ಆಯೋಗವು ಕಾಲಕಾಲಕ್ಕೆ ಸಫಾಯಿ ಕರ್ಮಚಾರಿಗಳಿಗಾಗಿ ಉಪಬಂಧಿಸಲಾದ ಸುರಕ್ಷತೆಗಳು ಹಾಗೂ ಇತರ ಸಾಮಾಜಿಕ, ಆರ್ಥಿಕ ಪ್ರಗತಿಪರ ಕ್ರಮಗಳಿಗೆ ಸಂಬಂಧಪಟ್ಟಂತೆ ತಾನು ಮೇಲ್ವಿಚಾರಣೆ ಮಾಡುವ ವಿಷಯಗಳು ಅಥವಾ ಸಂಗತಿಗಳು ಮತ್ತು ಪ್ರದೇಶಗಳನ್ನು ನಿರ್ವಹಣೆ ಮಾಡಬಹುದು.
Loading…
(1)ಆಯೋಗವು ಮೇಲ್ವಿಚಾರಣೆ ಮಾಡಬೇಕಾದಂಥ ವಿಷಯದ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಯಾವುದೇ ಪ್ರಾಧಿಕಾರವು ಆಯೋಗವು ಅಗತ್ಯಪಡಿಸಿದಂತೆ ವರದಿಗಳನ್ನು ಒದಗಿಸತಕ್ಕದ್ದು.
(2) ಆಯೋಗವು ಕಾಲ-ಕಾಲಕ್ಕೆ ಸಫಾಯಿ ಕರ್ಮಚಾರಿಗಳಿಗಾಗಿ ಇರುವ ಸುರಕ್ಷತಾ ಕಾರ್ಯಗಳ ಅನುಷ್ಠಾನ ಪ್ರಭಾರ ಹೊಂದಿರುವಂಥ ರಾಜ್ಯ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನಿಗಮಗಳು ಅಥವಾ ಇತರ ಪ್ರಾಧಿಕಾರಗಳಿಂದ ಯಾವುದೇ ನಿರ್ಧಿಷ್ಟ ವಿಷಯ ಅಥವಾ ಸಂಗತಿಯ ಬಗ್ಗೆ ಮಾಹಿತಿ ಹಾಗೂ ವಿವರವನ್ನು ಒದಗಿಸಲು ಸೂಚನೆಗಳನ್ನು ಹೊರಡಿಸಬಹುದು.