ಆಯೋಗದ ಬಜೆಟ್-ಅನ್ನು ಪ್ರತಿ ವರ್ಷದ 30ನೇ ನವೆಂಬರ್ ಮಾಹೆಗೆ ಮೊದಲೇ ತಯಾರಿಸತಕ್ಕದ್ದು ಹಾಗೂ ಪ್ರತಿ ವರ್ಷದ ಡಿಸೆಂಬರ್ನ ಮೊದಲ ವಾರದ ಅವಧಿಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ದ್ವಿ-ಪ್ರತಿಯಲ್ಲಿ ಸಲ್ಲಿಸತಕ್ಕದ್ದು.
ಆಯೋಗವು ಲೆಕ್ಕಪತ್ರವನ್ನು ಈ ಕೆಳಕಂಡಂತೆ ನಿರ್ವಹಿಸತಕ್ಕದ್ದು, ಎಂದರೆ:-
(1) ಆಯವ್ಯಯದ ಅನುದಾನಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಪಟ್ಟಂಥ ಲೆಕ್ಕಪತ್ರಗಳ ವಿವರಣಾ ಪಟ್ಟಿ ಹಾಗೂ ಆಯ-ವ್ಯಯದ ಅನುದಾನಗಳ ಸಂಬಂಧದಲ್ಲಿನ ವೆಚ್ಚದ ಲೆಕ್ಕಪತ್ರಗಳ ವಿವರಣಾ ಪಟ್ಟಿ ಹಾಗೂ ಆಯೋಗದ ಎಲ್ಲಾ ಲೆಕ್ಕ ಪತ್ರಗಳನ್ನು, ಕಾಲಕಾಲಕ್ಕೆ ಸರ್ಕಾರದ ನಿರ್ದೇಶನಗಳಿಗನುಸಾರವಾಗಿ ನಿರ್ವಹಿಸತಕ್ಕದ್ದು.
(2)ಆಯೋಗದ ಲೆಕ್ಕಪತ್ರಗಳನ್ನು ಕರ್ನಾಟಕದ ಮಹಾಲೇಖಪಾಲರ ಮೂಲಕ ಆಯಾ ವರ್ಷದಲ್ಲಿ ಲೆಕ್ಕ ಪರಿಶೋಧನೆ ಮಾಡಿಸತಕ್ಕದ್ದು.
(1)ಆಯೋಗದ ವಾರ್ಷಿಕ ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅಧಿನಿಯಮದ 15ನೇ ಪ್ರಕರಣದ ಅಡಿಯಲ್ಲಿ ಅಗತ್ಯಪಡಿಸಲಾದಂತೆ ಕಳೆದ ವರ್ಷದ ಅವಧಿಯಲ್ಲಿ ನಡೆಸಿದ ತನ್ನ ಕಾರ್ಯ ಚಟುವಟಿಕೆಗಳ ಸಂಪೂರ್ಣ ಲೆಕ್ಕಪತ್ರಗಳನ್ನು ಸೂಚಿಸಿದ ಹಣಕಾಸು ವರ್ಷ ಪೂರ್ಣಗೊಂಡ ದಿನಾಂಕದಿಂದ ಮೂರು ತಿಂಗಳೊಳಗೆ ಸರ್ಕಾರಕ್ಕೆ ಕಳುಹಿಸತಕ್ಕದ್ದು. ಸರ್ಕಾರವು, ವಿಧಾನಮಂಡಲದ ಉಭಯ ಸದನಗಳ ಮುಂದೆ ಇದನ್ನು ಮಂಡಿಸಬಹುದು.
(2) ಲೆಕ್ಕ ಪರಿಶೋಧಕರ ವರದಿಯನ್ನು ಸ್ವೀಕರಿಸಿದ ಕೂಡಲೇ ಆದಷ್ಟು ಬೇಗನೆ ಆಯೋಗವು ವಿಧಾನಮಂಡಲದ ಉಭಯ ಸದನಗಳ ಮುಂದೆ ಇದನ್ನು ಮಂಡಿಸಲು ಸರ್ಕಾರದ ಲೆಕ್ಕಪರಿಶೋಧಕರ ವರದಿಯೊಂದಿಗೆ ಲೆಕ್ಕಪತ್ರಗಳ ವಾರ್ಷಿಕ ವಿವರಪಟ್ಟಿಯ ಪ್ರತಿಯನ್ನು ಕಳುಹಿಸತಕ್ಕದ್ದು.
ಅಧ್ಯಕ್ಷರು ಹೊರಡಿಸಲಾದ ಆದೇಶದ ಮೂಲಕ ನಿರ್ಧಿಷ್ಟಪಡಿಸಲಾದಂತೆ ಆಯೋಗದ ಮೊಹರು ಇರತಕ್ಕದ್ದು.
ನಮೂನೆ- I
(ನಿಯಮ 11(5) ನ್ನು ನೋಡಿ) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ 4ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ, 1ನೇ ಮಹಡಿ, ಸಂಪಂಗಿರಾಮನಗರ ಪೋಲೀಸ್ ಠಾಣೆ ಎದುರು, ಬೆಂಗಳೂರು- 560027. ವಾಸ್ತವಾಂಶಗಳ ಮತ್ತು ಸಾಕ್ಷ್ಯಗಳ ಸಂಗ್ರಹಣೆಗಾಗಿ ನೋಟೀಸು ಇವರಿಗೆ, ಈ ನೋಟೀಸಿನೊಂದಿಗೆ ಲಗತ್ತಿಸಿರುವ ದಿನಾಂಕ ........................ ರಂದು.......................... ರಲ್ಲಿ ಹಾಜರಾಗಿ........................................ ಶೀರ್ಷಿಕೆ ಅಡಿಯಲ್ಲಿ .................................... ವೃತ್ತ ಪತ್ರಿಕೆ ಗಳಿಂದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳಿಂದ ಅರ್ಜಿ/ಪಿರ್ಯಾದು/ಮಾಹಿತಿಯನ್ನು ಆಯೋಗವು ಸ್ವೀಕರಿಸಿರುವುದರಿಂದ ಮತ್ತು ಆಯೋಗವು ವಿಷಯವನ್ನು ತಮಗೆ ಪ್ರದತ್ತವಾದ ಅಧಿಕಾರಗಳನುಸಾರವಾಗಿ ತನಿಖೆ/ವಿಚಾರಣೆ ಮಾಡಲು ತೀರ್ಮಾನಿಸಿರುವುದರಿಂದ, ಈ ಮೂಲಕ ನಿಮ್ಮನ್ನು ನೋಟೀಸು, ಅಂಚೆ, ಖುದ್ದಾಗಿ ಅಥವಾ ಇತರ ಯಾವುದೇ ಸಂಪರ್ಕದ ಮೂಲಕವಾಗಲಿ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಕೆಳಗೆ ಸಹಿ ಮಾಡಿದವರಿಗೆ ಆಪಾದನೆಗಳು/ ವಿಷಯಗಳ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಸಂಗತಿಗಳು ಮತ್ತು ಮಾಹಿತಿಯನ್ನು ಸಲ್ಲಿಸಲು ಕೋರಲಾಗಿದೆ.
ನಿಗಧಿತ ಕಾಲದೊಳಗೆ ನಿಮ್ಮಿಂದ ಉತ್ತರವನ್ನು ಆಯೋಗವು ಸ್ವೀಕರಿಸಿಲ್ಲದ ಪ್ರಕರಣದಲ್ಲಿ, ಆಯೋಗವು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧಿನಿಯಮದ ಮೇರೆಗೆ ತನಗೆ ಪ್ರದತ್ತವಾದ ಸಿವಿಲ್ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆಯೋಗದ ಮುಂದೆ ಖುದ್ದಾಗಿ ಅಥವಾ ಪ್ರತಿನಿಧಿಯ ಮೂಲಕ ಹಾಜರಾಗಲು ನಿಮಗೆ ಸಮನ್ಸ್ ನೀಡಲಾಗಿದೆ ಎಂಬ ನೋಟೀಸನ್ನು ತೆಗೆದುಕೊಳ್ಳಬೇಕು.
ಸಹಿ/- ಕಾರ್ಯದರ್ಶಿ / ಅಧಿಕೃತಗೊಳಿಸಲಾದ ಅಧಿಕಾರಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ನಮೂನೆ- II (ನಿಯಮ 11(5) ನ್ನು ನೋಡಿ) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ 4ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ, 1ನೇ ಮಹಡಿ, ಸಂಪಂಗಿರಾಮನಗರ ಪೋಲೀಸ್ ಠಾಣೆ ಎದುರು, ಬೆಂಗಳೂರು- 560027.
ಪ್ರಕರಣ ಸಂಖ್ಯೆ:................................. ಇವರಿಗೆ, .............................................
..............................................
.............................................
ವಿಚಾರಣಾ ನೋಟೀಸು ನೀವು ಸಲ್ಲಿಸಿದ ದಿನಾಂಕ ............................ ರ ದೂರು ಮತ್ತು ಮೇಲಿನ ಪ್ರಕರಣ ಸಂಖ್ಯೆ........................ರಲ್ಲಿ ಈ ಆಯೋಗದಲ್ಲಿ ನೋಂದಾಯಿಸಿದ ದೂರನ್ನು ಪರಿಶೀಲನೆ/ ವಿಚಾರಣೆಗಾಗಿ ಆಯೋಗದ ಮುಂದೆ ಪಟ್ಟಿ ಮಾಡಲಾಗಿದ್ದು ನೋಟೀಸನ್ನು ತೆಗೆದುಕೊಳ್ಳುವುದು. ಕೆಳಗೆ ಸೂಚಿಸಲಾದ ಸ್ಥಳ ಮತ್ತು ಕಾಲದಲ್ಲಿ ಹಾಜರಾಗಲು ನಿಮಗೆ ಸೂಚಿಸಲಾಗಿದೆ. ನೀವು ಖುದ್ದಾಗಿ ಅಥವಾ ಯುಕ್ತ ಅಧಿಕೃತ ಕಾನೂನು ಪ್ರತಿನಿಧಿಯ ಮೂಲಕ ಹಾಜರಾಗಬಹುದು. ನಿಮ್ಮ ದೂರಿನ ಸಮರ್ಥನೆಗಾಗಿ ಸಾಕ್ಷ್ಯವನ್ನು ಸಲ್ಲಿಸಲು ಸಹ ನೀವು ಹಕ್ಕುಳ್ಳವರಾಗಿದ್ದೀರಿ. ನೀವು ಇಚ್ಛಿಸಿದರೆ ಯಾವುದೇ ಸಾಕ್ಷಿಗೆ ಸಮನ್ ಹೊರಡಿಸಲು ವಿಚಾರಣಾ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿ ಯಾವುದೇ ಸಾಕ್ಷಿಗಳ ಹೆಸರು ಮತ್ತು ವಿಳಾಸದ ಪಟ್ಟಿಯನ್ನು ಆಯೋಗಕ್ಕೆ ಒದಗಿಸಬಹುದು.
ವಿಚಾರಣೆಯ ದಿನಾಂಕ :
ವಿಚಾರಣೆಯ ಕಾಲ ಮತ್ತು ಸ್ಥಳ :
ಕಾರ್ಯದರ್ಶಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು.
ನಮೂನೆ- III (ನಿಯಮ 11(5) ನ್ನು ನೋಡಿ) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ 4ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ, 1ನೇ ಮಹಡಿ, ಸಂಪಂಗಿರಾಮನಗರ ಪೋಲೀಸ್ ಠಾಣೆ ಎದುರು, ಬೆಂಗಳೂರು- 560027.
ಪ್ರಕರಣ ಸಂಖ್ಯೆ:................................. ಇವರಿಗೆ, .............................................
..............................................
.............................................
ಸಾರ್ವಜನಿಕ ನೋಟೀಸು ಆಯೋಗವು ದೂರನ್ನು sಸ್ವೀಕರಿಸಿರುವುದರಿಂದ ಇದನ್ನು ಆಯೋಗವು ಕೆಳಗೆ ಸೂಚಿಸಿದ ಸ್ಥಳ ಮತ್ತು ಕಾಲದಲ್ಲಿ ವಿಚಾರಣೆಗೆ ತೆಗೆದುಕೊಂಡಿರುತ್ತದೆ.
ಆದ್ದರಿಂದ ಈ ಸಾರ್ವಜನಿಕ ನೋಟೀಸನ್ನು ಸದರಿ ದೂರಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಇದ್ದರೆ ಅದನ್ನು ನೀಡುವಂತೆ ತಿಳಿಸಲಾಗಿದೆ. ಯಾರೇ ವ್ಯಕ್ತಿ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸಿದರೆ ವಿಚಾರಣೆಯ ದಿನಾಂಕಕ್ಕೆ ಸಾಕಷ್ಟು ಮೊದಲೇ ಲಿಖಿತದಲ್ಲಿ ಹಾಗೆ ಮಾಡಬಹುದು ಅಂಥ ಎಲ್ಲ ಲಿಖಿತ ಆಕ್ಷೇಪಣೆಗಳನ್ನು ........................ಪ್ರತಿಗಳಲ್ಲಿ ಸಲ್ಲಿಸತಕ್ಕದ್ದು.
ಕಾರ್ಯದರ್ಶಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು.
ನಮೂನೆ- IV ಕಡತ ಸಂಖ್ಯೆ: ಇವರಿಗೆ,
(ನಿಯಮ 14ನ್ನು ನೋಡಿ) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ 4ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ, 1ನೇ ಮಹಡಿ, ಸಂಪಂಗಿರಾಮನಗರ ಪೋಲೀಸ್ ಠಾಣೆ ಎದುರು, ಬೆಂಗಳೂರು- 560027.
ಸಮನ್ಸ್ ಕರ್ನಾಟಕ ರಾಜ್ಯಸಫಾಯಿ ಕರ್ಮಚಾರಿಗಳ ಅಧಿನಿಯಮದ ಮೇರೆಗೆ ರಾಜ್ಯ ಆಯೋಗವು ತನಗೆ ಪ್ರದತ್ತವಾದ ಅಧಿಕಾರಗಳ ಅನುಸಾರ ಈ ಕೆಳಕಂಡ ವಿಷಯಗಳನ್ನು ತನಿಖೆ ಮಾಡಲು ತೀರ್ಮಾನಿಸಿರುವುದರಿಂದ ......................... ಸ್ಥಳದಲ್ಲಿ .................. ಗಂಟೆಗಳಿಗೆ................ ನೇ ...............20............... ರಂದು ರಾಜ್ಯ ಆಯೋಗದ ಮುಂದೆ ಖುದ್ದಾಗಿ ಹಾಜರಾಗಲು ನಿಮ್ಮ ಹಾಜರಾತಿಯನ್ನು ಈ ಮೂಲಕ ಅಗತ್ಯಪಡಿಸಲಾಗಿದೆ.
ಪ್ರಕರಣದ ಉಲ್ಲೇಖ:
ಕಾನೂನುಬದ್ಧ ವಿನಾಯಿತಿ ಇಲ್ಲದೆ ಈ ಆದೇಶವನ್ನು ಪಾಲಿಸಲು ನೀವು ತಪ್ಪಿದಲ್ಲಿ ಸಿವಿಲ್ ಪ್ರಕ್ರಿಯ ಸಂಹಿತೆ 1908ರ XVIನೇ ಆದೇಶದ 12ನೇ ನಿಯಮದಲ್ಲಿ ಹೇಳಲಾದ ಗೈರುಹಾಜರಾತಿಯ ಪರಿಣಾಮಗಳಿಗೆ ನೀವು ಒಳಪಡತಕ್ಕದ್ದು.
.............. ನೇ............... 20............. ರಂದು ಸಿವಿಲ್ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಿ ಸ್ವತ: ನನ್ನಿಂದ ನೀಡಲಾಗಿದೆ ಮತ್ತು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮೊಹರನ್ನು ಹಾಕಲಾಗಿದೆ.
ನ್ಯಾಯಾಲಯದ ಅಧಿಕಾರಿ ಮೊಹರು
ನಮೂನೆ- V (ನಿಯಮ 14ನ್ನು ನೋಡಿ) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ 4ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ, 1ನೇ ಮಹಡಿ, ಸಂಪಂಗಿರಾಮನಗರ ಪೋಲೀಸ್ ಠಾಣೆ ಎದುರು, ಬೆಂಗಳೂರು- 560027.
ವಾರಂಟ್ಸ್ ಇವರಿಗೆ, .............................................
..............................................
.............................................
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಿ .......................... ನಿವಾಸಿಯಾದ .......................... ರವರಿಗೆ ಸಮನ್ ಅನ್ನು ಜಾರಿ ಮಾಡಲಾಗಿತ್ತು. ಆದರೆ ಹಾಜರಾಗಲು ವಿಫಲಗೊಂಡಿರುವುದರಿಂದ (ಸಮನ್ ಜಾರಿಯನ್ನು ತಪ್ಪಿಸಿಕೊಳ್ಳುವ ಉದ್ದೇಶಕ್ಕಾಗಿ ತಲೆಮರೆಸಿಕೊಳ್ಳುವ ಮೂಲಕ) ಈ ಮೂಲಕ ನಿಮ್ಮನ್ನು ದಸ್ತಗಿರಿ ಮಾಡಲು ಮತ್ತು ಸದರಿ ........................... ರವರನ್ನು ರಾಜ್ಯ ಆಯೋಗ, ಬೆಂಗಳೂರು ಇವರ ಮುಂದೆ ಹಾಜರುಪಡಿಸಲು ನಿಮಗೆ ಆದೇಶಿಸಲಾಗಿದೆ.
ಅಲ್ಲದೆ ಇದನ್ನು ಜಾರಿಗೊಳಿಸಿದಂಥ ದಿನ, ವಿಧಾನ ಮತ್ತು ಇದನ್ನು ಜಾರಿಗೊಳಿಸಿರುವುದಕ್ಕೆ ಕಾರಣವನ್ನು ಪ್ರಮಾಣೀಕರಿಸಿದ ಹಿಂಬರಹದೊಂದಿಗೆ ...............ನೇ....................ರ 20 ............... ರಂದು ಅಥವಾ ಅದಕ್ಕೂ ಮೊದಲೆ ಈ ವಾರೆಂಟ್ ಅನ್ನು ಹಿಂತಿರುಗಿಸಲು ನಿಮಗೆ ಆದೇಶಿಸಲಾಗಿದೆ.
................ನೇ..................ರ 20.................. ರಂದು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮೊಹರಿನೊಂದಿಗೆ ನನ್ನಿಂದ ನೀಡಲಾಗಿರುತ್ತದೆ.
ಸಹಿ/-
ಮೊಹರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲಿ,್ಲ
(ಶಂಭುಲಿಂಗಯ್ಯ) ಸರ್ಕಾರದ ಉಪ ಕಾರ್ಯದರ್ಶಿ-1, ಸಮಾಜ ಕಲ್ಯಾಣ ಇಲಾಖೆ.