ಆಯ್ಕೆ ಪ್ರಾಧಿಕಾರವು, ರಾಜ್ಯದ ಮೀಸಲಾತಿ ನೀತಿಗೆ ಅನುಸಾರವಾಗಿ ಖಾಲಿ ಹುದ್ದೆಗಳ ಅರ್ಹತಾ ಷರತ್ತುಗಳನ್ನು, ಅನ್ವಯವಾಗುವ ನೇಮಕಾತಿ ವಿಧಾನವನ್ನು, ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ತಾತ್ಕಾಲಿಕ ಸಂಖ್ಯೆಯನ್ನು ಮತ್ತು ಅವುಗಳ ವರ್ಗೀಕರಣವನ್ನು ನಿರ್ದಿಷ್ಟಪಡಿಸಿ, ಕರ್ನಾಟಕ ರಾಜ್ಯಪತ್ರದಲ್ಲಿ ಖಾಲಿಹುದ್ದೆಗಳನ್ನು ಕುರಿತು ಜಾಹೀರಾತನ್ನು ನೀಡುವ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು. ಅಂಥ ಜಾಹೀರಾತಿನ ಉದ್ಧೃತ ಭಾಗವನ್ನು, ಕನ್ನಡದಲ್ಲಿ ವ್ಯಾಪಕವಾಗಿ ಪ್ರಚಾರವನ್ನು ಹೊಂದಿರುವ ಒಂದಕ್ಕಿಂತ ಹೆಚ್ಚಿನ ದಿನಪತ್ರಿಕೆಗಳಲ್ಲಿ, ವೆಬ್ ಸೈಟ್ ನಲ್ಲಿ ಮತ್ತು ಅದು ತನಗೆ ಸೂಕ್ತವೆಂದು ಭಾವಿಸಬಹುದಾದಂಥ ಜಾಹೀರಾತನ್ನು ಇತರೆ ಮಾಧ್ಯಮಗಳಲ್ಲಿ ಸಹಾ ಪ್ರಕಟಿಸತಕ್ಕದ್ದು.
Loading…