(1) ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು, 2006ನ್ನು ಈ ಮೂಲಕ ನಿರಸನಗೊಳಿಸಲಾಗಿದೆ:
ಪರಂತು, ಅಂತಹ ನಿರಸನವು, ಸದರಿ ನಿಯಮಗಳ ಈ ಹಿಂದಿನ ಕಾರ್ಯಾಚರಣೆಗೆ ಅಥವಾ ಅದರಡಿಯಲ್ಲಿ ಮಾಡಿದ ಅಥವಾ ಮಾಡಲು ಎಡೆಗೊಟ್ಟ ಯಾವುದೇ ಕಾರ್ಯಕ್ಕೆ ಅಥವಾ ಅದರಡಿಯಲ್ಲಿನ ಯಾವುದೇ ಹಕ್ಕಿಗೆ, ಈಗಾಗಲೇ ಅರ್ಜಿಸಿದ ಹೊಣೆಗಾರಿಕೆ ಅಥವಾ ಬಾಧ್ಯತೆಗೆ ಅಥವಾ ಖರ್ಚು ಮಾಡಿದ ವೆಚ್ಚಗಳಿಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.
(2) (1) ನೇ ಉಪ-ನಿಯಮದ ಮೂಲಕ ನಿರಸನಗೊಂಡ ಯಾವುದೇ ನಿಯಮಗಳಿಗೆ ಸಂಬಂಧಿಸಿದ ಯಾವುದೇ ನಿಯಮದಲ್ಲಿನ ಅಥವಾ ಆದೇಶದಲ್ಲಿನ ಯಾವುದೇ ಉಲ್ಲೇಖವು, ಈ ನಿಯಮಗಳ ಸಂವಾದಿ ಉಪಬಂಧಗಳಿಗೆ ಸಂಬಂಧಪಟ್ಟ ಉಲ್ಲೇಖವೆಂಬುದಾಗಿ ಅರ್ಥೈಸತಕ್ಕದ್ದು.
(3) ಅಂತಹ ನಿರಸನದಲ್ಲಿ ಏನೇ ಒಳಗೊಂಡಿದ್ದರೂ, ಸದರಿ ನಿರಸನಗೊಂಡ ನಿಯಮಗಳ ಅಡಿಯಲ್ಲಿಒಳಗೊಳ್ಳುವ ಯಾವುದೇ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಯು, ಈಗಾಗಲೇ ಆರಂಭಗೊಂಡಿದ್ದರೆ ಮತ್ತು ಈ ನಿಯಮಗಳ ಪ್ರಾರಂಭದ ದಿನಾಂಕದಂದು ಇತ್ಯರ್ಥಕ್ಕೆ ಬಾಕಿ ಇದ್ದರೆ, ಅದನ್ನು ಈ ನಿಯಮಗಳ ಪ್ರಾರಂಭಕ್ಕೆ ಮುಂಚೆ ಸದರಿ ನಿಯಮಗಳು ನಿರಸನಗೊಂಡಿಲ್ಲದಿದ್ದರೆ ಹೇಗೋ ಹಾಗೆ, ಸದರಿ ನಿರಸನಗೊಂಡ ನಿಯಮಗಳ ಅನುಸಾರ ಅಂತಿಮಗೊಳಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಪ್ರಸನ್ನಕುಮಾರ್ ಜಿ.ಎಸ್.)
ಸರ್ಕಾರದ ಜಂಟಿ ಕಾರ್ಯದರ್ಶಿ-1
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)