ಈ ನಿಯಮಗಳ ಅಡಿ ನೇರನೇಮಕಾತಿಯನ್ನು, ಆಯ್ಕೆ ವಿಧಾನಗಳಾದ -
(ಎ) ಸಂದರ್ಶನದಲ್ಲಿಗಳಿಸಿದ ಅಂಕಗಳ ಆಧಾರದ ಮೇಲೆ.
(ಬಿ) ಅರ್ಹತಾ ಪರೀಕ್ಷೆಯಲ್ಲಿಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ.
(ಸಿ) ನಡೆಸಲಾದ ಅರ್ಹತಾ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ.
(ಡಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ.
(ಇ) ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ -ಮಾಡತಕ್ಕದ್ದು.
ಪರಂತು, ಇಲಾಖಾ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರವು 3ನೇ ನಿಯಮದ ಮೇರೆಗೆ ಖಾಲಿ ಹುದ್ದೆಗಳನ್ನು ತಿಳಿಸುವಾಗ ಮೇಲ್ಕಂಡ ಆಯ್ಕೆ ವಿಧಾನಗಳ ಪೈಕಿ ಒಂದನ್ನು ಆಯ್ಕೆ ಪ್ರಾಧಿಕಾರಕ್ಕೆನಿರ್ದಿಷ್ಟಪಡಿಸಿ ತಿಳಿಸತಕ್ಕದ್ದು.
ಪರಂತು, ಆಯ್ಕೆಯನ್ನು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮಾಡಲು ಉದ್ದೇಶಿಸಿದ್ದರೆ, ಮತ್ತು ಅಂಥ ಅರ್ಹತಾ ಪರೀಕ್ಷೆಯನ್ನು ಬೇರೆ ಬೇರೆಪ್ರಾಧಿಕಾರಗಳು/ಮಂಡಳಿಗಳು/ಸಂಸ್ಥೆಗಳಿಂದ ನಡೆಸುವಂತಿದ್ದರೆ, ಅಂಥ ಆಯ್ಕೆಯು ಕೇವಲ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಧರಿಸಿರತಕ್ಕದ್ದು. ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಫಲಿತಾಂಶವನ್ನು ವಿವಿಧ ವಿಧಾನಗಳಲ್ಲಿ ನೀಡಲಾಗಿದ್ದರೆ (ಶೇಕಡಾವಾರು ಅಂಕಗಳು, ಪರ್ಸಂಟೈಲ್, ಸಿಜಿಪಿಎ, ಇತ್ಯಾದಿ) ಆಗ ನೇಮಕಾತಿಯನ್ನು ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮಾಡತಕ್ಕದ್ದಲ್ಲ.
ಪರಂತು, ಆಯ್ಕೆಯು ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರಿತವಾಗಿದ್ದಲ್ಲಿ ಅಥವಾ ಅರ್ಹತಾ ಪರೀಕ್ಷೆಯಲ್ಲಿ ಮಾತ್ರ ಗಳಿಸಿದ ಶೇಕಡಾವಾರು ಅಂಕಗಳ ಆಧಾರಿತವಾಗಿದ್ದಲ್ಲಿ ಅಥವಾ ಸಂದರ್ಶನದಲ್ಲಿ ಮಾತ್ರ ಗಳಿಸಿದ ಅಂಕಗಳ ಆಧಾರಿತವಾಗಿದ್ದಲ್ಲಿ ಅಂತಹ ನೇಮಕಾತಿಯಲ್ಲಿ ಒಂದು ವೇಳೆ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಗಳಿಸಿದ್ದರೆ, ಅಂತಹ ಅಭ್ಯರ್ಥಿಗಳ ಅರ್ಹತಾ ಕ್ರಮವನ್ನು ಅವರುಗಳ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸತಕ್ಕದ್ದು, ವಯಸ್ಸಿನಲ್ಲಿ ಹಿರಿಯವನಾದ ವ್ಯಕ್ತಿಯ ಅರ್ಹತಾ ಕ್ರಮದಲ್ಲಿ ಮೇಲಿನ ಸ್ಥಾನದಲ್ಲಿರಬೇಕು.
ಪರಂತು,ಸ್ಪರ್ಧಾತ್ಮಕ ಪರೀಕ್ಷೆಯು ಆಯ್ಕೆಯ ಆಧಾರಿತವಾಗಿದ್ದರೆ, ಅಂಥ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಒಟ್ಟು ಅಂಕಗಳ ಶೇಕಡಾ ಮೂವತ್ತೈದರಷ್ಟಕ್ಕಿಂತ ಕಡಿಮೆ ಇರತಕ್ಕದ್ದಲ್ಲ.
ಪರಂತು, ವೈದ್ಯಕೀಯ ಅಧಿಕಾರಿಗಳ, ಪಶುವೈದ್ಯಾಧಿಕಾರಿಗಳ, ಇಂಜಿನಿಯರುಗಳ ಹುದ್ದೆಗಳ ಮತ್ತು ಸರ್ಕಾರವು ಅಧಿಸೂಚಿಸಬಹುದಾದಂಥ ಇತರೆ ಹುದ್ದೆಗಳ ಮತ್ತು ಆಯ್ಕೆ ವಿಧಾನದ ಗ್ರೂಪ್-ಸಿ ಹಾಗೂ ಗ್ರೂಪ್-ಡಿಯ ಎಲ್ಲ ಹುದ್ದೆಗಳ ಪ್ರವೇಶ ಹಂತದ ಸಂದರ್ಭದಲ್ಲಿ, ಸಂದರ್ಶನವನ್ನು ಒಳಗೊಂಡಿರತಕ್ಕದ್ದಲ್ಲ.