ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಮಾತ್ರ).-
(1) 5ನೇ ನಿಯಮಕ್ಕೆ ಒಳಪಟ್ಟು, ಆಯ್ಕೆ ಪ್ರಾಧಿಕಾರವು ಲಿಖಿತ ಪರೀಕ್ಷೆಯ ಮೌಲ್ಯಮಾಪನವು ಪೂರ್ಣಗೊಂಡ ನಿಕಟ ತರುವಾಯ ಅಥವಾ ಸಂದರ್ಭಾನುಸಾರ ಅರ್ಹತಾ ಪರೀಕ್ಷೆಯಲ್ಲಿನ ಅಂಕಗಳನ್ನು ಮೌಲ್ಯಮಾಪನ ಮಾಡಿದ ನಂತರ, ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ಸಂಬಂಧದಲ್ಲಿ ಮಾತ್ರ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸುವ ಒಂದು ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ರಾಜ್ಯದ ಮೀಸಲಾತಿ ನೀತಿಗೆ ಒಳಪಟ್ಟು, ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಮೂರು ಪಟ್ಟು ಸಮನಾಗಿರುವಂತೆ ಅಂಥ ಅಭ್ಯರ್ಥಿಗಳ ಸಂಖ್ಯೆಯನ್ನು ಅಂತಹ ಪಟ್ಟಿಯಲ್ಲಿ ಸೇರಿಸಿರುವ ಹೆಸರುಗಳನ್ನು ಒಳಗೊಂಡಿರುವ ಅಭ್ಯರ್ಥಿಗಳ ಪೈಕಿಯಿಂದ ಸಂದರ್ಶನಕ್ಕೆ ಕರೆ ನೀಡತಕ್ಕದ್ದು. ಲಿಖಿತ ಪರೀಕ್ಷೆ ಅಥವಾ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಪ್ರಕಟಿಸತಕ್ಕದ್ದಲ್ಲ ಅಥವಾ ಸಂದರ್ಶನ ನಡೆಸುವ ಸದಸ್ಯರಿಗೆ ತಿಳಿಸತಕ್ಕದ್ದಲ್ಲ. ಸದರಿ ಅಂಕಗಳ ಮಾಹಿತಿಯನ್ನು ಗೋಪ್ಯವಾಗಿಡತಕ್ಕದ್ದು. ಸಂದರ್ಶನಕ್ಕಾಗಿ ಇರಿಸಿದ ಗರಿಷ್ಠ ಅಂಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಿಗದಿಪಡಿಸಿದ ಒಟ್ಟು ಅಂಕಗಳ ಶೇಕಡಾ 5 ರಷ್ಟು, ಗರಿಷ್ಠ 50 ಅಂಕಗಳಿಗೆ ಒಳಪಟ್ಟು ಇರತಕ್ಕದ್ದು.
ಆಯ್ಕೆ ವಿಧಾನವು ನಿಯಮ 5 (ಎ) ಅಥವಾ ನಿಯಮ 5(ಸಿ) ರಂತೆ ಸ್ಪರ್ಧಾತ್ಮಕ ಪರೀಕ್ಷೆಯು ಒಳಗೊಂಡಿರದಿದ್ದಲ್ಲಿ, ಆಗ ಸಂದರ್ಶನಕ್ಕೆ ಗರಿಷ್ಠ ಅಂಕಗಳು 50 ಆಗಿರತಕ್ಕದ್ದು.
ಪರಂತು, ಸಂದರ್ಶನದ ಗರಿಷ್ಠ ಅಂಕಗಳನ್ನು ಶೇಕಡಾ 80ಕ್ಕಿಂತ ಹೆಚ್ಚಿಗೆ ಅಥವಾ ಶೇಕಡಾ 40ಕ್ಕಿಂತ ಕಡಿಮೆ ನೀಡಿದ್ದರೆ, ಅಂಥ ಅಂಕಗಳನ್ನು ನೀಡಿರುವುದಕ್ಕೆ ಕಾರಣಗಳನ್ನುಅಂತಹ ಸಂದರ್ಶನ ಮಂಡಳಿಯ ಸದಸ್ಯರು ದಾಖಲಿಸತಕ್ಕದ್ದು.
(2) ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಯನ್ನು, ಆಯ್ಕೆ ಪ್ರಾಧಿಕಾರದ ಅಧ್ಯಕ್ಷರಿಂದ ರಚಿಸಲಾದನಾಲ್ಕು(04) ವ್ಯಕ್ತಿಗಳನ್ನು ಒಳಗೊಂಡ ಸಂದರ್ಶನ ಮಂಡಳಿಯಿಂದ ಸಂದರ್ಶಿಸತಕ್ಕದ್ದು. ಈ ಪೈಕಿ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚು ಆಯ್ಕೆ ಪ್ರಾಧಿಕಾರದ ಸದಸ್ಯರುಗಳು ಇರತಕ್ಕದ್ದಲ್ಲಮತ್ತುಇತರೆ ವ್ಯಕ್ತಿಗಳು ಕರ್ನಾಟಕ ಸರ್ಕಾರದ ನಿವೃತ್ತ ಗ್ರೂಪ್ ಎ ಅಧಿಕಾರಿಗಳಿಂದಸಲಹೆಗಾರರು/ತಜ್ಞರುಗಳನ್ನು, ರಾಜ್ಯ ವಿಶ್ವವಿದ್ಯಾಲಯಗಳ ನಿವೃತ್ತ ಉಪ ಕುಲಪತಿಗಳು ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿನ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ನಿವೃತ್ತ ಪ್ರೊಫೆಸರುಗಳನ್ನು ಒಳಗೊಂಡಿರತಕ್ಕದ್ದು. ಆಯ್ಕೆಪ್ರಾಧಿಕಾರದ ಅತ್ಯಂತ ಹಿರಿಯ ಸದಸ್ಯನು ಮಂಡಳಿಯಲ್ಲಿ ಹಾಜರಿದ್ದು ಸಂದರ್ಶನ ಮಂಡಳಿಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(3) ಆಯ್ಕೆ ಪ್ರಾಧಿಕಾರವು ಕಾನೂನಿನ ಮೂಲಕ ಅಥವಾ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಉಪಬಂಧಿಸಿದಂತೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು ಮತ್ತು ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿಯನ್ನು ಖಚಿತಪಡಿಸಿಕೊಂಡು ಅಭ್ಯರ್ಥಿಗಳಿಗೆ ಮೀಸಲಿರಿಸಲಾದ ಖಾಲಿ ಹುದ್ದೆಗಳ ಅದೇ ಅನುಪಾತದಲ್ಲಿ ಅವರುಗಳ ನೋಂದಣಿ ಸಂಖ್ಯೆಗಳ ಏರಿಕೆ ಕ್ರಮದಲ್ಲಿ ಒಂದು ಖಾಲಿ ಹುದ್ದೆಗೆ ಮೂವರು ಅಭ್ಯರ್ಥಿಗಳ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯತಕ್ಕದ್ದು. ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಂದರ್ಶನ ಮಂಡಳಿಯ ಸದಸ್ಯರುಗಳಿಗೆ ಬಹಿರಂಗಪಡಿಸತಕ್ಕದ್ದಲ್ಲ.
(4) ಆಯ್ಕೆ ಪ್ರಾಧಿಕಾರವು ನಡೆಸಲು ಉದ್ದೇಶಿಸಿದ ಸಂದರ್ಶನಕ್ಕೆ ಸಂಬಂಧಿಸಿದಂತೆ, ಸಂದರ್ಶನದ ದಿನಾಂಕವನ್ನು ಸಾಕಷ್ಟು ಮುಂಚಿತವಾಗಿ ಲಿಖಿತದಲ್ಲಿ, ಎಸ್ಎಂಎಸ್, ಇ ಮೇಲ್ ಮೂಲಕ ಅಭ್ಯರ್ಥಿಗಳಿಗೆ ತಿಳಿಸತಕ್ಕದ್ದು. ಸಂದರ್ಶನ ಮಂಡಳಿಯು ನಿಗದಿಪಡಿಸಿದ ಸಂದರ್ಶನದ ದಿನದಂದು ಬೆಳಗ್ಗೆ 9.00 ಗಂಟೆಗೆ ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಯಾದೃಚ್ಛಿಕ ಆಯ್ಕೆಯನ್ನು ಮಾಡತಕ್ಕದ್ದು.
(5) ಪ್ರತಿಯೊಬ್ಬ ಅಭ್ಯರ್ಥಿಯು, 25 ರಿಂದ 30 ನಿಮಿಷಗಳ ಅವಧಿಯವರೆಗೆ ಪರಿಪೂರ್ಣವಾಗಿ ಸಂದರ್ಶನಕ್ಕೆ ಒಳಗಾಗತಕ್ಕದ್ದು. ಒಂದುದಿನಕ್ಕೆ ಗರಿಷ್ಠ ಒಂಭತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯತಕ್ಕದ್ದು. ಈ ಪೈಕಿ ಪೂರ್ವಾಹ್ನ ಐದು ಮತ್ತು ಅಪರಾಹ್ನ ನಾಲ್ಕು ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನ ಮಂಡಳಿಯು ಸಂದರ್ಶನ ನಡೆಸತಕ್ಕದ್ದು. ಸದಸ್ಯರುಗಳನ್ನು ಪ್ರತಿವಾರ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರು ಬದಲಾಯಿಸತಕ್ಕದ್ದು.
(6) ಸಂದರ್ಶನ ಮಂಡಳಿಯ ಸದಸ್ಯರುಗಳು, ಸಂದರ್ಶನ ಮಂಡಳಿಯು ಸಂದರ್ಶನ ಮಾಡಬೇಕಾಗಿರುವ ಅಭ್ಯರ್ಥಿಯು ನಡೆದು ಬಂದ ಜೀವನ ಮಾರ್ಗದ ದಾಖಲೆಯನ್ನು ಮಾತ್ರವೇ ಅವರು ಪಡೆದುಕೊಳ್ಳತಕ್ಕದ್ದು.ಸಂದರ್ಶನದ ಉದ್ದೇಶವು, ಸಂದರ್ಶನ ಮಂಡಳಿಯು ಸಾರ್ವಜನಿಕ ಸೇವೆಗಳಲ್ಲಿ ವೃತ್ತಿ ಜೀವನನಡೆಸುವುದಕ್ಕೆ ಅಭ್ಯರ್ಥಿಯು ವೈಯಕ್ತಿಕ ಸೂಕ್ತತೆಯನ್ನು ನಿರ್ಣಯಿಸುವುದಾಗಿದೆ. ಸಂದರ್ಶನಮಂಡಳಿಯ ಸದಸ್ಯರುಗಳು, ಸಮರ್ಥಮತ್ತು ನಿಷ್ಪಕ್ಷಪಾತವಾದವೀಕ್ಷಕರುಗಳಾಗಿರತಕ್ಕದ್ದು. ಅಭ್ಯರ್ಥಿಯಮಾನಸಿಕ ಸಾಮರ್ಥ್ಯವನ್ನು ನಿರ್ಣಯಿಸುವುದು ಪರೀಕ್ಷೆಯ ಉದ್ದೇಶವಾಗಿದೆ.
(7) ಸಂದರ್ಶನ ಮಂಡಳಿಯು ಸಂದರ್ಶಿಸಿದ ಅಭ್ಯರ್ಥಿಯು ಸಂದರ್ಶನದ ಸ್ಥಳವನ್ನು ಬಿಟ್ಟ ತರುವಾಯ, ಸಂದರ್ಶನ ಮಂಡಳಿಯ ಅಧ್ಯಕ್ಷತೆ ವಹಿಸಿರುವ ಸದಸ್ಯನು ಮತ್ತು ಸಂದರ್ಶನ ಮಂಡಳಿಯ ಇತರೆ ಮೂವರು ಸದಸ್ಯರುಗಳು, ಅಭ್ಯರ್ಥಿಗೆ ಪ್ರತ್ಯೇಕವಾಗಿ ಅಂಕಗಳನ್ನು ನೀಡತಕ್ಕದ್ದು. ಪರಂತು, ನೀಡಲಾಗಿರುವ ಸಂದರ್ಶನದ ಗರಿಷ್ಠ ಅಂಕಗಳು ಶೇ.80 ಕ್ಕಿಂತ ಹೆಚ್ಚು ಅಥವಾ ಶೇ.40 ಕ್ಕಿಂತ ಕಡಿಮೆಯಾಗಿದ್ದರೆ, ಅಂಥ ಅಂಕಗಳ ನೀಡಿಕೆಗಾಗಿ ಕಾರಣಗಳನ್ನು ಅಂಥ ಸಂದರ್ಶನ ಮಂಡಳಿಯ ಸದಸ್ಯರು ದಾಖಲಿಸತಕ್ಕದ್ದು.
ಸಂದರ್ಶನ ಮಂಡಳಿಯ ಎಲ್ಲ 04 (ನಾಲ್ಕು) ಸದಸ್ಯರುಗಳು ನೀಡಲಾದ ಅಂಕಗಳ ಸರಾಸರಿಯನ್ನು, ಸಂದರ್ಶನದಲ್ಲಿ ಅಭ್ಯರ್ಥಿಗೆ ನೀಡಲಾದ ಅಂತಿಮ ಒಟ್ಟು ಅಂಕಗಳೆಂದು ಪರಿಗಣಿಸತಕ್ಕದ್ದು.