(1) ಈ ನಿಯಮಗಳನ್ನು, ಕರ್ನಾಟಕ ರಾಜ್ಯ ಸಫಾಯಿ ಕವರ್iಚಾರಿಗಳ ಆಯೋಗದ ನಿಯಮಗಳು, 2018 ಎಂದು ಕರೆಯತಕ್ಕದ್ದು.
(2) ಇವು ಕರ್ನಾಟಕ ರಾಜ್ಯ ಪತ್ರದಲ್ಲಿ ಇವುಗಳು ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ನಿಯಮಗಳು, 2018, Social Welfare Department
2018 · PDF page 1
Hover any section to copy its link or text, ask Copilot about it, or bookmark it.
(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ)“ಅಧಿನಿಯಮ”ಎಂದರೆ,ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧಿನಿಯಮ, 2012 (2013 ರ ಕರ್ನಾಟಕ ಅಧಿನಿಯಮ ಸಂಖ್ಯೆ: 2)
(ಬಿ) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ; ಮತ್ತು
(ಸಿ) “ಪ್ರಕರಣ” ಎಂದರೆ, ಅಧಿನಿಯಮದ ಪ್ರಕರಣ.
(2) ಈ ಅಧಿನಿಯಮದಲ್ಲಿ ಬಳಸಲಾದ ಮತ್ತು ಪರಿಭಾಷಿಸಿರದ, ಆದರೆ ಅಧಿನಿಯಮದಲ್ಲಿ ಪರಿಭಾಷಿಸಲಾದ ಪದಗಳು ಮತ್ತು ಪದಾವಳಿಗಳು, ಅಧಿನಿಯಮದಲ್ಲಿ ಅವುಗಳಿಗೆ ಗೊತ್ತುಪಡಿಸಲಾದ ಅವೇ ಅರ್ಥವನ್ನು ಅನುಕ್ರಮವಾಗಿ ಹೊಂದಿರತಕ್ಕದ್ದು.