿಯಮದ ಮತ್ತು 11ಎ ನಿಯಮದ'' ಎಂಬ ಪದಗಳನ್ನು, ಆವರಣಗಳನ್ನು, ಅಕ್ಷರಗಳನ್ನು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.
- 15ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 15ನೇ ನಿಯಮದ (2)ನೇ ಉಪನಿಯಮದಲ್ಲಿ,-
(1) (i)ನೇ ಖಂಡದಲ್ಲಿ "(i) ರಿಂದ (iv)ರ ವರೆಗಿನ" ಎಂಬ ಆವರಣಗಳು, ಅಂಕಿಗಳು ಮತ್ತು ಪದಗಳ ಬದಲಾಗಿ "(i)ರಿಂದ (ivಎ) ವರೆಗಿನ" ಎಂಬ ಆವರಣಗಳನ್ನು, ಅಂಕಿಗಳನ್ನು, ಪದಗಳನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(2) (ii)ನೇ ಖಂಡದಲ್ಲಿ,
(ಎ) ಪರಂತುಕದಲ್ಲಿ "11ನೇ ನಿಯಮದ (10)ನೇ ಮತ್ತು (11)ನೇ ಉಪನಿಯಮಗಳ" ಎಂಬ ಪದಗಳು, ಆವರಣಗಳು ಮತ್ತು ಅಂಕಿಗಳಿಗೆ ಬದಲಾಗಿ "11ಎ ನಿಯಮದ" ಎಂಬ ಪದವನ್ನು, ಅಂಕಿಗಳನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(ಬಿ) ವಿವರಣೆಯಲ್ಲಿ ಈ ಮುಂದಿನ ಪದಗಳನ್ನು ಮತ್ತು ಅಂಕಿಗಳನ್ನು ಕೊನೆಯಲ್ಲಿ ಸೇರಿಸತಕ್ಕದ್ದು, ಎಂದರೆ:-
"ಸಾಧ್ಯವಾದಷ್ಟು ಮಟ್ಟಿಗೆ, 11ನೇ ನಿಯಮಕ್ಕೆ ಅನುಸಾರವಾಗಿ".
-
16ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 16ನೇ ನಿಯಮದಲ್ಲಿ (2)ನೇ ಉಪನಿಯಮದ (i)ನೇ ಖಂಡದಲ್ಲಿ, "(i) ರಿಂದ (iv) ವರೆಗಿನ" ಎಂಬ ಆವರಣಗಳು, ಅಂಕಿಗಳು ಮತ್ತು ಪದಗಳಿಗೆ ಬದಲಾಗಿ "(i) ರಿಂದ (ivಎ) ವರೆಗಿನ" ಎಂಬ ಆವರಣಗಳನ್ನು, ಅಂಕಿಗಳನ್ನು, ಪದಗಳನ್ನು ಮತ್ತು ಅಕ್ಷರಗಳನ್ನು ಮತ್ತು "11ನೇ ನಿಯಮದ (11)ನೇ ಉಪನಿಯಮದ" ಎಂಬ ಪದಗಳು, ಆವರಣಗಳು ಮತ್ತು ಅಂಕಿಗಳ ಬದಲಾಗಿ "11ಎ ನಿಯಮದ (3)ನೇ ಉಪನಿಯಮದ" ಎಂಬ ಪದಗಳನ್ನು, ಆವರಣಗಳನ್ನು, ಅಕ್ಷರವನ್ನು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.
-
17ನೇ ನಿಯಮಕ್ಕೆ ಬದಲಾಗಿ ಹೊಸ ನಿಯಮದ ಸೇರ್ಪಡೆ.- ಮೂಲ ನಿಯಮಗಳ 17ನೇ ನಿಯಮದ ಬದಲಾಗಿ ಈ ಮುಂದಿನ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
"17. ಯಾವ ಆದೇಶಗಳ ವಿರುದ್ಧ ಅಪೀಲಿಗೆ ಅವಕಾಶವಿಲ್ಲಮೋ ಆ ಆದೇಶಗಳು.- ಈ ಭಾಗದಲ್ಲಿ ಏನೇ ಒಳಗೊಂಡಿದ್ದರೂ,-
(i) ರಾಜ್ಯಪಾಲರು ಮಾಡಿದ ಯಾವುದೇ ಆದೇಶದ;
(ii) ಅಮಾನತಿನ ಆದೇಶವನ್ನು ಹೊರತುಪಡಿಸಿ, ಶಿಸ್ತು ವ್ಯವಹರಣೆಯ ಅಂತಿಮ ವಿಲೆಗಾಗಿ ಇರುವ ವಾದಕಾಲೀನ ಸ್ವರೂಪದ ಅಥವಾ ಸಹಾಯಕ ಕ್ರಮದ ಸ್ವರೂಪದ ಯಾವುದೇ ಆದೇಶದ;
(iii) 11ನೇ ನಿಯಮದ ಮೇರೆಗೆ ವಿಚಾರಣೆ ನಡೆಯುತ್ತಿರುವಾಗ ವಿಚಾರಣಾ ಪ್ರಾಧಿಕಾರಿಯು ಹೊರಡಿಸಿದ ಯಾವುದೇ ಆದೇಶದ
- ವಿರುದ್ಧ ಅಪೀಲು ಮಾಡಿಕೊಳ್ಳಲು ಅವಕಾಶವಿರತಕ್ಕದ್ದಲ್ಲ".
- 18ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 18ನೇ ನಿಯಮದಲ್ಲಿ,-
(1) (1)ನೇ ಉಪನಿಯಮದಲ್ಲಿ, (ಎ) ಖಂಡದ ಪ್ರಾರಂಭದಲ್ಲಿ ಈ ಮುಂದಿನ ಪದಗಳನ್ನು ಸೇರಿಸತಕ್ಕದ್ದು, ಎಂದರೆ:-
"ಶಿಸ್ತು ಪ್ರಾಧಿಕಾರಿಯಾಗಲಿ ಅಥವಾ ಅಪೀಲು ಅಥವಾ ಪುನರವಲೋಕನ ಪ್ರಾಧಿಕಾರಿಯಾಗಲೀ'';
(2) (5)ನೇ ಉಪನಿಯಮಕ್ಕೆ ಬದಲಾಗಿ ಈ ಮುಂದಿನ ಉಪನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
"(5) (1)ರಿಂದ (4)ರ ವರೆಗಿನ ಉಪನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ,-
(ಎ) ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶವನ್ನು ಮಾಡಿದ ವ್ಯಕ್ತಿಯು ತರುವಾಯ, ಅವನ ನೇಮಕದ ಕಾರಣದಿಂದ ಅಥವಾ ಅನ್ಯಥಾ, ಅಂಥ ಆದೇಶಕ್ಕೆ ಸಂಬಂಧಿಸಿದಂತೆ ಅಪೀಲು ಪ್ರಾಧಿಕಾರಿಯಾದರೆ, ಅಂಥ ಆದೇಶದ ವಿರುದ್ಧ ಅಪೀಲನ್ನು ಅಂಥ ವ್ಯಕ್ತಿಯು ಯಾವ ಪ್ರಾಧಿಕಾರಿಗೆ ನಿಕಟ ಅಧೀನನಾಗಿರುವನೋ ಆ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು;
(ಬಿ) 13ನೇ ನಿಯಮದ ಮೇರೆಗೆ ನಡೆಸಿದ ಒಂದೇ ವ್ಯವಹರಣೆಯಲ್ಲಿನ ಆದೇಶದ ವಿರುದ್ಧ ಅಪೀಲನ್ನು, ಆ ವ್ಯವಹರಣೆಯ ಉದ್ದೇಶಕ್ಕಾಗಿ ಶಿಸ್ತು ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರಿಯು ಯಾವ ಪ್ರಾಧಿಕಾರಿಗೆ ನಿಕಟ ಅಧೀನನಾಗಿರುವನೋ ಆ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು".
- 19ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ 19ನೇ ನಿಯಮದ (2)ನೇ ಉಪನಿಯಮದಲ್ಲಿ, (ಸಿ) ಖಂಡದ ಬದಲಾಗಿ, ಈ ಮುಂದಿನ ಖಂಡಗಳನ್ನು ಸೇರಿಸತಕ್ಕದ್ದು, ಎಂದರೆ:-
"(ಸಿ) ನಿಯಮಗಳ ಮೇರೆಗೆ ಅವನಿಗೆ ಅನುಮತಿಸಲಾಗುವ ನಿವೃತ್ತಿ ವೇತನವನ್ನು ಕಡಿಮೆ ಮಾಡಿರುವ ಅಥವಾ ತಡೆಹಿಡಿದಿರುವ ಅಥವಾ ಗರಿಷ್ಠ ನಿವೃತ್ತಿ ವೇತನವನ್ನು ನಿರಾಕರಿಸಿರುವ;
(ಸಿಎ) ಅವನ ಅಮಾನತ್ತಿನ ಅವಧಿಗೆ ಅಥವಾ ಯಾವ ಅವಧಿಯಲ್ಲಿ ಅವನು ಅಮಾನತ್ತಿನಲ್ಲಿ ಇರುವುದಾಗಿ ಭಾವಿಸಲಾಗಿದೆಯೋ ಆ ಅವಧಿಗೆ ಅಥವಾ ಅದರ ಯಾವುದೇ ಭಾಗಕ್ಕೆ ಅವನಿಗೆ ಸಂದಾಯ ಮಾಡಬೇಕಾದ ಜೀವನಾಧಾರ ಮತ್ತು ಇತರ ಭತ್ಯಗಳನ್ನು ನಿರ್ಧರಿಸಿರುವ;
(ಸಿಬಿ) ಅವನ ವೇತನ ಮತ್ತು ಭತ್ಯಗಳನ್ನು,-
(i) ಅಮಾನತ್ತಿನ ಅವಧಿಗೆ ಸಂಬಂಧಿಸಿದಂತೆ; ಅಥವಾ
(ii) ಅವನನ್ನು ಸೇವೆಯಿಂದ ವಜಾ ಮಾಡಿದ, ತೆಗೆದು ಹಾಕಿದ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸಿದ ದಿನಾಂಕದಿಂದ ಅಥವಾ ಅವನನ್ನು ಕೆಳಗಿನ ಸೇವೆಗೆ, ಕೆಳಗಿನ ಹುದ್ದೆಯ ಶ್ರೇಣಿಗೆ, ಕೆಳಗಿನ ಹುದ್ದೆಗೆ, ಕೆಳಗಿನ ಕಾಲಿಕ ವೇತನ ಶ್ರೇಣಿಗೆ ಅಥವಾ ಕಾಲಿಕವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸಿದ ದಿನಾಂಕದಿಂದ ಅವನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಅವನನ್ನು ಪುನ: ನೇಮಕ ಮಾಡಿದ ಅಥವಾ ಪೂರ್ವಸ್ಥಿತಿಗೆ ತಂದ ದಿನಾಂಕಕ್ಕೆ ಸಂಬಂಧಿಸಿದಂತೆ - ನಿರ್ಧರಿಸಿರುವ; ಅಥವಾ
(ಸಿಸಿ) ಅವನ ಅಮಾನತಿನ ದಿನಾಂಕದಿಂದ ಅಥವಾ ಅವನನ್ನು ಸೇವೆಯಿಂದ ವಜಾ ಮಾಡಿದ, ತೆಗೆದುಹಾಕಿದ, ಕಡ್ಡಾಯವಾಗಿ ನಿವೃತ್ತಿಗೊಳಿಸಿದ ಅಥವಾ ಕೆಳಗಿನ ಸೇವೆಗೆ, ಕೆಳಗಿನ ಹುದ್ದೆಯ ಶ್ರೇಣಿಗೆ, ಕೆಳಗಿನ ಹುದ್ದೆಗೆ, ಕೆಳಗಿನ ಕಾಲಿಕ ವೇತನ ಶ್ರೇಣಿಗೆ ಅಥವಾ ಕೆಳಗಿನ ವೇತನಕ್ಕೆ ಅಥವಾ ಕಾಲಿಕ ವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸಿದ ದಿನಾಂಕದಿಂದ ಅವನನ್ನು ಅವನ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ಪುನಃ ನೇಮಿಸಿದ ಅಥವಾ ಪೂರ್ವಸ್ಥಿತಿಗೆ ತಂದ ದಿನಾಂಕದವರೆಗಿನ ಅವಧಿಯನ್ನು ಯಾವುದೇ ಉದ್ದೇಶಕ್ಕಾಗಿ ಕರ್ತವ್ಯದ ಮೇಲಿದ್ದ ಅವಧಿಯೆಂದು ಭಾವಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿರುವ
- ಆ ಯಾವುದೇ ಆದೇಶದ ವಿರುದ್ಧ,-
(i) ಯಾವ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಮಾತ್ರವೇ ಸೇವೆಯಿಂದ ವಜಾ ಮಾಡುವ ದಂಡನೆಯನ್ನು ವಿಧಿಸಬಹುದೋ, ಆ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ಮಾಡಿದ ಆದೇಶದ ಸಂದರ್ಭದಲ್ಲಿ, ರಾಜ್ಯಪಾಲರಿಗೆ, ಮತ್ತು
(ii) ಯಾರೇ ಇತರ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ಸೇವೆಯಿಂದ ವಜಾ ಮಾಡಿದ ಆದೇಶದ ಸಂದರ್ಭದಲ್ಲಿ, ಆ ನೌಕರನನ್ನು ಸೇವೆಯಿಂದ ವಜಾ ಮಾಡಿದ ದಂಡನೆಯನ್ನು ವಿಧಿಸಿರುವ ಆದೇಶದ ವಿರುದ್ಧ ಯಾವ ಪ್ರಾಧಿಕಾರಿಗೆ ಅಪೀಲು ಮಾಡಿಕೊಳ್ಳಲು ಅವಕಾಶವಿರುವುದೋ ಆ ಪ್ರಾಧಿಕಾರಿಗೆ
- ಅಪೀಲು ಮಾಡಿಕೊಳ್ಳಲು ಅವಕಾಶವಿರತಕ್ಕದ್ದು.’’
- 28ಎ, 28ಬಿ,28ಸಿ ಮತ್ತು 28ಡಿ ನಿಯಮಗಳ ಸೇರ್ಪಡೆ.- ಮೂಲ ನಿಯಮಗಳ 28ನೇ ನಿಯಮದ ನಂತರ, ಈ ಮುಂದಿನ ನಿಯಮಗಳನ್ನು ಸೇರಿಸತಕ್ಕದ್ದು, ಎಂದರೆ:-
28ಎ. ಆದೇಶ, ನೋಟೀಸುಗಳು, ಮುಂತಾದವುಗಳ ಜಾರಿ.- (1) ಈ ನಿಯಮಗಳ ಮೇರೆಗೆ ಮಾಡಿದ ಅಥವಾ ಹೊರಡಿಸಿದ ಪ್ರತಿಯೊಂದು ಆದೇಶವನ್ನು, ನೋಟೀಸನ್ನು ಮತ್ತು ಇತರ ಪ್ರೊಸೆಸನ್ನು ಸಂಬಂಧಪಟ್ಟ ಸರ್ಕಾರಿ ನೌಕರನಿಗೆ ಖುದ್ದಾಗಿ ಜಾರಿ ಮಾಡತಕ್ಕದ್ದು ಅಥವಾ ಅವನಿಗೆ ನೋಂದಾಯಿತ ಅಂಚೆ ಮೂಲಕ ಕಳಿಸಿಕೊಡತಕ್ಕದ್ದು.
(2) ಸರ್ಕಾರಿ ನೌಕರನು ಅಂಥ ಆದೇಶವನ್ನು, ನೋಟೀಸನ್ನು ಅಥವಾ ಇತರ ಪ್ರೋಸೆಸನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ ಅಥವಾ ಅವುಗಳ ಜಾರಿಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಣಿಸಿಕೊಳ್ಳದಿರುವ ಸಂದರ್ಭದಲ್ಲಿ, ಅದರ ಪ್ರತಿಯನ್ನು ಶಿಸ್ತು ಪ್ರಾಧಿಕಾರಿಯ ಅಥವಾ ವಿಚಾರಣಾ ಪ್ರಾಧಿಕಾರಿಯ ಕಚೇರಿಯ ಸೂಚನಾ ಫಲಕದ ಮೇಲೆ ಮತ್ತು ಅವನು ಈ ಹಿಂದೆ ವಾಸವಾಗಿದ್ದನೆಂದು ತಿಳಿದುಬಂದ ಮನೆ ಯಾವುದಾದರೂ ಇದ್ದರೆ, ಅದರ ಯಾವುದೇ ಎದ್ದುಕಾಣುವ ಸ್ಧಳದಲ್ಲಿ ಅಂಟಿಸುವ ಮೂಲಕ, ಅಥವಾ ರಾಜ್ಯದಲ್ಲಿ ಅಧಿಕ ಪ್ರಸಾರವುಳ್ಳ ಎರಡು ದೈನಂದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಜಾರಿ ಮಾಡಬಹುದು.
28ಬಿ. ಕಾಲಮಿತಿಯನ್ನು ಸಡಿಲಿಸಲು ಮತ್ತು ವಿಳಂಬವನ್ನು ಮನ್ನಾ ಮಾಡಲು ಅಧಿಕಾರ.- ಈ ನಿಯಮಗಳಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಿರುವುದನ್ನುಳಿದು, ಈ ನಿಯಮಗಳ ಮೇರೆಗೆ ಯಾವುದೇ ಆದೇಶವನ್ನು ಮಾಡಲು ಸಕ್ಷಮನಾಗಿರುವ ಪ್ರಾಧಿಕಾರಿಯು, ಯುಕ್ತ ಮತ್ತು ಸಾಕಷ್ಟು ಕಾರಣಗಳಿಗಾಗಿ ಅಥವಾ ಸಾಕಷ್ಟು ಕಾರಣವನ್ನು ತೋರಿಸಿದರೆ, ಈ ನಿಯಮಗಳ ಮೇರೆಗೆ ಮಾಡುವಂತೆ ಅಗತ್ಯಪಡಿಸಿದ ಯಾವುದೇ ಕಾರ್ಯದ ಬಗ್ಗೆ ನಿರ್ದಿಷ್ಟಪಡಿಸಲಾದ ಅವಧಿಯನ್ನು ವಿಸ್ತರಿಸಬಹುದು ಅಥವಾ ಯಾವುದೇ ವಿಳಂಬವನ್ನು ಮನ್ನಾ ಮಾಡಬಹುದು.
28ಸಿ. ಆಯೋಗದ ಸಲಹೆಯ ಪ್ರತಿಯನ್ನು ಒದಗಿಸುವುದು.- ಈ ನಿಯಮಗಳಲ್ಲಿ ಉಪಬಂಧಿಸಲಾದಂತೆ ಆಯೋಗದೊಡನೆ ಸಮಾಲೋಚನೆ ಮಾಡಿದಾಗಲೆಲ್ಲ, ಆಯೋಗದ ಸಲಹೆಯ ಪ್ರತಿಯನ್ನು, ಮತ್ತು ಅಂಥ ಸಲಹೆಯನ್ನು ಒಪ್ಪದಿರುವ ಸಂದರ್ಭದಲ್ಲಿ, ಹಾಗೆ ಒಪ್ಪದಿರುವುದಕ್ಕೆ ಕಾರಣಗಳ ಸಂಕ್ಷಿಪ್ತ ವಿವರಣೆಯನ್ನು, ಆ ಪ್ರಕರಣದಲ್ಲಿ ಹೊರಡಿಸಿದ ಆದೇಶದ ಪ್ರತಿಯ ಸಹಿತ ಆ ಆದೇಶವನ್ನು ಮಾಡಿದ ಪ್ರಾಧಿಕಾರಿಯು ಸಂಬಂಧಪಟ್ಟ ಸರ್ಕಾರಿ ನೌಕರನಿಗೆ ಒದಗಿಸತಕ್ಕದ್ದು.
28ಡಿ. ಕರ್ನಾಟಕ ನ್ಯಾಯಾಂಗ ಸೇವೆ, ಮುಂತಾದವುಗಳ ಸದಸ್ಯರಿಗೆ ಸಂಬಂಧಿಸಿದ ಉಪಬಂಧ.- ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಈ ನಿಯಮಗಳಲ್ಲಿ ರಾಜ್ಯಪಾಲರಿಗೆ ಅಥವಾ ಸರ್ಕಾರಕ್ಕೆ ಮಾಡಿದ ಉಲ್ಲೇಖಗಳನ್ನು, ಭಾರತ ಸಂವಿಧಾನದ 235ನೇ ಅನುಚ್ಛೇದದ ಮೇರೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯಗಳ ಮತ್ತು ಅವುಗಳಿಗೆ ಅಧೀನವಾಗಿರುವ ನ್ಯಾಯಾಲಯಗಳ ಮೇಲೆ ಹೊಂದಿರುವ ನಿಯಂತ್ರಣಕ್ಕೆ ಅವು ಸಂಬಂಧಪಡುವಷ್ಟರ ಮಟ್ಟಿಗೆ, ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು:
ಪರಂತು, ಈ ನಿಯಮದಲ್ಲಿರುವುದು ಯಾವುದೂ, ನ್ಯಾಯಾಂಗ ಸೇವೆಯ ಸದಸ್ಯರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಭಾರತ ಸಂವಿಧಾನದ ಮೇರೆಗೆ ಹೊಂದಿರುವ ಅಧಿಕಾರಗಳಿಗೆ ಅಥವಾ ಒಬ್ಬ ವ್ಯಕ್ತಿಯು ತನ್ನ ಸೇವಾ ಷರತ್ತುಗಳ ವಿನಿಯಮನಕ್ಕೆ ಸಂಬಂಧಿಸಿದ ಕಾನೂನಿನ ಮೇರೆಗೆ ಹೊಂದಿರಬಹುದಾದಂಥ ಅಪೀಲಿನ ಹಕ್ಕಿಗೆ ಬಾಧಕವನ್ನುಂಟುಮಾಡತಕ್ಕದ್ದಲ್ಲ.
- IIನೇ ಅನುಸೂಚಿಯ ತಿದ್ದುಪಡಿ.- ಮೂಲ ನಿಯಮಗಳ IIನೇ ಅನುಸೂಚಿಯಲ್ಲಿ, 4ನೇ ಅಂಕಣದಲ್ಲಿ,-
(1) "(ii) ಮತ್ತು (iii)" ಎಂಬ ಆವರಣಗಳು, ಅಂಕಿಗಳು ಮತ್ತು ಪದವು ಬರುವ ಕಡೆಯಲ್ಲೆಲ್ಲಾ ಅವುಗಳ ಬದಲಾಗಿ ‘‘(ii) ಮತ್ತು (iiiಎ)'' ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(2) "(ii) ರಿಂದ (iv)" ಎಂಬ ಆವರಣಗಳು, ಅಂಕಿಗಳು ಮತ್ತು ಪದವು ಬರುವ ಕಡೆಯಲ್ಲೆಲ್ಲಾ ಅವುಗಳ ಬದಲಾಗಿ "(ii) ರಿಂದ (ivಎ)" ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.
(3) "(iii) ಮತ್ತು (iv)" ಎಂಬ ಆವರಣಗಳು, ಅಂಕಿಗಳು ಮತ್ತು ಪದವು ಬರುವ ಕಡೆಯಲ್ಲೆಲ್ಲಾ ಅವುಗಳ ಬದಲಾಗಿ "(iii) ರಿಂದ (ivಎ)'' ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.
(4) "(iv)" ಎಂಬ ಆವರಣಗಳು ಮತ್ತು ಅಂಕಿಗಳು ಬರುವ ಕಡೆಯಲ್ಲೆಲ್ಲಾ ಅದಕ್ಕೆ ಬದಲಾಗಿ ‘‘(iv) ಮತ್ತು (ivಎ)" ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(5) "(iii)" ಎಂಬ ಆವರಣಗಳು ಮತ್ತು ಅಂಕಿಗಳು ಬರುವ ಕಡೆಯಲ್ಲೆಲ್ಲಾ ಅದಕ್ಕೆ ಬದಲಾಗಿ ‘‘(iii) ಮತ್ತು (iiiಎ)'' ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.
- IIIನೇ ಅನುಸೂಚಿಯ ತಿದ್ದುಪಡಿ.- ಮೂಲ ನಿಯಮಗಳ IIIನೇ ಅನುಸೂಚಿಯಲ್ಲಿ 4ನೇ ಅಂಕಣದಲ್ಲಿ,-
(1) "(ii) ರಿಂದ (iv)" ಎಂಬ ಆವರಣಗಳು, ಅಂಕಿಗಳು ಮತ್ತು ಪದವು ಬರುವ ಕಡೆಯಲ್ಲೆಲ್ಲಾ ಅವುಗಳ ಬದಲಾಗಿ "(ii) ರಿಂದ (ivಎ)" ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.
(2) "(iii) ಮತ್ತು (iv)" ಎಂಬ ಆವರಣಗಳು, ಅಂಕಿಗಳು ಮತ್ತು ಪದವು ಬರುವ ಕಡೆಯಲ್ಲೆಲ್ಲಾ ಅವುಗಳ ಬದಲಾಗಿ "(iii) ರಿಂದ (ivಎ)" ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(3) "(i) ರಿಂದ (iv)" ಎಂಬ ಆವರಣಗಳು, ಅಂಕಿಗಳು ಮತ್ತು ಪದವು ಬರುವ ಕಡೆಯಲ್ಲೆಲ್ಲಾ ಅವುಗಳ ಬದಲಾಗಿ "(i) ರಿಂದ (ivಎ)" ಎಂಬ ಆವರಣಗಳನ್ನು, ಅಂಕಿಗಳನ್ನು, ಪದವನ್ನು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
- ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957ಕ್ಕೆ ತಿದ್ದುಪಡಿ.- ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957ರ 7ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
ಕರ್ನಾಟಕ ರಾಜ್ಯಪಾಲರು
(ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69)