ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ನೇರನೇಮಕಾತಿ) (ಸಾಮಾನ್ಯ) ನಿಯಮಗಳು, 2021 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಈ ನಿಯಮಗಳು, ಯಾವುದೇ ವಿಶೇಷ ಅಥವಾ ಸಾಮಾನ್ಯ ನಿಯಮಗಳ ಮೂಲಕ ನೇರ ನೇಮಕಾತಿಯ ವಿಧಾನವನ್ನು ಗೊತ್ತುಪಡಿಸಿಲ್ಲದ, ನೇರನೇಮಕಾತಿ ಮೂಲಕ ಭರ್ತಿಮಾಡಬಹುದಾದ ಗ್ರೂಪ್-ಎ, ಗ್ರೂಪ್-ಬಿ,ಗ್ರೂಪ್-ಸಿ ಮತ್ತು ಗ್ರೂಪ್-ಡಿ ಯಲ್ಲಿನ ಎಲ್ಲ ಹುದ್ದೆಗಳಿಗೆ ಅನ್ವಯವಾಗತಕ್ಕದ್ದು.