(1) ಅರ್ಜಿದಾರನು ಒಂದು ಸಾವಿರ ರೂಪಾಯಿಗಳ ವಾರ್ಷಿಕ ಲೈಸನ್ಸ್ ಶುಲ್ಕವನ್ನು ಸಂದಾಯ ಮಾಡಿದ ಮೇಲೆ ವೀರಾ ಇಳಿಸಲು, ಉತ್ಪಾದನೆ, ಸ್ವಾಧೀನ ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪಾದನೆಗಳ ಉತ್ಪಾದನೆಯ ವಿಶೇಷ ಹಕ್ಕುಗಳಿಗಾಗಿ ಸಕ್ಷಮ ಪ್ರಾಧಿಕಾರದಿಂದ ಈ ನಿಯಮಗಳ ಅಡಿಯಲ್ಲಿ ಲೈಸನ್ಸ್ನ್ನು ನೀಡತಕ್ಕದ್ದು.
(2) ತೆಂಗು ಉತ್ಪಾದಕರ ಕಂಪನಿ ಅಥವಾ ರೈತ ಉತ್ಪಾದಕರ ಸಂಘವನ್ನು ಹೊರತುಪಡಿಸಿ ನೀರಾ ಇಳಿಸಲು, ಉತ್ಪಾದನೆ, ಸಂಸ್ಮರಿಸಿ ವಿತರಣೆ ಮಾಡಲು ಅಥವಾ ಸ್ವಾಧೀನದಲ್ಲಿರಿಸಿಕೊಳ್ಳಲು ಲೈಸನ್ಸ್ಗಾಗಿ ಯಾವುದೇ ವ್ಯಕ್ತಿ ಅರ್ಹನಾಗಿರತಕ್ಕದ್ದಲ್ಲ.
(3) ಅರ್ಜಿದಾರನು ಒಂದು ಸಾವಿರ ರೂಪಾಯಿಗಳ ವಾರ್ಷಿಕ ಲೈಸನ್ಸ್ ಶುಲ್ಕವನ್ನು ಸಂದಾಯ ಮಾಡಿದ ಮೇಲೆ ನೀರಾ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ವಿತರಣೆಗಾಗಿ ಸಕ್ಷಮ ಪ್ರಾಧಿಕಾರವು ಈ ನಿಯಮಗಳ ಅಡಿಯಲ್ಲಿ ಲೈಸನ್ಸ್ನ್ನು ನೀಡತಕ್ಕದ್ದು.
(4) ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, ಹಣಕಾಸು ವರ್ಷದ ಅವಧಿಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ನೀಡಬಹದಾದ ಲೈಸನ್ಗಳ ಸಂಖ್ಯೆಯನ್ನು ಘೋಷಿಸುವ ಹಕ್ಕು ಸರ್ಕಾರಕ್ಕಿರುತ್ತದೆ.
(5) ಈ ನಿಯಮಗಳ ಅಡಿಯಲ್ಲಿ ನೀಡಲಾಗಿರುವ ಎಲ್ಲಾ ಲೈಸನ್ಸ್ಗಳು ಏಪ್ರೀಲ್ 1ನೇ ದಿನದಿಂದ ತದನಂತರ ಬರುವ ವರ್ಷದ ಮಾರ್ಚ್ 31ನೇ ದಿನವರೆಗೆ ಜಾರಿಯಲ್ಲಿರತಕ್ಕದ್ದು. ಲೈಸನ್ಸ್ನ್ನು ಏಪ್ರೀಲ್ ಮೊದಲ ದಿನದ ನಂತರ ಯಾವುದೇ ದಿನದಂದು ಪಡೆದುಕೊಂಡಿದ್ದರೆ, ಇದು ಹಣಕಾಸು ವರ್ಷದ ಮಾರ್ಚ್ 312ನೇ ದಿನದವರೆಗೆ ಸಿಂಧುವಾಗಿರತಕ್ಕದ್ದು.
(6) ನೀರಾ ಇಳಿಸುವುದಕ್ಕೆ ಲೈಸನ್ಸ್ ಹೊಂದಿರುವ ಅರ್ಜಿದಾರನನ್ನು ಹೊರತುಪಡಿಸಿ ಯಾವುದೇ ನೀರಾ ಇಳಿಸುವ ಸಂಘಕ್ಕೆ ಅಥವಾ HOP ಸಂಘದ ಯಾವುದೇ ನೀರಾ ಇಳಿಸುವ ನಿಯೋಜಿತವಿಗೆ ಅಥವಾ ವೈಯುಕ್ತಿಕವಾಗಿ ಲೈಸನ್ಸ್ ನೀಡತಕ್ಕದ್ದಲ್ಲ.
(7) ವೀರಾ ಅಥವಾ ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ಈ ನಿಯಮಗಳ ಅಡಿಯಲ್ಲಿ ಲೈಸನ್ಸ್ನ್ನು ಏಪ್ರೀಲ್ ಪಡೆಯದೆ ತಯಾರಿಸತಕ್ಕದ್ದಲ್ಲ ಅಥವಾ ವಿತರಣೆ ಮಾಡತಕ್ಕದ್ದಲ್ಲ.