(1) ಈ ನಿಯಮಗಳನ್ನು ಅಥವಾ ಅದರ ಅಡಿಯಲ್ಲಿ ಹೊರಡಿಸಲಾದ ಯಾವುದೇ ಆದೇಶವನ್ನು ಉಲಂಫಿಸಿ ನೀರಾ ಅಥವಾ ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವವರು ಅಥವಾ ತಯಾರಿಸುವುದಕ್ಕೆ ಕಾರಣಕರ್ತರಾದವರು ಯಾರೇ ಇರಲಿ ಅವರನ್ನು ಅಧಿನಿಯಮದ 32ನೇ ಪ್ರಕರಣದ (4ನೇ ಉಪ-ಪ್ರಕರಣದ ಅಡಿಯಲ್ಲಿ ಶಿಕ್ಷಿಸತಕ್ಕದ್ದು. ಅಂಥ ಅಪರಾಧಿಗೆ ಪ್ರಥಮ ವರ್ಗದ ನ್ಯಾಯಿಕ ಮ್ಯಾಜಿಸ್ಟೇಟ್ IMSC) ನ್ಯಾಯಾಲಯದ ಅಧಿಕಾರವ್ಯಾಪ್ತಿಯ ಸಮ್ಮುಖದಲ್ಲಿ ಕಾನೂನು ಕ್ರಮ ಜರುಗಿಸಬಹುದು.
(2) BOB ವಿಧಿಸುವಿಕೆ ಅಥವಾ ಲೈಸನ್ಸ್ನ್ನು ರದ್ದತಿಗೊಳಿಸುವಿಕೆಯಿಂದಾಗಿ ಅಧಿನಿಯಮ ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳ ಉಪಬಂಧಗಳ ವಿರುದ್ಧವಾಗಿ ನೀರಾವನ್ನು ಸೇಂದಿಯನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಲೈಸನ್ಸ್ ದಾರರನ್ನು ಅಥವಾ ಅವನ ಏಜೆಂಟ್ನ್ನು ಕಾನೂನು ಕ್ರಮ ಜರುಗಿಸುವುದರಿಂದ ವಿನಾಯ್ತಿ ನೀಡಿರುವುದಿಲ್ಲ.