(1) ಸಕ್ತಮ ಪ್ರಾಧಿಕಾರವು ಈ ನಿಯಮಗಳ ಅಡಿಯಲ್ಲಿ ನೀಡಲಾದ ಲೈಸನ್ಸ್ನ ನವೀಕರಣಕ್ಕೆ ಸಕ್ಷಮವಾಗಿರತಕ್ಕದ್ದು.
(2) ಕರ್ನಾಟಕ ಅಬಕಾರಿ ಅಧಿನಿಯಮ, 1965ರ ಯಾವುದೇ ಉಪಬಂಧಗಳು ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳು ಅಥವಾ ಲೈಸನ್ಸ್ನ ಷರತ್ತುಗಳನ್ನು ಲೈಸನ್ಸ್ದಾರನು ಅಥವಾ ಆತನ ನಿಯೋಜನೆಯಲ್ಲಿರುವ ಯಾರೇ ವ್ಯಕ್ತಿ ಉಲಂಫಿಸಿದ್ದಲ್ಲಿ, ಸಕ್ಷಮ ಪ್ರಾಧಿಕಾರವು ಲೈಸನ್ಸ್ನ್ನು ತಡೆಹಿಡಿಯಬಹುದು ಅಥವಾ ರದ್ದುಗೊಳಿಸನಹುದು ಮತ್ತು ಲೈಸನ್ಸ್ದಾರರನ್ನು ಅಮಾನತುಗೊಳಿಸಿರುವ ಅವಧಿಗಾಗಿ ಅಥವಾ ಲೇಸನ್ಸ್ನ ಉಳಿದಿರುವ ಅವಧಿಗಾಗಿ. ಯಾವುದೇ ಪರಿಹಾರವನ್ನು ಕ್ಲೇಮು ಮಾಡಿಕೂಳ್ಳುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದಲ್ಲ.
ಪರಂತು, ಲೈಸನ್ಸ್ದಾರವಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಯುಕ್ತವಾದ ಅವಕಾಶವನ್ನು ನೀಡದ ಹೊರತು ಯಾವುದೇ ಅಂಥ ತಡೆಹಿಡಿಯುವ ಅಥವಾ ರದೃತಿಯ ಆದೇಶವನ್ನು ಹೊರಡಿಸತಕ್ಕದ್ದಲ್ಲ.
ಮತ್ತೂ ಪರಂತು, ಲೈಸನ್ಸ್ನ್ನು ತಡೆಹಿಡಿಯುವುದು ಅಥವಾ ರದ್ಯಶಿಗೊಳಿಸುವುದರ ಜೊತೆಗೆ, ಸಂಬಂಧಪಟ್ಮ ಸಕ್ಷಮ ಪಾಧಿಕಾರವು ಅಧಿನಿಯಮದ 32ನೇ ಪ್ರಕರಣದ (Se ಉಪ-ಪ್ರಕರಣದ ಅನುಸಾರವಾಗಿ ಅಂಥ ಲೈಸನ್ಸ್ ದಾರನ ಅಥವಾ ಆತನ ನೊಯೋಜನೆಯ ಯಾರೇ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬಹುದು.