(1) 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಸೇವೆಗಳಲ್ಲಿ ಯಾವುದೇ ಸೇವೆಯ ಸದಸ್ಯನಾಗಿರುವ ಪ್ರತಿಯೊಬ್ಬ ವ್ಯಕ್ತಿಯು,-
(ಎ) 1 [ಶಿಸ್ತು ಪ್ರಾಧಿಕಾರಿಯಾಗಲಿ ಅಥವಾ ಅಪೀಲು ಅಥವಾ ಪುನರವಲೋಕನ ಪ್ರಾಧಿಕಾರಿಯಾಗಲಿ 8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಿ;
- ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12.12.73ರ ಮೂಲಕ ಸೇರಿಸಲಾಗಿದೆ. (ಕೆಜಿಡಿ 24.1.74) (ಬಿ) ನಿಗದಿತ ಅಥವಾ ಅನಿರ್ದಿಷ್ಟ ಅವಧಿಗಾಗಿ ಅವನ ಕರಾರಿನ ನಿಬಂಧನೆಗಳಿಗನುಸಾರವಾಗಿ ಹುದ್ದೆಯನ್ನು ರದ್ದುಗೊಳಿಸಿದ್ದ ಹೊರತು, ಅವನನ್ನು ಸೇವೆಯಿಂದ ಬಿಡುಗಡೆ ಮಾಡಿ: ಪರಂತು, ಅವನ ಸೇವೆಯನ್ನು ಕೊನೆಗೊಳಿಸಿದ ಕಾಲದಲ್ಲಿ ಎರಡು ಬಗೆಯ ಕರಾರುಗಳ ಪೈಕಿ ಯಾವುದೊಂದರ ಮೇರೆಗೆ ಅವನು ಐದು ವರ್ಷಗಳಿಗೆ ಮೀರಿದ ನಿರಂತರ ಸೇವೆ ಸಲ್ಲಿಸಿರಬೇಕು;
(ಸಿ) ನಿವೃತ್ತಿ ವೇತನಗಳಿಗೆ ಸಂಬಂಧಿಸಿದ ನಿಯಮಗಳ ಮೇರೆಗೆ ಅವನಿಗೆ ಅನ್ವಯಿಸುವ ನಿವೃತ್ತಿ ವೇತನವನ್ನು ಕಡಿಮೆಮಾಡಿ ಅಥವಾ ತಡೆಹಿಡಿದು; ಅಥವಾ
(ಡಿ) 10ನೇ ನಿಯಮದ ಮೇರೆಗೆ ಅವನನ್ನು ಅಮಾನತಿನಲ್ಲಿರಿಸಿ - ಪ್ರಾಧಿಕಾರಿಯು ಹೊರಡಿಸಿದ ಆದೇಶದ ವಿರುದ್ಧ, ಇಲ್ಲಿ ಇನ್ನು ಮುಂದೆ ಉಪಬಂಧಿಸಿರುವಷ್ಟರ ಮಟ್ಟಿಗೆ ಆ ಪ್ರಾಧಿಕಾರಿಗಳಿಗೆ ಅಪೀಲು ಮಾಡಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದೇ ಹೊರತು ಅನ್ಯಥಾ ಅಲ್ಲ.
(2) ರಾಜ್ಯ ಸಿವಿಲ್ ಸೇವೆಯ ಎ ಮತ್ತು ಬಿ ಸಮೂಹದ ಸದಸ್ಯನು,-
(ಎ) ನೇಮಕ ಪ್ರಾಧಿಕಾರಿಗೆ ಅಧೀನನಾದ ಪ್ರಾಧಿಕಾರಿಯು ಮಾಡಿದ ಆದೇಶದ ವಿರುದ್ಧ ನೇಮಕ ಪ್ರಾಧಿಕಾರಿಗೆ ;
(ಬಿ) 8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಅವನಿಗೆ ವಿಧಿಸಿ ಇತರ ಯಾರೇ ಪ್ರಾಧಿಕಾರಿಯು ಮಾಡಿದ ಆದೇಶದ ವಿರುದ್ಧ ಅಥವಾ (1)ನೇ ಉಪನಿಯಮದ (ಎ), (ಬಿ), (ಸಿ) ಮತ್ತು (ಡಿ) ಖಂಡಗಳಲ್ಲಿ ಉಲ್ಲೇಖಿಸಿದ ಆದೇಶದ ವಿರುದ್ಧ ರಾಜ್ಯಪಾಲರಿಗೆ - ಅಪೀಲು ಸಲ್ಲಿಸಬಹುದು.
(3) II ಮತ್ತು IIIನೇ ಅನುಸೂಚಿಗಳಲ್ಲಿನ 1ನೇ ಅಂಕಣದಲ್ಲಿ ಸೇರಿಸಲಾದ ಸೇವೆಯ ಸದಸ್ಯನು ಅಥವಾ ಹುದ್ದೆಯ ಧಾರಕನು 9ನೇ ನಿಯಮದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮಾಡಿದ ಆದೇಶದ ವಿರುದ್ಧ ಸದರಿ ಅನುಸೂಚಿಗಳ ಅಂಕಣ 5ರಲ್ಲಿ ನಿರ್ದಿಷ್ಟಪಡಿಸಿದ ಪ್ರಾಧಿಕಾರಿಗಳಿಗೆ 1 [ಮತ್ತು ಅಪೀಲು ಪ್ರಾಧಿಕಾರಿಯು ಮಾಡಿದ ಆದೇಶಗಳ ವಿರುದ್ಧ, ಅಪೀಲು ಪ್ರಾಧಿಕಾರಿಯು ಯಾರಿಗೆ ನಿಕಟ ಅಧೀನ ಅಧಿಕಾರಿಯಾಗಿರುವನೋ ಆ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು:]1 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 11 ಎಸ್ಡಿಇ 83, ದಿನಾಂಕ 23.2.84ರ ಮೂಲಕ ಸೇರಿಸಲಾಗಿದೆ. (ಕೆಜಿಡಿ 15.3.84)
ಪರಂತು, II ಮತ್ತು IIIನೇ ಅನುಸೂಚಿಗಳ ಅಂಕಣ 1ರಲ್ಲಿ ಒಳಗೊಳ್ಳದಿರುವ ಹುದ್ದೆಗಳ ಸಂದರ್ಭದಲ್ಲಿ, ಅಂಥ ಹುದ್ದೆಗಳ ಧಾರಕನು ಅಥವಾ ಧಾರಕರು 9ನೇ ನಿಯಮದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮಾಡಿದ ಆದೇಶಗಳ ವಿರುದ್ಧ, ದಂಡನೆಯನ್ನು ವಿಧಿಸುವ ಪ್ರಾಧಿಕಾರಿಯ ನಿಕಟ ವರಿಷ್ಠ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು:
1 [ಮತ್ತೂ ಪರಂತು, ಯಾವ ಸರ್ಕಾರಿ ನೌಕರನಿಗೆ 8ನೇ ನಿಯಮದ (i) ರಿಂದ (ivಎ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿರುವ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಿರುವ ಆದೇಶವನ್ನು, (v) ರಿಂದ (viii)ರ ವರೆಗಿನ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸುವುದಕ್ಕೆ ಅಧಿಕಾರ ಹೊಂದಿದ ನೇಮಕ ಪ್ರಾಧಿಕಾರಿಯು ಅಥವಾ ಇತರ ಯಾರೇ ಶಿಸ್ತು ಪ್ರಾಧಿಕಾರಿಯು ಮಾಡಿರುವರೋ ಆ ಸರ್ಕಾರಿ ನೌಕರನು (v) ರಿಂದ (viii)ರ ವರೆಗಿನ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ಅವನಿಗೆ ವಿಧಿಸಿರುವ ಆದೇಶದ ವಿರುದ್ಧ ಯಾವ ಪ್ರಾಧಿಕಾರಿಗೆ ಅಪೀಲು ಸಲ್ಲಿಸಲು ಆತನು ಹಕ್ಕುಳ್ಳವನಾಗಿರುವನೋ ಅದೇ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 2 ಎಸ್ಡಿಇ 85, ದಿನಾಂಕ 30.7.85ರ ಮೂಲಕ ಸೇರಿಸಲಾಗಿದೆ. 1 [ಮತ್ತೂ ಪರಂತು, 9ನೇ ನಿಯಮದ (2)ನೇ ಉಪನಿಯಮದ (ಡಿ) ಖಂಡದ ಪರಂತುಕದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಹೊರಡಿಸಿದ ಆದೇಶದ ವಿರುದ್ಧ, ರಾಜ್ಯ ಸಿವಿಲ್ ಸೇವೆಯ ಸಮೂಹ ‘ಡಿ' ಗೆ ಸೇರಿದ ಸರ್ಕಾರಿ ನೌಕರನು, ದಂಡನೆಯನ್ನು ವಿಧಿಸಿದ ಪ್ರಾಧಿಕಾರಿಯ ನಿಕಟ ವರಿಷ್ಠ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು.
- ಅಧಿಸೂಚನೆ ಸಂಖ್ಯೆ ಜಿಎಡಿ 28 ಓಎಸ್ಆರ್ 59, ದಿನಾಂಕ 7.2.1962ರ ಮೂಲಕ ಸೇರಿಸಲಾಗಿದೆ. 1 [ಮತ್ತೂ ಪರಂತು, ರಾಜ್ಯ ಸಿವಿಲ್ ಸೇವೆಗಳ ಸಮೂಹ ‘ಸಿ' ಯ ಅಥವಾ ಸಮೂಹ ‘ಡಿ' ಯ ಸದಸ್ಯನು, 8ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳಲ್ಲಿ ಯಾವುದೇ ದಂಡನೆಯನ್ನು ವಿಧಿಸಿ ಸರ್ಕಾರವು ಮಾಡಿದ ಯಾವುದೇ ಆದೇಶದ ವಿರುದ್ಧ ರಾಜ್ಯಪಾಲರಿಗೆ ಅಪೀಲು ಸಲ್ಲಿಸಬಹುದು.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 33 ಎಸ್ಡಿಇ 88, ದಿನಾಂಕ 10.2.89ರ ಮೂಲಕ ಸೇರಿಸಲಾಗಿದೆ. ಸೂಚನೆ.- ಈ ನಿಯಮದ ಉದ್ದೇಶಗಳಿಗಾಗಿ ಸೂಕ್ತ ಪ್ರಾಧಿಕಾರಿ ಯಾರು ಎಂಬ ಬಗ್ಗೆ ಸಂಶಯ ಬಂದರೆ, ಆ ವಿಷಯವನ್ನು ಸರ್ಕಾರಕ್ಕೆ ಉಲ್ಲೇಖಿಸತಕ್ಕದ್ದು ಮತ್ತು ಆ ಬಗ್ಗೆ ಸರ್ಕಾರದ ನಿರ್ಣಯವೇ ಅಂತಿಮವಾಗಿರತಕ್ಕದ್ದು. (4) ರಾಜ್ಯ ಸಿವಿಲ್ ಸೇವೆಯ ಸಿ ಸಮೂಹದ ಅಥವಾ ರಾಜ್ಯ ಸಿವಿಲ್ ಸೇವೆಯ ಡಿ ಸಮೂಹದ ಸದಸ್ಯನು, (1)ನೇ ಉಪನಿಯಮದ (ಬಿ), (ಸಿ) ಮತ್ತು (ಡಿ) ಖಂಡಗಳಲ್ಲಿ ಉಲ್ಲೇಖಿಸಿರುವ ಆದೇಶದ ವಿರುದ್ಧ ಆ ಆದೇಶವು ವಜಾ ಆದೇಶವಾಗಿದ್ದಿದ್ದರೆ ಯಾವ ಪ್ರಾಧಿಕಾರಿಗೆ ಈ ನಿಯಮಗಳ ಮೇರೆಗೆ ಅಪೀಲು ಮಾಡಲು ಹಕ್ಕುಳ್ಳವನಾಗಿರುತ್ತಿದ್ದನೋ ಆ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು.
1 [(5) (1)ರಿಂದ (4)ರ ವರೆಗಿನ ಉಪನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ,-
(ಎ) ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶವನ್ನು ಮಾಡಿದ ವ್ಯಕ್ತಿಯು ಆ ತರುವಾಯ, ಅವನ ನೇಮಕದ ಕಾರಣದಿಂದ ಅಥವಾ ಅನ್ಯಥಾ, ಅಂಥ ಆದೇಶಕ್ಕೆ ಸಂಬಂಧಿಸಿದಂತೆ ಅಪೀಲು ಪ್ರಾಧಿಕಾರಿಯಾದರೆ, ಅಂಥ ಆದೇಶದ ವಿರುದ್ಧ ಅಪೀಲನ್ನು ಅಂಥ ವ್ಯಕ್ತಿಯು ಯಾವ ಪ್ರಾಧಿಕಾರಿಗೆ ನಿಕಟ ಅಧೀನನಾಗಿರುವನೋ ಆ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು.
(ಬಿ) 13ನೇ ನಿಯಮದ ಮೇರೆಗೆ ನಡೆಸಿದ ಒಂದೇ ವ್ಯವಹರಣೆಯಲ್ಲಿನ ಆದೇಶದ ವಿರುದ್ಧ ಅಪೀಲನ್ನು ಆ ವ್ಯವಹರಣೆಯ ಉದ್ದೇಶಕ್ಕಾಗಿ ಶಿಸ್ತು ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರಿಯು ಯಾವ ಪ್ರಾಧಿಕಾರಿಗೆ ನಿಕಟ ಅಧೀನನಾಗಿರುವನೋ ಆ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69, ದಿನಾಂಕ 12.12.1973, ಕೆಜಿಡಿ 24.1.74ರ ಮೂಲಕ ಪ್ರತಿಯೋಜಿಸಲಾಗಿದೆ. ವಿವರಣೆ.- "ರಾಜ್ಯ ಸಿವಿಲ್ ಸೇವೆಯ ಸದಸ್ಯ" ಎಂಬ ಪದಾವಳಿಯು ಆ ಸೇವೆಯ ಸದಸ್ಯನಾಗಿರುವುದು ನಿಂತುಹೋದ ವ್ಯಕ್ತಿಯನ್ನು ಒಳಗೊಳ್ಳುತ್ತದೆ.