ಈ ನಿಯಮಗಳಲ್ಲಿ , ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ “ನೇಮಕಾತಿ ಪ್ರಾಧಿಕಾರ” ಎಂದರೆ, ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಲ್ಲಿನಿರ್ದಿಷ್ಟಪಡಿಸಿದ ಇಲಾಖಾ ಮುಖ್ಯಸ್ಥರ ದರ್ಜೆಗಿಂತ ಕಡಿಮೆಯಲ್ಲದ ದರ್ಜೆ ಹೊಂದಿರುವನೇಮಕಾತಿ ಪ್ರಾಧಿಕಾರ.
ಪರಂತು, ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಲ್ಲಿ ನಿರ್ದಿಷ್ಟಪಡಿಸಿರುವ ನೇಮಕಾತಿ ಪ್ರಾಧಿಕಾರವು ಇಲಾಖಾ ಮುಖ್ಯಸ್ಥರಿಗೆ ಅಧೀನರಾಗಿದ್ದಲ್ಲಿ, ಆಗ ಈ ನಿಯಮಗಳಿಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ನೇಮಕಾತಿ ಪ್ರಾಧಿಕಾರಿಯಾಗಿರುತ್ತಾರೆ.
(ಬಿ) “ಆಯೋಗ” ಎಂದರೆ, ಕರ್ನಾಟಕ ಲೋಕಸೇವಾ ಅಯೋಗ.
(ಸಿ)“ಇಲಾಖಾ ಮುಖ್ಯಸ್ಥರು”ಎಂದರೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನುಬಂಧ-1ರಲ್ಲಿ ನಮೂದಿಸಲಾದ ಅಧಿಕಾರಿಗಳು ಮತ್ತು ಸರ್ಕಾರವು ಕಾಲಕಾಲಕ್ಕೆ ಇಲಾಖೆಗಳ ಮುಖ್ಯಸ್ಥರುಗಳೆಂದು ಘೋಷಿಸಬಹುದಾದ ಯಾರೇ ಇತರ ಅಧಿಕಾರಿಗಳು.
(ಡಿ) “ಅರ್ಹತಾ ಪರೀಕ್ಷೆ” ಎಂದರೆ, ನೇರ ನೇಮಕಾತಿಗೆ ಕನಿಷ್ಠವಿದ್ಯಾರ್ಹತೆಯಾಗಿ ಯಾವುದೇ ಸೇವೆ ಅಥವಾ ಹುದ್ದೆಗೆ ಸಂಬಂಧಿಸಿದಂತೆ ವಿಶೇಷವಾಗಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ಗೊತ್ತುಪಡಿಸಿದ ಪರೀಕ್ಷೆ ಅಥವಾ ಪರೀಕ್ಷೆಗಳು, ಮತ್ತು
(ಇ) “ಆಯ್ಕೆಪ್ರಾಧಿಕಾರ” ಎಂದರೆ, ಈ ನಿಯಮಗಳಲ್ಲಿಅನ್ಯಥಾ ಉಪಬಂಧಿಸಿದುದನ್ನುಳಿದು, ನಿರ್ದಿಷ್ಟ ಪ್ರವರ್ಗದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರವು ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಬಹುದಾದ ಆಯೋಗ ಅಥವಾ ಅಂಥ ಪ್ರಾಧಿಕಾರ.
(2) ಈ ನಿಯಮಗಳಲ್ಲಿ ಬಳಸಿದ, ಆದರೆ ಇವುಗಳಲ್ಲಿ ಪರಿಭಾಷಿಸಿಲ್ಲದ ಪದಗಳು ಮತ್ತು ಅಭಿವ್ಯಕ್ತಿಗಳು, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ಅವುಗಳಿಗೆ ನೀಡಿರುವಂಥದ್ದೇ ಅರ್ಥವನ್ನು ಹೊಂದಿರತಕ್ಕದ್ದು.