(1) ಈ ನಿಯಮಗಳ ಅಡಿಯಲ್ಲಿ ಅಬಕಾರಿ ಉಪ-ಆಯುಕ್ತರ ಆದೇಶದ ವಿರುದ್ಧದ ಅಪೀಲಿನ, ಪ್ರಶ್ನಿತ ಆದೇಶವನ್ನು ಮಾಡಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗಾಗಿ ಉಪ-ಆಯುಕರಿಗೆ ಸಲ್ಲಿಸತಕ್ಕದ್ದು.
(2 ಈ ನಿಯಮಗಳ ಅಡಿಯಲ್ಲಿ ಉಪ-ಆಯುಕ್ತರ ಆದೇಶದ ವಿರುದ್ಧದ ಅಪೀಲಿನ, ಪ್ರಶ್ನಿತ ಆದೇಶವನ್ನು ಮಾಡಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗಾಗಿ ಉಪ-ಆಯುಕರಿಗೆ ಸಲ್ಲಿಸತಕ್ಕದ್ದು.
(3) ಅಬಕಾರಿ ಆಯುಕ್ತರಿಂದ ಮಾಡಿದ ಆದೇಶದ ವಿರುದ್ಧದ ಅಪೀಲಿನ, ಪ್ರಶ್ನಿತ ಆದೇಶವನ್ನು ಮಾಡಿದ ದಿನಾಂಕದಿಂಂದ ತೊಂಬತ್ತು ದಿನಗಳ ಒಳಗಾಗಿ ಕರ್ನಾಟಕ ಕಂದಾಯ ಅಪೀಲು ನ್ಯಾಯಾಧೀಕರಣಕ್ಕೆ ಸಲ್ಲಿಸತಕ್ಕದ್ದು.
ಪರಂತು, ಸಂದರ್ಭಾನುಸಾರ ಉಪ-ಆಯುಕ್ತರು ಅಥವಾ ಅಬಕಾರಿ ಆಯುಕ್ತರು ಅಥವಾ ಕರ್ನಾಟಕ ಕಂದಾಯ ಅಪೀಲು ನ್ಯಾಯಾಧೀಕರಣಕ್ಕೆ ತೃಪ್ತಿಕರವಾಗಿ ತೋರಿಸುವುದಕ್ಕೆ ಸಾಕಷ್ಟು ಕಾರಣಗಳಿದ್ದರೆ, ಸಂಬಂಧಪಟ್ಟ ಪಕ್ಷಕಾರವನಿಂದ ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಅವಧಿಯು ಮೀರಿದಂತಹ ಅಪೀಲುಗಳನ್ನು ಸಂದರ್ಭಾನುಸಾರ, ಉಪ-ಆಯುಕ್ತರು ಅಥವಾ ಅಬಕಾರಿ ಆಯುಕ್ತರು ಅಥವಾ ಕರ್ನಾಟಕ ಕಂದಾಯ ಅಪೀಲು ನ್ಯಾಯಾಧೀಕರಣವು ಸ್ವೀಕರಿಸಬಹುದು.