ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು.-
(ಎ) “ಅಧಿನಿಯಮ” ಎಂದರೆ ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ 21);
(2) “ಅರ್ಜಿದಾರ” ಎಂದರೆ ತೆಂಗು ಉತ್ಪಾದಕರ ಕಂಪನಿ ಅಥವಾ ರೈತ ಉತ್ಪಾದಕರ ಸಂಘ;
(A) “Sond ಬೆಳೆಗಾರರು” ಎಂದರೆ. 5 ಆರೋಗ್ಯಕರವಾದ ತೆಂಗಿನ ಮರಗಳಿಗೆ ಕಡಿಮೆಯಿಲ್ಲದಂತೆ ಅವನು ತನ್ನ ಸ್ವಂತ ಜಮೀನಿನಲ್ಲಿ ತೆಂಗಿನ ಮರಗಳನ್ನು ಬೆಳೆಯುವ ರೈತ;
(ಡಿ) “ತೆಂಗು ಅಭಿವೃದ್ದಿ ಮಂಡಳಿ (ಸಿಡಿಬಿ)” ಎಂದರೆ. ತೆಂಗು ಅಭಿವೃದ್ಧಿ ಮಂಡಳಿ ಅಧಿನಿಯಮ, 1979 (1979ರ ಕೇಂದ್ರ ಅಧಿನಿಯಮ 5)ರ ಅಡಿಯಲ್ಲಿ ಸ್ಥಾಪಿತವಾದ ಮಂಡಳಿ;
(ಇ) “Sond ಉತ್ಪಾದಕರ ಕಂಪನಿ (ಸಿಪಿಸಿ)” ಎಂದರೆ ಕಂಪನಿಗಳ ಅಧಿನಿಯಮ, 2013ರ ಅಡಿಯಲ್ಲಿ ನೋಂದಾಯಿಸಲಾದ ಅಥವಾ ನೊಂದಾಯಿಸಲಾಗಿದೆ ಎಂದು ಭಾವಿಸಲಾದ ಮತ್ತು ತರುವಾಯ ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ನೊಂದಾಯಿತವಾದ ತೆಂಗು ಬೆಳೆಗಾರರ ಸಂಘದ ಒಂದು ಒಕ್ಕೂಟ;
(ಎಫ್) “ಸಕ್ಷಮ ಪ್ರಾಧಿಕಾರ” ಎಂದರೆ ಸಂಬಂಧಪಟ್ಟ ಜಿಲ್ಲೆಯ ಅಬಕಾರಿ ಉಪ-ಆಯುಕ್ತರು;
(ಜಿ) ರೈತ ಉತ್ಪಾದಕರ ಸಂಘ (ಎಫ್ಪಿಓ)” ಎಂದರೆ ಕಂಪನಿಗಳ ಅಧಿನಿಯಮ, 2013ರ ಅಡಿಯಲ್ಲಿ ನೋಂ೦ದಾಯಿಸಲಾದ ಕನಿಷ್ಠ 1000 ತೆಂಗು ಬೆಳೆಗಾರರ ರೈತರನ್ನು ತನ್ನ ಸದಸ್ಯರನ್ನಾಗಿ ಹೊಂದಿರುವ ಒಂದು ಕಂಪನಿ:
(ಹೆಚ್) “ನಮೂನೆ” ಎಂದರೆ ಈ ನಿಯಮಗಳಿಗೆ ಸೇರಿಸಲಾದ ನಮೂನೆಗಳು;
(ಐ) “ತೋಟಗಾರಿಕೆ ಇಲಾಖೆ” ಎಂದರೆ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ;
(ಜಿ) “ನೀರಾ ತಂತ್ರಜ್ಞ” ಎಂದರೆ ತೋಟಗಾರಿಕೆ ಇಲಾಖೆ, ತೆಂಗು ಉತ್ಪಾದಕರ TOWN ಅಥವಾ Bom ಅಭಿವೃದ್ಧಿ ಮಂಡಳಿ ಅಥವಾ ರೈತ ಉತ್ಪಾದಕರ ಸಂಘದ ಮೂಲಕ ಕ್ರಮಬದ್ಧವಾಗಿ ನೀರಾ ಇಳಿಸಲು ತರಬೇತಿ ಹೊಂದಿದ ವ್ಯಕ್ತಿ;
(ಕೆ) “ಲೈಸನ್ಸ್” ಎಂದರೆ ತೆಂಗಿನ ಮರಗಳಿಂದ ನೀರಾವನ್ನು ಇಳಿಸಲು ಮತ್ತು ಸಂಗಹಿಸುವುದಕ್ಕೆ ಮತ್ತು ನೀರಾದಿಂದ ಮೌಲ್ಯವರ್ಧಿತ ಉತ್ಪಾದನೆಗಾಗಿ ಸಕ್ಷಮ ಪ್ರಾಧಿಕಾರದಿಂದ ತೆಂಗು ಉತ್ಪಾದಕರ ಕಂಪನಿ ಅಥವಾ ರೈತ ಉತ್ಪಾದಕರ ಸಂಘಕ್ಕೆ ನೀದಲಾದ ಅನುಮತಿ;
(ಎಲ್) “ತೆಂಗಿನ ಮರಗಳಿಗೆ ತೆರಿಗೆ” ಎಂದರೆ ಲೈಸನ್ಸ್ ಪಡೆದುಕೊಂಡಿರುವ ತೆಂಗು ತೋಟದಲ್ಲಿ (ಕಂದಾಯ ನಿರೀಕ್ಷಕರ ದರ್ಜೆಗಿಂತ ಕಟಿಮೆಯಿರದ ಕಂದಾಯ ಅಧಿಕಾರಿ) ಗುರುತು ಮಾಡುವ ಅಧಿಕಾರಿಯಿಂದ ಗುರುತು ಮಾಡಿದ ಪ್ರತಿಯೊಂದು ತೆಂಗು ಮರಕ್ಕೆ ಸಂಬಂಧಿಸಿದಂಂತೆ ವಸೂಲು ಮಾಡಲು ನಿರ್ದಿಷ್ಟಪಡಿಸಲಾದ ಮೊತ್ತ:
(ಎಮ್) “ಸಂಸ್ಕರಣೆ ಮತ್ತು ಸಂಗ್ರಹಣೆ ಘಟಕ” ಎಂದರೆ ನೀರಾ ಮತ್ತು ಅದರ ಉತ್ಪಾದನೆಗಳ ಸಂಸ್ಕರಣೆ. ಮತ್ತು ಸಂಗ್ರಹಣೆಗಾಗಿ. ಕೋಲ್ಡ್ ಸ್ಕೋರೆಜ್ನ್ನು . ಒಳಗೊಂಡಂ೦ತೆ) ಲೈಸನ್ಸ್ನಲ್ಲಿ ನಿರ್ದಿಷ್ಟಪಡಿಸಲಾದ ಕೊಠಡಿ ಅಥವಾ ಕಟ್ಟಡ;
(ಎನ್) “ಮರ” ಎಂದರೆ ತೆಂಗಿನ ಮರ;
(ಓ) “ಮೌಲ್ಯವರ್ಧಿತ ಉತ್ಪನ್ನಗಳು” ಪ್ಯಾಕ್ ಮಾಡಿದ ನೀರಾ, ಕೋಲ್ಡ್ ಚೈನ್ (ಶೀತಲ ಸರಪಳಿ) ಮೂಲಕ ತಯಾರಿಸಿದ ತಾಜಾ ನೀರಾ, ನೀರಾ ಸಿರಪ್, ನೀರಾ ಹನಿ (ಜೀನು), ನೀರಾ ಜಗ್ಗರಿ (ಬೆಲ್ಲ), ನೀರಾ ಬಿಸ್ಕತ್, ನೀರಾ ಚಾಕಾಲೇಟ್ ಗಳು, ನೀರಾ ಕ್ಯಾಂಡಿ ಮತ್ತು ವೀರಾ ಶುಗರ್(ಸಕ್ಕರೆ) ಅಥವಾ ನೀರಾದಿಂದ ಯಾವುದೇ ಇತರೆ ಉತ್ಪನ್ನಗಳು ಅಥವಾ ನೀರಾ ಸಾರಕರಿಸುವಿಕೆ ಅಥವಾ ನೀರಾ ಸಕ್ಕರೆ ಅಂಶಗಳನ್ನೊಳಗೊಂಡ ನೀರಾದಿಂದ ಮೌಲ್ಯವರ್ಧಿತ ಉತ್ಪನ್ನಗಳು:
(2) ಇದರಲ್ಲಿ ಬಳಸಲಾದ ಆದರೆ ಈ ನಿಯಮಗಳಲ್ಲಿ ಪರಿಭಾಷಿಸದೆ ಇರುವ ಎಲ್ಲಾ ಇತರ ಪದಗಳು ಮತ್ತು ಪದಾವಳಿಗಳು ಅಧಿನಿಯಮ ಮತ್ತು ಇವುಗಳ ಅಡಿಯಲ್ಲಿ ರಚಿಸಲಾದ ಇತರ ನಿಯಮಗಳ ಮೇರೆಗೆ ಅವುಗಳಿಗೆ. ಅನುಕ್ರಮವಾಗಿ ಗೊತ್ತುಪಡಿಸಿರುವ ಅದೇ ಅರ್ಥವನ್ನು ಹೊಂ೦ದಿರತಕ್ಕದ್ದು.