(1) ಯಾರೇ ಅರ್ಜಿದಾರನು, ಕರ್ನಾಟಕ ಅಬಕಾರಿ ಅಧಿನಿಯಮ, 1965 ಮತ್ತು ಅವುಗಳ ಅಡಿಯಲ್ಲಿ ಮಾಡಿದ ನಿಯಮಗಳ ಮೇರೆಗೆ ಅಥವಾ ಯಾವುದೇ ಕ್ರಿಮಿನಲ್ ಅಪರಾಧಕ್ಕಾಗಿ ಅಥವಾ ಯಾವುದೇ ಇತರ ಕ್ರಿಮಿನಲ್ ಅಪರಾಧಕ್ಕಾಗಿ ಅಪರಾಧಿಯೆಂದು ವಿರ್ಣಿತನಾಗಿದ್ದರೆ ಆತನಿಗೆ ಮೂರು ವರ್ಷಗಳಿಗಿಂತ ಹೆಚ್ಚಾಗಿ ಕಾರಾವಾಸ ಶಿಕ್ಷೆ ವಿಧಿಸಿದ್ದರೆ, ಆತನು ವಿಶೇಷ ಸೌಲಭ್ರಕ್ಕಾಗಿ ಅರ್ಹನಾಗಿರತಕ್ಕದ್ದಲ್ಲ.
(2) ವೀರಾ ಇಳಿಸುವ, ಉತ್ತಪಾದನೆ, ಸ್ವಾಧೀನ ಮತ್ತು ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯ ವಿಶೇಷ ಸೌಲಭ್ಯಗಳಿಗಾಗಿ ಲೈಸನ್ಸ್ ನೀಡುವುದಕ್ಕೆ ಅರ್ಜಿಯನ್ನು ನಮೂನೆ 1ರಲ್ಲಿ ಸಲ್ಲಿಸತಕ್ಕದ್ದು ಮತ್ತು ನೀರಾ ವಿತರಣೆಗಾಗಿ, ನೀರಾದಿಂದ ಮೌಲ್ಯವರ್ಧಿತ ಉತ್ಪನ್ನಗಳಿಗಾಗಿ ಸಕ್ಷಮ ಪ್ರಾಧಿಕಾರಕ್ಕೆ ನಮೂನೆ ॥ರಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಸಕ್ಷಮ ಪ್ರಾಧಿಕಾರವು ಅರ್ಜಿಯನ್ನು ಪರಿಶೀಲಿಸತಕ್ಕದ್ದು ಮತ್ತು ಲೈಸನ್ಸ್ ನೀಡುವುದಕ್ಕಾಗಿ ನಿರ್ದಿಷ್ಟಪಡಿಸಲಾದ ಷರತ್ತುಗಳನ್ನು ಪಾಲಿಸಲಾಗಿದೆ ಎಂದು ಕಂಡುಬಂದರೆ, ನಮೂನೆ ॥ರಲ್ಲಿ ನೀರಾ ಇಳಿಸುವ, ಉತ್ಪಾದನೆ, ಸ್ವಾಧೀನ ಮತ್ತು ಸಂಸ್ಕರಣೆಯ ವಿಶೇಷ ಸೌಲಭ್ಯಗಳಿಗಾಗಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗಾಗಿ ಲೈಸನ್ಸ್ನ್ನು ನೀಡಬಹುದು ಮತ್ತು ನೀರಾ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ವಿತರಣೆ ಸೌಲಭ್ಯಕ್ಕಾಗಿ ನಮೂನೆ Wd, ಲೈಸನ್ಸ್ನ್ನು ನೀಡಬಹುದು. ಸಕ್ಷಮ ಪ್ರಾಧಿಕಾರವು, ಈ ಅರ್ಜಿಯನ್ನು ತಿರಸ್ಕರಿಸಿದ ಕಾರಣಗಳಿಗಾಗಿ ಲಿಖಿತದಲ್ಲಿ ದಾಖಲಿಸಬಹುದು.
(3) ತೆಂಗು ಉತ್ಪಾದಕರ ಕಂಪನಿ ಅಥವಾ ರೈತ ಉತ್ಪಾದಕರ ಸಂಘಗಳು ನೀರಾ ಸಂಸ್ಕರಣಾ PRLS ಅಥವಾ ಶೀತಲ ಸರಪಳಿ (Cold chain) ಸ್ಮಾಪಿಸುವುದಕ್ಕಿಂತ ಮೊದಲು ಅಬಕಾರಿ ಇಲಾಖೆಯಿಂದ ತಾತ್ವಿಕ ಅನುಮೋದನೆಯನ್ನು ಪಡೆಯತಕ್ಕದ್ದು.
(4) ಯಾವುದೇ ತೆಂಗು ಉತ್ಪಾದಕರ ಕಂಪನಿ ಅಥವಾ ರೈತ ಉತ್ಪಾದಕರ ಸಂಘಗಳು ಅವರು ನೀರಾ ಸಂಸ್ಕರಣಾ ಘಟಕ ಅಥವಾ ಶೀತಲ ಸರಪಳಿ (Cold chain) ಯನ್ನು ಸ್ಥಾಪಿಸಿದಾಗ ಮಾತ್ರ ಲೈಸನ್ಸ್ನ್ನು ನೀಡತಕ್ಕದ್ದು.
(5) ನೀರಾ ಇಳಿಸುವುದಕ್ಕಾಗಿ SOAS ಮರಗಳನ್ನು ಗೊತ್ತುಪಡಿಸುವುದು ಮತ್ತು ಗುರುತು ಮಾಡುವುದು. ಕರ್ನಾಟಕ ಅಬಕಾರಿ (ಮರಗಳ ವೀರಾ ಇಳಿಸಲು) ನಿಯಮಗಳು, 1991ರ ಅನುಸಾರವಾಗಿರತಕ್ಕದ್ದು.
(6) ನೀರಾ ಇಳಿಸಲು/ಸಂಗ್ರಹಣೆಗಾಗಿ. ವೀರಾ ತಂತ್ರಜ್ಞರನ್ನು ಮಾತ್ರ ಲೈಸನ್ಸ್ದಾರನು ನೇಮಿಸತಕ್ಕದ್ದು.
(7) ಮರಗಳಿಂದ ವೀರಾ ಇಳಿಸುವ ಉದ್ದೇಶಕ್ಕಾಗಿ ಗುರುತು ಮಾಡಲಾದ ಪ್ರತಿಯೊಂದು ಮರದ ಮೇಲೆ ಹತ್ತು ರೂಪಾಯಿಗಳ ತೆಂಗಿನ ಮರದ ತೆರಿಗೆಯನ್ನು ವಿಧಿಸತಕ್ಕದ್ದು.
(8) ನೀರಾವನ್ನು ಇಳಿಸಲು, ಸಾರಿಗೆ-ಸೌಕರ್ಯ ಮತ್ತು ಸಂಸ್ಕರಣೆಗಾಗಿ ಅಳವಡಿಸಿಕೊಂಡ ತಂತ್ರಜ್ಞಾನವು, ತೋಟಗಾರಿಕೆ ಇಲಾಖೆಯಿಂದ ವಿರ್ದಿಷ್ಟಪಡಿಸಲಾದಂತೆ ಮತ್ತು ಅನುಮೋದಿಸಿದಂತೆ ಇರತಕ್ಕದ್ದು.
(9) ಉತ್ಪಾದಿಸಿದ ನೀರಾದ ಗುಣಮಟ್ಟವು, ತೋಟಗಾರಿಕೆ ಇಲಾಖೆಯು ಅಳವಡಿಸಿಕೊಂಡಿರುವ ಮಾನದಂಡಗಳ ಪ್ರಕಾರ ಇರತಕ್ಕದ್ದು.
(10 ಮರಗಳಿಂದ ವೀರಾ ಇಳಿಸಲು ಪ್ರಾರಂಭಿಸುವುದಕ್ಕಿಂತ ಮುಂಚೆ ಕನಿಷ್ಠಪಕ್ಷ ಒಂದು sony ಮೊದಲೆ ಲೈಸನ್ಸ್ ಅನುಮೋದನೆಗಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
(11) ಈಗಾಗಲೇ ನೀಡಲಾದ ಲೈಸನ್ಸ್ ಅವಧಿಯು ಮುಕ್ತಾಯಗೊಳ್ಳುವುದಕ್ಕಿಂತ ಒಂದು sony ಮೊದಲೆ ಲೈಸನ್ಸ್ ನವೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
(12) ಲೈಸನ್ಸ್ ನೀಡಲು ಅಥವಾ ನವೀಕರಣಕ್ಕಾಗಿ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಅವರು ಅವಶ್ಯವೆಂದು ಭಾವಿಸುವಂಥ ಇತರೆ ವಿವರಣೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬಹುದು ಮತ್ತು ಅರ್ಜಿದಾರನ ಮೂಲಕ ನೀಡಲಾದ ವಿವರಣೆಗಳ ಪರಿಶೀಲನೆಗಾಗಿ ಅವರು ಸೂಕ್ತವೆಂದು ಭಾವಿಸುವಂಥ ಇತರೆ ಎಲ್ಲ ವಿಚಾರಣೆಗಳನ್ನು ಮಾಡಬಹುದು. ಯಾವುದೇ ಸಂದರ್ಭದಲ್ಲಿ, ಅಬಕಾರಿ ಉಪ-ಆಯುಕ್ತರು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಕೆಲಸದ ದಿನದ ಹದಿನೈದು ದಿನಗಳ ಒಳಗಾಗಿ ಸಂದರ್ಭಾನುಸಾರ, ಲೈಸನ್ಸ್ ನೀಡಲು ಅಥವಾ ನವೀಕರಣಕ್ಕಾಗಿ ವಿರ್ಧಾರ ತೆಗೆದುಕೊಳ್ಳತಕ್ಕದ್ದು.
(13) ಅಂಥ ಲೈಸನ್ಸ್ನ ಚಾಲ್ತಿಯಲ್ಲಿರುವ ಅವಧಿಯನ್ನು ಹೊರತುಪಡಿಸಿ ನೀರಾವನ್ನು ತೆಗೆಯತಕ್ಕದ್ದಲ್ಲ.
(14) ಲೈಸನ್ಸ್ದಾರನು ಅಥವಾ ಅವನ ಅಧಿಕೃತ ಪ್ರತಿವಿಧಿಗಳು ನೀರಾ ಇಳಿಸುವುದಕ್ಕೆ ಲೈಸನ್ಸ್ ನೀಡಲಾಗಿರುವ ಮರಗಳ ಸಂ೦ಖ್ಯೆಗಿಂತ ಹೆಚ್ಚಿನದಾಗಿ ಯಾವುದೇ ಮರದಿಂದ ನೀರಾ ಇಳಿಸತಕ್ಕದ್ದಲ್ಲ.
(15) ಈ ನಿಯಮಗಳಿಗೆ ಅನುಸಾರವಾಗಿ ಅಧಿಕೃತ ಅಧಿಕಾರಿಯಿಂದ ಮರಗಳನ್ನು ಗುರುತಿಸಲ್ಪಡುವವರೆಗೂ ವೀರಾ ಇಳಿಸುವ ಉದ್ದೇಶಕ್ಕಾಗಿ ಯಾವುದೇ ಬಿಂ೦ದಿಗೆ/ಪಾತ್ರೆಗಳನ್ನು ಮರಕ್ಕೆ ಕಟ್ಟತಕ್ಕದ್ದಲ್ಲ. ಮತ್ತು ಮರದಿಂದ ನೀರಾವನ್ನು ಇಳಿಸತಕ್ಕದ್ದಲ್ಲ.
(16) ಸಂಸ್ಕರಣಾ ಘಟಕ ಮತ್ತು ವಿತರಣಾ ಕೇಂದ್ರಕ್ಕೆ ವೀರಾವನ್ನು ಸಾಗಿಸುವುದು ಕಂಪನಿಯ ಜವಾಬ್ದಾರಿಯಾಗ?ರುತ್ತದೆ.
(17) ವೀರಾವನ್ನು ಸೇಂದಿಯನ್ನಾಗಿ ಪಾರಿವರ್ತಿಸಲಾಗಿಲ್ಲ DO ಖಚಿತಪಡಿಸಿಕೊಳ್ಳುವುದು ಲೈಸನ್ಸ್ದಾರನ ಜವಾಬ್ದಾರಿಯಾಗಿರತಕ್ಕದ್ದು.
(18) . ಈ ನಿಯಮಗಳ ಯಾವುದೇ ಉಪಬಂಧಗಳ ಉಲ್ಲಂಘನೆಯು ಕರ್ನಾಟಕ ಅಬಕಾರಿ ಅಧಿನಿಯಮ, 1965ರ ಅಡಿಯಲ್ಲಿ ಅಪರಾಧವಾಗಿರುತ್ತದೆ ಮತ್ತು ಅದು ಅಧಿನಿಯಮದ 32ನೇ ಪ್ರಕರಣದ (4)ನೇ ಉಪ-ಪ್ರಕರಣದ ಅಡಿಯಲ್ಲಿ ಶಿಕ್ಸಾರ್ಹವಾಗಿರುತ್ತದೆ.